• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Covid Vaccine: ಏಪ್ರಿಲ್​ 1ರಿಂದ 45ವರ್ಷ ಮೇಲ್ಪಟ್ಟವರಿಗೂ ಕೊರೋನಾ ಲಸಿಕೆ; ಸಚಿವ ಪ್ರಕಾಶ್​ ಜಾವಡೇಕರ್​

Covid Vaccine: ಏಪ್ರಿಲ್​ 1ರಿಂದ 45ವರ್ಷ ಮೇಲ್ಪಟ್ಟವರಿಗೂ ಕೊರೋನಾ ಲಸಿಕೆ; ಸಚಿವ ಪ್ರಕಾಶ್​ ಜಾವಡೇಕರ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

45 ವರ್ಷಕ್ಕಿಂತ ಮೇಲ್ಪಟ್ಟವರು ಲಸಿಕೆ ಪಡೆಯಲು ನೋಂದಾಯಿಸಿಕೊಳ್ಳುವಂತೆ ಕೇಂದ್ರ ಸಚಿವ ಪ್ರಕಾಶ್​ ಜಾವಡೇಕರ್​​ ದೇಶದ ಜನರಲ್ಲಿ​ ಮನವಿ ಮಾಡಿದ್ದಾರೆ.

  • Share this:

ದೇಶಾದ್ಯಂತ ಕೋವಿಡ್​ ಎರಡನೇ ಅಲೆ ಕಂಡು ಬಂದಿದ್ದು, ದಿನೇ ದಿನೇ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದೇ ಹಿನ್ನಲೆ ಸರ್ಕಾರ ಲಸಿಕೆ ವಿತರಣೆ ಹೆಚ್ಚಿಸಲು ಮುಂದಾಗಿದೆ. ಇದರ ಅಂಗವಾಗಿ ಏಪ್ರಿಲ್​ 1 ರಿಂದ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವಿತರಣೆ ಮಾಡಲಾಗುವುದು. 45 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು ಲಸಿಕೆ ಪಡೆಯಲು ನೋಂದಾಯಿಸಿಕೊಳ್ಳುವಂತೆ ಕೇಂದ್ರ ಸಚಿವ ಪ್ರಕಾಶ್​ ಜಾವಡೇಕರ್​​ ದೇಶದ ಜನರಲ್ಲಿ​ ಮನವಿ ಮಾಡಿದ್ದಾರೆ. ಕಳೆದ ಜನವರಿಯಿಂದ ಆರಂಭಿಸಲಾಗಿರುವು ಲಸಿಕೆ ವಿತರಣೆಯನ್ನು ಹಂತ ಹಂತವಾಗಿ ವಿಸ್ತರಣೆ ಮಾಡಲಾಗುತ್ತಿದೆ. ಆರಂಭದಲ್ಲಿ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿತ್ತು. ಬಳಿಕ ಎರಡನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟ ಮತ್ತು 45 ವರ್ಷದಿಂದ 59 ವರ್ಷದ ಅನಾರೋಗ್ಯ ಪೀಡಿತರಿಗೆ ಲಸಿಕೆ ವಿತರಣೆ ಮಾಡಲಾಗುತ್ತಿದೆ.


ಕೊರೋನಾ ವೈರಸ್​ ಟಾಸ್ಕ್​ ಫೋರ್ಸ್​ ತಜ್ಞರ ಸಲಹೆ ಆಧಾರದ ಮೇಲೆ ಈ ನಿರ್ಧಾರವನ್ನು ಸಚಿವ ಸಂಪುಟ ತೆಗೆದುಕೊಂಡಿದೆ ಎಂದು ತಿಳಿಸಿದರು.



ದೇಶದ ಕನಿಷ್ಠ 4.85 ಕೋಟಿ ಜನರು ಮೊದಲ ಡೋಸ್​ ಲಸಿಕೆ ಪಡೆದಿದ್ದರೆ, ಎರಡನೇ ಡೋಸ್​ ಅನ್ನು 80 ಲಕ್ಷ ಜನರು ಪಡೆದಿದ್ದಾರೆ.


ಕೋವಿಶೀಲ್ಡ್​ ಲಸಿಕೆ ಪಡೆಯುವ ಮೊದಲ ಮತ್ತು ಎರಡನೇ ಡೋಸ್​ ನಡುವಿನ ಅಂತರವನ್ನು ಹೆಚ್ಚಿಸುವಂತೆ ಹಲವು ರಾಜ್ಯಗಳು ಕೇಂದ್ರಕ್ಕೆ ಪತ್ರ ಬರೆದಿದ್ದವು. ಈ ಕುರಿತು ಮಾತನಾಡಿದ ಸಚಿವರು, ಎರಡನೇ ಡೋಸ್​ಗೆ ನಾಲ್ಕರಿಂದ ಎಂಟುವಾರಗಳ ಅಂತರವಿರಬೇಕು. ಈ ಬಗ್ಗೆ ವೈದ್ಯರು ನಿರ್ಧರಿಸುತ್ತಾರೆ ಎಂದರು.



ದೇಶದಲ್ಲಿ ಕಳೆದೊಂದು ವಾರದಿಂದ ಕೊರೋನಾ ವೈರಸ್​ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ, ಮಾರ್ಚ್​ 18ರಿಂದ ದಿನವೊಂದಕ್ಕೆ 30 ಸಾವಿರಕ್ಕಿಂತ ಹೆಚ್ಚಿನ ಪ್ರಕರಣಗಳು ಕಣಡು ಬರುತ್ತಿದೆ. ಅಲ್ಲದೇ, ಯುಕೆ, ದಕ್ಷಿಣ ಆಫ್ರಿಕಾ ಮತ್ತು ಬ್ರೆ ಜಿಲ್​ ವೈರಸ್​ಗಳ  795 ಪ್ರಕರಣಗಳು ಕೂಡ ಪತ್ತೆಯಾಗಿದೆ. ಹೊಸ ಸೋಂಕಿನ ಪ್ರಕರಣಗಳು ಶೇ 13 ರಷ್ಟು ಇಳಿಕೆ ಕಂಡಿದೆ. ಇಂದು 40, 715 ಸಕ್ರಿಯ ಕೋವಿಡ್​ ಪ್ರಕರಣ ದಾಖಲಾಗಿದೆ ಎಂದು ಸಚಿವರು ತಿಳಿಸಿದರು.

First published: