ಕೊಲೆಯತ್ನ ಪ್ರಕರಣ​: ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಪುತ್ರನ ಬಂಧನ

ಇನ್ನು ಯಾವುದೋ ಮುದುವೆಯೊಂದಕ್ಕೆ ಹೋಗಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಈಶ್ವರ್​​ ರಾಯ್​​ ಮೇಲೆ ಈ ಹಲ್ಲೆಯಾಗಿದೆ.

Ganesh Nachikethu | news18
Updated:June 19, 2019, 6:47 PM IST
ಕೊಲೆಯತ್ನ ಪ್ರಕರಣ​: ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಪುತ್ರನ ಬಂಧನ
ಕೇಂದ್ರ ಸಚಿವ ಪ್ರಹ್ಲಾದ್​ ಪಟೇಲ್​
Ganesh Nachikethu | news18
Updated: June 19, 2019, 6:47 PM IST
ಭೋಪಾಲ್​​(ಜೂನ್​​.19): ಕೊಲೆಯತ್ನ ಪ್ರಕರಣವೊಂದರಲ್ಲಿ ಕೇಂದ್ರ ಸಚಿವ ಪ್ರಹ್ಲಾದ್​ ಪಟೇಲ್​ ಪುತ್ರ ಪ್ರಬಲ್​ ಪಟೇಲ್ ಜೈಲು ಸೇರಿದ್ದಾರೆ. ವ್ಯಕ್ತಿಯೋರ್ವನ ಮೇಲೆ ಗುಂಡು ಹಾರಿಸುವ ಮೂಲಕ ಕೊಲೆಗೆ ಯತ್ನಿಸಲಾಗಿದೆ ಎಂಬ ಆರೋಪದಡಿ ಪ್ರಬಲ್ ವಿರುದ್ಧ ಮಧ್ಯಪ್ರದೇಶ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಸದ್ಯ ಪ್ರಕರಣ ಬೆನ್ನತ್ತಿದ್ದ ಪೊಲೀಸರು, ಪ್ರಬಲ್​​ ಪಟೇಲ್​​ ಮತ್ತು 6 ಜನ ಸಹಚರರನ್ನ ಬಂಧಿಸಿದ್ದಾರೆ.

ನರಸಿಂಗಪುರ್ ಜಿಲ್ಲೆಯ ಗೋಟೆಗಾವ್​ನಲ್ಲಿ ಸೋಮವಾರ ಮಧ್ಯರಾತ್ರಿ ವೇಳೆ ವ್ಯಕ್ತಿಯೋರ್ವನ ಮೇಲೆ ಪ್ರಬಲ್ ಪಟೇಲ್ ಮತ್ತು ಸಹಚರರು ಹಲ್ಲೆ ನಡೆಸಿದ್ದರು ಎನ್ನಲಾಗಿತ್ತು. 50 ವರ್ಷದ ಹೋಂ ಗಾರ್ಡ್​ ಈಶ್ವರ್ ರಾಯ್ ಎಂಬುವರು ಹಲ್ಲೆಗೊಳಗಾಗಿದ್ದ ವ್ಯಕ್ತಿ. ಈ ಘಟನೆ ಸಂಬಂಧ ಒಟ್ಟು 20 ಮಂದಿ ಮೇಲೆ ಪ್ರಕರಣ ದಾಖಲಾಗಿದೆ. ಈ ಪೈಕಿ 7 ಜನ ಜೈಲುಕಂಬಿ ಎಣಿಸುತ್ತಿದ್ದಾರೆ.

ಈಶ್ವರ್​​ ರಾಯ್​​ ಮತ್ತು ಪುತ್ರನ ಮೇಲೆ ಪ್ರಬಲ್​​ ಗುಂಡು ಹಾರಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಹಲ್ಲೆಗೊಳಗಾದ ವ್ಯಕ್ತಿ ಗಂಭೀರ ಗಾಯಗೊಂಡಿದ್ದಾರೆ. ಅಲ್ಲದೇ ಗಲಭೆಯಲ್ಲಿ ಸಚಿವರ ಅಳಿಯ ಮೊನು ಪಟೇಲ್ ಎಂಬುವರು ಭಾಗಿಯಾಗಿದ್ದು, ಸದ್ಯ ತಲೆಮರೆಸಿಕೊಂಡಿದ್ದಾರೆ ಎಂದು ಸ್ಥಳೀಯ ಎಸ್​ಪಿ ಗುರುಕರಣ್​ ಸಿಂಗ್​ ಹೇಳಿದ್ದಾರೆ.

ಇದನ್ನೂ ಓದಿ: "ಪ್ರಧಾನಿ ಮೋದಿ ಇವಿಎಂ ಬಗ್ಗೆ ಸಭೆ ಕರೆದಿದ್ದಲ್ಲಿ ನಾನೇ ಹೋಗುತ್ತಿದ್ದೆ": ಮಾಯಾವತಿ ವ್ಯಂಗ್ಯ

ಇನ್ನು ಯಾವುದೋ ಮುದುವೆಯೊಂದಕ್ಕೆ ಹೋಗಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಈಶ್ವರ್​​ ರಾಯ್​​ ಮೇಲೆ ಈ ಹಲ್ಲೆಯಾಗಿದೆ. ಪ್ರಬಲ್​ ಪಟೇಲ್​ ಸಹಚರರು ಬ್ಯಾಟ್​​ ಮತ್ತು ರಾಡ್​​ನಿಂದ ಕೂಡ ಆತನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.

ಈ ಕುರಿತಂತೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್, '' ಇದು ರಾಜಕೀಯ ಪಿತೂರಿ. ನನ್ನ ಮಗ ಮತ್ತು ಸಹೋದರನ ಮಗ ಘರ್ಷಣೆ ಸಂದರ್ಭದಲ್ಲಿ ಅಲ್ಲಿದ್ದರು.  ಸುಖಸುಮ್ಮನೆ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗ ಆಗಬೇಕೆಂದು ಆಗ್ರಹಿಸುತ್ತಿದ್ದೇನೆ'', ಎಂದಿದ್ದಾರೆ.
Loading...

-----------
First published:June 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...