Nitin Gadkari: ಕೇಂದ್ರ ಸಚಿವ ನಿತಿನ್​ ಗಡ್ಕರಿಗೆ ಕೊರೋನಾ ಸೋಂಕು ಧೃಢ

ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಒಳಗಾದ ಎಲ್ಲರೂ ಸುರಕ್ಷಾ ಕ್ರಮವಹಿಸಿ ಹಾಗೂ ಪರೀಕ್ಷೆಗೆ ಒಳಪಡುವಂತೆ ಸಚಿವರು ಮನವಿ ಮಾಡಿದ್ದಾರೆ.


Updated:September 16, 2020, 10:27 PM IST
Nitin Gadkari: ಕೇಂದ್ರ ಸಚಿವ ನಿತಿನ್​ ಗಡ್ಕರಿಗೆ ಕೊರೋನಾ ಸೋಂಕು ಧೃಢ
ಕೇಂದ್ರ ಸಚಿವ ನಿತಿನ್​ ಗಡ್ಕರಿ
  • Share this:
ನವದೆಹಲಿ (ಸೆಪ್ಟೆಂಬರ್​-16) : ಕೇಂದ್ರ ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಕುರಿತು ಟ್ವೀಟ್​ ಮಾಡಿರುವ ಸಚಿವರು, ನಿಶ್ಯಕ್ತಿ ಕಂಡು ಬಂದ ಹಿನ್ನಲೆ ನನ್ನ ವೈದ್ಯರನ್ನು ಭೇಟಿಯಾದೆ. ಈ ವೇಳೆ ಕೊರೋನಾ ಸೋಂಕಿರುವುದು ದೃಢಪಟ್ಟಿದೆ. ಸದ್ಯ ನಿಮ್ಮೆಲ್ಲಾರ ಹಾರೈಕೆಯಿಂದ ನನ್ನ ಆರೋಗ್ಯ ಸ್ಥಿರವಾಗಿದೆ. ಸೋಂಕು ದೃಢಪಟ್ಟ ಹಿನ್ನಲ್ಲೇ ಯಾರ ಸಂಪರ್ಕಕ್ಕೂ ಒಳಗಾಗದಂತೆ ಮನೆಯಲ್ಲಿಯೇ ಪ್ರತ್ಯೇಕವಾಗಿದ್ದೇನೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಮತ್ತೊಂದು ಟ್ವೀಟ್​ ಮಾಡಿರುವ ಅವರು, ಇತ್ತೀಚಿಗೆ ನನ್ನ ಸಂಪರ್ಕಕ್ಕೆ ಒಳಗಾದ ಎಲ್ಲರೂ ಸುರಕ್ಷಾ ಕ್ರಮವಹಿಸಿ ಹಾಗೂ ಪರೀಕ್ಷೆಗೆ ಒಳಪಡುವಂತೆ ಮನವಿ ಮಾಡಿದ್ದಾರೆ.


ನಿತಿನ್​ ಗಡ್ಕರಿಗೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್​ ಶಾ ಸೇರಿದಂತೆ 20ಕ್ಕೂ ಅಧಿಕ ಸಂಸದರು ಈ ಸೋಂಕಿಗೆ ತುತ್ತಾಗಿ, ಗುಣಮುಖರಾಗಿದ್ದಾರೆ. ಕೊರೋನಾ ವೈರಸ್​ ಸೋಂಕಿನಿಂದಾಗಿ ಲೋಕಸಭಾ ಸಂಸದರಾದ ತಿರುಪತಿಯ ಬಲಗಲಿ ದುರ್ಗಾ ಪ್ರಸಾದ್​ ರಾವ್​  ಚೆನ್ನೈನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಕೂಡ ಕೊರೋನಾ ಸೋಂಕು ಹೆಚ್ಚುತ್ತಿದ್ದು, ಸಿಎಂ ಸೇರಿದಂತೆ ಅನೇಕ ಸಚಿವರು, ಶಾಸಕರು ಸೋಂಕಿಗೆ ತುತ್ತಾಗಿ ಚೇತರಿಕೆ ಕಂಡಿದ್ದಾರೆ.  ಇಂದು ಕೂಡ ರಾಜ್ಯ ಗೃಹ ಸಚಿವ ಬಸವರಾಜ್​ ಬೊಮ್ಮಾಯಿ ಅವರಲ್ಲಿ  ಕೊರೋನಾ ಸೋಂಕು ಕಂಡು ಬಂದಿದೆ.ಇದನ್ನು ಓದಿ:  ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಕೊರೋನಾ ಸೋಂಕು ದೃಢ

ದೇಶದಲ್ಲಿ ಕೊರೋನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರಾಜಕಾರಣಿಗಳು ಸೇರಿದಂತೆ ಜನಸಾಮಾನ್ಯರಲ್ಲಿ ಸೋಂಕು ದೃಢಪಡುತ್ತಿದೆ. ಇದುವರೆಗೂ ದೇಶದಲ್ಲಿ ಸೋಂಕಿತರ ಸಂಖ್ಯೆ 50 ಲಕ್ಷದ ಗಡಿ ತಲುಪಿದೆ. ಸೋಂಕಿಗೆ ತುತ್ತಾಗುತ್ತಿರುವ ಅತಿಹೆಚ್ಚು ರಾಷ್ಟ್ರಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದು,  ದಿನವೊಂದಕ್ಕೆ ದೇಶದಲ್ಲಿ 90ಸಾವಿರ ಹೊಸ ಪ್ರಕರಣಗಳು ದೃಢವಾಗುತ್ತಿದೆ. ಅಲ್ಲದೇ ಕಳೆದ 24 ಗಂಟೆಗಳಲ್ಲಿ 1,290 ಜನರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
Published by: Seema R
First published: September 16, 2020, 10:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading