ರಾಷ್ಟ್ರಗೀತೆ ಹಾಡುವಾಗ ವೇದಿಕೆಯಲ್ಲೇ ಕುಸಿದುಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಇಂದು ಸೊಲ್ಹಾಪುರದಲ್ಲಿ ಪುಣ್ಯಶ್ಲೋಕ್ ಅಹಿಲ್ಯಾದೇವಿ ಹೋಲ್ಕಾರ್ ವಿಶ್ವವಿದ್ಯಾಲಯದಲ್ಲಿ ನಡೆದ ಸಂಸ್ಥಾಪನಾ ದಿನದ ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟ್ರಗೀತೆ ಹಾಡುತ್ತಿದ್ದ ವೇಳೆ ಗಡ್ಕರಿ ನಿಂತ ಸ್ಥಳದಲ್ಲೇ ಕುರ್ಚಿಯ ಮೇಲೆ ಕುಸಿದಿದ್ದಾರೆ.

Sushma Chakre | news18
Updated:August 1, 2019, 3:52 PM IST
ರಾಷ್ಟ್ರಗೀತೆ ಹಾಡುವಾಗ ವೇದಿಕೆಯಲ್ಲೇ ಕುಸಿದುಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ
ಸಚಿವ ನಿತಿನ್​ ಗಡ್ಕರಿ
  • News18
  • Last Updated: August 1, 2019, 3:52 PM IST
  • Share this:
ಮುಂಬೈ (ಆ. 1): ಮಹಾರಾಷ್ಟ್ರದ ಸೊಲ್ಹಾಪುರ ಜಿಲ್ಲೆಯ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆಗೆ ಎದ್ದು ನಿಂತಿದ್ದ  ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ವೇದಿಕೆಯಲ್ಲೇ ಕುಸಿದುಬಿದ್ದಿದ್ದಾರೆ.

ಕೆಲ ವರ್ಷಗಳಿಂದ ನಿತಿನ್ ಗಡ್ಕರಿ ಅವರ ಆರೋಗ್ಯ ಹದಗೆಟ್ಟಿದೆ. ಈ ಹಿಂದೆ ಕೂಡ ಕೆಲವು ಸಮಾರಂಭಗಳಲ್ಲಿ ಇಂಥದ್ದೇ ಘಟನೆ ನಡೆದಿತ್ತು. ಕಳೆದ ವರ್ಷ ಮಹಾರಾಷ್ಟ್ರದ ರಾಹುರಿ ಕೃಷಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದ ನಿತಿನ್ ಗಡ್ಕರಿ ವೇದಿಕೆಯಲ್ಲೇ ಕುಸಿದುಬಿದ್ದಿದ್ದರು. ಪ್ರಜ್ಞಾಹೀನರಾಗಿ ಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿತ್ತು. ಆ ಸಂದರ್ಭದಲ್ಲಿ ಕೂಡ ರಾಷ್ಟ್ರಗೀತೆ ವೇಳೆ ಎದ್ದು ನಿಂತಾಗಲೇ ಕುಸಿದುಬಿದ್ದಿದ್ದು ವಿಪರ್ಯಾಸ. ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿ, ಆಮ್ಲಜನಕ ಕೂಡ ಕಡಿಮೆಯಾದ್ದರಿಂದ ಉಸಿರಾಟದ ತೊಂದರೆಯಿಂದ ಕಳೆದ ವರ್ಷ ಘಟಿಕೋತ್ಸವದಲ್ಲಿ ಕುಸಿದು ಬಿದ್ದಿದ್ದರು.

Unnao Rape Case: 45 ದಿನದೊಳಗೆ ವಿಚಾರಣೆ ಮುಗಿಸಲು ಗಡುವು; ಸಂತ್ರಸ್ತೆಗೆ 25 ಲಕ್ಷ ಪರಿಹಾರ, ಬಿಗಿಭದ್ರತೆಗೆ ಸುಪ್ರೀಂ ಆದೇಶ

ಕಳೆದ ಏಪ್ರಿಲ್​ನಲ್ಲಿ ಕೂಡ ಅಹಮದಾನಗರ ಜಿಲ್ಲೆಯ ಶಿರಡಿಯಲ್ಲಿ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾಗ ನಿತಿನ್ ಗಡ್ಕರಿ ಕುಸಿದುಬಿದ್ದಿದ್ದರು. ಚುನಾವಣಾ ರ್ಯಾಲಿಯನ್ನು ಮುಗಿಸಿ ಸಮಾವೇಶದ ಕಡೆ ಸಾಗಿದ್ದ ನಿತಿನ್ ಗಡ್ಕರಿ ತಮಗಾಗಿ ಹಾಕಿದ್ದ ಕುರ್ಚಿಯತ್ತ ಹೋಗುವಾಗ ತಲೆ ಸುತ್ತಿ ಕೆಳಗೆ ಬಿದ್ದಿದ್ದರು.

ಇಂದು ಸೊಲ್ಹಾಪುರದಲ್ಲಿ ಪುಣ್ಯಶ್ಲೋಕ್ ಅಹಿಲ್ಯಾದೇವಿ ಹೋಲ್ಕಾರ್  ವಿಶ್ವವಿದ್ಯಾಲಯದಲ್ಲಿ ನಡೆದ ಸಂಸ್ಥಾಪನಾ ದಿನದ ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟ್ರಗೀತೆ ಹಾಡುತ್ತಿದ್ದ ವೇಳೆ ಗಡ್ಕರಿ ನಿಂತ ಸ್ಥಳದಲ್ಲೇ ಕುರ್ಚಿಯ ಮೇಲೆ ಕುಸಿದಿದ್ದಾರೆ. ಅಲ್ಲಿದ್ದ ವೈದ್ಯರು ಪರಿಶೀಲನೆ ನಡೆಸಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಗಂಟಲು ನೋವಿನಿಂದ ಬಳಲುತ್ತಿದ್ದ ನಿತಿನ್ ಗಡ್ಕರಿ ಅದಕ್ಕಾಗಿ ಹೆಚ್ಚು ಡೋಸೇಜ್ ಇದ್ದ ಔಷಧಿಯನ್ನು ಸೇವಿಸಿದ್ದರು. ಇದರಿಂದ ತಲೆಸುತ್ತು ಬಂದಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಜೊಮಾಟೋಗೆ ಟ್ವಿಟ್ಟರ್​ನಲ್ಲಿ ಬೆಂಬಲ ನೀಡಿದ ಊಬರ್ ಈಟ್; ಅಷ್ಟಕ್ಕೂ ಆಗಿದ್ದೇನು?

62 ವರ್ಷದ ನಿತಿನ್ ಗಡ್ಕರಿ ಬೆಳಗ್ಗೆಯಿಂದಲೂ ನಿಶ್ಯಕ್ತಿಯಿಂದಿದ್ದರು. ಸುಸ್ತಾದಂತೆ ಕಂಡುಬರುತ್ತಿದ್ದ ಅವರು ಸೇವಿಸಿದ್ದ ಔಷಧಿಯ ಡೋಸೇಜ್ ಪ್ರಭಾವ ಹೆಚ್ಚಾದ ಕಾರಣ ಕುಸಿದು ಬಿದ್ದಿದ್ದಾರೆ ಎಂದು ಅವರ ಸಹಾಯಕರು ತಿಳಿಸಿದ್ದಾರೆ. ನಾಳೆ ಕೂಡ ನಿತಿನ್ ಗಡ್ಕರಿ ಮಹಾರಾಷ್ಟ್ರದಲ್ಲಿ ಪ್ರವಾಸ ಮುಂದುವರೆಸಲಿದ್ದಾರೆ.
First published:August 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ