NHAI InvIT bonds: ಎನ್‌ಎಚ್‌ಎಐ ಇನ್ವಿಟ್ ಬಾಂಡ್‌ನಲ್ಲಿ ಹೂಡಿಕೆಗೆ ಸಲಹೆ ನೀಡಿದ ನಿತಿನ್ ಗಡ್ಕರಿ

ನಿತಿನ್ ಗಡ್ಕರಿ

ನಿತಿನ್ ಗಡ್ಕರಿ

ಸರ್ಕಾರವು ಇನ್ವಿಟ್ ಮಾದರಿಯ ಬಾಂಡ್ ಅನ್ನು ಷೇರು ವಿನಿಮಯ ಕೇಂದ್ರದಲ್ಲಿ ಬಿಡುಗಡೆ ಮಾಡಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಬಿಸಿನೆಸ್ ಟುಡೆ ಬಜೆಟ್ ರೌಂಡ್ ಟೇಬಲ್ 2023 ರ ಸಂವಾದದಲ್ಲಿ ಹೇಳಿದರು.

  • Trending Desk
  • 2-MIN READ
  • Last Updated :
  • Share this:

ಭಾರತೀಯರಿಗೆ ಮ್ಯೂಚುಯಲ್ ಫಂಡ್‌ಗಳ (Mutual Fund) ಮಾದರಿಯಲ್ಲಿ ಹೂಡಿಕೆ ಮಾಡಲು ಎನ್‌ಎಚ್‌ಎಐ ಇನ್ವಿಟ್ ಯೋಜನೆಯೊಂದನ್ನು (NHAI InvIT Bonds) ಪರಿಚಯಿಸಿದೆ. ಈ ಮೂಲಕ ಎನ್‌ಎಚ್‌ಎಐ ಇನ್ವಿಟ್ ಬಾಂಡ್‌ನಲ್ಲಿ ಹೂಡಿಕೆ (Investment) ಮಾಡಬಹುದು ಮತ್ತು ಹೆಚ್ಚಿನ ಬಡ್ಡಿ ದರದ ಲಾಭ ಪಡೆಯಬಹುದು. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ರಾಷ್ಟ್ರೀಯ ಹೆದ್ದಾರಿ ಇನ್ಫ್ರಾ ಟ್ರಸ್ಟ್ (ಎನ್‌ಎಚ್‌ಎಐ ಇನ್ವಿಟ್) ಬಾಂಡ್‌ಗಳನ್ನು ಪ್ರತಿ 15 ದಿನಗಳಿಗೊಮ್ಮೆ 8.50 ಪ್ರತಿಶತದಷ್ಟು ಬಡ್ಡಿಯೊಂದಿಗೆ (Interest) ತೆರೆಯುತ್ತಿದೆ. ಈ ಬಗ್ಗೆ ಮಾತನಾಡಿದ ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ (Union Minister Nitin Gadkari) ಅವರು ಈ ಯೋಜನೆ ಮತ್ತು ಅದರ ಲಾಭದ ಬಗ್ಗೆ ವಿವರಿಸಿದರು.


ಪ್ರತಿ 15 ದಿನಗಳಿಗೊಮ್ಮೆ ಎನ್‌ಎಚ್‌ಎಐ ಇನ್ವಿಟ್ ಅನ್ನು ಶೇ 8.50 ರಷ್ಟು ಬಡ್ಡಿಯೊಂದಿಗೆ ತೆರೆಯಲು ಯೋಜಿಸುತ್ತಿದೆ. ಸರ್ಕಾರವು ಇನ್ವಿಟ್ ಮಾದರಿಯ ಬಾಂಡ್ ಅನ್ನು ಷೇರು ವಿನಿಮಯ ಕೇಂದ್ರದಲ್ಲಿ ಬಿಡುಗಡೆ ಮಾಡಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಬಿಸಿನೆಸ್ ಟುಡೆ ಬಜೆಟ್ ರೌಂಡ್ ಟೇಬಲ್ 2023 ರ ಸಂವಾದದಲ್ಲಿ ಹೇಳಿದರು.


ವರ್ಷಕ್ಕೆ ಶೇ.8.50 ಬಡ್ಡಿ


ಬಜೆಟ್ ರೌಂಡ್ ಟೇಬಲ್ ಸಂವಾದದಲ್ಲಿ ಈ ಬಗ್ಗೆ ಮಾತನಾಡಿದ ಸಚಿವ ಗಡ್ಕರಿ ಅವರು "ಒಂದೂವರೆ ತಿಂಗಳ ಹಿಂದೆ, ನಾವು ಮುಂಬೈ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಇನ್ವಿಟ್ ಮಾದರಿಯ ನಮ್ಮ ಬಾಂಡ್ ಅನ್ನು ಪ್ರಾರಂಭಿಸಿದ್ದೇವೆ ಎಂದರು.


ವಾಸ್ತವವಾಗಿ ಈ ಬಾಂಡ್ ಅನ್ನು 10 ದಿನಗಳವರೆಗೆ ನಿಗದಿಪಡಿಸಲಾಗಿದೆ. ಆದರೆ ಮೊದಲ ದಿನ, ಏಳು ಗಂಟೆಗಳ ಒಳಗೆ, ಹೆಚ್ಚಿನ ಚಂದಾದಾರರನ್ನು ಪಡೆದಿದೆ. ಮತ್ತು ಈಗ ನಮ್ಮ ಬಾಂಡ್‌ನಲ್ಲಿ ನಾವು ವರ್ಷಕ್ಕೆ ಶೇ.8.50 ಬಡ್ಡಿ ನೀಡುತ್ತಿದ್ದು, ಈ ಬಾಂಡ್‌ನಲ್ಲಿ ₹10,000 ಹೂಡಿಕೆ ಮಾಡಿದರೂ ಅವರ ಖಾತೆಗೆ ಮಾಸಿಕ ಬಡ್ಡಿ ಜಮಾ ಮಾಡುವ ಯೋಜನೆ ಇದೆ’’ ಎಂದರು.


ವೇತನದಾರರಿಗೆ, ಮಧ್ಯಮ ವರ್ಗದವರಿಗೆ ಲಾಭದಾಯಕ ಯೋಜನೆ


ವೇತನದಾರರು, ಮಧ್ಯಮ ವರ್ಗದ ವ್ಯಕ್ತಿಗಳು ಮತ್ತು ಪಿಂಚಣಿದಾರರು NHAI ಇನ್ವಿಟ್‌ನಲ್ಲಿ ಹೂಡಿಕೆ ಮಾಡಬಹುದು ಏಕೆಂದರೆ ಇದು ಸ್ಥಿರ ಠೇವಣಿಗಳಿಗೆ ಹೋಲಿಸಿದರೆ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತದೆ ಎಂದು ಕೇಂದ್ರ ಸಚಿವರು ಯೋಜನೆಯ ಬಗ್ಗೆ ವಿವರಿಸಿದರು.


ಜಾಗತಿಕ ಹಣಕಾಸು ವ್ಯವಸ್ಥೆಯು ಭಾರತದ ಹೆದ್ದಾರಿ ವಲಯದಲ್ಲಿ ಹೂಡಿಕೆ ಮಾಡಲು ಹೆಚ್ಚಿನ ಆಸಕ್ತಿ ತೋರಿಸಿವೆ. ಇದು ಎಲ್ಲರಿಗೂ ಸರಿಹೊಂದುವ ಮತ್ತು ಲಾಭದಾಯಕ ಯೋಜನೆ. ಸಂಬಳ ಪಡೆಯುವ ಜನರು ಮತ್ತು ಪಿಂಚಣಿದಾರರು ಎನ್‌ಎಚ್‌ಎಐ ಇನ್ವಿಟ್ ಬಾಂಡ್‌ನಲ್ಲಿ ಹೂಡಿಕೆ ಮಾಡಬಹುದು ಮತ್ತು ಬಡ್ಡಿ ದರ ಹೆಚ್ಚಾಗಿರುತ್ತದೆ ಎಂದು ನಿತಿನ್‌ ಗಡ್ಕರಿ ಹೇಳಿದರು.




“ನಿಮ್ಮೆಲ್ಲರಿಗೂ, ವಿಶೇಷವಾಗಿ ಸಂಬಳ ಪಡೆಯುವವರಿಗೆ ನಾನು ಇಲ್ಲಿ ಹೂಡಿಕೆ ಮಾಡುವಂತೆ ಸಲಹೆ ನೀಡುತ್ತೇನೆ. ಏಕೆಂದರೆ ಇದು ನಿಜಕ್ಕೂ ನಿಮಗೆ ಉತ್ತಮ ಆದಾಯವನ್ನು ಪಡೆಯಲು ಸಹಕಾರಿಯಾಗಿದೆ. ನಿಮ್ಮ ಠೇವಣಿಗಳ ಮೇಲೆ ನೀವು ಗರಿಷ್ಠ ಶೇಕಡಾ 5 ರಿಂದ 5.50 ರಷ್ಟು ಪಡೆಯಬಹುದು. NHAI AAA ರೇಟಿಂಗ್ ಆಗಿದ್ದು, ಇಲ್ಲಿ ನೀವು 8.50 ಪ್ರತಿಶತದಷ್ಟು ಲಾಭವನ್ನು ಪಡೆಯಬಹುದು ಎಂದು ತಿಳಿಸಿದರು.


ಏನಿದು ಇನ್ವಿಟಿ?


ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್‌ಗಳು (ಇನ್ವಿಟಿಗಳು) ಮ್ಯೂಚುಯಲ್ ಫಂಡ್‌ಗಳ ಮಾದರಿಯ ಸಾಧನಗಳಾಗಿವೆ, ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಲು ಮತ್ತು ಸಮಯದ ಅವಧಿಯಲ್ಲಿ ನಗದು ಹರಿವುಗಳನ್ನು ಒದಗಿಸುವ ಸ್ವತ್ತುಗಳಲ್ಲಿ ಹೂಡಿಕೆ ಮಾಡಲು ವಿನ್ಯಾಸಗೊಳಿಸಲಾಗಿದೆ. ರೋಡ್ ಟೋಲ್ ಯೋಜನೆಗಳು ಅಥವಾ ವಿದ್ಯುತ್ ಯೋಜನೆಗಳಲ್ಲಿ ಇನ್ವಿಟಿಗಳು ಹೂಡಿಕೆ ಮಾಡುತ್ತವೆ.


ಇದನ್ನೂ  ಓದಿ: Free Gold: ಉಚಿತವಾಗಿ 7 ಲಕ್ಷ ಮೌಲ್ಯದ ಟ್ರ್ಯಾಕ್ಟರ್​ ನಿಮ್ಮದಾಗಿಸಿಕೊಳ್ಳಿ, ಜೊತೆಗೆ 8 ಗ್ರಾಂ ಚಿನ್ನ ಕೂಡ ಫ್ರೀ!


ನಮ್ಮ ದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಮೂಲಭೂತ ಸೌಕರ್ಯಗಳಲ್ಲಿ ವಿಶೇಷವಾಗಿ ರಸ್ತೆಗಳಲ್ಲಿ ಭಾರಿ ಹೂಡಿಕೆಗಳು ನಿರ್ಣಾಯಕವಾಗಿವೆ ಮತ್ತು ಹೆಚ್ಚಿನ ಚಿಲ್ಲರೆ ಹೂಡಿಕೆದಾರರು ಮುಂದಿನ ಸುತ್ತುಗಳಲ್ಲಿ ಭಾಗವಹಿಸುತ್ತಾರೆ ಎಂದು ನಿತಿನ್‌ ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದರು.

Published by:Mahmadrafik K
First published: