"Hijab ಬ್ಯಾನ್ ಮಾಡುವುದಿಲ್ಲ" ಎಂದ ಕೇಂದ್ರ ಸಚಿವರು! ವಿವಾದದ ಬಗ್ಗೆ ಅವರು ಹೇಳಿದ್ದೇನು?

ಕರ್ನಾಟಕದಲ್ಲಿ ಉಂಟಾಗಿರುವ ಹಿಜಾಬ್ ವಿವಾದದ ಬಗ್ಗೆ ಕೇಂದ್ರ ಸಚಿವರು ಮಾತನಾಡಿದ್ದಾರೆ. "ಯಾವುದೇ ಕಾರಣಕ್ಕೂ ಹಿಜಾಬ್ ಬ್ಯಾನ್ ಮಾಡುವುದಿಲ್ಲ" ಎಂದಿದ್ದಾರೆ. ಹಾಗಿದ್ರೆ ಅವರು ಹೇಳಿದ್ದೇನು? ಅವರ ಮಾತಿನ ಅರ್ಥವೇನು ಅಂತ ತಿಳಿದುಕೊಳ್ಳಲು ಈ ಸುದ್ದಿ ಓದಿ...

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹೈದರಾಬಾದ್: ಕರ್ನಾಟಕದಲ್ಲಿ (Karnataka) ಹಿಜಾಬ್ ವಿವಾದ (Hijab Controversy) ಇನ್ನೂ ಬಗೆಹರಿದಿಲ್ಲ. ಸದ್ಯ ಹಿಜಾಬ್ ವಿವಾದ ಹೈಕೋರ್ಟ್‌ನಲ್ಲಿ (High Court) ನಡೆಯುತ್ತಿದೆ. ಈಗಾಗಲೇ ವಾದ, ಪ್ರತಿವಾದ ಆಲಿಸಿರುವ ನ್ಯಾಯಪೀಠ ವಿಚಾರಣೆ ಮುಗಿಸಿದೆ. ಇಂದು ನ್ಯಾಯಪೀಠ ತೀರ್ಪು (Judgment) ನೀಡುವ ಸಾಧ್ಯತೆ ಇದೆ. ಈ ನಡುವೆಯೇ ಕೇಂದ್ರ ಸಚಿವರು (Central Minister) ಹಿಜಾಬ್ ವಿವಾದದ ಕುರಿತಂತೆ ಮಾತನಾಡಿದ್ದಾರೆ. “ಯಾವುದೇ ಕಾರಣಕ್ಕೂ ಹಿಬಾಜ್ ನಿಷೇಧ (Ban) ಮಾಡುವುದಿಲ್ಲ” ಎಂದಿದ್ದಾರೆ. ಹಾಗಿದ್ರೆ ಆ ಕೇಂದ್ರ ಸಚಿವರು ಯಾರು? ಹಿಜಾಬ್ ವಿವಾದದ ಬಗ್ಗೆ ಅವರು ಹೇಳಿದ್ದೇನು ಅಂತ ತಿಳಿದುಕೊಳ್ಳಲು ಈ ಸುದ್ದಿ ಓದಿ…

“ದೇಶದಲ್ಲಿ ಹಿಜಾಬ್ ನಿಷೇಧ ಮಾಡುವುದಿಲ್ಲ” ಎಂದ ಕೇಂದ್ರ ಸಚಿವರು

ಕರ್ನಾಟಕದಲ್ಲಿ ಹಿಜಾಬ್ ವಿವಾದದ ನಡುವೆ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಪ್ರತಿಕ್ರಿಯೆ ನೀಡಿದ್ದಾರೆ. ದೇಶದಲ್ಲಿ ಹಿಜಾಬ್ ನಿಷೇಧ ಮಾಡುವುದಿಲ್ಲ ಅಂತ ಅವರು ಹೇಳಿದ್ದಾರೆ. ಹೈದರಾಬಾದ್‌ನಲ್ಲಿ ಮಾತನಾಡಿದ ಅವರು, "ಹಿಜಾಬ್ ವಿವಾದ ನ್ಯಾಯಾಲಯದಲ್ಲಿದೆ. ಹಾಗಾಗಿ ಈ ಬಗ್ಗೆ ಹೆಚ್ಚಿಗೆ ಮಾತನಾಡುವುದಿಲ್ಲ. ಆದರೆ ಭಾರತದಲ್ಲಿ ಹಿಜಾಬ್ ಧರಿಸುವುದಕ್ಕೆ ಯಾವುದೇ ನಿಷೇಧವಿಲ್ಲ. ಇದು ಸ್ಪಷ್ಟವಾಗಿದೆ ಎಂದಿದ್ದಾರೆ.

“ಶಿಕ್ಷಣ ಸಂಸ್ಥೆಗಳಲ್ಲಿ ನಿಯಮ ಪಾಲಿಸಲೇ ಬೇಕು”

ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ನಿಯಮ ಪಾಲಿಸಲೇ ಬೇಕು ಅಂತ ಸಚಿವರು ಹೇಳಿದ್ದಾರೆ.  ಸಹಜವಾಗಿ, ಕೆಲವು ಸಂಸ್ಥೆಗಳು ತಮ್ಮದೇ ಆದ ಶಿಸ್ತು ಹೊಂದಿವೆ, ಡ್ರೆಸ್ ಕೋಡ್ ಮತ್ತು ಸಮವಸ್ತ್ರ ಹೊಂದಿವೆ. ನಾವು ಸಂವಿಧಾನದ ಹಕ್ಕುಗಳ ಬಗ್ಗೆ ಮಾತನಾಡುವಾಗ, ನಾವು ಸಾಂವಿಧಾನಿಕ ಕರ್ತವ್ಯಗಳ ಬಗ್ಗೆಯೂ ಮಾತನಾಡಬೇಕು. ಹೀಗಾಗಿ ಸಂಸ್ಥೆಯ ನಿಯಮ ಪಾಲಿಸುವುದು ಎಲ್ಲರ ಕರ್ತವ್ಯ ಎಂದಿದ್ದಾರೆ.

ಇದನ್ನೂ ಓದಿ: Mandya: ‘ಅಂದು ವಿದ್ಯಾರ್ಥಿನಿ ಅಲ್ಲಾಹು ಅಕ್ಬರ್ ಬದಲು, ಭಾರತ್ ಮಾತಾ ಕೀ ಜೈ ಎಂದು ಕೂಗಲಿಲ್ಲ ಏಕೆ?’

ಕರ್ನಾಟಕದಲ್ಲಿ ಹಿಜಾಬ್ ವಿವಾದ ಏನಾಗಿದೆ?

ಕಳೆದ ವರ್ಷ ಅಂದರೆ 2021ರ ಡಿಸೆಂಬರ್‌ನಲ್ಲಿ ಉಡುಪಿಯ ಕಾಲೇಜ್‌ನಲ್ಲಿ ಹಿಜಾಬ್ ವಿವಾದ ಶುರುವಾಗಿತ್ತು. ಬಾಲಕಿಯರ ಕಾಲೇಜಿಗೆ ಹಿಜಾಬ್ ಧರಿಸಿದ್ದಕ್ಕಾಗಿ ಆರು ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದಾಗ ಹಿಜಾಬ್ ಗಲಾಟೆ ಪ್ರಾರಂಭವಾಯಿತು. ಇದಕ್ಕೆ ವಿರುದ್ಧವಾಗಿ ಹಿಂದೂ ಸಮುದಾಯದ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಕೊಂಡು ಕಾಲೇಜಿಗೆ ಪ್ರವೇಶ ಕೋರಿದ್ದರು. ಇದು ವಿವಾದಕ್ಕೆ ಕಾರಣವಾಗಿ ರಾಜ್ಯಾದ್ಯಂತ ತೀವ್ರ ಗಲಾಟೆ, ಸಂಘರ್ಷಕ್ಕೆ ಕಾರಣವಾಗಿತ್ತು.

ಹಿಜಾಬ್ ವಿವಾದ ಬರೀ ರಾಜ್ಯದಲ್ಲಷ್ಟೇ ಅಲ್ಲದೇ, ಪಕ್ಕದ ರಾಜ್ಯಗಳಿಗೂ ವ್ಯಾಪಿಸಿತ್ತು. ಅಲ್ಲದೇ ದೇಶ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲೂ ಭಾರೀ ಸುದ್ದಿ ಮಾಡಿತ್ತು.

ಹೈಕೋರ್ಟ್ ಮೊರೆ ಹೋಗಿದ್ದ ವಿದ್ಯಾರ್ಥಿನಿಯರು

ನಂತರ ಬಾಲಕಿಯರು ಪರಿಹಾರ ಕೋರಿ ಕರ್ನಾಟಕ ಹೈಕೋರ್ಟ್‌ ಮೊರೆ ಹೋಗಿದ್ದರು. ಈ ಮಧ್ಯೆ  ಹೈಕೋರ್ಟ್ ನ್ಯಾಯಪೀಠ ಮಧ್ಯಂತರ ತೀರ್ಪು ನೀಡಿದೆ. ಪೂರ್ಣ ಪ್ರಮಾಣದ ತೀರ್ಪು ವರೆಗೆ ಯಾವುದೇ ಧಾರ್ಮಿಕ ಗುರುತನ್ನು ಶಾಲೆ-ಕಾಲೇಜಿನಲ್ಲಿ ಧರಿಸುವಂತಿಲ್ಲ ಎಂದು ಆದೇಶಿಸಿತ್ತು.

ಸತತ 11 ದಿನಗಳ ಕಾಲ ವಿಚಾರಣೆ

ಮುಖ್ಯ ನ್ಯಾಯಮೂರ್ತಿ ರಿತುರಾಜದ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್ ಮತ್ತು ಖಾಜಿ ಜೈಬುನ್ನೀಸಾ ಮೊಹಿಯಿದ್ದೀನ್ ಅವರನ್ನು ಒಳಗೊಂಡ ಪೂರ್ಣ ಪೀಠ, ಸತತ  11 ದಿನಗಳ ಕಾಲ ವಿಚಾರಣೆ ನಡೆಸಿತ್ತು. ಕಳೆದ ವಾರವಷ್ಟೇ ವಾದ ಪ್ರತಿವಾದ ಆಲಿಸಿ, ವಿಚಾರಣೆಯನ್ನು ಪೂರ್ಣಗೊಳಿಸಿದೆ.

ಇದನ್ನೂ ಓದಿ: Hindu-Muslim: "ದೇವನೊಬ್ಬ ನಾಮಹಲವು" ಎಂದ ಮುಸ್ಲಿಂ ಕುಟುಂಬ, ಚೆನ್ನಕೇಶವನ ಆದೇಶದಂತೆ ಗಣಪತಿಗೆ ಪೂಜೆ!

ಇಂದು ಬರಲಿದೆ ಹಿಜಾಬ್ ತೀರ್ಪು

ಇದೀಗ ಹಿಜಾಬ್ ವಿಚಾರ ಸಂಬಂಧ ವಿಚಾರಣೆ ಮುಗಿದಿದ್ದು, ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. ಇಂದು ಹಿಜಾಬ್ ವಿವಾದದ ಕುರಿತಂತೆ ಹೈಕೋರ್ಟ್ ತೀರ್ಪು ಪ್ರಕಟಿಸಲಿದೆ. ಕಳೆದ ವಾರ ನ್ಯಾಯಾಲಯವು ತನ್ನ ವಿಚಾರಣೆಯನ್ನು ಪೂರ್ಣಗೊಳಿಸಿದೆ ಮತ್ತು ಶೀಘ್ರದಲ್ಲೇ ತನ್ನ ಅಂತಿಮ ಆದೇಶವನ್ನು ನೀಡುವ ಸಾಧ್ಯತೆಯಿದೆ.
Published by:Annappa Achari
First published: