ಕೊಚ್ಚಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸರ್ಕಾರದ ಆಡಳಿತದ ಅಡಿಯಲ್ಲಿ ಭಾರತದ ಕ್ರಿಶ್ಚಿಯನ್ನರು (Christians) ಸುರಕ್ಷಿತವಾಗಿದ್ದಾರೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾನ್ ಬಾರ್ಲಾ (John Barla) ಅವರು ಅಭಿಪ್ರಾಯಪಟ್ಟಿದ್ದಾರೆ. ಕೇರಳದ ಸಿರೋ-ಮಲಬಾರ್ ಚರ್ಚ್‌ನ ಪ್ರಮುಖ ಆರ್ಚ್‌ಬಿಷಪ್ ಮಾರ್ ಜಾರ್ಜ್ ಅಲೆಂಚೇರಿ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು ಈ ರೀತಿ ಹೇಳಿದ್ದಾರೆ.
ಈ ಬಗ್ಗೆ ವಿವರವಾಗಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ಜಾನ್ ಬಾರ್ಲಾ, ಕ್ರಿಶ್ಚಿಯನ್ ಸಮುದಾಯದ ಜನರ ಶ್ರೇಯೋಭಿವೃದ್ಧಿಗೆ ಹಲವಾರು ಕೆಲಸಗಳನ್ನು ಸರ್ಕಾರ ಮಾಡಿದೆ. 2014ರ ನಂತರ ಅಂದ್ರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಆಡಳಿತಕ್ಕೆ ಬಂದ ನಂತರ ಕೇರಳ ಸೇರಿದಂತೆ ಭಾರತದಾದ್ಯಂತ ಮೋದಿ ಸರ್ಕಾರದಲ್ಲಿ ಕ್ರಿಶ್ಚಿಯನ್ ಜನರು ಸುರಕ್ಷಿತವಾಗಿದ್ದಾರೆ. 2014ರ ನಂತರ ಯಾವುದೇ ಪ್ರದೇಶದಲ್ಲಿ ಗೊಂದಲಗಳು ಸೃಷ್ಟಿಯಾಗಿಲ್ಲ. ನಾವೆಲ್ಲಾ ಜೊತೆಯಾಗಿ ಸೇರಿ ಕೆಲಸ ಮಾಡಬೇಕು. ಮಾಡೋಕೆ ತುಂಬಾನೆ ಕೆಲಸಗಳಿವೆ. ಆದರೆ ಅದರ ಸರ್ಕಾರದ ಯೋಜನೆಗಳ ಬಗ್ಗೆ ಕ್ರಿಶ್ಚಿಯನ್ ಜನರಿಗೆ ತಿಳಿದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: Easter Sunday: ಈಸ್ಟರ್ ಸಂಡೇ ಹಿನ್ನೆಲೆ ದೆಹಲಿಯ ಚರ್ಚ್‌ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಚರ್ಚ್‌ಗಳಿಗೆ ಸಚಿವ ಭೇಟಿ
ಕ್ರೈಸ್ತ ಮುಖಂಡರನ್ನು ಭೇಟಿ ಮಾಡಲು ಮೂರು ದಿನಗಳ ಭೇಟಿಗಾಗಿ ಸೋಮವಾರ ಕೇರಳಕ್ಕೆ ಆಗಮಿಸಿದ ಬಾರ್ಲಾ, ಬಿಷಪ್ ಅವರೊಂದಿಗಿನ ಭೇಟಿಯು ತುಂಬಾ ಖುಷಿ ನೀಡಿದೆ. ಫಲಪ್ರದವೂ ಆಗಿದೆ ಎಂದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಜನಸಂಪರ್ಕ ಕಾರ್ಯಕ್ರಮದ ಭಾಗವಾಗಿ ಕೇರಳ ರಾಜ್ಯದಲ್ಲಿ ಈ ಸಭೆ ನಡೆದಿದೆ. ಕೇರಳ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಉಪಾಧ್ಯಕ್ಷ ಎಎನ್ ರಾಧಾಕೃಷ್ಣನ್ ಅವರು ಸಚಿವ ಜಾನ್ ಬಾರ್ಲಾ ಜೊತೆಗಿದ್ದರು.
ಇನ್ನು ಸೋಮವಾರ ರಾತ್ರಿ 8 ಗಂಟೆಗೆ ತ್ರಿಶೂರ್‌ನಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಬರ್ಲಾ ಪಾಲ್ಗೊಂಡಿದ್ದರು. ಬಳಿಕ ಟ್ವೀಟ್ ಮಾಡಿರುವ ಅವರು, ಇಫ್ತಾರ್‌ನ ಸೌಂದರ್ಯವು ಸಮುದಾಯವನ್ನು ಅರ್ಥ ಮಾಡಿಕೊಳ್ಳುವುದರಲ್ಲಿದೆ. ನಮ್ಮ ಪ್ರೀತಿಪಾತ್ರರೊಂದಿಗೆ ಊಟವನ್ನು ಹಂಚಿಕೊಳ್ಳುವುದು ನಿಜವಾಗಿಯೂ ಒಂದು ಪುಣ್ಯವೇ ಸರಿ. ನಮ್ಮ ಸಮುದಾಯದ ವೈವಿಧ್ಯತೆಯನ್ನು ಶ್ಲಾಘಿಸಲು ಸ್ವಲ್ಪ ಸಮಯ ತೆಗೆದುಕೊಳ್ಳೋಣ ಮತ್ತು ಈ ವಿಶೇಷ ಸಂದರ್ಭವನ್ನು ಆಚರಿಸಲು ಒಂದಾಗೋಣ. ಎಲ್ಲರಿಗೂ ಇಫ್ತಾರ್ ಶುಭಾಶಯಗಳು!’ ಎಂದು ಟ್ವೀಟ್ ಮಾಡಿದ್ದಾರೆ.
ಮ್ಯೂಸಿಯಂಗೂ ಭೇಟಿ
ಇನ್ನು ಸೇಂಟ್ ಯುಫ್ರೇಸಿಯಾ ಶ್ರೈನ್ ಮತ್ತು ಮ್ಯೂಸಿಯಂಗೆ ಭೇಟಿ ನೀಡಿದ ಸಚಿವ ಜಾನ್ ಬಾರ್ಲಾ, ನಮ್ಮ ರಾಷ್ಟ್ರದ ಜನರ ಶ್ರೋಯೋಭಿವೃದ್ಧಿಗೆ ಪ್ರಾರ್ಥನೆ ಮಾಡಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ತಮ್ಮ ಬುದ್ಧಿವಂತಿಕೆ ಮತ್ತು ಒಳನೋಟಗಳನ್ನು ನನ್ನೊಂದಿಗೆ ಹಂಚಿಕೊಂಡ ಚರ್ಚ್‌ನ ಫಾದರ್ ಮತ್ತು ಸಿಸ್ಟರ್‌ಗಳೊಂದಿಗೆ ಮಾತುಕತೆ ನಡೆಸಿದ್ದು ತುಂಬಾ ಸಂತೋಷ ಕೊಟ್ಟಿದೆ. ಇದೊಂದು ಅರ್ಥಪೂರ್ಣ ಮತ್ತು ಸ್ಪೂರ್ತಿದಾಯಕ ಅನುಭವ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Lips Care: ಸುಂದರಿಯಾಗ್ಬೇಕು ಅಂತ ಸರ್ಜರಿ ಮಾಡಿಸಿಕೊಳ್ಳೋರೆ ಎಚ್ಚರ, ಈಕೆಯ ತುಟಿ ನೋಡಿದ್ರೆ ಹಾರ್ಟ್ ನಿಂತೇ ಹೋಗುತ್ತೆ!
ಬಳಿಕ ಎರ್ನಾಕುಲಂನ ಐತಿಹಾಸಿಕ ಎಸ್‌ಟಿ ಥಾಮಸ್ ಚರ್ಚ್ ಮಲಯತೂರ್‌ಗೆ ಭೇಟಿ ನೀಡಿದ ಜಾನ್ ಬಾರ್ಲಾ, ಇಂದು ಎರ್ನಾಕುಲಂನ ಐತಿಹಾಸಿಕ ಸೇಂಟ್ ಥಾಮಸ್ ಚರ್ಚ್ ಮಲಯಟೂರಿಗೆ ಭೇಟಿ ನೀಡಿ ಚರ್ಚ್‌ನ ಪಾದ್ರಿಯೊಂದಿಗೆ ಅದ್ಭುತ ಉಪಹಾರ ಸೇವಿಸಿದೆ. ಈ ವೇಳೆ ಅವರ ಕುಂದುಕೊರತೆಗಳು ಮತ್ತು ಹೊಸ ಯೋಜನೆಗಳ ಪ್ರಸ್ತಾಪಗಳನ್ನು ಕೇಳಲು ಅವಕಾಶ ಸಿಕ್ಕಿತು ಎಂದು ಬಾರ್ಲಾ ಸೋಮವಾರ ಟ್ವೀಟ್ ಮಾಡಿದ್ದಾರೆ.
ನಂತರ ಚಾಲಕುಡ್ಡಿಯ ಡಿವೈನ್ ರಿಟ್ರೀಟ್ ಸೆಂಟರ್‌ನಲ್ಲಿ ಬಾರ್ಲಾ ಕ್ರೈಸ್ತ ಮುಖಂಡರೊಂದಿಗೆ ಸಂವಾದ ನಡೆಸಿದರು. ಕೇರಳದ ಚಾಲಕುಡ್ಡಿಯಲ್ಲಿರುವ ಡಿವೈನ್ ರಿಟ್ರೀಟ್ ಸೆಂಟರ್‌ನಲ್ಲಿ ಫಾದರ್, ಬ್ರದರ್ಸ್ ಮತ್ತು ಕ್ರಿಶ್ಚಿಯನ್ ನಾಯಕರೊಂದಿಗೆ ಸಂವಹನ ನಡೆಸಲು ಉತ್ತಮ ಅವಕಾಶ ಸಿಕ್ಕಿತು. ಕೇಂದ್ರ ಸರ್ಕಾರದ ಇತ್ತೀಚಿನ ಉಪಕ್ರಮಗಳು ಮತ್ತು ಯೋಜನೆಗಳನ್ನು ಅವರೊಂದಿಗೆ ಹಂಚಿಕೊಳ್ಳಲು ಖುಷಿಯಾಯಿತು ಎಂದು ಅವರು ಟ್ವೀಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ