‘ಹಸು ಸಗಣಿಯ ಮೇಲೆ ಹೆಚ್ಚಿನ ಸಂಶೋಧನೆಗಳು ನಡೆಯಲಿ‘; ವಿಜ್ಞಾನಿಗಳಿಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸಲಹೆ

ಹಾಲು, ಸಗಣಿ ಮತ್ತು ಗೋಮೂತ್ರದ ಮೇಲೆ ಸಂಶೋಧನೆಗಳು ನಡೆದರೆ ದೇಶದ ಆರ್ಥಿಕತೆಗೆ ದೊಡ್ಡಮಟ್ಟದ ಕೊಡುಗೆ ಸಿಗುತ್ತದೆ. ಇದರಿಂದ ದೇಶದ ರೈತರು ಪ್ರಗತಿ ಹೊಂದುತ್ತಾರೆ ಎಂದು ಕೇಂದ್ರ ಸಚಿವ ಗಿರಿರಾಜ್​​ ಸಿಂಗ್​​ ಹೇಳಿದರು.

news18-kannada
Updated:January 15, 2020, 11:38 AM IST
‘ಹಸು ಸಗಣಿಯ ಮೇಲೆ ಹೆಚ್ಚಿನ ಸಂಶೋಧನೆಗಳು ನಡೆಯಲಿ‘; ವಿಜ್ಞಾನಿಗಳಿಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸಲಹೆ
ಕೇಂದ್ರ ಸಚಿವ ಗಿರಿರಾಜ್ ಸಿಂಗ್.
  • Share this:
ನವದೆಹಲಿ(ಜ.15): ಹಸು ಸಗಣಿಯ ಕುರಿತು ಸಂಶೋಧನೆ ನಡೆಸುವಂತೆ ಕೇಂದ್ರ ಪಶು ಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಗಿರಿರಾಜ್ ಸಿಂಗ್ ವಿಜ್ಞಾನಿಗಳಿಗೆ ಸಲಹೆ ನೀಡಿದ್ದಾರೆ. ಕಳೆದ ಸೋಮವಾರ ಜನವರಿ 13ನೇ ತಾರೀಕಿನಂದು ನಡೆದ 12 ರಾಜ್ಯಗಳ ಉಪ ಕುಲಪತಿಗಳು ಮತ್ತು ವಶುವೈದ್ಯ ಅಧಿಕಾರಿಗಳ ಕಾರ್ಯಾಗಾರದಲ್ಲಿ ಗಿರಿರಾಜ್​​ ಸಿಂಗ್ ಮಾತಾಡಿದರು. ಈ ವೇಳೆ "ಹಸು ಹಾಲು ಕೊಡುವುದು ನಿಲ್ಲಿಸಿದ ಬಳಿಕವೂ ರೈತರಿಗೆ ನೆರವಾಗಬೇಕು. ರೈತರಿಗೆ ಹಸು ಆರ್ಥಿಕವಾಗಿ ಲಾಭದಾಯಕ ಆಗಬೇಕೆಂದರೆ ಸಗಣಿಯ ಕುರಿತು ಹೆಚ್ಚಿನ ಸಂಶೋಧನೆಗಳು ನಡೆಯಬೇಕು. ಆಗ ಹಸು ರೈತರಿಗೆ ಇನ್ನಷ್ಟು ಆರ್ಥಿಕವಾಗಿ ಲಾಭದಾಯಕವಾಗಲಿದೆ ಎಂದರು.

ಹಾಲು ನೀಡುವುದು ನಿಲ್ಲಿಸಿದ ಬಳಿಕ ಗೊಡ್ಡು ಹಸುಗಳನ್ನು ಹೊರಹಾಕಲಾಗುತ್ತದೆ. ಮುಂದೆ ಹೀಗಾಗದಂತೆ ತಡೆಯಲು ಹಸು ಸಗಣಿಯ ಕುರಿತು ಸಂಶೋಧನೆ ನಡೆಸಬೇಕಿದೆ. ಈ ಸಂಶೋಧನೆಯಿಂದ ರೈತರು ಹಸುಗಳ ಸಗಣಿ ಮತ್ತು ಮೂತ್ರದಿಂದ ಹಣ ಸಂಪಾದನೆ ಮಾಡಲು ಸಾಧ್ಯವಾಗಬೇಕು. ಆಗ ಯಾರು ಗೊಡ್ಡು ಹಸುಗಳನ್ನು ಹೊರಹಾಕುವುದಿಲ್ಲ ಎಂದು ಗಿರಿರಾಜ್​​​ ಸಿಂಗ್​​ ಅಭಿಪ್ರಾಯಪಟ್ಟರು.

ಹಾಲು, ಸಗಣಿ ಮತ್ತು ಗೋಮೂತ್ರದ ಮೇಲೆ ಸಂಶೋಧನೆಗಳು ನಡೆದರೆ ದೇಶದ ಆರ್ಥಿಕತೆಗೆ ದೊಡ್ಡಮಟ್ಟದ ಕೊಡುಗೆ ಸಿಗುತ್ತದೆ. ಇದರಿಂದ ದೇಶದ ರೈತರು ಪ್ರಗತಿ ಹೊಂದುತ್ತಾರೆ ಎಂದು ​ಹೇಳಿದರು.

ಇದನ್ನೂ ಓದಿ: ಜೆಎನ್​ಯು ಹಿಂಸಾಚಾರ ಪ್ರಕರಣ; ವಿಡಿಯೋದಲ್ಲಿದ್ದ ಮುಸುಕುಧಾರಿ ಯುವತಿ ನಾನಲ್ಲ ಎಂದ ಕೋಮಲ್ ಶರ್ಮ

ಈ ಹಿಂದೆ ಭವಿಷ್ಯದಲ್ಲಿ ಕೇವಲ ಹಸುಗಳು ಮಾತ್ರ ಜನಿಸುವಂತಹ ವೀರ್ಯಾಣುಗಳನ್ನು ಆಯ್ಕೆ ಮಾಡಿ ದನಗಳಿಗೆ ಗರ್ಭಧಾರಣೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಈ ಕುರಿತು ಸಂಶೋಧನೆ ಚಾಲ್ತಿಯಲ್ಲಿದೆ. ಶೀಘ್ರದಲ್ಲಿ ಕ್ಷೀರ ಕ್ಷೇತ್ರದಲ್ಲಿ ಮತ್ತೊಂದು ಕ್ರಾಂತಿಯಾಗಲಿದೆ ಎಂದು ಗಿರಿರಾಜ್ ಸಿಂಗ್ ತಿಳಿಸಿದ್ದರು.

2025ರ ವೇಳೆಗೆ 10 ಕೋಟಿ ವೀರ್ಯಾಣುಗಳನ್ನು ಪೂರೈಕೆ ಮಾಡಲು ಉದ್ದೇಶಿಸಲಾಗಿದೆ. ಅದು 10 ಕೋಟಿ ಹಸುಗಳ ಹುಟ್ಟಿಗೆ ಕಾರಣವಾಗಲಿದೆ. ಈ ಮೂಲಕ ನಾವು ದೇಶದಲ್ಲಿ ಹಸುಗಳ ಉತ್ಪಾದಿಸುವ ಕಾರ್ಖಾನೆ ನಿರ್ಮಿಸಲಿದ್ದೇವೆ. ದೇಶಾದ್ಯಂತ ಅಧಿಕ ಸಂಖ್ಯೆಯಲ್ಲಿ ಹಸುಗಳ ಉತ್ಪಾದನೆಯಾಗಲಿದೆ. ಇದಲ್ಲದೆ ಹಾಲು ಉತ್ಪಾದನೆಯಲ್ಲೂ ಗಣನೀಯ ಸಾಧನೆಯಾಗಲಿದೆ. ಹೊಸ ತಂತ್ರಜ್ಞಾನದ ಮೂಲಕ ಹಸುಗಳು 20 ಲೀಟರ್ ವರೆಗೆ ಹಾಲು ಉತ್ಪಾದನೆ ಮಾಡಲಿವೆ.ಇದು ಸಾಧ್ಯವಾದರೆ ಹಾಲು ಉತ್ಪಾದನೆಯಲ್ಲಿ ದೇಶದಲ್ಲೇ ದೊಡ್ಡ ಕ್ರಾಂತಿಯಾಗಲಿದೆ ಎಂದಿದ್ದರು ಗಿರಿರಾಜ್​​ ಸಿಂಗ್​​.
Published by: Ganesh Nachikethu
First published: January 15, 2020, 11:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading