• Home
  • »
  • News
  • »
  • national-international
  • »
  • ಅಧಿಕಾರಿಗಳಿಗೆ ಥಳಿಸಿದರಾ ಬಿಶ್ವೇಶರ್ ಟುಡು? Union Minister ವಿರುದ್ಧ ಗಂಭೀರ ಆರೋಪ

ಅಧಿಕಾರಿಗಳಿಗೆ ಥಳಿಸಿದರಾ ಬಿಶ್ವೇಶರ್ ಟುಡು? Union Minister ವಿರುದ್ಧ ಗಂಭೀರ ಆರೋಪ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Union Minister Bishweswar Tudu : ಆರೋಪ ಮಾಡಿರುವ ಇಬ್ಬರೂ ಅಧಿಕಾರಿಗಳು ನನ್ನ ಬಳಿ ಬಂದಿದ್ದರು. ಸುಮಾರು ಅರ್ಧ ಗಂಟೆ ನಾವು ಚರ್ಚೆಯನ್ನೂ ಮಾಡಿದ್ದೇವೆ, ಈ ವೇಳೆ ಕೇಂದ್ರ ಸರ್ಕಾರ ನೀಡಿದ 7 ಕೋಟಿ ರೂಪಾಯಿ ಹೇಗೆ ಖರ್ಚಾಯಿತು ಎಂಬ ಪ್ರಶ್ನೆ ಕೇಳಿದೆ. ಅದಕ್ಕೆ ಸಂಬಂಧಿಸಿದ ಫೈಲ್ ಕೊಡುವಂತೆ ಕೇಳಿದೆ. ಆದರೆ ಅಧಿಕಾರಿಗಳ ಬಳಿಯಲ್ಲಿ ಸೂಕ್ತ ದಾಖಲೆ ಇರಲಿಲ್ಲ.

ಮುಂದೆ ಓದಿ ...
  • Share this:

    ಕೇಂದ್ರ ಸಚಿವ (Union Minister) ಬಿಶ್ವೇಶ್ವರ್ ಟುಡು (Bishweswar Tudu) ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ಒಡಿಶಾದ ಮಯೂರ್ಭಂಜ್ ಜಿಲ್ಲಾ ಕಚೇರಿಯ ಇಬ್ಬರು ಅಧಿಕಾರಿಗಳು ಕೇಂದ್ರ ಸಚಿವರ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಮೇಲೆ ಕುರ್ಚಿಯಿಂದ ಹಲ್ಲೆ ನಡೆಸಿದ್ದಾರೆ ಅಂತ ಹಲ್ಲೆಗೊಳಗಾದ ಅಧಿಕಾರಿಗಳೇ ಕೇಂದ್ರ ಸಚಿವರ ವಿರುದ್ಧ ಆರೋಪ ಮಾಡಿದ್ದಾರೆ. ಒಡಿಶಾ (Odisha) ಮೂಲದ ಬಿಶ್ವೇಶ್ವರ್ ಟುಡು ಕೇಂದ್ರ ಬುಡಕಟ್ಟು ಹಾಗೂ ವ್ಯವಹಾರಗಳ ಇಲಾಖೆ ಮತ್ತು ಜಲಶಕ್ತಿ ಇಲಾಖೆಯ ರಾಜ್ಯ ಸಚಿವರಾಗಿ (State Minister) ಕಾರ್ಯ ನಿರ್ವಹಿಸುತ್ತಿದ್ದಾರೆ.


    ಕುರ್ಚಿಯಿಂದ ಥಳಿಸಿದ್ದಾಗಿ ಗಂಭೀರ ಆರೋಪ


    ಅಶ್ವಿನಿ ಕುಮಾರ ಮಲ್ಲಿಕ್ ಹಾಗೂ ದೇಬಶಿಶ್ ಮಹಾಪಾತ್ರ ಎಂಬುವರೇ ಹಲ್ಲೆಗೆ ಒಳಗಾದ ಅಧಿಕಾರಗಳಾಗಿದ್ದಾರೆ. ಅಶ್ವಿನಿ ಕುಮಾರ್ ಮಲ್ಲಿಕ್ ಜಿಲ್ಲಾ ಯೋಜನಾ ಮತ್ತು ನಿಗಾ ಘಟಕದ ಉಪನಿರ್ದೇಶಕರಾಗಿದ್ದರೆ, ದೇಬಶಿಶ್ ಮಹಾಪಾತ್ರ ಅದೇ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿದ್ದಾರೆ.


    “ಕೇಂದ್ರ ಸಚಿವ ಬಿಶ್ವೇಶ್ವರ್ ಟುಡು ನಿನ್ನೆ ನಮ್ಮನ್ನು ತಮ್ಮ ಬರಿಪದ ಪ್ರದೇಶದಲ್ಲಿರುವ ಬಿಜೆಪಿ ಕಚೇರಿಗೆ ಕರೆಸಿದರು. ಸಚಿವರ ಮನೆ ಕೂಡ ಅಲ್ಲಿಯೇ ಇತ್ತು. ಪರಿಶೀಲನಾ ಸಭೆ ನಡೆಸುವ ಸಲುವಾಗಿ ನಮ್ಮನ್ನು ಬರುವುದಕ್ಕೆ ಕರೆ ಕಳಿಸಿದರು. ನಾವೂ ಕೂಡ ಅಲ್ಲಿಗೆ ಹೋಗಿದ್ದೆವು. ಸಭೆಯ ವೇಳೆ ಕೆಲವು ಫೈಲ್ಗಳು ಕೊಡಿ, ಅದನ್ನು ಪರಿಶೀಲಿಸಬೇಕು ಅಂತ ಹೇಳಿದರು.


    ಮೊದಲೇ ಮಾಹಿತಿ ನೀಡದೇ ಇರೋದ್ರಿಂದ ನಾವು ಆ ಫೈಲ್ ಗಳನ್ನು ತೆಗೆದುಕೊಂಡು ಹೋಗಿರಲಿಲ್ಲ. ಇದೇ ಕಾರಣ ಹೇಳಿದಾಗ ಸಚಿವರು ಸಿಟ್ಟಾದರು. ಸಭೆ ನಡೆಯುತ್ತಿದ್ದ ಹಾಲ್ನ ಬಾಗಿಲನ್ನು ಒಳಗಿನಿಂದ ಹಾಕಿಕೊಂಡು, ಬೆದರಿಕೆ ಹಾಕಿದರು, ಬಳಿಕ ನಮ್ಮಿಬ್ಬರ ಮೇಲೆ ಹಲ್ಲೆ ನಡೆಸಿದರು” ಅಂತ ಅಶ್ವಿನಿ ಕುಮಾರ್ ಮಲ್ಲಿಕ ಹಾಗೂ ದೇಬಶಿಶು ಮಹಾಪಾತ್ರ ಆಹೋರಿಸಿದ್ದಾರೆ. ಜೊತೆಗೆ ಸಚಿವರು ಕುರ್ಚಿಯಿಂದಲೂ ಹೊಡೆದಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.


    ಇದನ್ನೂ ಓದಿ: ಕರ್ಹಾಲ್ ನಿಂದ ಕಣಕ್ಕೆ ಇಳಿಯಲಿರುವ ಅಖಿಲೇಶ್​ ಯಾದವ್​; ಸಿಎಂ ಅಭ್ಯರ್ಥಿ ನಾನಲ್ಲ ಎಂದ ಪ್ರಿಯಾಂಕಾ


    ಘಟನೆಯಲ್ಲಿ ಇಬ್ಬರಿಗೂ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ. ಈ ಪೈಕಿ ದೇಬಶಿಶ್ ಮಹಾಪಾತ್ರ ಕೈಯಿಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ. ಸದ್ಯ ಗಾಯಾಳುಗಳು ಇಬ್ಬರನ್ನೂ ಕೂಡ ಬರಿಪದ ಪ್ರದೇಶದಲ್ಲಿರುವ ಪಿಆರ್ಎಂ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಇಬ್ಬರಿಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಅಂತ ವೈದ್ಯರು ತಿಳಿಸಿದ್ದಾರೆ.


    ಕೇಂದ್ರ ಸಚಿವರ ವಿರುದ್ಧ ದೂರು ದಾಖಲು


    ಹಲ್ಲೆಗೆ ಒಳಗಾದ ಅಧಿಕಾರಿಗಳು ಇಬ್ಬರೂ ಕೇಂದ್ರ ಸಚಿವರ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ಅಧಿಕಾರಿಗಳು ಇಬ್ಬರೂ ಕೂಡ ಪೊಲೀಸರಿಗೆ ದೂರು ನೀಡಿದ್ದಾರೆ. ಅದರ ಅನ್ವಯ ಕೇಂದ್ರ ಸಚಿವ ಬಿಶ್ವೇಶ್ವರ್ ಟುಡು ವಿರುದ್ಧ ಬರಿಪದ ಪ್ರದೇಶದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.


    “ನಾನು ಹಲ್ಲೆ ಮಾಡಿಲ್ಲ” ಎಂದ ಕೇಂದ್ರ ಸಚಿವ


    ಇನ್ನು ಘಟನೆ ಬಗ್ಗೆ ಕೇಂದ್ರ ಸಚಿವ ಬಿಶ್ವೇಶ್ವರ್ ಟುಡು ಪ್ರತಿಕ್ರಿಯೆ ನೀಡಿದ್ದಾರೆ. “ಅಧಿಕಾರಿಗಳ ಆರೋಪದಲ್ಲಿ ಯಾವುದೇ ಹುರುಳಿಲ್ಲ ಅಂತ ಹೇಳಿದ್ದಾರೆ. ಪಂಚಾಯತ್ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನನ್ನ ಗೌರವ ಹಾಳು ಮಾಡಲು ಈ ರೀತಿಯ ಷಡ್ಯಂತ್ರ ರೂಪಿಸಲಾಗಿದೆ. ಈ ಅಧಿಕಾರಿಗಳು ಮಾಡಿದ ಆರೋಪ ಸುಳ್ಳು ಮತ್ತು ನಿರಾಧಾರ” ಎಂದಿದ್ದಾರೆ.


    “ಆರೋಪ ಮಾಡಿರುವ ಇಬ್ಬರೂ ಅಧಿಕಾರಿಗಳು ನನ್ನ ಬಳಿ ಬಂದಿದ್ದರು. ಸುಮಾರು ಅರ್ಧ ಗಂಟೆ ನಾವು ಚರ್ಚೆಯನ್ನೂ ಮಾಡಿದ್ದೇವೆ, ಈ ವೇಳೆ ಕೇಂದ್ರ ಸರ್ಕಾರ ನೀಡಿದ 7 ಕೋಟಿ ರೂಪಾಯಿ ಹೇಗೆ ಖರ್ಚಾಯಿತು ಎಂಬ ಪ್ರಶ್ನೆ ಕೇಳಿದೆ. ಅದಕ್ಕೆ ಸಂಬಂಧಿಸಿದ ಫೈಲ್ ಕೊಡುವಂತೆ ಕೇಳಿದೆ. ಆದರೆ ಅಧಿಕಾರಿಗಳ ಬಳಿಯಲ್ಲಿ ಸೂಕ್ತ ದಾಖಲೆ ಇರಲಿಲ್ಲ. ಆದರೆ ಅದನ್ನು ಒಪ್ಪಿಕೊಳ್ಳುವ ಬದಲು ನನ್ನ ವಿರುದ್ಧವೇ ಆರೋಪ ಮಾಡುತ್ತಿದ್ದಾರೆ” ಎಂದಿದ್ದಾರೆ.


    ಇದನ್ನೂ ಓದಿ: ಟಿಕೆಟ್ ನಿರಾಕರಣೆ ಹಿನ್ನಲೆ ಬಿಜೆಪಿ ತೊರೆದ Utpal Parrikar ; ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ


    ಇನ್ನು ನಾನು ಯಾವುದೇ ಕಾರಣಕ್ಕೂ ಹಲ್ಲೆ ನಡೆಸಿಲ್ಲ ಅಂತ ಕೇಂದ್ರ ಸಚಿವರು ಸ್ಪಷ್ಟಪಡಿಸಿದ್ದಾರೆ. ನಾನು ನಿಜಕ್ಕೂ ಅವರಿಗೆ ಥಳಿಸಿದ್ದರೆ, ನನ್ನ ಕಚೇರಿಯಿಂದ ಅವರು ಹೋಗಲು ಹೇಗೆ ಸಾಧ್ಯವಾಗುತ್ತಿತ್ತು. ಇವೆಲ್ಲ ಬರೀ ಆರೋಪವಷ್ಟೇ. ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಆ ಅಧಿಕಾರಿಗಳಿಬ್ಬರು ನಡೆಸಿದ ನಾಟಕ ಎಂದಿದ್ದಾರೆ. ಸದ್ಯ ವಿಚಾರಣೆ ನಡೆಯುತ್ತಿದ್ದು, ಇನ್ನಷ್ಟೇ ಸತ್ಯಾಸತ್ಯತೆ ಬಯಲಾಗಬೇಕಿದೆ.


    ವರದಿ: ಅಣ್ಣಪ್ಪ ಆಚಾರ್ಯ

    Published by:Sandhya M
    First published: