ಪಾಟ್ನಾ(ಜ.28): ಬಿಹಾರದ (Bihar) ಪೂರ್ವ ಪ್ರದೇಶದ ಅತಿ ದೊಡ್ಡ ಆಸ್ಪತ್ರೆಯಾದ ಜವಾಹರಲಾಲ್ ನೆಹರು ವೈದ್ಯಕೀಯ ಆಸ್ಪತ್ರೆಯ (Hospital) ನಿರ್ಲಕ್ಷ್ಯ ಬೆಳಕಿಗೆ ಬಂದಿದ್ದು, ಮತ್ತೆ ವಿವಾದ ಸೃಷ್ಟಿಯಾಗಿದೆ. ಇಲ್ಲಿ ಕೇಂದ್ರ ರಾಜ್ಯ ಸಚಿವೆ ಅಶ್ವಿನಿ ಚೌಬೆ (Ashwini Kumar Choubey) ಅವರ ಕಿರಿಯ ಸಹೋದರ ನಿರ್ಮಲ್ ಚೌಬೆ ಶುಕ್ರವಾರ ಸಂಜೆ ಐಸಿಯುನಲ್ಲಿ ನಿಧನರಾದರು/ ಓ ಸಾವು ಪ್ರಕರಣದ ಬೆನ್ನಲ್ಲೇ ಸಂಬಂಧಿಕರು ಅವರ ಸಾವಿಗೆ ವೈದ್ಯರೇ ಕಾರಣ ಎಂದು ಆರೋಪಿಸಿದರು.
ಅಲ್ಲದೇ ಐಸಿಯುನಲ್ಲಿ ವೈದ್ಯರಿರಲಿಲ್ಲ ಎಂದು ಆರೋಪಿಸಿ ಭಾರೀ ಗದ್ದಲ ಸೃಷ್ಟಿಸಿದರು. ಮತ್ತೊಂದೆಡೆ, ಗಲಾಟೆಯ ಮಾಹಿತಿಯ ಮೇರೆಗೆ ಆಗಮಿಸಿದ ಆಸ್ಪತ್ರೆ ಅಧೀಕ್ಷಕರು ಮತ್ತು ಐಸಿಯು ಉಸ್ತುವಾರಿಯನ್ನು ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ಮತವಾಗಿ ಪರಿವರ್ತಿತವಾಗಬಲ್ಲುದೇ? ಇಲ್ಲಿದೆ ಜನರ ಅಭಿಪ್ರಾಯ
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ನಗರ ಡಿಎಸ್‌ಪಿ ಸೇರಿದಂತೆ ಹಲವು ಠಾಣೆಗಳ ಎಸ್‌ಎಸ್‌ಬಿ ಜವಾನರು ಆಸ್ಪತ್ರೆಗೆ ಆಗಮಿಸಿದರು. ಈ ಘಟನೆಯ ನಂತರ, ಐಸಿಯುನಲ್ಲಿರದ ಇಬ್ಬರು ವೈದ್ಯರನ್ನು ಆಸ್ಪತ್ರೆಯ ಅಧೀಕ್ಷಕರು ಅಮಾನತುಗೊಳಿಸಿದ್ದಾರೆ. ಸಂಜೆ 4 ಗಂಟೆ ಸುಮಾರಿಗೆ ನಿರ್ಮಲ್ ಚೌಬೆ ಉಸಿರಾಟದ ತೊಂದರೆ ಬಗ್ಗೆ ಮಾತನಾಡಿದ್ದು, ನಂತರ ಅವರನ್ನು ಆಸ್ಪತ್ರೆಯ ತುರ್ತು ವಿಭಾಗಕ್ಕೆ ದಾಖಲಿಸಲಾಗಿದೆ ಎಂದು ಸಂಬಂಧಿಕರು ಹೇಳುತ್ತಾರೆ. ಇಲ್ಲಿ ಪರಿಸ್ಥಿತಿ ಹದಗೆಡುತ್ತಿರುವುದನ್ನು ಕಂಡು ಅವರನ್ನು ಐಸಿಯುಗೆ ಸ್ಥಳಾಂತರಿಸಲಾಯಿತು ಆದರೆ ಐಸಿಯುನಲ್ಲಿ ವೈದ್ಯರೇ ಇರಲಿಲ್ಲ. ಹೀಗಾಗಿ ಸೂಕ್ತ ಚಿಕಿತ್ಸೆ ಸಿಗದೇ ಅವರು ಸಾವನ್ನಪ್ಪಿದ್ದಾರೆನ್ನಲಾಗಿದೆ.
ಇದಾದ ಬಳಿಕ ಕುಟುಂಬಸ್ಥರು ತೀವ್ರ ಆಕ್ರೋಶಗೊಂಡು ಗಲಾಟೆ ಆರಂಭಿಸಿದ್ದಾರೆ. ಅಂತಿಮವಾಗಿ ಇಬ್ಬರು ವೈದ್ಯರನ್ನು ಅಮಾನತುಗೊಳಿಸಿದ ಬಳಿಕ ಮನೆಯವರು ಸುಮ್ಮನಾದರು. ಈ ವಿಚಾರವಾಗಿ ಆಸ್ಪತ್ರೆ ಅಧೀಕ್ಷಕರು ಮಾತನಾಡಿ, ರೋಗಿಗೆ ಮೊದಲು ತುರ್ತು ಚಿಕಿತ್ಸೆ ನೀಡಲಾಗಿದೆ. ಐಸಿಯುನಲ್ಲಿ ವೈದ್ಯರಿಲ್ಲದ ಬಗ್ಗೆ ಕುಟುಂಬಸ್ಥರು ಮಾತನಾಡುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಈಗ ಅಂತಹ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ನಗರ ಡಿಎಸ್ಪಿ ಹೇಳಿದರು, ಯಾರು ನಿರ್ಲಕ್ಷ್ಯ ವಹಿಸಿದರೂ ಅವರ ವಿರುದ್ಧ ಆಡಳಿತವು ಕ್ರಮ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.
ಘಟನೆಯ ನಂತರ ಆಸ್ಪತ್ರೆಗೆ ದಾಖಲಾಗಿರುವ ಇತರ ರೋಗಿಗಳ ಸಂಬಂಧಿಕರು ಕೂಡ ಆಸ್ಪತ್ರೆಯಲ್ಲಿ ತಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಮತ್ತು ಅವರನ್ನು ನೋಡಿಕೊಳ್ಳಲು ವೈದ್ಯರು ಅಪರೂಪವಾಗಿ ಬರುತ್ತಾರೆ ಎಂದು ಹೇಳುತ್ತಾರೆ. ಒಂದೆಡೆ ಆರೋಗ್ಯ ಸಚಿವರು ಆರೋಗ್ಯ ವ್ಯವಸ್ಥೆ ಸುಧಾರಣೆಗೆ ನಿರಂತರ ಪ್ರಯತ್ನ ನಡೆಸುತ್ತಿದ್ದರೂ ಆಸ್ಪತ್ರೆಯ ಸ್ಥಿತಿ ಧಾರಿಸುವ ಲಕ್ಷಣ ಕಾಣುತ್ತಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ