Narayan Rane Arrest; ಸಿಎಂ ಠಾಕ್ರೆ ವಿರುದ್ಧ ಹೇಳಿಕೆ; ಕೇಂದ್ರ ಸಚಿವ ನಾರಾಯಣ ಬಂಧಿಸಿದ ಮುಂಬೈ ಪೊಲೀಸರು!

Narayan Rane Arrest; "ನಾನು ಸಾಮಾನ್ಯ ಮನುಷ್ಯನಲ್ಲ. ನಾನು ಯಾವುದೇ ಅಪರಾಧ ಮಾಡಿಲ್ಲ. ಆಗಸ್ಟ್ 15 ರ ಬಗ್ಗೆ ಯಾರಿಗಾದರೂ ತಿಳಿದಿಲ್ಲದಿದ್ದರೆ ಅದು ಅಪರಾಧ ಅಲ್ಲವೇ? ನಾನು ಹೇಳಿದ ಮಾತು ಹೊಡೆಯುತ್ತಿದ್ದೆ ಎಂದು. ಇದು ಅಪರಾಧವಲ್ಲ" ಎಂದು ಹೇಳಿದ್ದಾರೆ.

ಮುಂಬೈ ಬೀದಿಗಳಲ್ಲಿ ಕೇಂದ್ರ ಸಚಿವ ನಾರಾಯಣ ರಾಣೆ ಅವರ ಹೇಳಿಕೆ ಖಂಡಿಸಿ ಹೋಲ್ಡಿಂಗ್ಸ್ ಹಾಕಿರುವುದು.​

ಮುಂಬೈ ಬೀದಿಗಳಲ್ಲಿ ಕೇಂದ್ರ ಸಚಿವ ನಾರಾಯಣ ರಾಣೆ ಅವರ ಹೇಳಿಕೆ ಖಂಡಿಸಿ ಹೋಲ್ಡಿಂಗ್ಸ್ ಹಾಕಿರುವುದು.​

 • Share this:
  ಮುಂಬೈ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ (chief minister Uddhav Thackeray) ಅವರ ಬಗ್ಗೆ ಕೇಂದ್ರ ಸಚಿವ ನಾರಾಯಣ ರಾಣೆ (Union Minister Narayan Rane) ಅವರು ನೀಡಿದ ಅವಹೇಳನಕಾರಿ ಹೇಳಿಕೆ ವಿರುದ್ಧ ರಾಜ್ಯಾದ್ಯಾಂತ ಪ್ರತಿಭಟನೆ ನಡೆಯುತ್ತಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ದೇವೇಂದ್ರ ಫಡ್ನವೀಸ್ ಅವರು ಭಾರತೀಯ ಜನತಾ ಪಾರ್ಟಿಗೂ ಕೇಂದ್ರ ಸಚಿವರ ಹೇಳಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಮುಂಬೈನಲ್ಲಿ (Mumbai) ರಾಣೆ ನಿವಾಸದ ಸಮೀಪ ಬಿಜೆಪಿ ಕಾರ್ಯಕರ್ತರು ಮತ್ತು ಶಿವಸೇನೆ ಯೂತ್  ವಿಂಗ್ ಕಾರ್ಯಕರ್ತರ ನಡುವೆ ಜಗಳ ನಡೆದ ಬಳಿಕ ಬಿಜೆಪಿ ಈ ಹೇಳಿಕೆ ನೀಡಿದೆ.

  ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಗ್ಗೆ ಕೇಂದ್ರ ಸಚಿವ ನಾರಾಯಣ ಹೇಳಿಕೆಯನ್ನು ನಾವು ಬೆಂಬಲಿಸುವುದಿಲ್ಲ. ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ವರ್ಷವನ್ನು ನೆನಪಿಸಿಕೊಳ್ಳದಿದ್ದಕ್ಕಾಗಿ ಅವರು ಕೋಪಗೊಂಡಿರಬಹುದು, ಇದು ಸಹಜ ಎಂದು ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.

  ಕೇಂದ್ರ ಸಚಿವ ನಾರಾಯಣ ರಾಣೆ ವಿರುದ್ಧ ಪುಣೆ ಮತ್ತು ಮಹದ್ ನಲ್ಲಿ ಎರಡು ಎಫ್ಐಆರ್ ದಾಖಲಾಗಿದ್ದು, ನಾಸಿಕ್, ಥಾಣೆ ಮತ್ತು ಪುಣೆಯಲ್ಲಿ ದೂರು ದಾಖಲಾಗಿದೆ. ಈ ವಿಷಯವನ್ನು ಪೊಲೀಸ್ ಠಾಣೆಗಳಲ್ಲಿ ವರದಿ ಮಾಡುವುದರ ಜೊತೆಗೆ, ಕುಪಿತಗೊಂಡ ಶಿವ ಸೇನೆ ಕಾರ್ಯಕರ್ತರು ಮುಂಬೈನಲ್ಲಿ ಹೋರ್ಡಿಂಗ್‌ಗಳನ್ನು ಹಾಕಿದ್ದಾರೆ.

  ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ನಾರಾಯಣ ರಾಣೆ ಅವರು ಸಿಎಂ ಉದ್ಧವ್ ಠಾಕ್ರೆ ವಿರುದ್ಧ ನೀಡಿದ ಹೇಳಿಕೆ ಸಂಬಂಧ ಅವರನ್ನು ಮುಂಬೈ ಪೊಲೀಸರು ರತ್ನಗಿರಿ ಬಳಿ ಬಂಧಿಸಿದ್ದಾರೆ.

  ಸೋಮವಾರ, ಪಕ್ಕದ ರಾಯಗಡ ಜಿಲ್ಲೆಯಲ್ಲಿ ನಡೆದ 'ಜನ್ ಆಶೀರ್ವಾದ್ ಯಾತ್ರೆಯ' ಸಮಯದಲ್ಲಿ, ಕೇಂದ್ರ ಸಚಿವ ನಾರಾಯಣ ರಾಣೆ ಅವರು, ಮುಖ್ಯಮಂತ್ರಿಗೆ ಸ್ವಾತಂತ್ರ್ಯದ ವರ್ಷ ಗೊತ್ತಿಲ್ಲದಿರುವುದು ನಾಚಿಕೆಗೇಡಿನ ಸಂಗತಿ. ಅವರು ತಮ್ಮ ಭಾಷಣದ ಸಮಯದಲ್ಲಿ ಸ್ವಾತಂತ್ರ್ಯದ ವರ್ಷಗಳ ಎಣಿಕೆಯ ಬಗ್ಗೆ ವಿಚಾರಿಸಲು ಹಿಂದಕ್ಕೆ ವಾಲಿದರು. ನಾನು ಅಲ್ಲಿ ಇದ್ದಿದ್ದರೆ, (ಅವನಿಗೆ) ಕಪಾಳಕ್ಕೆ ಬಿಗಿಯುತ್ತಿದ್ದೆ ಎಂದು ಸಿಎಂ ಉದ್ಧವ್ ಠಾಕ್ರೆ ಉದ್ದೇಶಿಸಿ ಹೇಳಿದ್ದರು.

  ಈ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾದ ಬಳಿಕ ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಣೆ ಅವರು, "ನಾನು ಸಾಮಾನ್ಯ ಮನುಷ್ಯನಲ್ಲ. ನಾನು ಯಾವುದೇ ಅಪರಾಧ ಮಾಡಿಲ್ಲ. ಆಗಸ್ಟ್ 15 ರ ಬಗ್ಗೆ ಯಾರಿಗಾದರೂ ತಿಳಿದಿಲ್ಲದಿದ್ದರೆ ಅದು ಅಪರಾಧ ಅಲ್ಲವೇ? ನಾನು ಹೇಳಿದ ಮಾತು ಹೊಡೆಯುತ್ತಿದ್ದೆ ಎಂದು. ಇದು ಅಪರಾಧವಲ್ಲ" ಎಂದು ಹೇಳಿದ್ದಾರೆ.


  ಇದನ್ನು ಓದಿ: Explained: ಕ್ರಿಮಿನಲ್ ಕೇಸ್‌ ಹೊಂದಿರುವ ವ್ಯಕ್ತಿ ಸರ್ಕಾರಿ ಕೆಲಸ ಪಡೆಯಬಹುದೇ? ವಿದೇಶ ಪ್ರಯಾಣಕ್ಕೆ ಅನುಮತಿ ಇದೆಯೇ?

  ಕೇಂದ್ರ ಸಚಿವ ನಾರಾಯಣ ರಾಣೆ ಅವರು ವಿರುದ್ಧ ದಾಖಲಾಗಿರುವ ಎಫ್​ಐಆರ್​ಗಳನ್ನು ವಜಾಗೊಳಿಸುವಂತೆ ಕೋರಿ ಸಚಿವರ ಪರವಾಗಿ ವಕೀಲ ಅನಿಕೇತ್ ನಿಕ್ಕಂ ಅವರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ರಾಣೆ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ಅಥವಾ ನೋಂದಾಯಿಸಲು ಸಿದ್ಧತೆ ನಡೆಸುತ್ತಿರುವುದನ್ನು ರದ್ದುಗೊಳಿಸುವಂತೆ ಮನವಿ ಮಾಡಲಾಗಿದೆ. ಹಾಗೂ ತಕ್ಷಣದ ಪರಿಹಾರವಾಗಿ, ವಕೀಲ ನಿಕ್ಕಂ ಅವರು ಬಂಧನದಿಂದ ಪರಿಹಾರವನ್ನು ಹುಡುಕುತ್ತಿರುವುದಾಗಿ ಹೇಳಿದ್ದಾರೆ.

  ನ್ಯೂಸ್ ​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಮತ್ತು ಮನೆಯಿಂದ ಯಾರು ಅನಗತ್ಯವಾಗಿ ಹೊರಗೆ ಬಾರದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ.
  Published by:HR Ramesh
  First published: