Hijab Row: : ಹಿಜಾಬ್ ತೀರ್ಪಿನ ಕುರಿತು ಕೇಂದ್ರ ಸಚಿವರಾದ ನಾರಾಯಣಸ್ವಾಮಿ, ಶೋಭಾ ಕರಂದ್ಲಾಜೆ ಹೇಳಿದ್ದೇನು?

'ಶಿಕ್ಷಣ ಕ್ಷೇತ್ರದಲ್ಲಿ ನಮಗೆ ನಾವೇ ಅಡೆತಡೆ ಮಾಡಿಕೊಳ್ಳುವುದು ಸರಿ ಇಲ್ಲ. ಹೆಣ್ಣುಮಕ್ಕಳ ಬಗ್ಗೆ ಯಾರ ಕನಿಕರವೂ ಬೇಡ. ಅವರಿಗೆ ವಿದ್ಯೆ, ಆರ್ಥಿಕತೆ ಕೊಟ್ಟರೆ ಸಾಕು. ಅವರ ಭವಿಷ್ಯವನ್ನು ಅವರೇ ನಿರ್ಧಾರ ಮಾಡಿಕೊಳ್ಳುತ್ತಾರೆ'

ಕೇಂದ್ರ ಸಚಿವರಾದ ನಾರಾಯಣಸ್ವಾಮಿ, ಶೋಭಾ ಕರಂದ್ಲಾಜೆ

ಕೇಂದ್ರ ಸಚಿವರಾದ ನಾರಾಯಣಸ್ವಾಮಿ, ಶೋಭಾ ಕರಂದ್ಲಾಜೆ

  • Share this:
ನವದೆಹಲಿ, ಮಾ. 15: ಹಿಜಾಬ್ (Hijab) ಧರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ (Karnataka High Court) ಕೊಟ್ಟ ತೀರ್ಪಿನ ಬಗ್ಗೆ ಕೇಂದ್ರ ಸಮಾಜ ಕಲ್ಯಾಣ ಸಚಿವ ಎ. ನಾರಾಯಣಸ್ವಾಮಿ (Union Minister of Social Justice A. Narayanaswamy) ಮತ್ತು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ (Union Minister for Agriculture Shobha Karandlaje) ಮಂಗಳವಾರ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನಾರಾಯಣಸ್ವಾಮಿ ಅವರು 'ಶಿಕ್ಷಣ ಕ್ಷೇತ್ರದಲ್ಲಿ ನಮಗೆ ನಾವೇ ಅಡೆತಡೆ ಮಾಡಿಕೊಳ್ಳುವುದು ಸರಿ ಇಲ್ಲ' ಎಂದು ಹೇಳಿದರೆ, ಶೋಭಾ ಕರಂದ್ಲಾಜೆ ಅವರು 'ಹೆಣ್ಣುಮಕ್ಕಳ ಬಗ್ಗೆ ಯಾರ ಕನಿಕರವೂ ಬೇಡ. ಅವರಿಗೆ ವಿದ್ಯೆ, ಆರ್ಥಿಕತೆ ಕೊಟ್ಟರೆ ಸಾಕು. ಅವರ ಭವಿಷ್ಯವನ್ನು ಅವರೇ ನಿರ್ಧಾರ ಮಾಡಿಕೊಳ್ಳುತ್ತಾರೆ' ಎಂದು ಹೇಳಿದ್ದಾರೆ.

ಕೋರ್ಟ್ ಆದೇಶ ಪಾಲಿಸಬೇಕು: ನಾರಾಯಣಸ್ವಾಮಿ
ಕೇಂದ್ರ ಸಮಾಜ ಕಲ್ಯಾಣ ಸಚಿವ ಎ. ನಾರಾಯಣಸ್ವಾಮಿ ಅವರು ಮಾತನಾಡಿ, 'ಆರು ವಿದ್ಯಾರ್ಥಿಗಳು ಹಿಜಾಬ್ ವಿಷಯದಲ್ಲಿ ಸಲ್ಲಿಸಿದ್ದ ಅರ್ಜಿಗಳನ್ನು ರಾಜ್ಯ ಹೈಕೋಟ್೯ ತಿರಸ್ಕರಿಸಿ ತೀರ್ಪು ನೀಡಿದೆ. ನ್ಯಾಯಾಲಯದ ಆದೇಶವನ್ನು ಎಲ್ಲರೂ ಗೌರವಿಸಬೇಕು. ಶಿಕ್ಷಣ ಕ್ಷೇತ್ರದಲ್ಲಿ ನಮಗೆ ನಾವೇ ಅಡೆತಡೆ ಮಾಡಿಕೊಳ್ಳುವುದು ಸರಿ ಇಲ್ಲ. ಧಾರ್ಮಿಕ ವಿಷಯಗಳಲ್ಲಿ ಗೊಂದಲ ಶುರುವಾದಾಗ ಎಸ್ ಡಿಪಿಐ ಮತ್ತು ಪಿಎಫ್ ಐ ಸಂಘಟನೆಗಳು ದುರುಪಯೋಗ ಮಾಡಿಕೊಂಡಿವೆ ಎಂಬ ಬಗ್ಗೆ ಚರ್ಚೆಯಾಗುತ್ತಿದೆ. ಈ ಬಗ್ಗೆ ಅನುಮಾನ ನನಗೂ ಇದೆ. ಇದಕ್ಕೆ ಆಸ್ಪದ ಕೊಡಬಾರದು. ಎಲ್ಲರೂ ಶಾಂತಿ ಕಾಪಾಡಬೇಕು' ಎಂದು‌ ಹೇಳಿದ್ದಾರೆ.

ಇದನ್ನು ಓದಿ: Hijab ವಿವಾದದ ಬಗ್ಗೆ ಗೊತ್ತಿದ್ದರೂ ರಾಜ್ಯ ಸರ್ಕಾರ ಸುಮ್ಮನಿತ್ತು: ಹೊಸ ಬಾಂಬ್ ಸಿಡಿಸಿದ ದೇವೇಗೌಡ್ರು!

ತೀರ್ಪನ್ನು ಎಲ್ಲರೂ ಒಪ್ಪಬೇಕು: ಶೋಭಾ
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಮಾತನಾಡಿ 'ಹಿಜಾಬ್ ಕುರಿತು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ಮುಸ್ಲಿಂ ಧರ್ಮೀಯರು ಕೂಡ ಸ್ವಾಗತ ಮಾಡುತ್ತಾರೆ ಎಂದು ನನಗೆ ವಿಶ್ವಾಸ ಇದೆ. ಹೆಣ್ಣುಮಕ್ಕಳ ಬಗ್ಗೆ ಯಾರ ಕನಿಕರವೂ ಬೇಡ. ಅವರಿಗೆ ವಿದ್ಯೆ, ಆರ್ಥಿಕತೆ ಕೊಟ್ಟರೆ ಸಾಕು. ಅವರ ಭವಿಷ್ಯವನ್ನು ಅವರೇ ನಿರ್ಧಾರ ಮಾಡಿಕೊಳ್ಳುತ್ತಾರೆ.‌ ಇವತ್ತಿನ ತೀರ್ಪನ್ನು ಎಲ್ಲರೂ ಸ್ವಾಗತ ಮಾಡಬೇಕು. ಮೂಲ ಧರ್ಮಕ್ಕೆ ವಿರುದ್ಧವಾಗಿ ಕೆಲ ಬಡ ಹೆಣ್ಣುಮಕ್ಕಳ ಮೇಲೆ ಕೆಲವು ಸಂಘಟನೆಗಳು ಒತ್ತಡ ಹೇರುತ್ತಿದ್ದಾರೆ. ಇದು ಸರಿ ಅಲ್ಲ. ಮುಸ್ಲಿಂ ಸಮುದಾಯದಲ್ಲಿ ಬಹಳಷ್ಟು ಮಂದಿ ಬಡವರು ಇದ್ದಾರೆ. ಅದರಿಂದ  ಹೊರಬರಬೇಕಾದರೆ ಆ ಹೆಣ್ಣು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗುವಂತಾಗಬೇಕು ಎಂದು ಹೇಳಿದರು.

ಇದನ್ನು ಓದಿ: ಪಂಚರಾಜ್ಯ ಚುನಾವಣಾ ಸೋಲು; ಐದು ರಾಜ್ಯ ಕಾಂಗ್ರೆಸ್​ ಅಧ್ಯಕ್ಷರ ಕಿತ್ತೆಸೆದ Sonia Gandhi

ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯ: ದೇವೇಗೌಡ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಪ್ರಧಾನ ಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ನಾಯಕ ಎಚ್.ಡಿ. ದೇವೇಗೌಡ ಅವರು ' ಹಿಜಾಬ್ ವಿಚಾರ ಬಹಳ ಸಣ್ಣದಿತ್ತು.  ಅದನ್ನು ಆರಂಭದಲ್ಲೇ ಹತ್ತಿಕ್ಕಬಹುದಿತ್ತು.‌ ಆದರೆ ಈ ವಿಷಯವನ್ನು ನಿರ್ವಹಿಸುವುದರಲ್ಲಿ ರಾಜ್ಯ ಬಿಜೆಪಿ ಸರ್ಕಾರ ವೈಫಲ್ಯವಾಗಿದೆ. ರಾಜ್ಯ ಸರ್ಕಾರದ ವೈಫಲ್ಯದಿಂದ ಹಿಜಾಬ್ ವಿವಾದ ಇಷ್ಟು ದೊಡ್ಡದಾಗಿದೆ' ಎಂದು ಹೇಳಿದರು.

ಮೊಳಕೆಯಲ್ಲೇ ಚಿವುಟಿ ಹಾಕಬಹುದಿತ್ತು
ನವದೆಹಲಿಯ ತಮ್ಮ ‌ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಎಚ್.ಡಿ. ದೇವೇಗೌಡ ಅವರು, ಹಿಜಾಬ್ ಧರಿಸುವ ಬಗೆಗಿನ ವಿವಾದ ಕರಾವಳಿಯಲ್ಲಿ ಒಂದು ಸಣ್ಣ ಕಿಡಿಯಾಗಿ ಶುರುವಾಯಿತು. ರಾಜ್ಯ ಸರ್ಕಾರದ ಗುಪ್ತಚರ ಇಲಾಖೆಯಲ್ಲಿ ಎಲ್ಲಾ ಮಾಹಿತಿಗಳು ಇರುತ್ತವೆ. ಮರುಗಳಿಗೆಯಲ್ಲೇ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬಹುದಿತ್ತು. ಈ ಪ್ರಕರಣವನ್ನು ಬೆಳೆಯಲು ಬಿಡಬಾರದಿತ್ತು. ಹಿಜಾಬ್ ಪ್ರಕರಣ ಸಣ್ಣದಾಗಿದ್ದಾಗಲೇ ಚಿವುಟಿಹಾಕಬಹುದಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಕ್ಷಣವೇ ಎಲ್ಲಾ ಪಕ್ಷದವರ ಜೊತೆ ಚರ್ಚಿಸಿ ಹತ್ತಿಕ್ಕಬಹುದಿತ್ತು ಎಂದು ಹೇಳಿದ್ದಾರೆ.
Published by:Seema R
First published: