news18-kannada Updated:March 1, 2021, 9:46 PM IST
ಅಮಿತ್ ಶಾ
ದೇಶದ ಅತಿ ದೊಡ್ಡ ಮೂರನೇ ಹಂತದ ಕೋವಿಡ್ ಲಸಿಕಾ ಅಭಿಯಾನ ಇಂದು ಚಾಲನೆಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಖುದ್ದಾಗಿ ಇಂದು ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಇವರ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಮೊದ ಡೋಸ್ ಲಸಿಕೆ ಪಡೆದಿದ್ದಾರೆ. ಈ ಹಿಂದೆ ಅವರು ಚಿಕಿತ್ಸೆ ಪಡೆದ ಮೆದಾಂತ್ ಆಸ್ಪತ್ರೆಯಲ್ಲಿ ಡಾ. ನರೇಶ್ ವೈದ್ಯರ ತಂಡದ ಮೇಲ್ವಿಚಾರಣೆಯಲ್ಲಿ ಅವರು ಲಸಿಕೆ ಪಡೆದಿದ್ದಾರೆ. ಕಳೆದ ಆಗಸ್ಟ್ನಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿದ್ದರು. ಅವರು ಮೆದಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಕೋವಿಡ್ನಂತರದ ಚಿಕಿತ್ಸೆಗೆ ಏಮ್ಸ್ಗೆ ದಾಖಲಾಗಿ ಸುದ್ದಿಯಾಗಿದ್ದರು. ಸದ್ಯ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಹಿನ್ನಲೆ ಅವರು ಸಕ್ರಿಯರಾಗಿದ್ದು, ಸಾರ್ವಜನಿಕ ಸಮಾವೇಶಗಳಲ್ಲಿ ಭಾಗಿಯಾಗುತ್ತಿದ್ದಾರೆ.
ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆ ಅಭಿಯಾನದಲ್ಲಿ ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಈ ಮೂಲಕ ಕೋವ್ಯಾಕ್ಸಿನ್ ಬಗ್ಗೆ ಜನಸಾಮಾನ್ಯರಿಗಿರುವ ತುಸು ಅನುಮಾನ ಮತ್ತು ಭಯವನ್ನ ಹೋಗಲಾಡಿಸುವ ಪ್ರಯತ್ನವನ್ನ ಪ್ರಧಾನಿ ಮಾಡಿದ್ಧಾರೆ. ಕೇಂದ್ರ ಸಚಿವ ಡಾ. ಎಸ್ ಜೈ ಶಂಕರ್ , ಸಚಿವ ಡಾ ಜಿತೇಂದ್ರ ಸಿಂಗ್ ಕೂಡ ಲಸಿಕೆ ಪಡೆದಿದ್ದಾರೆ. ಈ ಅಭಿಯಾನದ ಅರ್ಹ ಫಲಾನುಭವಿಗಳು ಕೋವಿನ್ (CO-WIN 2.0) ಪೋರ್ಟಲ್, ಆ್ಯಪ್ ಮತ್ತು ಆರೋಗ್ಯ ಸೇತುವಿನಂತಹ ಆ್ಯಪ್ ಮೂಲಕವೂ ಲಸಿಕೆಗೆ ನೊಂದಣಿ ಮಾಡಿಸಬಹುದು
60 ವರ್ಷಕ್ಕಿಂತ ಹಿರಿಯ ನಾಗರೀಕರಿಗೆ ಮತ್ತು 45 ವರ್ಷ ಮೇಲ್ಪಟ್ಟ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಸಾರ್ವಜನಿಕರಿಗೆ ಈ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಲಸಿಕೆ ಉಚಿತವಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗೆ ಪ್ರತಿ ಡೋಸ್ಗೆ ಗರಿಷ್ಠ 250 ರೂ ನಿಗದಿ ಮಾಡಬಹುದೆಂದು ಸರ್ಕಾರ ತಿಳಿಸಿದೆ.
ಕರ್ನಾಟಕದಲ್ಲಿಯೂ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಮೊದಲ ದಿನದಂದು ಜಗದೀಶ್ ಶೆಟ್ಟರ್, ಅಫಜಲಪುರ ಶಾಸಕ ಎಂ.ವೈ.ಪಾಟೀಲ ಲಸಿಕೆ ಪಡೆದು ಗಮನ ಸೆಳೆದರು
Published by:
Seema R
First published:
March 1, 2021, 9:46 PM IST