HOME » NEWS » National-international » UNION HOME MINISTER AMIT SHAH MOCKS DMK CONGRESS THROUGH 2G 3G 4G IN TAMILNADU SESR

Amit Shah: 2ಜಿ, 3ಜಿ, 4ಜಿ ಬಗ್ಗೆ ವಿವರಣೆ ನೀಡಿದ ಅಮಿತ್​ ಶಾ; ಕಾಂಗ್ರೆಸ್​, ಡಿಎಂಕೆ ನಾಯಕರ ವಿರುದ್ಧ ವ್ಯಂಗ್ಯ

2 ಜಿ ಎಂದರೆ ಮಾರನ್​ ಕುಟುಂಬದ ಎರಡನೇ ತಲೆಮಾರು , 3 ಜಿ ಎಂದರೆ ಕರುಣಾನಿಧಿ ಕುಟುಂಬದ ಮೂರನೇ ತಲೆ ಮಾರು ಮತ್ತು 4 ಜಿ ಎಂದರೆ ಕಾಂಗ್ರೆಸ್​ನ ಗಾಂಧಿ ಕುಟುಂಬದ ನಾಲ್ಕನೇ ತಲೆಮಾರಿನವರು ಎಂದು ವ್ಯಂಗ್ಯವಾಡಿದ್ದಾರೆ.

news18-kannada
Updated:March 3, 2021, 9:40 PM IST
Amit Shah: 2ಜಿ, 3ಜಿ, 4ಜಿ ಬಗ್ಗೆ ವಿವರಣೆ ನೀಡಿದ ಅಮಿತ್​ ಶಾ; ಕಾಂಗ್ರೆಸ್​, ಡಿಎಂಕೆ ನಾಯಕರ ವಿರುದ್ಧ ವ್ಯಂಗ್ಯ
ಅಮಿತ್ ಶಾ.
  • Share this:
ತಮಿಳುನಾಡು, ಪುದುಚೇರಿ, ಕೇರಳ ಚುನಾವಣೆ ಹಿನ್ನಲೆ ಕಾಂಗ್ರೆಸ್​  ಬಿಜೆಪಿ ನಾಯಕರು ಭರ್ಜರಿ ಪ್ರಚಾರ ನಡೆಸಿದ್ದಾರೆ. ಇನ್ನು ಇದೇ ವೇಳೆ ತಮಿಳುನಾಡು, ಪುದುಚೇರಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾದ ಕೇಂದ್ರ ಗೃಹ ಸಚಿವ ಅಮಿತ್​ ಶಾ, ದೇಶದಲ್ಲಿ ಸದ್ದು ಮಾಡಿದ್ದ 2ಜಿ, 3ಜಿ ಮತ್ತು 4ಜಿ ಬಗ್ಗೆ ತಮ್ಮದೇ ಶೈಲಿಯಲ್ಲಿ ವಿವರಣೆ ನೀಡುವ ಮೂಲಕ ಗಮನಸೆಳೆದಿದ್ದಾರೆ.  ಡಿಎಂಕೆ ಮತ್ತು ಗಾಂಧಿ ಕುಟುಂಬಗಳನ್ನು ಗುರಿಯಾಗಿಸಿಕೊಂಡು ಅವರು ಈ  ಹೇಳಿಕೆ ನೀಡಿದ್ದಾರೆ.  2ಜಿ, 3ಜಿ ಮತ್ತು 4 ಜಿ ಎಲ್ಲವೂ ತಮಿಳುನಾಡಿನಲ್ಲಿದೆ ಎಂದು ಟೀಕಿಸಿದ ಅವರು,  2 ಜಿ ಎಂದರೆ ಮಾರನ್​ ಕುಟುಂಬದ ಎರಡನೇ ತಲೆಮಾರು , 3 ಜಿ ಎಂದರೆ ಕರುಣಾನಿಧಿ ಕುಟುಂಬದ ಮೂರನೇ ತಲೆ ಮಾರು ಮತ್ತು 4 ಜಿ ಎಂದರೆ ಕಾಂಗ್ರೆಸ್​ನ ಗಾಂಧಿ ಕುಟುಂಬದ ನಾಲ್ಕನೇ ತಲೆಮಾರಿನವರು ಎಂದು ವ್ಯಂಗ್ಯವಾಡಿದ್ದಾರೆ.ಇದೇ ವೇಳೆ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್​ ಶಾ, ಎನ್​ಡಿಎ ಮತ್ತು ಎಐಎಡಿಎಂಕೆ ಬಡವರ ಕಲ್ಯಾಣದ ಬಗ್ಗೆ ಯೋಚಿಸುತ್ತಿದ್ದಾಗ, ಕಾಂಗ್ರೆಸ್​ 12 ಲಕ್ಷ ಕೋಟಿ ಹಗರಣದಲ್ಲಿ ಭಾಗಿಯಾಗಿದ್ದ ಡಿಎಂಕೆಯೊಂದಿಗೆ ಮೈತ್ರಿಮಾಡಿಕೊಂಡಿತ್ತು. ಡಿಎಂಕೆ ಮತ್ತು ಕಾಂಗ್ರೆಸ್​ ಭ್ರಷ್ಟಾಚಾರ ಮತ್ತು ವಿಭಜನೆ ಆಡಳಿತ ನಡೆಸಿದವು. ಸೋನಿಯಾ ಗಾಂಧಿಗೆ ರಾಹುಲ್​ ಗಾಂಧಿಯನ್ನು ಪ್ರಧಾನಿ ಮಂತ್ರಿ ಮಾಡುವ ಕನಸಾದರೆ, ಉದಯನಿಧಿಯವರು ಸ್ಟಾಲಿನ್ ಅವರನ್ನು​ ಸಿಎಂ ಮಾಡುವ ಬಗ್ಗೆ ಚಿಂತಿಸಿದರೆ ಹೊರತು ದೇಶದ ಜನರ ಅಭಿವೃದ್ಧಿ ಬಗ್ಗೆ ಅಲ್ಲ ಎಂದರು

ಇದನ್ನು ಓದಿ: 12ನೇ ಅಂತಸ್ತಿನ ಮಹಡಿಯಿಂದ ಬಿದ್ದ ಮಗು; ದೇವರಂತೆ ಕಾಪಾಡಿದ ಡೆಲಿವರಿ ಬಾಯ್​; ಎದೆ ಝಲ್ಲೆನಿಸುವ ವಿಡಿಯೋ ಇಲ್ಲಿದೆ

ಮೀನುಗಾರಿಕೆಗೆ ಪ್ರತ್ಯೇಕ ಕೇಂದ್ರ ಸಚಿವಾಲಯದ ಬಗ್ಗೆ ರಾಹುಲ್ ನೀಡಿದ ಹೇಳಿಕೆಗೆ ಕುರಿತು ತಿರುಗೇಟು ನೀಡಿದ ಅವರು, ಮೋದಿ ಅವರು ಎರಡು ವರ್ಷಗಳ ಹಿಂದೆಯೇ ಮೀನುಗಾರರಿಗೆ ಪ್ರತ್ಯೇಕ ಸಚಿವಾಲಯ ರಚಿಸಿದ್ದಾರೆ. ಸಚಿವಾಲಯದ ಕೆಲಸವು ನಡೆಯುತ್ತಿದೆ. ನೀವು ರಜೆಯಲ್ಲಿದ್ದ ಕಾರಣ ಈ ವಿಷಯ ನಿಮ್ಮ ಗಮನಕ್ಕೆ ಬಂದಿಲ್ಲ ಎಂದು ವ್ಯಂಗ್ಯವಾಡಿದರು.

ಪುದುಚೇರಿಯಲ್ಲಿ ಕಾಂಗ್ರೆಸ್​ ಸರ್ಕಾರ ಪತನದ ಕುರಿತು ವ್ಯಂಗ್ಯವಾಡಿದ ಅವರು, ಬಿಜೆಪಿ ಸರ್ಕಾರ ಪತನವಾಗಿದೆ ಎಂದು ಸಿಎಂ ನಾರಾಯಣಸಾಮಿ ಆರೋಪಿಸಿದ್ದಾರೆ. ರಾಹುಲ್​ ಗಾಂಧಿ ಅನುವಾದವನ್ನು ತಪ್ಪಾಗಿ ಜನರಿಗೆ ತಿಳಿಸಿದ ಅವರನ್ನು ಮುಖ್ಯಮಂತ್ರಿ ಮಾಡಲಾಗಿದೆ.  ನಾರಾಯಣಸಾಮಿಗೆ ದೊಡ್ಡ ಸುಳ್ಳಿನ ಪ್ರಶಸ್ತಿ ನೀಡಬೇಕು ಎಂದು ಟೀಕಿಸಿದರು.
Published by: Seema R
First published: March 3, 2021, 5:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories