Amit Shah Exclusive Interview: 370ನೇ ವಿಧಿ ರದ್ದತಿಯಿಂದ ಜಮ್ಮು ಕಾಶ್ಮೀರದ 3 ಸಮಸ್ಯೆಗಳು ಪರಿಹಾರ; ಗೃಹಸಚಿವ ಅಮಿತ್​ ಶಾ

ಜಮ್ಮು ಕಾಶ್ಮೀರದ ಸದ್ಯದ ಪರಿಸ್ಥಿತಿ ಮತ್ತು ತಮ್ಮ ಸರ್ಕಾರ ಯಾಕೆ 370ನೇ ವಿಧಿಯನ್ನು ರದ್ದುಗೊಳಿಸಿತು ಎಂಬ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ನೆಟ್​ವರ್ಕ್​18 ಪ್ರಧಾನ ಸಂಪಾದಕ ರಾಹುಲ್ ಜೋಶಿ ಜೊತೆ ಮಾತನಾಡಿದ್ದಾರೆ.

Sushma Chakre | news18-kannada
Updated:October 17, 2019, 11:24 AM IST
  • Share this:
ನವದೆಹಲಿ (ಅ. 17): ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ನಂತರ ಕಣಿವೆ ನಾಡಿನ ಪರಿಸ್ಥಿತಿಯೇ ಬದಲಾಗಿದೆ. ಇದೀಗ ಜಮ್ಮು ಕಾಶ್ಮೀರ ಕೊಂಚ ಸಹಜಸ್ಥಿತಿಗೆ ಬರುತ್ತಿದ್ದು, ಮೊಬೈಲ್ ಪೋಸ್ಟ್​ಪೇಯ್ಡ್​ ಸೇವೆಗಳನ್ನು ಮರು ಆರಂಭಿಸಲಾಗಿದೆ. ಜಮ್ಮು ಕಾಶ್ಮೀರದ ಸದ್ಯದ ಪರಿಸ್ಥಿತಿ ಮತ್ತು ತಮ್ಮ ಸರ್ಕಾರ ಯಾಕೆ 370ನೇ ವಿಧಿಯನ್ನು ರದ್ದುಗೊಳಿಸಿತು ಎಂಬ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ನೆಟ್​ವರ್ಕ್​18 ಪ್ರಧಾನ ಸಂಪಾದಕ ರಾಹುಲ್ ಜೋಶಿ ಜೊತೆ ಮಾತನಾಡಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಮುಖ್ಯವಾಗಿ 3 ಸಮಸ್ಯೆಯಿತ್ತು. ಭ್ರಷ್ಟಾಚಾರ, ಭಯೋತ್ಪಾದನೆ ಅಥವಾ ಪ್ರತ್ಯೇಕತಾವಾದ ಮತ್ತು ತಮ್ಮ ರಾಜ್ಯವನ್ನು ಯಾವ ರೀತಿ ವಿಕಾಸಗೊಳಿಸಬೇಕೆಂಬ ನೀಲನಕ್ಷೆಯೇ ಅಲ್ಲಿ ಇರಲಿಲ್ಲ. ಈ ಮೂರೂ ಸಮಸ್ಯೆಗಳು ಬಹಳ ಮುಖ್ಯವಾದವುಗಳೇ ಆಗಿವೆ. 370ನೇ ವಿಧಿಯ ಕಾರಣದಿಂದಲೇ ಪಾಕಿಸ್ತಾನ ಎಲ್ಲದರಲ್ಲೂ ಮೂಗು ತೂರಿಸುತ್ತಿತ್ತು, ಯುವಕರನ್ನು ಬಳಸಿಕೊಂಡು ಜಮ್ಮು ಕಾಶ್ಮೀರದೊಳಗೆ ಪ್ರವೇಶಿಸುತ್ತಿತ್ತು ಎಂದು ಹೇಳಿದ್ದಾರೆ.

ಭಯೋತ್ಪಾದನೆಯ ವಿರುದ್ಧ ಹೋರಾಡಲು ನಾವು ಮೊದಲ ಹೆಜ್ಜೆಯಾಗಿ 370ನೇ ವಿಧಿಯನ್ನು ರದ್ದುಗೊಳಿಸುವ ನಿರ್ಧಾರಕ್ಕೆ ಬಂದೆವು. ಆ ಬಗ್ಗೆ ನಮ್ಮ ಸರ್ಕಾರಕ್ಕೆ ಯಾವುದೇ ಹಿಂಜರಿಕೆಯಾಗಲಿ, ಆತಂಕವಾಗಲಿ ಇರಲಿಲ್ಲ. 370ನೇ ವಿಧಿ ಜಾರಿಯಲ್ಲಿದ್ದುದರಿಂದ ಜಮ್ಮು ಕಾಶ್ಮೀರದಲ್ಲಿ ಭ್ರಷ್ಟಾಚಾರ ನಿಗ್ರಹ ದಳವೇ ಇರಲಿಲ್ಲ. ನಾವು ಆ ಬಗ್ಗೆಯೆಲ್ಲ ಅಧ್ಯಯನ ನಡೆಸಿ ಈ ನಿರ್ಧಾರಕ್ಕೆ ಬರಬೇಕಾಯಿತು. ಈಗ ಜಮ್ಮು ಕಾಶ್ಮೀರಕ್ಕೆ ನಮ್ಮ ದೇಶದ ಎಲ್ಲ ಕಾನೂನುಗಳೂ ಅನ್ವಯವಾಗುತ್ತದೆ. ಅಲ್ಲಿ ಭ್ರಷ್ಟಾಚಾರ ನಿಗ್ರಹ ದಳ, ಆದಾಯ ತೆರಿಗೆ ಇಲಾಖೆ, ಇಡಿ ಎಲ್ಲವೂ ಜಮ್ಮು ಕಾಶ್ಮೀರದಲ್ಲಿ ತನಿಖೆ ನಡೆಸಬಹುದು. ಪಂಚಾಯತ್, ತಾಲೂಕು, ಜಿಲ್ಲಾ ಪಂಚಾಯತ್​ಗಳಿಗೆ ಚುನಾವಣೆಯೇ ನಡೆಯುತ್ತಿರಲಿಲ್ಲ. ಇನ್ನುಮುಂದೆ ಜಮ್ಮು ಕಾಶ್ಮೀರದಲ್ಲಿಯೂ ಪಂಚಾಯತ್ ಚುನಾವಣೆಗಳು ನಡೆಯಲಿವೆ ಎಂದಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶೇಷ ಸಂದರ್ಶನದ ಪ್ರಮುಖಾಂಶಗಳು

ನಾವು ಜಮ್ಮು ಕಾಶ್ಮೀರದ ಮುಂದಿನ 15 ವರ್ಷಗಳು ಹೇಗಿರಬೇಕೆಂಬ ನೀಲನಕ್ಷೆ ಸಿದ್ಧಪಡಿಸಿದ್ದೇವೆ. ಅಲ್ಲಿನ ಜನರು ಈಗ ನಮ್ಮ ದೇಶದ ಬೇರೆ ರಾಜ್ಯಗಳಂತೆ ಬದುಕಬಹುದಾಗಿದೆ. ಜಮ್ಮು ಕಾಶ್ಮೀರಕ್ಕೆ ಈ ಮೊದಲು ಕೂಡ ಪ್ರಧಾನಿ ನರೇಂದ್ರ ಮೋದಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರು. ಆದರೆ, ಅಲ್ಲಿನ ಭ್ರಷ್ಟಾಚಾರದ ಕಾರಣದಿಂದ ಆ ಯೋಜನೆಗಳು ಅಲ್ಲಿನ ಜನರಿಗೆ ತಲುಪುತ್ತಲೇ ಇರಲಿಲ್ಲ. ನಾವೀಗ ಒಂದು ವಿಷನ್​ನೊಂದಿಗೆ ವಿಶೇಷವಾದ ಪ್ಯಾಕೇಜ್ ನೀಡುವ ಮೂಲಕ ಕಣಿವೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಿದ್ದೇವೆ ಎಂದು ಅಮಿತ್ ಷಾ ತಿಳಿಸಿದ್ದಾರೆ.

 
First published:October 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading