ನವದೆಹಲಿ(ಸೆ.04): ವ್ಯಕ್ತಿಯು ಕಾರು ಚಲಾಯಿಸುವಾಗ ಒಬ್ಬಂಟಿಯಾಗಿದ್ದರೆ ಆತ ಮಾಸ್ಕ್ ಧರಿಸುವ ಅಗತ್ಯ ಬರುವುದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಸ್ಪಷ್ಟಪಡಿಸಿದೆ. ಟ್ರಾಫಿಕ್ ಪೊಲೀಸರು ಸುಖಾಸುಮ್ಮನೆ ಕಾರು ಚಾಲಕರನ್ನು ತಡೆದು ಪ್ರಶ್ನಿಸುತ್ತಿದ್ದ ಹಿನ್ನೆಲೆ ಸಚಿವಾಲಯವು ಈ ಸ್ಪಷ್ಟನೆಯನ್ನು ನೀಡಿದೆ. ಇನ್ಮುಂದೆ ಕಾರಿನಲ್ಲಿ ನೀವೊಬ್ಬರೇ ಇದ್ದರೆ ಮಾಸ್ಕ್ ಧರಿಸುವ ಅವಶ್ಯಕತೆ ಇರುವುದಿಲ್ಲ. ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾತನಾಡಿ, ಈ ಮಾರ್ಗಸೂಚಿಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದೆ. ಕಾರಿನಲ್ಲಿ ಬೇರೆ ಯಾರೂ ಸಹ ಇಲ್ಲದೇ ಒಬ್ಬನೇ ವ್ಯಕ್ತಿ ಕಾರು ಚಲಾಯಿಸುತ್ತಿದ್ದರೆ ಆತ ಮಾಸ್ಕ್ ಧರಿಸುವ ಅಗತ್ಯವಿಲ್ಲ. ಒಬ್ಬರಿಗಿಂತ ಹೆಚ್ಚು ಜನ ಕಾರಿನಲ್ಲಿದ್ದರೆ ಆಗ ಮಾತ್ರ ಮಾಸ್ಕ್ ಧರಿಸುವುದು ಕಡ್ಡಾಯವಾಗುತ್ತದೆ. ಗುಂಪಿನಲ್ಲಿ ವ್ಯಾಯಾಮ ಮಾಡುವಾಗಲೂ ಮಾಸ್ಕ್ ಧರಿಸುವುದು ಕಡ್ಡಾಯ. ಆದರೆ ಒಂಟಿಯಾಗಿ ಸೈಕಲ್ ತುಳಿಯುವಾಗ ಮಾಸ್ಕ್ ಧರಿಸುವ ಅವಶ್ಯಕತೆ ಇರುವುದಿಲ್ಲ ಎಂದು ಭೂಷಣ್ ತಿಳಿಸಿದ್ದಾರೆ.
ಮುಂದುವರೆದ ಅವರು, ಜನರು ಗುಂಪು-ಗುಂಪಾಗಿ ಸೇರಿಕೊಂಡು ವ್ಯಾಯಾಮ ಮಾಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಜೊತೆಗೆ ಸಾಮಾಜಿಕ ಅಂತರವನ್ನೂ ಕಾಪಾಡಿಕೊಳ್ಳಬೇಕು. ಆದರೆ ಇದೇ ನಿಯಮ ನೀವು ವಾಹನದಲ್ಲಿ ಒಂಟಿಯಾಗಿ ಹೋಗುವಾಗ ಅನ್ವಯವಾಗುವುದಿಲ್ಲ ಎಂದರು.
ಗುಲ್ಬರ್ಗಾ ವಿವಿಯ ಮಾಜಿ ಹಂಗಾಮಿ ಕುಲಪತಿ ಪ್ರೊ.ಎಸ್.ಪಿ.ಮೇಲಕೇರಿ ಅಮಾನತು
ಜನರು ದೈಹಿಕ ವ್ಯಾಯಾಮ ಮಾಡುವಾದ, ಜಾಗಿಂಗ್ ಮಾಡುವಾಗ ಇಬ್ಬರು-ಮೂವರು ಒಟ್ಟಿಗೆ ಸೇರಿಕೊಳ್ಳುತ್ತಾರೆ. ಆ ವೇಳೆಯಲ್ಲಿ ಪ್ರತಿಯೊಬ್ಬರೂ ಸಹ ಮಾಸ್ಕ್ ಧರಿಸುವುದು ಕಡ್ಡಾಯ ಮತ್ತು ಪ್ರಮುಖವಾಗುತ್ತದೆ. ಆಗ ಯಾವುದೇ ಸೋಂಕು ತಗುಲುವ ಅವಕಾಶವಿರುವುದಿಲ್ಲ. ಇನ್ನು, ನೀವೊಬ್ಬರೇ ಸೈಕಲ್ ತುಳಿಯುತ್ತಿದ್ದರೆ ಆಗ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು ಎಂಬ ನಿಯಮವಿಲ್ಲ ಎಂದು ಹೇಳಿದರು.
ಮೂಲಗಳ ಪ್ರಕಾರ, ಕಾರು ಚಾಲಕರು ಒಂಟಿಯಾಗಿ ಪ್ರಯಾಣಿಸುತ್ತಿದ್ದರೂ ದೆಹಲಿ ಪೊಲೀಸರು ಅವರನ್ನು ತಡೆದು ಪ್ರಶ್ನೆ ಮಾಡುತ್ತಿದ್ದರು. ಆಗಸ್ಟ್ 25ರಂದು ದೆಹಲಿ ಪೊಲೀಸರು ಟ್ವೀಟ್ ಮಾಡಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದಿದ್ದವರಿಗೆ ದಂಡ ವಿಧಿಸಿ ಎಂದು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜೂನ್ 13ರಂದು ದೆಹಲಿ ಪೊಲೀಸರಿಗೆ ಸೂಚಿಸಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ