ನವದೆಹಲಿ (ಜೂ. 23): ಕೋವಿಡ್ ಆ್ಯಪ್ನಲ್ಲಿ ನೋಂದಣಿ ಮಾಡಲು ಸಾಧ್ಯವಾಗದಂತಹ ಬಡವರು, ನಿರಾಶ್ರಿತರನ್ನು ತಾಂತ್ರಿಕ ಸಮಸ್ಯೆ ನೆಪದಲ್ಲಿ ಲಸಿಕೆ ನೀಡುವಿಕೆಯಿಂದ ಕೈ ಬಿಡಲಾಗಿದೆ ಎಂಬ ಗಂಭೀರ ಆರೋಪವನ್ನು ಕೇಂದ್ರ ಆರೋಗ್ಯ ಇಲಾಖೆ ತಳ್ಳಿ ಹಾಕಿದೆ. ಅಲ್ಲದೇ ಲಸಿಕೆ ಪಡೆಯಲು ಕೋವಿನ್ ಆ್ಯಪ್ನಲ್ಲಿ ನೋಂದಾಣಿಯಾಗುವುದು ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿದೆ. ಲಸಿಕೆಗೆ ಡಿಜಿಟಲ್ ನೊಂದಾಣಿ ಕಡ್ಡಾಯವಾಗಿದೆ. ಇದು ಅನೇಕ ಬಡವರಿಗೆ ಸಮಸ್ಯೆಯಾಗಲಿದೆ. ನೊಂದಾಣಿ ವೇಳೆ ಇಂಗ್ಲಿಷ್ ಮಾಹಿತಿ ತಿಳುವಳಿಕೆ ಇಲ್ಲದೇ ಅನೇಕ ಜನರು ನೊಂದಾಣಿ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ತಾಂತ್ರಿಕ ಜ್ಞಾನ, ಇಂಗ್ಲಿಷ್ ಜ್ಞಾನ ಇಲ್ಲದ ಬಡವರಿಗೆ ಲಸಿಕೆ ಸಿಗುವುದಿಲ್ಲ ಎಂದು ಕೆಲ ವರದಿಗಳು ಕಂಡು ಬಂದಿದ್ದು, ಇದು ಸತ್ಯಕ್ಕೆ ದೂರವಾಗಿದೆ ಎಂದು ತಿಳಿಸಿದೆ.
ಲಸಿಕೆ ಪಡೆಯಲು ಲಸಿಕಾ ಕೇಂದ್ರದಲ್ಲಿ ಮೊಬೈಲ್ ಸಂಖ್ಯೆ ಕಡ್ಡಾಯವಲ್ಲ. ಆದರೆ, ಅಡ್ರೆಸ್ ಪ್ರೂಫ್ ಕಡ್ಡಾಯವಾಗಿದೆ ಎಂದಿದ್ದಾರೆ.
12 ಭಾಷೆಗಳಲ್ಲಿ ಕೋವಿನ್
ಕೋವಿನ್ ಆ್ಯಪ್ನಲ್ಲಿನ ಇಂಗ್ಲಿಷ್ ಭಾಷೆಯಿಂದಾಗಿ ಅನೇಕ ಜನರು ನೊಂದಾಣಿ ವೇಳೆ ಸಮಸ್ಯೆ ಎದುರಿಸುತ್ತಿರುವ ದೂರು ದಾಖಲಾಗಿತ್ತು. ಇದೇ ಹಿನ್ನಲೆ ಈಗ ಆ್ಯಪ್ನಲ್ಲಿ ಸ್ಥಳೀಯ ಭಾಷೆಗೆ ಆದ್ಯತೆ ನೀಡಲಾಗಿದೆ. ದೇಶದ 12 ಭಾಷೆಗಳು ಈ ಆ್ಯಪ್ನಲ್ಲಿ ಲಭ್ಯವಿದೆ. ಹಿಂದಿ, ಮಲಯಾಳಂ. ತಮಿಳು, ತೆಲುಗು, ಕನ್ನಡ, ಮರಾಠಿ, ಗುಜರಾತಿ, ಒಡಿಯಾ, ಬೆಂಗಾಲಿ, ಅಸ್ಸಾಮಿ, ಗುರುಮುಖಿ (ಪಂಜಾಬ್), ಮತ್ತು ಇಂಗ್ಲಿಷ್ ಭಾಷೆಗಳ ಮೂಲಕ ಜನರು ನೊಂದಾಣಿ ಮಾಡಿಕೊಳ್ಳಬಹುದಾಗಿದೆ.
ಅಷ್ಟೇ ಅಲ್ಲದೇ ಕೋವಿಡ್ ಪ್ಲಾಟ್ಫಾರ್ಮ್ ಅಂತರ್ಗತ ಐಟಿ ವ್ಯವಸ್ಥೆ ಹೊಂದಿದೆ. ಈ ಮೂಲಕ ದೇಶದ ರಿಮೋಟ್ ಪ್ರದೇಶದಲ್ಲಿರುವ ಜನರು ಸರಳವಾದ ಅಗತ್ಯ ಮಾಹಿತಿ ನೀಡುವಂತೆ ವಿಶಿಷ್ಠ ಪೀಚರ್ಗಳನ್ನು ನೀಡಲಾಗಿದೆ.
ಇದನ್ನು ಓದಿ: ಮುಂಬೈ ದಾಳಿ ಮಾಸ್ಟರ್ ಮೈಂಡ್ ಹಫೀಸ್ ಸಯೀದ್ ಲಾಹೋರ್ ಮನೆ ಬಳಿ ಬಾಂಬ್ ಸ್ಪೋಟ
ಲಸಿಕೆ ಪಡೆಯಲು ಆಧಾರ್, ವೋಟರ್ ಐಡಿ ಕಾರ್ಡ್, ರೇಷನ್ ಕಾರ್ಡ್, ಅಂಗವೈಗಲ್ಯದ ಕಾರ್ಡ್ಗಳನ್ನು ಹಾಜರು ಪಡಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಸರ್ಕಾರ ಸೂಚಿಸಿಚ 9 ಗುರುತಿನ ಚೀಟಿಗಳಲ್ಲಿ ಒಂದನ್ನು ಹಾಜರು ಪಡಿಸಲು ಸಾಧ್ಯವಾಗದಂತಹವರಿಗೆ ಸರ್ಕಾರ ವಿಶೇಷ ಲಸಿಕೆ ವಿತರಣೆ ಕಾರ್ಯ ನಡೆಸಲಿದೆ.
ಇದನ್ನು ಓದಿ: ಜುಲೈ ಅಲ್ಲ, ಸೆಪ್ಟೆಂಬರ್ಗೆ KGF2 ಬಿಡುಗಡೆ ಸಾಧ್ಯತೆ; ಹೊಸ ಡೇಟ್ ಪ್ರಕಟಿಸಲು ಸಜ್ಜಾದ ಚಿತ್ರತಂಡ
ಇಂತಹ ಸಮಯದಲ್ಲಿ ದೇಶದ ಎರಡು ಲಕ್ಷಕ್ಕೂ ಹೆಚ್ಚಿನ ಫಲಾನುಭವಿಗಳಿಗೆ ಲಸಿಕೆ ನೀಡಲಾಗುವುದು. ವೃದ್ಧರು ಮತ್ತು ಅಂಗವೈಕಲ್ಯ ಹೊಂದಿರುವವರಿಗೆ ಮನೆ ಸಮೀಪದ ಲಸಿಕೆ ಕೇಂದ್ರ ಸೇವೆಗಳ ನೀಡುವ ಬಗ್ಗೆ ಈಗಾಗಲೇ ಕೇಂದ್ರಕ್ಕೆ ಸಲಹೆ ನೀಡಲಾಗಿದೆ
ಸ್ಮಾರ್ಟ್ ಫೋನ್, ಮೊಬೈಲ್ ಪೋನ್ ಇಂಟರ್ನೆಟ್ ಸೇವೆ ಹೊಂದಿರದ ಅನೇಕರು ಲಸಿಕಾ ಕೇಂದ್ರಕ್ಕೆ ನೇರವಾಗಿ ತೆರಳಿ ಲಸಿಕೆ ಪಡೆಯಬಹುದಾಗಿದೆ, ಸರ್ಕಾರದ ಕೇಂದ್ರಗಳಲ್ಲಿ ಲಸಿಕೆ ಪಡೆಯಲು ಎಲ್ಲರು ಅರ್ಹರಾಗಿದ್ದಾರೆ. ಲಸಿಕೆ ಕೇಂದ್ರಗಳಿಗೆ ನೇರವಾಗಿ ಭೇಟಿ ನೀಡಿ 18 ವರ್ಷ ಮೇಲ್ಪಟ್ಟ ಎಲ್ಲರೂ ಉಚಿತವಾಗಿ ಲಸಿಕೆ ಪಡೆಯಬಹುದಾಗಿದೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ