HOME » NEWS » National-international » UNION HEALTH DEPARTMENT RELEASED DATA ABOUT CORONA VACCINE AND JUSTIFIED DBDEL LG

ಹಲವು ರಾಜ್ಯಗಳಿಂದ ಲಸಿಕೆ ಕೊರತೆ ಆರೋಪ ಹಿನ್ನಲೆ; ಮಾಹಿತಿ ಬಿಡುಗಡೆ ಮಾಡಿದ ಕೇಂದ್ರ ಆರೋಗ್ಯ ಇಲಾಖೆ

ರಾಜ್ಯಗಳಿಗೆ ವಿತರಣೆ ಮಾಡಿರುವ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರ, ಇನ್ನೂ ಒಂದು ಕೋಟಿಯಷ್ಟು ವ್ಯಾಕ್ಸಿನ್ ಗಳು ರಾಜ್ಯಗಳಲ್ಲಿ ಲಭ್ಯವಿದೆ.‌ ಮುಂದಿನ ಮೂರು ದಿನಗಳಲ್ಲಿ 86 ಲಕ್ಷ ಡೋಸ್ ವಿತರಿಸಲಾಗುವುದು.‌ ಸದ್ಯ 1,00,47,157 ಡೋಸ್‌ಗಳು ರಾಜ್ಯದಲ್ಲಿ ಲಭ್ಯವಿದೆ ಎಂದು ಹೇಳಿದೆ.

news18-kannada
Updated:April 28, 2021, 2:30 PM IST
ಹಲವು ರಾಜ್ಯಗಳಿಂದ ಲಸಿಕೆ ಕೊರತೆ ಆರೋಪ ಹಿನ್ನಲೆ; ಮಾಹಿತಿ ಬಿಡುಗಡೆ ಮಾಡಿದ ಕೇಂದ್ರ ಆರೋಗ್ಯ ಇಲಾಖೆ
ನರೇಂದ್ರ ಮೋದಿ.
  • Share this:
ನವದೆಹಲಿ(ಏ. 28): ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ನಿಯಂತ್ರಣಕ್ಕಾಗಿ ಮೇ 1ರಿಂದ ದೇಶಾದ್ಯಂತ 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಕೊರೋನಾ ಲಸಿಕೆ ನೀಡುವ ಮೂರನೇ ಹಂತಕ್ಕೆ ಚಾಲನೆ ನೀಡಲಾಗುತ್ತಿದೆ. ಆದರೆ ಈ ನಡುವೆ ಹಲವು ರಾಜ್ಯಗಳು ತಮಗೆ ಕೇಂದ್ರ ಸರ್ಕಾರದಿಂದ ಅಗತ್ಯ ಇರುವಷ್ಟು ಕೊರೋನಾ ಲಸಿಕೆಗಳು ಸಿಕ್ಕಿಲ್ಲ ಎಂದು ಆರೋಪ ಮಾಡಿವೆ. ಈ ಆರೋಪದ ಹಿನ್ನಲೆಯಲ್ಲಿ ಬುಧವಾರ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಬಿಡುಗಡೆ ಮಾಡಿದೆ‌.

ರಾಜ್ಯಗಳಿಗೆ ವಿತರಣೆ ಮಾಡಿರುವ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಸರ್ಕಾರ, ಇನ್ನೂ ಒಂದು ಕೋಟಿಯಷ್ಟು ವ್ಯಾಕ್ಸಿನ್ ಗಳು ರಾಜ್ಯಗಳಲ್ಲಿ ಲಭ್ಯವಿದೆ.‌ ಮುಂದಿನ ಮೂರು ದಿನಗಳಲ್ಲಿ 86 ಲಕ್ಷ ಡೋಸ್ ವಿತರಿಸಲಾಗುವುದು.‌ ಸದ್ಯ 1,00,47,157 ಡೋಸ್‌ಗಳು ರಾಜ್ಯದಲ್ಲಿ ಲಭ್ಯವಿದೆ ಎಂದು ಹೇಳಿದೆ.

ಈ‌ ಬಗ್ಗೆ ಅಂಕಿ ಅಂಶ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ, ಉತ್ತರ ಪ್ರದೇಶದಲ್ಲಿ 10.10 ಲಕ್ಷ ಡೋಸ್, ಮಹಾರಾಷ್ಟ್ರ 9.23 ಲಕ್ಷ ಡೋಸ್, ಬಿಹಾರದಲ್ಲಿ  7.50 ಲಕ್ಷ ಡೋಸ್, ಗುಜರಾತ್‌ನಲ್ಲಿ 6.09 ಲಕ್ಷ ಡೋಸ್ ಮತ್ತು ಜಾರ್ಖಂಡ್‌ನಲ್ಲಿ 5.95 ಲಕ್ಷ ಡೋಸ್ ಲಭ್ಯವಿದೆ. ಈ ವ್ಯಾಕ್ಸಿನ್ ಅನ್ನು ಆರೋಗ್ಯ ಕಾರ್ಯಕರ್ತರು ಮತ್ತು 45 ವರ್ಷ ‌ಮೇಲ್ಪಟ್ಟವರಿಗೆ ನೀಡಬಹುದು. ಮುಂದಿನ ಮೂರು ದಿನಗಳಲ್ಲಿ ಮತ್ತಷ್ಟು ರಾಜ್ಯಗಳಿಗೆ 86,40,000 ಡೋಸ್‌ಗಳನ್ನು ನೀಡಲಾಗುತ್ತಿದೆ ಎಂದು ವಿವರಿಸಿದೆ.

COVID-19 Protocols: ಕೋವಿಡ್ ನಿಯಮ ಉಲ್ಲಂಘನೆ; ಹುಬ್ಬಳ್ಳಿಯ ಮೂರು ಆಸ್ಪತ್ರೆಗಳಿಗೆ ನೋಟಿಸ್ ಜಾರಿ

ಮೂರನೇ ಹಂತದಲ್ಲಿ ಲಸಿಕೆ ಪಡೆಯಲು ಇಂದಿನಿಂದ ಹೆಸರು ನೊಂದಾಯಿಸಿಕೊಳ್ಳುವ ಪ್ರಕ್ರಿಯೆ ಆರಂಭ ಆಗಲಿದೆ. 18 ವರ್ಷ ಮೇಲ್ಪಟ್ಟವರೆಲ್ಲರು ಹೆಸರು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಹೆಸರು ನೊಂದಾಯಿಸಿಕೊಳ್ಳುವ ಮೂಲಕ ಲಸಿಕೆ ಪಡೆಯುವ ದಿನಾಂಕ ಮತ್ತು ಸ್ಥಳ ನಿಗದಿ ಮಾಡಿಕೊಳ್ಳಬಹುದು. ಕೋವಿನ್‌ ವೆಬ್‌ಸೈಟ್ ಮತ್ತು ಆರೋಗ್ಯ ಸೇತು ಆ್ಯಪ್ ಮೂಲಕ ಇಂದು ಸಂಜೆ ನಾಲ್ಕು ಗಂಟೆಯಿಂದ ಹೆಸರು ನೊಂದಣಿ ಮಾಡಿಕೊಳ್ಳಬೇಕಾಗಿದೆ‌. ಮೂರನೇ ಹಂತದಲ್ಲಿ ಖಾಸಗಿ ವ್ಯಾಕ್ಸಿನೇಷನ್ ಕೇಂದ್ರದಲ್ಲೂ ಲಸಿಕೆ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆದರೆ ಖಾಸಗಿ ಕೇಂದ್ರದಲ್ಲಿ ಲಸಿಕೆ ಪಡೆಯುವುದಕ್ಕೂ ಹೆಸರು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
Youtube Video

ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಹಾಕುವ ಕೆಲಸವನ್ನು ಹಂತ ಹಂತವಾಗಿ ತೀವ್ರಗೊಳಿಸಲಾಗುತ್ತದೆ. ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್ ಗೆ ಲಸಿಕೆ ನೀಡಲಾಗಿತ್ತು. ಏಪ್ರಿಲ್ 1ರಿಂದ ಎರಡನೇ ಹಂತದಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಈಗ ಮೂರನೇ ಹಂತದಲ್ಲಿ ಮೇ 1ರಿಂದ 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಲಸಿಕೆ ನೀಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಏಪ್ರಿಲ್ 26ರವರೆಗೆ ಈಗಾಗಲೇ ದೇಶಾದ್ಯಂತ ಒಟ್ಟು 14,78,27,367 ಜನರಿಗೆ ಕೊರೋನಾ ಲಸಿಕೆ ಹಾಕಲಾಗಿದೆ.
Published by: Latha CG
First published: April 28, 2021, 2:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories