ಪೆಟ್ರೋಲ್​​​​-ಡೀಸೆಲ್​​ ಬೆಲೆ ಏರಿಕೆ ಬೆನ್ನಲ್ಲೇ ಸುಂಕದ ಬರೆ ಹಾಕಲು ಮುಂದಾದ ಕೇಂದ್ರ ಸರ್ಕಾರ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 75 ರೂ. ದಾಟಿರುವುದರಿಂದ ವಾಹನ ಸವಾರರು ತತ್ತರಿಸಿ ಹೋಗಿದ್ದಾರೆ. ಈ ಮಧ್ಯೆ ಕಚ್ಚಾತೈಲದ ಬೆಲೆ ಇಳಿಕೆಯಾದ ಕೂಡಲೇ ಕೇಂದ್ರ ಸರ್ಕಾರ ಸುಂಕ ಏರಿಕೆ ಮಾಡಲಾಗುವುದು ಎನ್ನಲಾಗಿದೆ.

news18
Updated:September 24, 2019, 9:07 AM IST
ಪೆಟ್ರೋಲ್​​​​-ಡೀಸೆಲ್​​ ಬೆಲೆ ಏರಿಕೆ ಬೆನ್ನಲ್ಲೇ ಸುಂಕದ ಬರೆ ಹಾಕಲು ಮುಂದಾದ ಕೇಂದ್ರ ಸರ್ಕಾರ
ಸಾಂದರ್ಭಿಕ ಚಿತ್ರ
  • News18
  • Last Updated: September 24, 2019, 9:07 AM IST
  • Share this:
ನವದೆಹಲಿ(ಸೆ.24): ಪೆಟ್ರೋಲ್​​-ಡಿಸೇಲ್​​​​ ದರ ಏರಿಕೆ ಬೆನ್ನಲ್ಲೇ ಕೇಂದ್ರ ಸರ್ಕಾರವೂ ಸುಂಕದ ಬರೆ ಹಾಕಲು ಮುಂದಾಗಿದೆ. ಪೆಟ್ರೋಲ್ ಮತ್ತು ಡೀಸೆಲ್​ ಪ್ರತಿ ಲೀಟರ್​​ಗೆ 2 ರೂಪಾಯಿ ಎಕ್ಸೈಸ್‌ ಸುಂಕ ಏರಿಸುವ ಸುಳಿವು ನೀಡಿದೆ. ತೆರಿಗೆ ಮತ್ತು ತೆರಿಗೆಯೇತರ ಆಧಾಯ ಭಾರೀ ಕಡಿಮೆಯಾಗಿದೆ. ಹಾಗಾಗಿ ಈ ಕೊರತೆ ನೀಗಿಸುವ ಸಲುವಾಗಿಯೇ ಕೇಂದ್ರ ಸರ್ಕಾರ ತೈಲೋತ್ಪನ್ನಗಳ ಮೇಲೆ ಸುಂಕ ಏರಿಕೆಗೆ ಚಿಂತಿಸಿದೆ ಎಂದು ಹೇಳಲಾಗಿದೆ.

ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 75 ರೂ. ದಾಟಿರುವುದರಿಂದ ವಾಹನ ಸವಾರರು ತತ್ತರಿಸಿ ಹೋಗಿದ್ದಾರೆ. ಈ ಮಧ್ಯೆ ಕಚ್ಚಾತೈಲದ ಬೆಲೆ ಇಳಿಕೆಯಾದ ಕೂಡಲೇ ಕೇಂದ್ರ ಸರ್ಕಾರ ಸುಂಕ ಏರಿಕೆ ಮಾಡಲಾಗುವುದು. ಪೆಟ್ರೋಲ್​​-ಡೀಸೆಲ್​​​ ಪ್ರತಿ ಲೀಟರ್​​ಗೆ 2 ರೂ. ಸುಂಕ ಹೆಚ್ಚಳ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಇತ್ತೀಚೆಗೆ ಸೌದಿ ಅರೇಬಿಯಾದ ಎರಡು ಅರಾಮ್ಕೋ ತೈಲ ಘಟಕಗಳ ಮೇಲೆ ಡ್ರೋನ್ ದಾಳಿ ನಡೆದ ನಂತರವೇ ಜಾಗತಿಕ ತೈಲ ಬೆಲೆಯಲ್ಲಿ ತೀಕ್ಷ್ಣ ಏರಿಕೆಯಾಗಿದೆ. ವೆಸ್ಟ್ ಟೆಕ್ಸಾಸ್ ಇಂಟರ್​ಮೀಡಿಯೇಟ್ (ಡಬ್ಲ್ಯೂಟಿಐ)ನ ಕಚ್ಛಾ ತೈಲ ದರವು ಶೇ. 10.68ರಷ್ಟು ಹೆಚ್ಚಳಗೊಂಡು ಒಂದು ಬ್ಯಾರೆಲ್​ಗೆ 60.71 ಡಾಲರ್ (4,340 ರೂಪಾಯಿ ಬೆಲೆ ತಲುಪಿದೆ. ಹಾಗೆಯೇ, ವಿಶ್ವದ ಮುಕ್ಕಾಲು ಪಾಲು ಕಚ್ಛಾ ತೈಲದ ಬೆಲೆ ನಿರ್ಧಾರ ಮಾಡುವ ಬ್ರೆಂಟ್​ನಲ್ಲೂ ಶೇ. 11.77ರಷ್ಟು ಬೆಲೆ ಹೆಚ್ಚಳವಾಗಿದೆ. ಬ್ರೆಂಟ್​ನ ಕಚ್ಛಾ ತೈಲ ಬೆಲೆ ಪ್ರತೀ ಬ್ಯಾರೆಲ್​ಗೆ 67.31 ಡಾಲರ್(4,812 ರೂಪಾಯಿ) ಮುಟ್ಟಿದೆ.

ಇದನ್ನೂ ಓದಿ: ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕಾಗಿ ಭಾರತ ಮತ್ತು ಪಾಕಿಸ್ತಾನ ನಡುವೆ ಮಧ್ಯಸ್ಥಿಕೆಗೆ ನಾನು ಸಿದ್ಧ; ಟ್ರಂಪ್​​​ ಪುನರುಚ್ಚಾರ

ನಿನ್ನೆಯ ವಹಿವಾಟಿನಲ್ಲಿ ಬ್ರೆಂಟ್ ಮತ್ತು ಡಬ್ಲ್ಯೂಟಿಐನಲ್ಲಿ ಕಚ್ಛಾ ತೈಲ ಬೆಲೆ ತಲಾ ಶೇ. 20 ಮತ್ತು ಶೇ. 15ರಷ್ಟು ಹೆಚ್ಚಳವಾಗಿ ದೊಡ್ಡಮಟ್ಟದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಆದರೆ, ನಂತರದ ವಹಿವಾಟಿನಲ್ಲಿ ಬೆಲೆ ಸ್ವಲ್ಪಮಟ್ಟಿಗೆ ತಹಬದಿಗೆ ಬಂದು ಶೇ. 11.77 ಮತ್ತು ಶೇ. 10.68 ಬೆಲೆ ಹೆಚ್ಚಳಕ್ಕೆ ಬಂದು ನಿಂತಿತು.

“ಈ ಬಿಕ್ಕಟ್ಟಿಗೆ ಇರಾನ್ ದೇಶವೇ ಕಾರಣವಾಗಿದೆ. ಇಂಧನ ಮಾರುಕಟ್ಟೆ ಸುಸ್ಥಿತಿಯಲ್ಲಿರುವಂತೆ ನಮ್ಮ ಪ್ರಯತ್ನ ಮಾಡುತ್ತೇವೆ” ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಸ್ಪಷ್ಟಪಡಿಸಿತ್ತು.
------------
First published:September 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading