HOME » NEWS » National-international » UNION FINANCE MINISTRY CLARIFIES ON DISCONTINUE PRINTING RS 2000 NOTES PRINTING SESR

2000 ರೂಪಾಯಿ ನೋಟು ಮುದ್ರಣ ಸ್ಥಗಿತ: ಸದನದಲ್ಲಿ ಹಣಕಾಸು ಸಚಿವರು ಹೇಳಿದ್ದೇನು?

ಮಾರ್ಚ್​ನಲ್ಲಿ  ದೇಶದಾದ್ಯಂತ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿತ್ತು. ಈ ದೃಷ್ಟಿಯಿಂದ ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ ತಾತ್ಕಲಿಕವಾಗಿ ನೋಟುಗಳ ಮುದ್ರಣ ನಿಲ್ಲಿಸುವುದಾಗಿ ತಿಳಿಸಿತ್ತು

news18-kannada
Updated:September 19, 2020, 8:41 PM IST
2000 ರೂಪಾಯಿ ನೋಟು ಮುದ್ರಣ ಸ್ಥಗಿತ: ಸದನದಲ್ಲಿ ಹಣಕಾಸು ಸಚಿವರು ಹೇಳಿದ್ದೇನು?
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಸೆ.19): ಚಿಲ್ಲರೆ ಅಭಾವದಿಂದಾಗಿ 2000 ರೂಪಾಯಿ ನೋಟು ಮುದ್ರಣವನ್ನು ಸ್ಥಗಿತಗೊಳಿಸುವ ಕುರಿತು ಅನೇಕ ಸುದ್ದಿಯಾಗಿತ್ತು. ಈ ಸುದ್ದಿಗೆ ಇಂದು ಲೋಕಸಭಾ ಸದನದಲ್ಲಿ ಉತ್ತರಿಸಿರುವ ಕೇಂದ್ರ ಸಚಿವ ಅನುರಾಗ್​ ಠಾಕೂರ್​ಈ ರೀತಿಯ ಯಾವುದೇ ಆಲೋಚನೆ ಸರ್ಕಾರದ ಮುಂದಿಲ್ಲ ಎಂದಿದ್ದಾರೆ. ಬರವಣಿಗೆ ರೂಪದಲ್ಲಿ ಇದಕ್ಕೆ ಉತ್ತರಿಸಿರುವ ಸಚಿವರು, ನೋಟು ಅಮಾನ್ಯೀಕರಣ ಪ್ರಕ್ರಿಯೆಯನ್ನು ಸಾರ್ವಜನಿಕರ ವಹಿವಾಟಿನ ಸರಳಗೊಳಿಸಲು ಆರ್​ಬಿಐ ಸಮಾಲೋಚನೆ ನಡೆಸಿ 2000 ನೋಟನ್ನು ಚಲಾವಣೆಗೆ ತರುವ ತೀರ್ಮಾನ ಕೈಗೊಳ್ಳಲಾಗಿತ್ತು. ಹೀಗಾಗಿ 2000 ರೂಪಾಯಿಗಳ ನೋಟು ಮುದ್ರಣ ಸ್ಥಗಿತಗೊಳಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮುದ್ರಣಾಲಯಗಳಲ್ಲಿಯೂ ಸೂಚನೆ ನೀಡಿಲ್ಲ ಎಂದರು. ಇದೇ ವೇಳೆ 2019ರ ಮಾರ್ಚ್​ನಲ್ಲಿ 32,910 ಲಕ್ಷ ನೋಟುಗಳು ಪ್ರಸರಣವಾಗಿದ್ದರೆ, ಮಾರ್ಚ್​ 31, 2020ರಲ್ಲಿ 27,398 ನೋಟುಗಳು ವಹಿವಾಟಾಗಿವೆ ಎಂದರು.

ಮಾರ್ಚ್​ನಲ್ಲಿ  ದೇಶದಾದ್ಯಂತ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿತ್ತು. ಈ ದೃಷ್ಟಿಯಿಂದ ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ ತಾತ್ಕಲಿಕವಾಗಿ ನೋಟುಗಳ ಮುದ್ರಣ ನಿಲ್ಲಿಸುವುದಾಗಿ ತಿಳಿಸಿತ್ತು ಎಂದು ಸ್ಪಷ್ಟನೆ ನೀಡಿದರು.

ಇದನ್ನು ಓದಿ: ಪ್ರಧಾನಿ ಹುಟ್ಟುಹಬ್ಬ ಸಂಭ್ರಮಾಚರಣೆ ವೇಳೆ ಸ್ಪೋಟಗೊಂಡ ಹೈಡ್ರೋಜನ್ ಬಲೂನ್; ಅನೇಕ ಮಂದಿಗೆ ಗಾಯ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾರ್ಗಸೂಚಿಯಂತೆ ಹಂತ ಹಂತವಾಗಿ ನೋಟುಗಳ ಮುದ್ರಣಾ ಪ್ರಾರಂಭಿಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್​ ನೋಟ್​ ಮುದ್ರಣ್​ ಪ್ರೈವೇಟ್​ ಲಿಮಿಟೆಡ್​ ಕಳೆದ ಮಾರ್ಚ್​ 23ರಿಂದ ಮೇ 3ರವರೆಗೆ ನೋಟು ಮುದ್ರಣವನ್ನು ಸ್ಥಗಿತಗೊಳಿಸಿತ್ತು. ಮೇ.4ರಿಂದ ಇದು ಕಾರ್ಯಾರಂಭ ಮಾಡಿದೆ ಎಂದು ತಿಳಿಸಿದರು.

ಲಾಕ್​ಡೌನ್​ನಿಂದಾಗಿ ಕೆಲಕಾಲ ಹಣದ ನೋಟು, ಚಿಲ್ಲರೆ, ಬ್ಯಾಂಕ್​ ಪುಸ್ತಕ ಸೇರಿದಂತೆ ಹಲವು ಮುದ್ರಣಗಳನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಈಗ ಹಂತ ಹಂತವಾಗಿ ಇವು ಪುನರ್​ ಆರಂಭಗೊಂಡಿದೆ.
Published by: Seema R
First published: September 19, 2020, 8:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories