Modi New Cabinet: ಮೋದಿ ಸಂಪುಟ ಸೇರಲಿರುವ ಯುವ ಸಂಸದನ ಮೇಲೆ ಎಲ್ಲರ ಕಣ್ಣು; ಯಾರು ಆತ?

ಸಂಪುಟ ವಿಸ್ತರಣೆಗೂ ಮುನ್ನ ನಾಳೆ ಬೆಳಗ್ಗೆ 11 ಗಂಟೆಗೆ ಪ್ರಧಾನಿ ಮೋದಿ ಕ್ಯಾಬಿನೆಟ್​ ಸಭೆ ನಡೆಸಲಿದ್ದಾರೆ.

ನರೇಂದ್ರ ಮೋದಿ.

ನರೇಂದ್ರ ಮೋದಿ.

 • Share this:
  ನವದೆಹಲಿ (ಜು. 6): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಕಾಲ ಕೂಡಿ ಬಂದಿದೆ. ನಾಳೆ ಸಂಜೆ ನೂತನ ಸಚಿವರು ಸಂಪುಟ ಸೇರಲಿರುವುದು ಖಾತ್ರಿಯಾಗಿದೆ. ಕೋವಿಡ್​ ನಿಯಮಾವಳಿ ಅನುಸಾರವಾಗಿ ನಾಳೆ ಸಂಜೆ ರಾಷ್ಟ್ರಪತಿ ಭವನದಲ್ಲಿ ನೂತನ ಸಚಿವರು ಪ್ರಮಾಣವಚನ ಸ್ವೀಕರ ನಡೆಸಲಿದ್ದಾರೆ. 2019ರಲ್ಲಿ ಎರಡನೇ ಬಾರಿ ಅಸ್ತಿತ್ವಕ್ಕೆ ಬಂದ ಎನ್​ಡಿಎ ಸರ್ಕಾರ ಎರಡನೇ ಬಾರಿ ಸಂಪುಟ ವಿಸ್ತರಣೆ ನಡೆಸಲಾಗುತ್ತಿದೆ. ಕೇಂದ್ರ ಸಂಪುಟದಲ್ಲಿ ಗರಿಷ್ಠ 81 ಸಚಿವರು ಸ್ಥಾನ ಪಡೆಯಬಹುಗಾಗಿದೆ. ಪ್ರಸ್ತುತ ಕೇಂದ್ರ ಸಂಪುಟದಲ್ಲಿ 53 ಜನ ಸಚಿವರಿದ್ದು, ಇನ್ನು 28 ಸ್ಥಾನಗಳು ಖಾಲಿ ಇವೆ.
  ಈ ಬಾರಿ ಸಂಪುಟದಲ್ಲಿ ಮೋದಿ ಸರ್ಕಾರ ಹೊಸಬರು, ಯುವಕರು, ಮಹಿಳೆಯರು, ಹಿಂದುಳಿದ ವರ್ಗ ಮತ್ತು ಬುಡಕಟ್ಟು ಸಮುದಾಯದ ಸಂಸದರಿಗೆ ಮಣೆಹಾಕುವ ಸಾಧ್ಯತೆ ಇದೆ. ಈ ಮೂಲಕ ಎಲ್ಲಾ ಸಮುದಾಯಗಳಿಗೆ ಪ್ರಾತಿನಿದ್ಯ ನೀಡುವುದು ಸರ್ಕಾರ ಉದ್ದೇಶವಾಗಿದೆ.

  ಸಂಪುಟ ವಿಸ್ತರಣೆ ಕಾರ್ಯಕ್ಕೂ ಮುನ್ನ ಪ್ರಧಾನಿ ಮೋದಿ ಕ್ಯಾಬಿನೆಟ್​ ಸಭೆ ನಡೆಸಲಿದ್ದಾರೆ. ನೂತನ ಸಚಿವರ ಆಗಮನಕ್ಕೂ ಮುನ್ನ ಈ ಸಭೆ ನಡೆಯಲಿದ್ದು, ನಾಳೆ 11ಕ್ಕೆ ಈ ಸಭೆ ನಡೆಯಲಿದೆ.

  ಮೋದಿ ಸಂಪುಟ ಸೇರಲಿರುವ ಎಲ್ಲಾ ಸಂಸದರಿಗೂ ಈಗಾಗಲೇ ಈಗಾಗಲೇ ಮಾಹಿತಿ ನೀಡಲಾಗಿದೆ. ಹೊಸದಾಗಿ ಸೇರ್ಪಡೆಗೊಳ್ಳುವವರೆಲ್ಲರೂ ಇಂದು ರಾತ್ರಿ ರಾಷ್ಟ್ರ ರಾಜಧಾನಿಯನ್ನು ತಲುಪುವ ನಿರೀಕ್ಷೆಯಿದೆ. ಅಲ್ಲದೇ ಅವರೆಲ್ಲಾ ಸಚಿವ ಸಂಪುಟ ವಿಸ್ತರಣೆ ನಡೆಯುವ ಬೆಳಿಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಲಿದ್ದಾರೆ.

  ಮೂಲಗಳ ಪ್ರಕಾರ ಈ ಬಾರಿ ಯುವಕರಿಗೆ ಅತಿ ಹೆಚ್ಚಿನ ಮಣೆ ನೀಡಲಾಗಿದೆ. ಈ ಮೂಲಕ ಯುವ ಜನತೆಗೆ ಹೆಚ್ಚಿನ ಅವಕಾಶ ನೀಡುವ ಮೋದಿ ಆಶಯಕ್ಕೆ ಬದ್ಧವಾಗಿ ಈ ಸಂಪುಟ ವಿಸ್ತರಣೆ ನಡೆಯಲಿದೆ. ಅದರಲ್ಲೂ ಇತಿಹಾಸದಲ್ಲೇ ಮೊದಲು ಎಂಬಂತೆ ಅತ್ಯಂತ ಯುವ ಸಂಸದ ಕೇಂದ್ರ ಸಂಪುಟ ಸೇರಲಿದ್ದಾರೆ ಎನ್ನಲಾಗಿದ್ದು, ಯಾರದು ಎಂಬ ಕುತೂಹಲ ಎಲ್ಲೆಡೆ ಮೂಡಿದೆ.

  ಇದನ್ನು ಓದಿ: ರಾತ್ರೋ ರಾತ್ರಿ ಅಫ್ಘಾನ್​ನ​ ಬಾಗ್ರಾಮ್ ವಾಯುನೆಲೆ​ ತೊರೆದ ಅಮೆರಿಕ ಸೇನಾಪಡೆ; ಕಾರಣವೇನು?

  ಸಂಪುಟ ಸೇರಲಿರುವ ನೂತನ ಸಚಿವರ ಶೈಕ್ಷಣಿಕ ಅರ್ಹತೆ ಮೇಲೂ ಹೆಚ್ಚಿನ ಗಮನ ಹರಿಸಲಾಇದೆ. ಈ ಮೂಲಕ ಉತ್ತಮ ಆಡಳಿತ ನೀಡುವುದು ಎನ್​ಡಿಎ ಸರ್ಕಾರದ ಮುಖ್ಯ ಉದ್ದೇಶ ಎಂದು ತಿಳಿಸಲಾಗಿದೆ.  ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಕೂಡ ಈ ಸಂಪುಟ ವಿಸ್ತರಣೆ ಕಾರ್ಯ ನಡೆಯಲಿದ್ದು, ಉತ್ತರ ಪ್ರದೇಶ, ಬಿಹಾರ, ಕರ್ನಾಟಕ, ಪಶ್ಚಿಮ ಬಂಗಾಳದ ನಾಯಕರು ಸಂಪುಟ ಸೇರುವ ನಿರೀಕ್ಷೆ ಇದೆ.

  ಇದನ್ನು ಓದಿ: ಕೋವಿಡ್​ಗೆ ಪೋಷಕರ ಕಳೆದುಕೊಂಡ ಮಕ್ಕಳು; ಧಾರವಾಡದಲ್ಲಿ ನೂರಾರು ಕಂದಮ್ಮಗಳು ತಬ್ಬಲಿ

  2019 ರ ಮಾರ್ಚ್‌ನಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ  ಜ್ಯೋತಿರದಿತ್ಯ ಸಿಂಧಿಯಾ,  ಹಿಮಾಂತ ಬಿಸ್ವಾ ಶರ್ಮಾ ಅವರಿಗೆ ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಮೋಡ್ ಅವರಂತೆ ಸಂಪುಟ ಸೇರಲಿದ್ದಾರೆ . ಇನ್ನು ಕರ್ನಾಟಕದಿಂದ ಚಿತ್ರದುರ್ಗ ಸಂಸದ ಎ ನಾರಾಯಣ ಸ್ವಾಮಿ ಸಂಪುಟ ಸೇರುವುದು ಖಚಿತವಾಗಿದೆ. ಬಿಜೆಪಿ ವರಿಷ್ಠರಿಂದ ನಾರಾಯಣ ಸ್ವಾಮಿ ಅವರಿಗೆ ಬುಲಾವ್​ ಬಂದಿದ್ದು, ಸಂಸದರು ದೆಹಲಿಗೆ ಹಾರಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
  Published by:Seema R
  First published: