DA hike: ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆ; ಮತ್ತೆ ಶೇ 3ರಷ್ಟು ಡಿಎ ಹೆಚ್ಚಳ

ಕಳೆದ ಮೂರು ತಿಂಗಳ ಹಿಂದೆ ಜುಲೈನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ  ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಡಿಎ ಮತ್ತು ಡಿಆರ್ ಅನ್ನು ಶೇ 17  ರಿಂದ  ಶೇ 28 ಕ್ಕೆ ಹೆಚ್ಚಿಸಿತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನವದೆಹಲಿ  (ಅ. 21): ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ (central government Employees and pensioner ) ಕೇಂದ್ರ ಸರ್ಕಾರ ದೀಪಾವಳಿಯ ಬಂಪರ್​ ಉಡುಗೊರೆ ನೀಡಿದೆ. ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೇಕಡ 3 ರಷ್ಟು ಡಿಎ ಭತ್ಯೆ (Dearness Allowance) ಹೆಚ್ಚಿಸಲು ಕೇಂದ್ರ ಸರ್ಕಾರದ ಕ್ಯಾಬಿನೆಟ್​ ಸಮಿತಿ (cabinet committee ) ಅನುಮೋದಿಸಿದೆ. ಕಳೆದ ಮೂರು ತಿಂಗಳ ಹಿಂದೆ ಜುಲೈನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ  ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಡಿಎ (DA) ಮತ್ತು ಡಿಆರ್ (Dearness Relief) ಅನ್ನು ಶೇ 17  ರಿಂದ  ಶೇ 28 ಕ್ಕೆ ಹೆಚ್ಚಿಸಿತು. ಈ ಹೆಚ್ಚಳದ  ಡಿಎ ಮತ್ತು ಡಿಆರ್ ಜುಲೈ 1 ರಿಂದ ಜಾರಿಗೆ ಬಂದಿತು. ಈಗ ಮತ್ತೊಮ್ಮೆ ಶೇಕಡ 3 ರಷ್ಟು ಡಿಎ ಹೆಚ್ಚಿಸಿ ಆದೇಶ ನೀಡಲಾಗಿದೆ. ಈ ಮೂಲಕ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ.

    ಕೋವಿಡ್ -19 ಏಕಾಏಕಿ ಜನವರಿ 2020 ರಿಂದ ಜೂನ್ 2021 ರವರೆಗೆ ಡಿಎ ಹೆಚ್ಚಳವನ್ನು 2020 ರಲ್ಲಿ ಸ್ಥಗಿತಗೊಳಿಸಲಾಗಿತು. ಈ ಹಿನ್ನಲೆ ಈಗ ಮತ್ತೊಮ್ಮೆ ಡಿಎ ಹೆಚ್ಚಳಕ್ಕೆ ಕೇಂದ್ರ ಮುಂದಾಗಿದೆ.ಇದಾದ ಬಳಿಕ ಆಗಸ್ಟ್ 2021 ರಿಂದ ಕೇಂದ್ರ ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆಯನ್ನು (HRA) ಕೇಂದ್ರ ಸರ್ಕಾರ ಹೆಚ್ಚಿಸಿತು.

    ಡಿಎ ಜೊತೆಗೆ ಎಚ್​ಆರ್​ಎ ಹೆಚ್ಚಿಸಿದ್ದ ಕೇಂದ್ರ

    ಕೇಂದ್ರ ಸರ್ಕಾರಿ ನೌಕರರ ಡಿಎ ಮತ್ತು ಎಚ್‌ಆರ್‌ಎಯನ್ನು ಅವರ ಮೂಲ ವೇತನದ ಆಧಾರದಲ್ಲಿ ಹೆಚ್ಚಿಸಬೇಕು ಎಂದು ಕೇಂದ್ರ ಆದೇಶಿಸಿತು. ಕೇಂದ್ರವು ರೂಪಿಸಿದ ನಿಯಮಗಳ ಪ್ರಕಾರ, ಡಿಎ ನೌಕರರ ಮೂಲ ವೇತನದ 25 ಪ್ರತಿಶತವನ್ನು ದಾಟಿದಾಗ ಎಚ್‌ಆರ್‌ಎ ಶೇಕಡಾ 3 ರಷ್ಟು ಹೆಚ್ಚಾಗುತ್ತದೆ. ಡಿಎ  ಶೇ 25ರಷ್ಟು ಮೀರಿದಾಗ, ಎಚ್‌ಆರ್‌ಎ ಸ್ವಯಂಚಾಲಿತವಾಗಿ ಪರಿಷ್ಕರಿಸಲ್ಪಡುತ್ತದೆ ಎಂದು 2017 ರಲ್ಲಿ ವೆಚ್ಚ ಇಲಾಖೆ ಆದೇಶ ಹೊರಡಿಸಿತ್ತು.

    ಇದನ್ನು ಓದಿ: ವೈಮಾನಿಕ ಸಮೀಕ್ಷೆ ನಡೆಸಿದ ಅಮಿತ್​ ಶಾ; ಕೇದಾರನಾಥ​, ಗಂಗೋತ್ರಿ ಯಾತ್ರೆ ರದ್ದು

    ಗೊಂದಲ ನಿವಾರಣೆ

    ಡಿಎ ಹೆಚ್ಚಳದಲ್ಲಿ ಕೇಂದ್ರ ಸರ್ಕಾರಿ ನೌಕರರು ಸಾಕಷ್ಟು ಗೊಂದಲಕ್ಕೆ ಒಳಗಾಗಿದ್ದಾರೆ. ಕಾರಣ ಜನವರಿ 2020 ರಿಂದ ಜೂನ್ 2021 ರ ನಡುವೆ ನಿವೃತ್ತರಾದ ಕೇಂದ್ರ ಸರ್ಕಾರಿ ಇದು ಅನ್ವಯವಾಗುತ್ತದೊ ಇಲ್ಲ ಎಂಬ ಗೊಂದಲದಲ್ಲಿದ್ದಾರೆ. ಕಾರಣ ಡಿಎ ಅವರ ಗ್ರಾಚ್ಯುಟಿ, ರಜೆ ಎನ್ಕಾಶ್ಮೆಂಟ್ ಮತ್ತು ಇತರ ನಿವೃತ್ತಿ ಪ್ರಯೋಜನಗಳ ಲೆಕ್ಕಾಚಾರಕ್ಕೆ ಅನ್ವಯಿಸುತ್ತದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಜನವರಿ 2020 ರಿಂದ ಜೂನ್ 2021 ರವರೆಗೆ ನಿವೃತ್ತರಾದ ಕೇಂದ್ರ ಸರ್ಕಾರಿ ನೌಕರರಿಗೆ ಗ್ರಾಚ್ಯುಟಿ ಮತ್ತು ರಜೆ ಮರು ಪಡೆಯುವ ಲೆಕ್ಕಾಚಾರಕ್ಕೆ ಸಂಬಂಧಿಸಿದ ವಿವರಗಳನ್ನು ನೀಡಿದೆ. ಸರ್ಕಾರವು ಡಿಎ ಮೊತ್ತವನ್ನು ಕೇಂದ್ರಕ್ಕೆ ಸೂಚಿಸಿದೆ ಗ್ರಾಚ್ಯುಟಿ ಮತ್ತು ರಜೆ ಲೆಕ್ಕಾಚಾರಕ್ಕೆ ಪರಿಗಣಿಸುತ್ತದೆ.

    ಇದನ್ನು ಓದಿ: ತಾಂತ್ರಿಕ ದೋಷದಿಂದ IAF Mirage 2000 ಪತನ;. ಪೈಲಟ್​ ರಕ್ಷಣೆ

    ಲೆಕ್ಕಾಚಾರ ಹೇಗೆ?
    7 ನೇ ವೇತನ ಆಯೋಗದ ಪ್ರಕಾರ, ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನ 18,000 ರೂ ಇದ್ದರೆ, ಕೇಂದ್ರ ಸರ್ಕಾರಿ ನೌಕರರು 3060 ರೂ.ಗಳ ಡಿಎ ಅನ್ನು 2021 ರ ಜೂನ್ ವರೆಗೆ 17 ಶೇಕಡಾ ದರದಲ್ಲಿ ಪಡೆಯುತ್ತಾರೆ. ಜುಲೈ 2021 ರಿಂದ, ಕೇಂದ್ರ ಸರ್ಕಾರಿ ನೌಕರರು ಶೇ 28ರಷ್ಟು ಡಿಎ ಪ್ರಕಾರ ಪ್ರತಿ ತಿಂಗಳು 5040 ರೂ. ಇದರರ್ಥ ನೌಕರರ ಮಾಸಿಕ ವೇತನದಲ್ಲಿ ರೂ 1980 ಹೆಚ್ಚಳ ಪಡೆಯಲಿದ್ದಾರೆ. ಇದೇ ಲೆಕ್ಕಚಾರದ ಅನ್ವಯ, ಪಿಂಚಣಿದಾರರ ಪಿಂಚಣಿಯನ್ನು ಸಹ ನಿರ್ಧರಿಸಲಾಗುವುದು.
    Published by:Seema R
    First published: