Union Budget 2019 | ಕೇಂದ್ರ ಬಜೆಟ್​ ಯೋಜನೆಗಳು ಜನಪರವಾಗಿಯೇ ಇದೆ ಆದರೆ, ಅನುಷ್ಠಾನವೇ ಅನುಮಾನ?

ಎರಡು ಸಾವಿರದಂತೆ ವರ್ಷಕ್ಕೆ ಮೂರು ಬಾರಿ ಫಲಾನುಭವಿ ರೈತರ ಖಾತೆಗೆ ಹಣ ಬಂದು ಬೀಳಲಿದೆ. ಈ ಯೋಜನೆಯ ಪ್ರಕಾರ 12 ಕೋಟಿ ರೈತರಿಗೆ ಪ್ರತಿ ತಿಂಗಳಿಗೆ 500 ರೂ. ಸಿಗಲಿದೆ. ಇದರಿಂದ ಯಾವ ರೈತರಿಗೆ ಎಷ್ಟು ಪ್ರಯೋಜನವಾಗಲಿದೆ ಎಂಬುದನ್ನು ಸರ್ಕಾರವೇ ಸ್ಪಷ್ಟಪಡಿಸಬೇಕು.

HR Ramesh | news18
Updated:February 1, 2019, 5:44 PM IST
Union Budget 2019 | ಕೇಂದ್ರ ಬಜೆಟ್​ ಯೋಜನೆಗಳು ಜನಪರವಾಗಿಯೇ ಇದೆ ಆದರೆ, ಅನುಷ್ಠಾನವೇ ಅನುಮಾನ?
ಕೇಂದ್ರ ಬಜೆಟ್​ 2019
HR Ramesh | news18
Updated: February 1, 2019, 5:44 PM IST
- ರಮೇಶ್​ ಹಂಡ್ರಂಗಿ

ಬೆಂಗಳೂರು: ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರದ ಕೊನೇ ಬಜೆಟ್​ ಶುಕ್ರವಾರ ಮಂಡನೆಯಾಗಿದೆ. ಲೋಕಸಭೆ ಚುನಾವಣೆಗೆ ಇನ್ನು ಮೂರು ತಿಂಗಳು ಬಾಕಿ ಇರುವಾಗ ಕೇಂದ್ರ ಸರ್ಕಾರ ಮಂಡಿಸುವ ಈ ಬಜೆಟ್​ ಮೇಲೆ ಸಾಕಷ್ಟು ಜನಪರ ಯೋಜನೆಗಳು ಘೋಷಣೆಯಾಗುವ ನಿರೀಕ್ಷೆಯಂತು ಇತ್ತು. ಅದರಂತೆ ಮೋದಿ ಸರ್ಕಾರ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಕೆಲವು ಜನಪ್ರಿಯ ಯೋಜನೆಗಳನ್ನು ಪ್ರಕಟಿಸಿದೆ. ಆದರೆ, ಅವುಗಳು ಅನುಷ್ಠಾನಗೊಳ್ಳಬೇಕಾದರೆ, ಮತ್ತೆ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರಬೇಕು!

ರೈತರು, ಮಧ್ಯಮ ವರ್ಗದ ವೇತನದಾರರು, ಆಶಾ ಕಾರ್ಯಕರ್ತೆಯರು ಹಾಗೂ ಅಸಂಘಟಿತ ವಲಯದ ಜನರನ್ನು ಗುರಿಯಾಗಿಸಿಕೊಂಡು ಹಣಕಾಸು ಸಚಿವ ಪಿಯೂಷ್​ ಗೋಯಲ್ ಬಜೆಟ್​ ಮಂಡಿಸಿದ್ದಾರೆ. ಆದರೆ, ಚುನಾವಣೆಗೆ ಇನ್ನು ಮೂರು ತಿಂಗಳು ಬಾಕಿ ಇರುವಾಗ ಮಂಡಿಸಿರುವ ಈ ಬಜೆಟ್​ನ ಯೋಜನೆಗಳು ಅನುಷ್ಠಾನ ಮಾಡಬೇಕಿರುವುದು ಮುಂದೆ ಬರುವ ಸರ್ಕಾರ. ಹಾಗಾಗಿ ಇಲ್ಲಿ ಪ್ರಕಟಗೊಂಡ ಎಲ್ಲ ಯೋಜನೆಗಳು ಜಾರಿಯಾಗುವುದು ಬಹುತೇಕ ಅನುಮಾನವಾಗಿದೆ.

ಇದು ಮುಂದಿನ ಮೂರು ತಿಂಗಳವರೆಗೆ ಸರ್ಕಾರ ನಡೆಸಲು ಬೇಕಾದ ಖರ್ಚು ವೆಚ್ಚದ ಅನುಮೋದನೆಗಾಗಿ ಮಂಡಿಸಿದ ಲೇಖಾನುದಾನ ಹಾಗೂ ಇದೊಂದು ಚುನಾವಣಾ ಬಜೆಟ್​ ಎಂದು ವಿರೋಧ ಪಕ್ಷಗಳ ನಾಯಕರು ಬಜೆಟ್​ ಬಗ್ಗೆ ಟೀಕೆ ಮಾಡಿದ್ದಾರೆ.

ಸಣ್ಣ ರೈತರಿಗೆ ತಿಂಗಳಿಗೆ 500 ರೂ.!

ಐದು ಎಕರೆಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ಸಣ್ಣ ರೈತರಿಗೆ ವರ್ಷಕ್ಕೆ ಆರು ಸಾವಿರ ರೂಪಾಯಿಯನ್ನು ಅವರ ಖಾತೆಗೆ ನೇರವಾಗಿ ಪಾವತಿಸುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್​ ಯೋಜನೆಯನ್ನು ಘೋಷಣೆ ಮಾಡಲಾಗಿದೆ. ಅದರಂತೆ ಯೋಜನೆಯಡಿ 12 ಕೋಟಿ ರೈತರು ಇದರ ಲಾಭ ಪಡೆದುಕೊಳ್ಳಲಿದ್ದಾರೆ. ಎರಡು ಸಾವಿರದಂತೆ ವರ್ಷಕ್ಕೆ ಮೂರು ಬಾರಿ ಫಲಾನುಭವಿ ರೈತರ ಖಾತೆಗೆ ಹಣ ಬಂದು ಬೀಳಲಿದೆ. ಈ ಯೋಜನೆಯ ಪ್ರಕಾರ 12 ಕೋಟಿ ರೈತರಿಗೆ ಪ್ರತಿ ತಿಂಗಳಿಗೆ 500 ರೂ. ಸಿಗಲಿದೆ. ಇದರಿಂದ ಯಾವ ರೈತರಿಗೆ ಎಷ್ಟು ಪ್ರಯೋಜನವಾಗಲಿದೆ ಎಂಬುದನ್ನು ಸರ್ಕಾರವೇ ಸ್ಪಷ್ಟಪಡಿಸಬೇಕು.
Loading...

ಮಧ್ಯಮವರ್ಗದ ವೇತನದಾರರಿಗೆ ಬಂಪರ್ ಗಿಫ್ಟ್​

ಮಧ್ಯಮ ವರ್ಗದ ವೇತನದಾರರಿಗೆ ಈ ಬಜೆಟ್​ ಬಂಪರ್​ ಗಿಫ್ಟ್​ ನೀಡಿದೆ. ವಾರ್ಷಿಕವಾಗಿ 2.5 ಲಕ್ಷ ವೇತನ ಪಡೆಯುತ್ತಿದ್ದವರು ಈ ಹಿಂದೆ ತೆರಿಗೆ ಪಾವತಿಸಬೇಕಿತ್ತು. ಈಗ ಇದನ್ನು 5 ಲಕ್ಷಕ್ಕೆ ವಿಸ್ತರಿಸಲಾಗಿದೆ. ಅಂದರೆ ವಾರ್ಷಿಕ 5 ಲಕ್ಷದವರೆಗೆ ಸಂಬಳ ಪಡೆಯುವವರು ಇನ್ನು ಮುಂದೆ ತೆರಿಗೆ ಕಟ್ಟುವ ಅವಶ್ಯಕತೆ ಇಲ್ಲ. ಇದರಿಂದಾಗಿ 5 ಲಕ್ಷದವರೆಗೆ ಸಂಬಳ ಪಡೆಯುವವರಿಗೆ ಸುಮಾರು 13,000 ರೂ.ತೆರಿಗೆ ಉಳಿತಾಯವಾಗಲಿದೆ. 7.5 ಲಕ್ಷದವರೆಗೆ ಸಂಬಳ ಪಡೆಯುವವರು ಈ ಹಿಂದೆ 65,000 ರೂ. ತೆರಿಗೆ ಕಟ್ಟುತ್ತಿದ್ದರು. ಇನ್ನು ಮುಂದೆ ಅವರು 49,920 ತೆರಿಗೆ ಕಟ್ಟಬೇಕಾಗುತ್ತದೆ. ಇದರಿಂದ ಅವರಿಗೆ ಸುಮಾರು 16 ಸಾವಿರ ಉಳಿತಾಯವಾಗಲಿದೆ. 10 ಲಕ್ಷದವರೆಗೆ ಸಂಬಳ ಪಡೆಯುವವರು ಈ ಹಿಂದೆ 1,17,000 ತೆರಿಗೆ ಕಟ್ಟಬೇಕಿತ್ತು. ಈಗ 99,920 ರೂ. ಕಟ್ಟಬೇಕು. ಇದರಿಂದ ಈ ವರ್ಗದವರಿಗೆ ಸುಮಾರು 17  ಸಾವಿರ ಉಳಿತಾಯವಾಗಲಿದೆ. 20 ಲಕ್ಷದವರೆಗೆ ಸಂಬಳ ಪಡೆಯುವವರು ಈ ಹಿಂದೆ 4,29,000 ತೆರಿಗೆ ಕಟ್ಟಬೇಕಿತ್ತು. ಈಗ 4,02,000 ಕಟ್ಟಬೇಕಾಗುತ್ತದೆ. ಇದರಿಂದ 27 ಸಾವಿರ ಉಳಿತಾಯವಾಗಲಿದೆ. ಈ ಬಜೆಟ್​ ಮಧ್ಯಮವರ್ಗದ ತೆರಿಗೆದಾರರಿಗೆ ಭರ್ಜರಿ ಸಿಹಿಯನ್ನು ನೀಡಿದೆ.

ಅಸಂಘಟಿತ ವಲಯದ ಕಾರ್ಮಿಕರಿಗೆ ಸಿಹಿಸುದ್ದಿ

ಇನ್ನು ಅಸಂಘಟಿತ ವಲಯದ ಕಾರ್ಮಿಕರಿಗೂ ಬಂಪರ್​ ಕೊಡುಗೆ ನೀಡಿರುವ ಕೇಂದ್ರ ಸರ್ಕಾರ ಅವರಿಗಾಗಿ ಪ್ರಧಾನಮಂತ್ರಿ ಶ್ರಮಯೋಗಿ ಮಂದಾನ್​ ಯೋಜನೆ ಘೋಷಿಸಿದೆ. ಯೋಜನೆಯಡಿ ತಿಂಗಳಿಗೆ 15 ಸಾವಿರ ಸಂಬಳ ಪಡೆಯುವ ಕಾರ್ಮಿಕರು ನಿವೃತ್ತಿ ನಂತರ ಪಿಂಚಣಿ ಪಡೆಯಲು ಅನುಕೂಲ ಮಾಡಿಕೊಡಲಾಗಿದೆ. ಅಸಂಘಟಿತ ವಲಯದ ಕಾರ್ಮಿಕರು ಪ್ರತಿ ತಿಂಗಳು ನೂರು ರೂ.ಕಟ್ಟುವ ಮೂಲಕ ಯೋಜನೆಯಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. 60 ವರ್ಷದ ನಂತರ ಇವರಿಗೆ ಪ್ರತಿತಿಂಗಳು 3 ಸಾವಿರ ರೂ.ಪಿಂಚಣಿ ನೀಡುವ ಯೋಜನೆ ಇದಾಗಿದೆ. ಗ್ರಾಚ್ಯುಟಿಯನ್ನು 10 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಸೇನೆಗೆ ಐತಿಹಾಸಿಕ ಅನುದಾನ

ಈ ಬಜೆಟ್​ನಲ್ಲಿ ದೇಶದ ಬಜೆಟ್​ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಾರತೀಯ ಸೇನೆಗೆ 3 ಲಕ್ಷ ಕೋಟಿ ಮೀಸಲು ಇಡಲಾಗಿದೆ. 2019-20 ಸಾಲಿನ ರಕ್ಷಣಾ ವೆಚ್ಚಕ್ಕೆ ಇಷ್ಟೊಂದು ದೊಡ್ಡ ಮೊತ್ತವನ್ನು ಘೋಷಣೆ ಮಾಡಿರುವುದು ಇದೇ ಮೊದಲು.

ರಕ್ಷಣಾ ಕ್ಷೇತ್ರವನ್ನು ಬಲಪಡಿಸಲು ಮತ್ತು ಸುಧಾರಣೆಗೊಳಿಸಲು ಪ್ರಸಕ್ತ ಸಾಲಿನಲ್ಲಿ 3 ಲಕ್ಷ ಕೋಟಿ ಮೀಸಲು ಇಡಲಾಗಿದೆ. ಅಗತ್ಯಬಿದ್ದರೆ ಮತ್ತಷ್ಟು ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಪಿಯೂಷ್ ಗೋಯಲ್​ ಹೇಳಿದ್ದಾರೆ.

ಇದನ್ನು ಓದಿ: ಚುನಾವಣೆಗೆ ಮುಂಚೆ ಮತದಾರರಿಗೆ ಕೇಂದ್ರದಿಂದ ಲಂಚ: ಖರ್ಗೆ ಖಾರದ ಪ್ರತಿಕ್ರಿಯೆ

ಒಂದೇ ಶ್ರೇಣಿ, ಒಂದೇ ಪಿಂಚಣಿ ಯೋಜನೆಗೆ ಈಗಾಗಲೇ 35 ಸಾವಿರ ಕೋಟಿ ಹಣವನ್ನು ಮೀಸಲಿಡಲಾಗಿದೆ. ಈ ಯೋಜನೆಗೆ ಹಿಂದಿನ ಕಾಂಗ್ರೆಸ್​ ಸರ್ಕಾರ ಕೇವಲ 500 ಕೋಟಿ ತೆಗೆದಿಟ್ಟಿತ್ತು. ಆದರೂ ಅದನ್ನು ಜಾರಿಗೊಳಿಸಿರಲಿಲ್ಲ. 40 ವರ್ಷಗಳ ಬಳಿಕ ಪ್ರಧಾನಿ ಮೋದಿ ಅವರು ಈ ಸಮಸ್ಯೆಯನ್ನು ಬಗೆಹರಿಸಿದ್ದಾರೆ ಎಂದು ಗೋಯಲ್​ ಕಾಂಗ್ರೆಸ್​ ಪಕ್ಷವನ್ನು ಟೀಕಿಸಿದರು. ಉಳಿದಂತೆ ರೈಲ್ವೆ ಇಲಾಖೆಗೆ 1.6 ಲಕ್ಷ ಕೋಟಿ ಮೀಸಲಿಡಲಾಗಿದೆ.

ಗೋವುಗಳ ರಕ್ಷಣೆಗಾಗಿ ಹಾಗೂ ಅದರ ಉತ್ಪಾದನೆ ಹೆಚ್ಚಳಕ್ಕಾಗಿ ರಾಷ್ಟ್ರೀಯ ಕಾಮಧೇನು ಆಯೋಗವನ್ನು ರಚನೆ ಮಾಡಲಾಗುವುದು. ಈ ಮೂಲಕ ಹೈನೋತ್ಪನ್ನ ಹೆಚ್ಚಳಕ್ಕೆ ಒತ್ತು ನೀಡಲಾಗುವುದು. ಈ ಮೂಲಕ ಪಶುಪಾಲಕರ ಅಭಿವೃದ್ಧಿ ಮಾಡಲಾಗುವುದು.  ಪಶುಗಾರಿಕೆ ಉತ್ಪಾದನೆಗಾಗಿ  ಕಿಸಾನ್​ ಕ್ರೆಡಿಟ್​ ಕಾರ್ಡ್​ ಯೋಜನೆ ಅಡಿ ಅವರಿಗೆ ಶೇ.2 ರಷ್ಟು ಬಡ್ಡಿ ವಿನಾಯಿತಿ ನೀಡಲಾಗುವುದು. ಇದರ ಜೊತೆಗೆ ಸರಿಯಾದ ಸಮಯಕ್ಕೆ ಲೋನ್​ ಕಟ್ಟಿದಲ್ಲಿ ಅವರಿಗೆ ಶೇ. 3 ರಷ್ಟು ಸಬ್ಸಿಡಿ ನೀಡಲಾಗುವುದು.

First published:February 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626