Union Budget 2022: ಮಹಿಳಾ ಸಬಲೀಕರಣಕ್ಕೆ ಒತ್ತು; ಬಜೆಟ್ ನಲ್ಲಿ ಮಹಿಳೆಯರಿಗೆ ಏನು ಲಾಭ-ನಷ್ಟ?

ಸರ್ಕಾರವು ಮಹಿಳೆಯರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಪ್ರಾರಂಭಿಸಿದ್ದು, ಇದರ ಜೊತೆಗೆ ಅನೇಕ ಹಳೆಯ ಯೋಜನೆಗಳನ್ನು ಸುಧಾರಿಸಿದೆ. ಮಹಿಳಾ ಸಬಲೀಕರಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ಕೇಂದ್ರ ವಿತ್ತ ಸಚಿವೆ   ನಿರ್ಮಲಾ ಸೀತಾರಾಮನ್​​

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​

  • Share this:
    ನವದೆಹಲಿ (ಫೆ. 1):  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಇಂದು ಪ್ರಸಕ್ತ ಸಾಲಿನ ಬಜೆಟ್​ ಮಂಡಿಸಿದರು. ಬಜೆಟ್ ನಲ್ಲಿ ಜನ ಸಾಮಾನ್ಯರ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. ಇನ್ನು ಈ ಬಜೆಟ್ ಭಾಷಣದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಹಿಳಾ ಸಬಲೀಕರಣಕ್ಕೂ ಒತ್ತು ನೀಡಿದ್ದಾರೆ. ಇದಕ್ಕಾಗಿ ಸರ್ಕಾರವು ಮಹಿಳೆಯರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಪ್ರಾರಂಭಿಸಿದ್ದು, ಇದರ ಜೊತೆಗೆ ಅನೇಕ ಹಳೆಯ ಯೋಜನೆಗಳನ್ನು ಸುಧಾರಿಸಿದೆ. ಮಹಿಳಾ ಸಬಲೀಕರಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

    ಮೂರು ಯೋಜನೆ ಪ್ರಸ್ತಾಪಿಸಿದ ಹಣಕಾಸು ಸಚಿವರು
    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಸಾಧನೆಗಳನ್ನು ಉಲ್ಲೇಖಿಸಿದ ಸಚಿವರು, ದೇಶದ ಮಹಿಳಾ ಶಕ್ತಿಯನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಮಹಿಳೆಯರು ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿಗಾಗಿ 3 ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಮಿಷನ್ ಶಕ್ತಿ, ಮಿಷನ್ ವಾತ್ಸಲ್ಯ ಯೋಜನೆ ಮತ್ತು ಸಕ್ಷಮ್ ಅಂಗನವಾಡಿ ಪೌಷ್ಟಿಕಾಂಶವನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಮೂಲಕ ಮಹಿಳೆಯರು ಮತ್ತು ಮಕ್ಕಳ ಆರೋಗ್ಯಕ್ಕೆ ವಿಶೇಷ ಗಮನ ನೀಡಲಾಗುತ್ತಿದೆ.

    ಮಿಷನ್​ ವಾತ್ಸಲ್ಯ
    ಮಕ್ಕಳ ಕಲ್ಯಾಣಕ್ಕಾಗಿ ಸರ್ಕಾರ ಬಜೆಟ್‌ನಲ್ಲಿ ಮಿಷನ್ ವಾತ್ಸಲ್ಯ ಆರಂಭಿಸಿದೆ. ಸಕ್ಷಮ್ ಅಂಗನವಾಡಿ ಮತ್ತು ಪೋಶನ್ 2.0 ಯೋಜನೆಗಳು ವಾತ್ಸಲ್ಯ ಯೋಜನೆಯನ್ನು ಬಲಪಡಿಸುತ್ತವೆ.

    ಸಕ್ಷಮ ಅಂಗನವಾಡಿ
    ಸಕ್ಷಮ ಅಂಗನವಾಡಿಗಳು ಹೊಸ ತಲೆಮಾರಿನ ಅಂಗನವಾಡಿಗಳಾಗಿವೆ. ಇವುಗಳಲ್ಲಿ ಹಿಂದೆಂದಿಗಿಂತಲೂ ಉತ್ತಮ ಮೂಲಸೌಕರ್ಯ, ಆಡಿಯೋ ವಿಶುಯಲ್​ ಸಾಧನ, ಸ್ವಚ್ಛ ಏಜೆನ್ಸಿಯಂತಹ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಈ ಯೋಜನೆಯ ಅಡಿ 2 ಲಕ್ಷ ಅಂಗನವಾಡಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

    .

    ಇದನ್ನು ಓದಿ: ಕೇಂದ್ರ ಬಜೆಟ್ ನಲ್ಲಿ ರೈತರಿಗೆ ಸಿಕ್ಕಿದ್ದೇನು? ಕೃಷಿ ವಲಯಕ್ಕೆ ಸೇರಿದ ಘೋಷಣೆಗಳು ಇಲ್ಲಿವೆ

    ಸಕ್ಷಮ್​ ಅಂಗನವಾಡಿ
    ಸಮಗ್ರ ಶಿಶು ಅಭಿವೃದ್ಧಿ ಸೇವೆ (ಐಸಿಡಿಎಸ್) ಬದಲಿಗೆ ಸರ್ಕಾರವು ಸಕ್ಷಮ್ ಅಂಗನವಾಡಿ ಮತ್ತು ಪೋಶನ್ 2.0 ಯೋಜನೆಯನ್ನು ಪ್ರಾರಂಭಿಸಿದೆ. ಸಕ್ಷಮ್​​ ಅಂಗನವಾಡಿ ಮತ್ತು ಪೋಷಣೆ 2.0 ಯೋಜನೆಯಡಿ, ಶಿಶುಗಳ ಪೌಷ್ಟಿಕಾಂಶವನ್ನು ಹೆಚ್ಚಿಸುವ ವೆಚ್ಚವನ್ನು ಸರ್ಕಾರವು ಭರಿಸಲಿದೆ. ಈ ಯೋಜನೆಗಳ ಪ್ರಯೋಜನಗಳನ್ನು ಮಕ್ಕಳಿಗೆ ವಿಸ್ತರಿಸಿ ಅದರ ವಿತರಣೆಯನ್ನು ನೀಡುತ್ತದೆ.

    ಇದನ್ನು ಓದಿ: ಶೀಘ್ರದಲ್ಲೇ RBIನಿಂದಲೇ ಡಿಜಿಟಲ್​ ಕರೆನ್ಸಿ ಆರಂಭ, ಜೊತೆಗೆ ಈ ವರ್ಷವೇ 5ಜಿ ಬರಲಿದೆ!

    ಪೋಷಣ್​ ಮಿಷನ್​

    ಪೋಷಣ್ ಮಿಷನ್ 2.0 'ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು' (ICDS), ಅಂಗನವಾಡಿ ಸೇವೆಗಳು, ಪೋಷಣ್ ಅಭಿಯಾನ ಮತ್ತು ಕೆಲವು ಇತರ ಯೋಜನೆಗಳನ್ನು ಒಳಗೊಂಡಿದೆ. ಐಸಿಡಿಎಸ್ ಯೋಜನೆಯಡಿ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಆಹಾರ. ಶಾಲಾಪೂರ್ವ ಶಿಕ್ಷಣ, ಪ್ರಾಥಮಿಕ ಆರೋಗ್ಯ, ಲಸಿಕೆ ಮತ್ತು ಆರೋಗ್ಯ ತಪಾಸಣೆಗೆ ಸೌಲಭ್ಯಗಳು ಲಭ್ಯವಿದೆ.

    ಮಹಿಳೆಯರ ಜೀವನದ ಸುಧಾರಣೆಗಾಗಿ ಸರ್ಕಾರದ ಉತ್ತೇಜನವು 2022 ರ ಬಜೆಟ್‌ನಲ್ಲಿ ಮಿಷನ್ ಶಕ್ತಿಯ ಬಲವರ್ಧನೆ ಮತ್ತು ವಿಸ್ತರಣೆಯನ್ನು ಎತ್ತಿ ತೋರಿಸಿದೆ. ಇದು ದೇಶಾದ್ಯಂತ ಲಕ್ಷಾಂತರ ಮಹಿಳೆಯರನ್ನು ಸುಧಾರಿಸುವ ಮತ್ತು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. ಮಿಷನ್ ಶಕ್ತಿ ಯಶಸ್ವಿಯಾಗಲು ಸರ್ಕಾರವು ರಾಜ್ಯಗಳೊಂದಿಗೆ ಕೆಲಸ ಮಾಡುತ್ತದೆ, ಅದು ರಾಷ್ಟ್ರ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ.
    Published by:Seema R
    First published: