ಅತ್ತ ಆದಾಯ ತೆರಿಗೆ ವಿನಾಯಿತಿಯಲ್ಲೂ ಹೆಚ್ಚಳವಿಲ್ಲ, ಇತ್ತ ಪೆಟ್ರೋಲ್​, ಡೀಸೆಲ್​, ಚಿನ್ನದ ಬೆಲೆಯೂ ಏರಿಕೆ

ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯನ್ನು  ಪ್ರತಿ ಲೀಟರ್​ಗೆ 1 ರೂ. ಏರಿಕೆ ಮಾಡಿದ್ದು,ಇಂದು ಮಧ್ಯರಾತ್ರಿ 12 ಗಂಟೆಯಿಂದ ದರ ಜಾರಿಗೆ ಬರಲಿದೆ. 

news18
Updated:July 5, 2019, 4:31 PM IST
ಅತ್ತ ಆದಾಯ ತೆರಿಗೆ ವಿನಾಯಿತಿಯಲ್ಲೂ ಹೆಚ್ಚಳವಿಲ್ಲ, ಇತ್ತ ಪೆಟ್ರೋಲ್​, ಡೀಸೆಲ್​, ಚಿನ್ನದ ಬೆಲೆಯೂ ಏರಿಕೆ
ಚೊಚ್ಚಲ ಬಜೆಟ್​ ಮಂಡನೆ ಮಾಡುತ್ತಿರುವ ನಿರ್ಮಲಾ ಸೀತಾರಾಮನ್​
  • News18
  • Last Updated: July 5, 2019, 4:31 PM IST
  • Share this:
ನವದೆಹಲಿ,(ಜು.05): ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಪ್ರಧಾನಿ ಮೋದಿ ಸರ್ಕಾರದ ಬಜೆಟ್​ ಮಂಡನೆ ಮಾಡಿದ್ದಾರೆ. ವೇತನ ಪಡೆಯುವ ನೌಕರ ವರ್ಗಕ್ಕೆ ಸಂತಸದ ಸುದ್ದಿ ಸಿಗಲಿದೆ ಎಂಬ ನಿರೀಕ್ಷೆ ಹೊಮ್ಮಿತ್ತಾದರೂ, ಆದಾಯ ತೆರಿಗೆ ವಿನಾಯಿತಿ ಕೇವಲ ಐದು ಲಕ್ಷ ರೂ.ವರೆಗೆ ನೀಡಲಾಗಿದೆ. ಐದು ಲಕ್ಷ ರೂ. ಗಿಂತ ಹೆಚ್ಚಿನ ಸಂಬಳ ಪಡೆಯುವ ನೌಕರರು ಆದಾಯ ತೆರಿಗೆ ಕಟ್ಟುವುದನ್ನು ಮುಂದುವರಿಸಬೇಕಿದೆ.

ಇದರ ಜತೆಗೆ ಸಂಪತ್ತು ಕ್ರೋಢೀಕರಣಕ್ಕಾಗಿ ಸರ್ಕಾರ ತೆಗೆದುಕೊಳ್ಳಲಿರುವ ಕ್ರಮದ ಬಗ್ಗೆ ಬಜೆಟ್​ ಭಾಷಣದಲ್ಲಿ ಮಾಹಿತಿ ನೀಡಿದ ನಿರ್ಮಲಾ ಸೀತಾರಾಮನ್​ ಪೆಟ್ರೋಲ್​​​, ಡೀಸೆಲ್​ ಮತ್ತು ಚಿನ್ನದ ಬೆಲೆಯನ್ನು ಹೆಚ್ಚಳ ಮಾಡುವ ನಿರ್ಧಾರ ಪ್ರಕಟಿಸಿ ಮಧ್ಯಮ ವರ್ಗಕ್ಕೆ ಶಾಕ್​ ನೀಡಿದ್ದಾರೆ.

ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯನ್ನು  ಪ್ರತಿ ಲೀಟರ್​ಗೆ 1 ರೂ. ಏರಿಕೆ ಮಾಡಿದ್ದು,ಇಂದು ಮಧ್ಯರಾತ್ರಿ 12 ಗಂಟೆಯಿಂದ ದರ ಜಾರಿಗೆ ಬರಲಿದೆ.  ಇದರ ಜೊತೆಗೆ ಚಿನ್ನದ ಮೇಲಿನ ಆಮದು ಸುಂಕವನ್ನೂ ಶೇ. 12.5 ಕ್ಕೆ ಏರಿಕೆ ಮಾಡಲಾಗಿದೆ.

ಉದ್ಯೋಗ ಹೆಚ್ಚಳಕ್ಕೆ ಒತ್ತು; ಪ್ರಸಕ್ತ ಸಾಲಿನ ಜಿಡಿಪಿ ದರ ಶೇ 7ರಷ್ಟು ಹೆಚ್ಚಾಗುವ ನಿರೀಕ್ಷೆ; ನಿರ್ಮಲಾ ಸೀತಾರಾಮನ್​​

ಇನ್ನು ಬ್ಯಾಂಕ್​ಗಳಲ್ಲಿನ ಅನುತ್ಪಾದಕ ಆಸ್ತಿಯನ್ನು ರಿಕವರಿ ಮಾಡುವ ಉದ್ದೇಶದಿಂದ ಬ್ಯಾಂಕ್​ಗಳ ಏಕೀಕರಣ ಮತ್ತು ರಿಕವರಿಗೆ ಹೆಚ್ಚಿನ ಒತ್ತು ನೀಡುವುದಾಗಿ ನಿರ್ಮಲಾ ಸೀತಾರಾಮನ್​ ತಿಳಿಸಿದರು. ಸಂಕಷ್ಟದಲ್ಲಿರುವ ಸಾರ್ವಜನಿಕ ಬ್ಯಾಂಕ್​ಗಳಿಗೆ ಕೇಂದ್ರ ಸರ್ಕಾರ ಸಹಾಯ ಮಾಡಲಿದ್ದು, ಬ್ಯಾಂಕ್​ಗಳ ಸಬಲೀಕರಣಕ್ಕೆ ಮುಂದಾಗಲಿದೆ ಎಂದರು.

ಆದಾಯ ತೆರಿಗೆದಾರರಿಗೆ ಹಣಕಾಸು ಸಚಿವರಿಂದ ಧನ್ಯವಾದ:

ಆದಾಯ ತೆರಿಗೆ ವಿಭಾಗದ ಬಜೆಟ್​ ಮಂಡನೆ ಆರಂಭಿಸುವ ಮೊದಲು ನಿರ್ಮಲಾ ಸೀತಾರಾಮನ್​ ತೆರಿಗೆದಾರರಿಗೆ ಧನ್ಯವಾದ ಹೇಳಿದರು. "ಪ್ರಾಮಾಣಿಕ ತೆರಿಗೆದಾರರಿಗೆ ಧನ್ಯವಾದ. ನೇರ ತೆರಿಗೆ 11.37 ಲಕ್ಷ ಕೋಟಿಗೆ ಏರಿಕೆಯಾಗಲಿದೆ. ಜನರಿಗೆ ತೆರಿಗೆ ಹೊರೆ ಹೊರಿಸಲು ನಮ್ಮ ಸರ್ಕಾರ ಬಯಸುವುದಿಲ್ಲ. ನೇರ ತೆರಿಗೆ ಸಂಗ್ರಹದಲ್ಲಿ ಶೇ.78 ಏರಿಕೆ ಈಗಾಗಲೇ ಕಂಡಿದೆ. 5 ಲಕ್ಷಕ್ಕಿಂತ ಕಡಿಮೆ ಆದಾಯದವರಿಗೆ ತೆರಿಗೆ ಇಲ್ಲ. ವಾರ್ಷಿಕ 400 ಕೋಟಿ ರೂ. ಆದಾಯ ಹೊಂದಿರುವ ಕಂಪನಿಗೆ ಶೇ.25 ತೆರಿಗೆ ವಿಧಿಸಲಾಗುವುದು," ಎಂದು ನಿರ್ಮಲಾ ಸೀತಾರಾಮನ್​ ಆದಾಯ ತೆರಿಗೆ ಸಂಬಂಧ ಮಾತನಾಡಿದರು.
First published:July 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ