Union Budget 2022: ಈ ಬಾರಿ ಯಾವ ವಸ್ತು ಅಗ್ಗ? ಯಾವುದು ದುಬಾರಿ? ಇಲ್ಲಿದೆ ಮಾಹಿತಿ

ಪ್ರಮುಖವಾಗಿ ಯಾವೆಲ್ಲಾ ವಸ್ತುಗಳ ಬೆಲೆ ಕಡಿತವಾಗಿದೆ? ಮತ್ಯಾವ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ(ಫೆ.01): ಇಂದು ಬಹುನಿರೀಕ್ಷಿತ ಕೇಂದ್ರದ ಬಜೆಟ್ (Union Budget 2022) ಮಂಡನೆಯಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಈ ಬಜೆಟ್ ಮಂಡಿಸಿದ್ದಾರೆ. ಕೊರೋನಾ ನಂತರ ಮಂಡನೆಯಾದ 2ನೇ ಬಜೆಟ್ ಇದಾಗಿದೆ. ಬೆಳಗ್ಗೆ 11 ಗಂಟೆಗೆ ಬಹುನಿರೀಕ್ಷಿತ ಕೇಂದ್ರದ ಬಜೆಟ್ ಮಂಡನೆ ಶುರುವಾಗಿ 12.33ಕ್ಕೆ ಮುಕ್ತಾಯಗೊಂಡಿತು. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಪೇಪರ್ ಲೆಸ್ ಬಜೆಟ್ (Paperless Budget) ಮಂಡಿಸಿದರು. ಸುಮಾರು 1 ಗಂಟೆ 33 ನಿಮಿಷ ಬಜೆಟ್ ಮಂಡನೆ ಮಾಡಿದರು. ಈ ಬಾರಿಯ ಬಜೆಟ್ ಗಾತ್ರ 39.54 ಲಕ್ಷ ಕೋಟಿ ರೂಪಾಯಿ ಆಗಿದೆ. ಈ ಬಾರಿಯ ಬಜೆಟ್​​ನಲ್ಲಿ ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ.

2022-23ರ ಕೇಂದ್ರ ಬಜೆಟ್​​ನಲ್ಲಿ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಕೆಲವು ವಿಷಯಗಳಲ್ಲಿ ಗುಡ್​ ನ್ಯೂಸ್​ ನೀಡಿದೆ. ಬಜೆಟ್​ ಮಂಡನೆಗೂ ಮುನ್ನವೇ ಕಮರ್ಷಿಯಲ್​ ಎಲ್​ಪಿಜಿ ಸಿಲಿಂಡರ್​ ಬೆಲೆ ಇಳಿಕೆಯಾಗಿದೆ. 19 ಕೆಜಿಯ ಎಲ್​ಪಿಜಿ ಸಿಲಿಂಡರ್ ಬೆಲೆ 91 ರೂಪಾಯಿ ಇಳಿಕೆ ಕಂಡಿದೆ. ಬಜೆಟ್​​ನಲ್ಲಿ ಮಧ್ಯಮ ವರ್ಗಕ್ಕೆ ಅರ್ಧ ಸಿಹಿ, ಇನ್ನರ್ಧ ಕಹಿ ಸಿಕ್ಕಿದೆ. ಪ್ರಮುಖವಾಗಿ ಯಾವೆಲ್ಲಾ ವಸ್ತುಗಳ ಬೆಲೆ ಕಡಿತವಾಗಿದೆ? ಮತ್ಯಾವ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಆ ಪಟ್ಟಿಯನ್ನು ನೋಡುವುದಾದರೆ.

ಇದನ್ನೂ ಓದಿ: LIVE Union Budget 2022: ಬಜೆಟ್ ಮಂಡನೆ ಮುಕ್ತಾಯ, ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ

ಯಾವೆಲ್ಲಾ ವಸ್ತುಗಳ ಬೆಲೆ ಇಳಿಕೆ?

ಚಿನ್ನ, ವಜ್ರಾಭರಣಗಳು
ಎಲೆಕ್ಟ್ರಾನಿಕ್ಸ್​ ಉಪಕರಣಗಳು
ಮೊಬೈಲ್​, ಮೊಬೈಲ್​ ಚಾರ್ಜರ್​​ಗಳು
ಕೃಷಿ ಉಪಕರಣಗಳು
ವಿದೇಶಿ ಉತ್ಪನ್ನಗಳು
ಬಟ್ಟೆ, ಚಪ್ಪಲಿ, ಚರ್ಮದ ಉತ್ಪನ್ನಗಳು

ಚಿನ್ನ, ವಜ್ರಾಭರಣಗಳ ಮೇಲಿನ ತೆರಿಗೆ ಇಳಿಕೆ ಮಾಡಲಾಗಿದೆ. ವಜ್ರಾಭರಣಗಳ ಮೇಲೆ ಶೇ.5ರಷ್ಟು ಸೆಸ್ ಕಡಿತ ಮಾಡಲಾಗಿದೆ. ಇದು ಆಭರಣಪ್ರಿಯರಿಗೆ ಸಿಹಿ ಸುದ್ದಿಯಾಗಿದೆ. ಇನ್ನು, ಎಲೆಕ್ಟ್ರಾನಿಕ್ಸ್​​ ಉಪಕರಣಗಳ ಬೆಲೆಯೂ ಇಳಿಕೆಯಾಗಿದೆ. ಮೊಬೈಲ್, ​ ಮೊಬೈಲ್​ ಚಾರ್ಜರ್​ಗಳ ಬೆಲೆಯನ್ನು ಇಳಿಸಲಾಗಿದೆ. ರೈತರಿಗೂ ಸಹ ಬಜೆಟ್​​ನಲ್ಲಿ ಸಿಹಿ ಸುದ್ದಿ ಸಿಕ್ಕಿದೆ. ಕೃಷಿ ಉಪಕರಣಗಳ ಬೆಲೆಯೂ ಇಳಿಕೆಯಾಗಿದೆ. ಇನ್ನು, ವಿದೇಶಿ ಉತ್ಪನ್ನಗಳ ಬೆಲೆಯನ್ನೂ ಕಡಿತಗೊಳಿಸಲಾಗಿದೆ. ಬಟ್ಟೆ, ಚಪ್ಪಲಿ, ಚರ್ಮದ ಉತ್ಪನ್ನಗಳ ಬೆಲೆ ಇಳಿಕೆಯಾಗಿದೆ.

ಇದನ್ನೂ ಓದಿ: ಬಜೆಟ್ ಮಂಡನೆಗೂ ಮುನ್ನ LPG ಸಿಲಿಂಡರ್ ಬೆಲೆಯಲ್ಲಿ 91 ರೂಪಾಯಿ ಇಳಿಕೆ

ಕಾರ್ಪೊರೇಟ್ ಸರ್​ಚಾರ್ಜ್​ ಇಳಿಕೆ ಮಾಡಲಾಗಿದೆ. ಅಂದರೆ ಕೇಂದ್ರ ಸರ್ಕಾರ ಸಹಕಾರಿ ಸಂಘಗಳ ಮೇಲಿನ ಸರ್​​ಚಾರ್ಜ್​ನ್ನು ​ ಶೇ.12ರಿಂದ 7ಕ್ಕೆ ಇಳಿಕೆ ಮಾಡಿದೆ. 10 ಕೋಟಿ ಒಳಗಿನ ಆದಾಯದ ಸಹಕಾರಿ ಸಂಘಗಳಿಗೆ ಇದು ಅನ್ವಯವಾಗಲಿದೆ.

ಡಿಜಿಟಲ್​ ಆಸ್ತಿ ಮೇಲೆ ಶೇ.30 ರಷ್ಟು ತೆರಿಗೆ ವಿಧಿಸಲಾಗಿದೆ. ವರ್ಚ್ಯುಯಲ್ ಅಸೆಟ್​ ಮೇಲೆ ಶೇ.1ರಷ್ಟು TDS ಹಾಕಲಾಗಿದೆ. ಇದೇ ವೇಳೆ, ಸ್ಟಾರ್ಟ್​​ಅಪ್​ಗಳಿಗೆ ಮತ್ತೊಂದು ವರ್ಷ ತೆರಿಗೆ ವಿನಾಯಿತಿ ನೀಡಲಾಗಿದೆ.
Published by:Latha CG
First published: