Budget Highlights: ಕೇಂದ್ರ ಬಜೆಟ್​-2022ರ ಪ್ರಮುಖಾಂಶಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

Union Budget 2022: ಸುಮಾರು 1 ಗಂಟೆ 33 ನಿಮಿಷ ಬಜೆಟ್ ಮಂಡನೆ ಮಾಡಿದರು. ಈ ಬಾರಿಯ ಬಜೆಟ್ ಗಾತ್ರ 39.54 ಲಕ್ಷ ಕೋಟಿ ರೂಪಾಯಿ ಆಗಿದೆ. ಈ ಬಾರಿಯ ಬಜೆಟ್​​ನಲ್ಲಿ ಆತ್ಮನಿರ್ಭರತೆಗೆ ಹೆಚ್ಚು ಒತ್ತು ನೀಡಲಾಗಿದೆ. ಡಿಜಿಟಲ್ ಆರ್ಥಿಕತೆ ಅಭಿವೃದ್ದಿಗೆ ಕೇಂದ್ರ ಸರ್ಕಾರದ ಗಮನ ನೀಡಿದೆ. 

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

  • Share this:
ನವದೆಹಲಿ(ಫೆ.01): ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ​​(FM Nirmala Sitharaman) ಅವರು ಕೇಂದ್ರ ಬಜೆಟ್​ನ್ನು ಮಂಡಿಸಿದರು. ಇದು ಮೋದಿ ಸರ್ಕಾರದ 10 ನೇ ಬಜೆಟ್​ ಹಾಗೂ ನಿರ್ಮಲಾ ಸೀತಾರಾಮನ್​ ಹಣಕಾಸು ಸಚಿವರಾದ ಬಳಿಕ ಮಂಡಿಸಿದ 4ನೇ ಬಜೆಟ್ ಆಗಿದೆ. ಈ ವರ್ಷ ಭಾರತದ ಆರ್ಥಿಕ ಬೆಳವಣಿಗೆ ಶೇ.9.2ರಷ್ಟು ಬೆಳವಣಿಗೆಯಾಗಲಿದೆ ಎಂದರು. ಕೇಂದ್ರ ಬಜೆಟ್ (Union Budget) ಮುಂದಿನ 25 ವರ್ಷಗಳಿಗೆ ನೀಲ ನಕ್ಷೆಯಾಗಿದೆ (Blue Print) ಎಂದು ಹಣಕಾಸು ಸಚಿವರು ಹೇಳಿದರು. ಆದಾಯ ತೆರಿಗೆ ವಿಷಯದಲ್ಲಿ ಸರ್ಕಾರದಿಂದ ದೊಡ್ಡ ಘೋಷಣೆಯನ್ನು ಜನಸಾಮಾನ್ಯರೂ ನಿರೀಕ್ಷಿಸುತ್ತಿದ್ದರು. ಆದರೆ ಈ ಬಾರಿಯ ಬಜೆಟ್​​ನಲ್ಲಿ ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದು ಇಲ್ಲಿ ಗಮನಾರ್ಹ ಸಂಗತಿಯಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಪೇಪರ್ ಲೆಸ್ ಬಜೆಟ್ (Paperless Budget) ಮಂಡಿಸಿದರು. ಸುಮಾರು 1 ಗಂಟೆ 33 ನಿಮಿಷ ಬಜೆಟ್ ಮಂಡನೆ ಮಾಡಿದರು. ಈ ಬಾರಿಯ ಬಜೆಟ್ ಗಾತ್ರ 39.54 ಲಕ್ಷ ಕೋಟಿ ರೂಪಾಯಿ ಆಗಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ 2022-23ನೇ ಹಣಕಾಸು ವರ್ಷದ ಬಜೆಟ್ ಮಂಡಿಸಲು ಕೆಂಪು ಬಟ್ಟೆಯಿಂದ ಸುತ್ತಲ್ಪಟ್ಟ ಟ್ಯಾಬ್ಲೆಟ್ ಹಿಡಿದು ಸಂಸತ್ ಭವನಕ್ಕೆ ಆಗಮಿಸಿದರು. ಸೀತಾರಾಮನ್ ಅವರು ತಮ್ಮ ಹಣಕಾಸು ಸಚಿವಾಲಯದ ಕಚೇರಿಯ ಹೊರಗೆ ಸಾಂಪ್ರದಾಯಿಕ ಶೈಲಿಯಲ್ಲಿ 'ಬ್ರೀಫ್‌ಕೇಸ್'ನೊಂದಿಗೆ ಪೋಸ್ ನೀಡಿದರು. ಇದು ಸರಳವಾದ ಬ್ರೀಫ್ಕೇಸ್ ಅಲ್ಲ, ಆದರೆ ಕೆಂಪು ಬಟ್ಟೆಯಿಂದ ಸುತ್ತಿದ್ದ ಟ್ಯಾಬ್ಲೆಟ್. ಕಳೆದ ವರ್ಷದ ಬಜೆಟ್ ಭಾಷಣವನ್ನೂ ಸಹ ಡಿಜಿಟಲ್ ಮೂಲಕ ಮಂಡಿಸಿದ್ದರು. ಈ ಬಾರಿಯ ಬಜೆಟ್​​ನಲ್ಲಿ ಆತ್ಮನಿರ್ಭರತೆಗೆ ಹೆಚ್ಚು ಒತ್ತು ನೀಡಲಾಗಿದೆ. ಡಿಜಿಟಲ್ ಆರ್ಥಿಕತೆ ಅಭಿವೃದ್ದಿಗೆ ಕೇಂದ್ರ ಸರ್ಕಾರದ ಗಮನ ನೀಡಿದೆ.

2022ರ ಬಜೆಟ್​​ಗೆ 4 ಆಧಾರ ಸ್ತಂಭಗಳು
ಫೋಕಸ್-1 ಪಿಎಂ ಗತಿ ಶಕ್ತಿ ಯೋಜನೆ
ಫೋಕಸ್-2 ಎಲ್ಲರನ್ನೂ ಒಳಗೊಂಡ ಸಮಗ್ರ ಅಭಿವೃದ್ಧಿ
ಫೋಕಸ್​-3 ಉತ್ಪಾದನಾ ವಲಯಕ್ಕೆ ವೇಗ
ಫೋಕಸ್-4 ಬಂಡವಾಳ ಹೂಡಿಕೆ

ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಸರ್ಕಾರದ ಪ್ರಮುಖ ಘೋಷಣೆಗಳು:

400 ಹೊಸ ವಂದೇ ಭಾರತ್ ರೈಲುಗಳು: 
ಮುಂದಿನ 3 ವರ್ಷಗಳಲ್ಲಿ ಉತ್ತಮ ದಕ್ಷತೆಯೊಂದಿಗೆ 400 ಹೊಸ ವಂದೇ ಭಾರತ್ ರೈಲುಗಳನ್ನು ಪರಿಚಯಿಸಲಾಗುವುದು ಎಂದು ಹಣಕಾಸು ಸಚಿವರು ಸಂಸತ್ತಿನಲ್ಲಿ ಹೇಳಿದರು. 100 PM ಸ್ಪೀಡ್ ಕಾರ್ಗೋ ಟರ್ಮಿನಲ್ ಅನ್ನು ಮುಂದಿನ 3 ವರ್ಷಗಳಲ್ಲಿ ಅಭಿವೃದ್ಧಿಪಡಿಸಲಾಗುವುದು.

ಇದನ್ನೂ ಓದಿ:Budget 2022-Education: ಬಜೆಟ್​​ನಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಬಂಪರ್ ಕೊಡುಗೆ; ಇಲ್ಲಿವೆ ಪ್ರಮುಖಾಂಶಗಳು

ರೈತರಿಗೆ ನೀಡಿದ ಕೊಡುಗೆಗಳು:
ಗಂಗಾ ನದಿಯ 5 ಕಿ.ಮೀ ಅಗಲದ ಕಾರಿಡಾರ್‌ಗಳಲ್ಲಿ ರೈತರ ಭೂಮಿಯನ್ನು ಕೇಂದ್ರೀಕರಿಸುವ ಮೂಲಕ ದೇಶಾದ್ಯಂತ ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು. ಅದೇ ಸಮಯದಲ್ಲಿ, ಸಣ್ಣ ರೈತರು ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ರೈಲ್ವೆ ಹೊಸ ಉತ್ಪನ್ನಗಳು ಮತ್ತು ಸಮರ್ಥ ಲಾಜಿಸ್ಟಿಕ್ಸ್ ಸೇವೆಗಳನ್ನು ಅಭಿವೃದ್ಧಿಪಡಿಸುತ್ತದೆ ಎಂದರು.

ಡಿಜಿಟಲ್ ಶಿಕ್ಷಣ:
ಪ್ರಧಾನಿ ಇ-ವಿದ್ಯಾ ಯೋಜನೆಯಡಿಯಲ್ಲಿ ದೂರದರ್ಶನ ಚಾನೆಲ್​​ಗಳ ಸಂಖ್ಯೆಯನ್ನು 12ರಿಂದ 200ಕ್ಕೆ ಹೆಚ್ಚಿಸಲಾಗುವುದು. ಪ್ರತೀ ತರಗತಿಗೆ ಟಿವಿ ಚಾನೆಲ್​ ಮೂಲಕ ಪಾಠ ಮಾಡಲಾಗುವುದು. ಪ್ರಾದೇಶಿಕ ಭಾಷೆಗಳಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡಲಾಗುತ್ತದೆ. 200 ಟಿವಿ ಚಾನೆಲ್​ಗಳ ಮೂಲಕ ಶೈಕ್ಷಣಿಕ ಅಭಿವೃದ್ದಿ ಮಾಡಲಿದ್ದೇವೆ ಎಂದರು. ಜೊತೆಗೆ ವಿಶ್ವದರ್ಜೆಯ ಡಿಜಿಟಲ್ ಯೂನಿವರ್ಸಿಟಿ ಸ್ಥಾಪನೆ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಬಜೆಟ್​​ನಲ್ಲಿ ಘೋಷಿಸಿದರು. ಕೊರೋನಾ (Corona) ಕಾರಣದಿಂದ ಶಾಲೆಗಳು ಬಂದ್ ಆಗಿವೆ. ಹೀಗಾಗಿ 1ರಿಂದ 12ನೇ ತರಗತಿ ಮಕ್ಕಳಿಗೆ ಚಾನಲ್ ಮೂಲಕ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತೇವೆ ಎಂದು ಹೇಳಿದರು.

ಇ-ಪಾಸ್‌ಪೋರ್ಟ್:
2022ರ ಬಜೆಟ್‌ನಲ್ಲಿ ನಾಗರಿಕರ ಅನುಕೂಲಕ್ಕಾಗಿ 2022-23ರಲ್ಲಿ ಇ-ಪಾಸ್‌ಪೋರ್ಟ್ ನೀಡಲು ಸರ್ಕಾರ ನಿರ್ಧರಿಸಿದೆ.

ಇಸಿಎಲ್‌ಜಿಎಸ್(ECLGS) ಹೆಚ್ಚಳ:
ಎಮೆರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಂ (ಇಸಿಎಲ್‌ಜಿಎಸ್)ನ್ನು ಮಾರ್ಚ್ 2023 ರವರೆಗೆ ವಿಸ್ತರಿಸಲಾಗುವುದು. ಗ್ಯಾರಂಟಿ ಕವರ್ ಅನ್ನು 50,000 ಕೋಟಿಯಿಂದ 5 ಲಕ್ಷ ಕೋಟಿಗೆ ಹೆಚ್ಚಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು.

ಬೆಳೆ ಮೌಲ್ಯಮಾಪನ:
ಬೆಳೆ ಮೌಲ್ಯಮಾಪನ, ಭೂ ದಾಖಲೆಗಳ ಡಿಜಿಟಲೀಕರಣ, ಕೀಟನಾಶಕ ಮತ್ತು ಪೋಷಕಾಂಶಗಳ ಬಳಕೆಗೆ ರೈತ ಡ್ರೋನ್‌ಗಳ ಬಳಕೆಯನ್ನು ಪ್ರೋತ್ಸಾಹಿಸಲಾಗುವುದು ಎಂದು ಸೀತಾರಾಮನ್ ಹೇಳಿದರು.

ಕೃಷಿ ಸ್ಟಾರ್ಟ್‌ಅಪ್‌ಗಳಿಗೆ ಲಾಭ:
ಕೃಷಿ ಕ್ಷೇತ್ರದ ಗ್ರಾಮೀಣ ಮತ್ತು ಕೃಷಿ ಸ್ಟಾರ್ಟಪ್‌ಗಳಿಗೆ ನಬಾರ್ಡ್ ಆರ್ಥಿಕ ನೆರವು ನೀಡಲಿದೆ ಎಂದು ಹಣಕಾಸು ಸಚಿವರು ಹೇಳಿದರು. ಈ ಸ್ಟಾರ್ಟಪ್‌ಗಳು ಎಫ್‌ಪಿಒಗಳನ್ನು ಬೆಂಬಲಿಸುತ್ತವೆ ಮತ್ತು ರೈತರಿಗೆ ತಾಂತ್ರಿಕ ಸೌಲಭ್ಯಗಳನ್ನು ಒದಗಿಸುತ್ತವೆ.

ಕೆನ್ ಬೆಟ್ವಾ ಲಿಂಕ್ ಯೋಜನೆ:
ಕೆನ್ ಬೆಟ್ವಾ ಲಿಂಕ್ ಯೋಜನೆಗೆ 44,605 ​​ಕೋಟಿ ರೂ. ವೆಚ್ಚವಾಗಲಿದೆ ಎಂದು ಹಣಕಾಸು ಸಚಿವರು ಹೇಳಿದರು. 62 ಲಕ್ಷ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗುವುದು. ಐದು ನದಿಗಳ ಜೋಡಣೆಯ ಕರಡು ಅಂತಿಮಗೊಂಡಿದೆ. MSME ಎಂಟರ್‌ಪ್ರೈಸಸ್ ಇ-ಶ್ರಮ್ NCS ಮತ್ತು ಅಸಿಮ್ ಪೋರ್ಟಲ್ ಅನ್ನು ವಿಲೀನಗೊಳಿಸಲಾಗುವುದು, ವಿಸ್ತರಿಸಲಾಗುವುದು. MSMEಗಳಿಗೆ ಸಹಾಯ ಮಾಡಲು 130 ಮಿಲಿಯನ್ ಸಿದ್ಧವಾಗಿದೆ, ಹೆಚ್ಚುವರಿ ಸಾಲಗಳನ್ನು ಒದಗಿಸಲಾಗುವುದು ಎಂದರು.

ಎಂಟರ್‌ಪ್ರೈಸಸ್, ಇ-ಶ್ರಮ್, ಎನ್‌ಸಿಎಸ್ ಮತ್ತು ಅಸಿಮ್ ಪೋರ್ಟಲ್‌ಗಳನ್ನು ಲಿಂಕ್ ಮಾಡಲಾಗುತ್ತದೆ. ಈ ಪೋರ್ಟಲ್‌ಗಳು ಸಾವಯವ ಡೇಟಾಬೇಸ್ ಆಗಿ ಕಾರ್ಯನಿರ್ವಹಿಸುತ್ತವೆ ಮತ್ತು ಸಾಲ ಸೌಲಭ್ಯ, ಉದ್ಯಮಶೀಲತೆಯನ್ನು ಉತ್ತೇಜಿಸಲು ಕೆಲಸ ಮಾಡುತ್ತವೆ.

ಇದನ್ನೂ ಓದಿ: LIVE Union Budget 2022: ಬಜೆಟ್ ಮಂಡನೆ ಮುಕ್ತಾಯ, ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ

ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ:
ಕೊರೋನಾ ಸಾಂಕ್ರಾಮಿಕ ರೋಗವು ಎಲ್ಲಾ ವಯಸ್ಸಿನ ಜನರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಉಲ್ಬಣಗೊಳಿಸಿದೆ. ಗುಣಮಟ್ಟದ ಮಾನಸಿಕ ಆರೋಗ್ಯ ಸಮಾಲೋಚನೆ ಮತ್ತು ಆರೈಕೆ ಸೇವೆಗಳಿಗೆ ಉತ್ತಮ ಪ್ರವೇಶಕ್ಕಾಗಿ, ರಾಷ್ಟ್ರೀಯ ಟೆಲಿ-ಮೆಂಟಲ್ ಆರೋಗ್ಯ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು ಎಂದು ಸಚಿವರು ಹೇಳಿದರು.

ಸಾರಿಗೆ ಮೂಲಭೂತ ಸೌಕರ್ಯಕ್ಕೆ 20 ಸಾವಿರ ಕೋಟಿ:
ಸಾರಿಗೆ ಮೂಲಭೂತ ಸೌಕರ್ಯಕ್ಕೆ 20 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ. ಕನಿಷ್ಠ ಬೆಂಬಲ ಬೆಲೆ ಘೋಷಣೆಗೆ 2.87 ಲಕ್ಷ ಕೋಟಿ ಅನುದಾನ ಘೋಷಿಸಲಾಯಿತು. 2023ನ್ನು ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷ ಎಂದು ಘೋಷಣೆ ಮಾಡಲಾಯಿತು. ಹರ್​​ ಘರ್ ನಲ್​ ಜಲ್ ಯೋಜನೆಗೆ 60 ಸಾವಿರ ಕೋಟಿ ಮೀಸಲು ಇಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. 3.8 ಕೋಟಿ ಮನೆಗಳಿಗೆ ನೀರಿನ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಪಿಎಂ ಆವಾಸ್​​ ಯೋಜನೆಗೆ 48 ಸಾವಿರ ಕೋಟಿ:
ಮನೆ ನಿರ್ಮಾಣಕ್ಕೆ 48 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ. 2022-23ರಲ್ಲಿ 80 ಲಕ್ಷ ಮನೆ ನಿರ್ಮಾಣ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಹೈಡ್ರೋ ಸೋಲಾರ್ ಪ್ರಾಜೆಕ್ಟ್​​ಗೆ 1400 ಕೋಟಿ ಹಂಚಿಕೆ ಮಾಡಲಾಗುತ್ತದೆ ಎಂದರು.

ಅಂಚೆ ಕಚೇರಿಗಳಿಗೆ ಬ್ಯಾಂಕ್ ಸ್ವರೂಪ:
ಒಂದೂವರೆ ಲಕ್ಷ ಅಂಚೆ ಕಚೇರಿಗಳಿಗೆ ಬ್ಯಾಂಕ್ ಸ್ವರೂಪ ನೀಡಲಾಗುತ್ತದೆ. 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕ್ ಸ್ಥಾಪನೆ ಮಾಡಲಾಗುತ್ತದೆ. ಇದಲ್ಲದೇ ಹೊಸ ತಂತ್ರಜ್ಞಾನದೊಂದಿಗೆ ಇ-ಪಾಸ್​​ಪೋರ್ಟ್​ ಜಾರಿ ಮಾಡಲಾಗುತ್ತದೆ. 2023ರಲ್ಲಿ ಇ-ಪಾಸ್​ಪೋರ್ಟ್​ ಜಾರಿಗೆ ಬರಲಿದೆ. ಈ ಇ-ಪಾಸ್​​ಪೋರ್ಟ್​​ ಚಿಪ್​ ಒಳಗೊಂಡಿರುತ್ತದೆ. ಉದ್ಯಮ ಸರಳೀಕರಣಕ್ಕೆ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಲಾಗುತ್ತದೆ ಎಂದು ಹೇಳಿದರು.

ಸರಕು-ಸಾಗಾಣಿಕೆಗೂ ಎಲೆಕ್ಟ್ರಿಕ್​ ವಾಹನಗಳಿಗೆ ಒತ್ತು ನೀಡಲಾಗಿದೆ. ಎಲೆಕ್ಟ್ರಿಕ್ ವಾಹನ ಬ್ಯಾಟರಿ ಬದಲಾವಣೆ ಕೇಂದ್ರ ಸ್ಥಾಪನೆ ಮಾಡಲಾಗುತ್ತದೆ. ಬ್ಯಾಟರಿ ಸ್ವಾಪಿಂಗ್ ಸೌಕರ್ಯ ಜಾರಿಗೆ ತೀರ್ಮಾನಿಸಲಾಗಿದೆ ಎಂದರು.

ಒಂದು ದೇಶ ಒಂದು ನೋಂದಣಿ:
ಒನ್​ ನೇಷನ್​ ಒನ್​ ರಿಜಿಸ್ಟ್ರೇಷನ್ ವ್ಯವಸ್ಥೆ ಸ್ಥಾಪನೆ ಮಾಡಲಾಗುತ್ತದೆ. ಇನ್ಮುಂದೆ ಜಮೀನು ನೋಂದಣಿ ಡಿಜಿಟಲೀಕರಣವಾಗಲಿದೆ. ಆಸ್ತಿ ನೋಂದಣಿಗೆ ಒಂದು ದೇಶ ಒಂದು ನೋಂದಣಿ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ. 8 ಭಾಷೆಗಳಲ್ಲಿ ಆಸ್ತಿ ನೋಂದಣಿಗೆ ಏಕರೂಪದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.

5ಜಿ ಸೇವೆ ಲಭ್ಯ:
ದೇಶದಲ್ಲಿ 2022ರಿಂದಲೇ 5ಜಿ ಸೇವೆ ಲಭ್ಯವಾಗಲಿದೆ. ದೂರ ಸಂಪರ್ಕ ಕ್ಷೇತ್ರದಲ್ಲಿ ಮಹತ್ತರ ಕ್ರಾಂತಿ ನಡೆಯಲಿದೆ. ದೇಶದ ಪ್ರತೀ ಹಳ್ಳಿಗೂ OFC ವ್ಯವಸ್ಥೆ ಜಾರಿಯಾಗಲಿದೆ ಎಂದರು. ಇನ್ನು, ಸೋಲಾರ್​ ವಿದ್ಯುತ್​ ಉತ್ಪಾದನೆಗೆ 19,5000 ಕೋಟಿ ರೂ. ಮೀಸಲು ಇಡಲಾಗಿದೆ.10 ವಲಯಗಳಲ್ಲಿ ಕ್ಲೀನ್​ ಎನರ್ಜಿ ಯೋಜನೆ ಜಾರಿ ಮಾಡಲಾಗುತ್ತದೆ. SC, ST ರೈತರಿಗೆ ಆರ್ಥಿಕ ನೆರವು ನೀಡಲಾಗಿದೆ ಎಂದರು.

ಡಿಜಿಟಲ್ ಕರೆನ್ಸಿ ಆರಂಭ:
RBIನಿಂದಲೇ ಡಿಜಿಟಲ್​ ಕರೆನ್ಸಿ ಆರಂಭವಾಗಲಿದೆ. ಇದೇ ವರ್ಷದಲ್ಲಿ RBI ಡಿಜಿಟಲ್ ರುಪೀ ಬಿಡುಗಡೆ ಮಾಡಲಿದೆ. ರಾಜ್ಯ ಸರ್ಕಾರಗಳಿಗೆ 50 ವರ್ಷ ಬಡ್ಡಿ ರಹಿತ ಸಾಲ ನೀಡಲು ನಿರ್ಧರಿಸಲಾಗಿದೆ. ರಾಜ್ಯಗಳಿಗೆ 1 ಲಕ್ಷ ಕೋಟಿ ರೂಪಾಯಿ ಸಾಲ ನೀಡಲಾಗುತ್ತದೆ ಎಂದು ಹೇಳಿದರು.

ತೆರಿಗೆ ರಿಟರ್ನ್ಸ್​​ಗೆ ಹೊಸ ನೀತಿ:
ತೆರಿಗೆ ಪಾವತಿಯಲ್ಲಾದ ತಪ್ಪುಗಳನ್ನು ಸರಿಪಡಿಸಲು ಕೇಂದ್ರ ಸರ್ಕಾರ 2 ವರ್ಷ ಅವಕಾಶ ನೀಡಿದೆ. ಐಟಿ ರಿಟರ್ನ್ಸ್​ ವೇಳೆ ಆಗಿದ್ದ ತಪ್ಪುಗಳನ್ನು ಸರಿಪಡಿಸಲು ಅವಕಾಶ ಕೊಟ್ಟಿದೆ.

ಸಹಕಾರಿ ಸಂಘಗಳಿಗೆ ಗುಡ್​ನ್ಯೂಸ್:
ಸಹಕಾರಿ ಸಂಘಗಳ ಮೇಲಿನ ಸರ್​​ಚಾರ್ಜ್​ ಇಳಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ರಿಲೀಫ್​ ನೀಡಿದೆ. ಸರ್​ಚಾರ್ಜ್​​ನ್ನು ಶೇ.12ರಿಂದ 7ಕ್ಕೆ ಇಳಿಕೆ ಮಾಡಿದೆ. 10 ಕೋಟಿ ಒಳಗಿನ ಆದಾಯದ ಸಹಕಾರಿ ಸಂಘಗಳಿಗೆ ಇದು ಅನ್ವಯವಾಗಲಿದೆ.
Published by:Latha CG
First published: