Union Budget 2022: ಆದಾಯ ತೆರಿಗೆ ಸಲ್ಲಿಸುವ ಜನರಿಗೆ ಬಿಗ್ ರಿಲೀಫ್ ನೀಡಿದ ವಿತ್ತ ಸಚಿವರು

ತೆರಿಗೆ ರಿಟರ್ನ್ಸ್ (IT Returns) ವೇಳೆಯಲ್ಲಾದ ತಪ್ಪುಗಳನ್ನ ಸರಿಪಡಿಸಿಕೊಳ್ಳಲು ಎರಡು ವರ್ಷದ ಸಮಯಾವಕಾಶ ನೀಡಲಾಗಿದೆ. ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದೇ, ಸದ್ಯ ಇರೋ ನಿಯಮಗಳನ್ನು ಮುಂದುವರಿಸಿಕೊಂಡು ಹೋಗಲು ಸರ್ಕಾರ ನಿರ್ಧರಿಸಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

  • Share this:
Union Budget 2022: ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ (Nirmala Sitharaman) ಬಜೆಟ್ ಮಂಡನೆ ಮಾಡಿದರು. ಮಧ್ಯಮ ವರ್ಗದ ಜನರಿಗೆ (Middle Class People) ಆದಾಯ ತೆರಿಗೆ (Income Tax) ಸಲ್ಲಿಸಲು ಸಮಯಾವಕಾಶ ನೀಡಿದೆ. ತೆರಿಗೆ ಸಲ್ಲಿಸುವ ವೇಳೆಯಲ್ಲಾದ ತಪ್ಪುಗಳಿಂದ ಹೆಚ್ಚು ದಂಡ ಪಾವತಿಸುವ ಪರಿಸ್ಥಿತಿಯಲ್ಲಿ ಸಿಲುಕಿದ್ದ ಜನರಿಗೆ ನಿರ್ಮಲಾ ಸೀತಾರಾಮನ್ ಬಿಗ್ ರಿಲೀಫ್ ನೀಡಿದ್ದಾರೆ. ತೆರಿಗೆ ರಿಟರ್ನ್ಸ್ (IT Returns) ವೇಳೆಯಲ್ಲಾದ ತಪ್ಪುಗಳನ್ನ ಸರಿಪಡಿಸಿಕೊಳ್ಳಲು ಎರಡು ವರ್ಷದ ಸಮಯಾವಕಾಶ ನೀಡಲಾಗಿದೆ. ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದೇ, ಸದ್ಯ ಇರೋ ನಿಯಮಗಳನ್ನು ಮುಂದುವರಿಸಿಕೊಂಡು ಹೋಗಲು ಸರ್ಕಾರ ನಿರ್ಧರಿಸಿದೆ.

ಈ ವರ್ಷ ಡಿಜಿಟಲ್ ಕರೆನ್ಸಿ ಬಿಡುಗಡೆ

ಬ್ಲಾಕ್‌ಚೈನ್ ಮತ್ತು ಇತರ ತಂತ್ರಜ್ಞಾನವನ್ನು ಬಳಸಿಕೊಂಡು ಆರ್‌ಬಿಐ ಈ ವರ್ಷ ಡಿಜಿಟಲ್ ಕರೆನ್ಸಿಯನ್ನು ಬಿಡುಗಡೆ ಮಾಡುತ್ತದೆ. ಇದು ಆರ್ಥಿಕತೆಗೆ ದೊಡ್ಡ ಉತ್ತೇಜನವನ್ನು ನೀಡುತ್ತದೆ. ಕ್ರಿಪ್ಟೋ ಕರೆನ್ಸಿಗಳಿಂದ ಗಳಿಕೆಗೆ 30% ತೆರಿಗೆ ವಿಧಿಸಲಾಗುತ್ತದೆ.

ಇದನ್ನೂ ಓದಿ:  Union Budget 2022: ಒನ್ ಕ್ಲಾಸ್, ಒನ್ ಟಿವಿ ಚಾನಲ್.. 200 ಟಿವಿ ಚಾನೆಲ್‌ಗಳ ಮೂಲಕ ಶೈಕ್ಷಣಿಕ ಜಾರಿ ನಿರ್ಧಾರ!

ವರ್ಚುವಲ್ ಡಿಜಿಟಲ್ ಆಸ್ತಿಗಳ ತೆರಿಗೆಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಹಣಕಾಸು ಸಚಿವರು ಹೇಳಿದರು. ಅಂತಹ ಯಾವುದೇ ಆಸ್ತಿಯ ವರ್ಗಾವಣೆಯು 30% ತೆರಿಗೆಯನ್ನು ಆಕರ್ಷಿಸುತ್ತದೆ. ಯಾವುದೇ ರಿಯಾಯಿತಿ ನೀಡಲಾಗುವುದಿಲ್ಲ. ಕಾರ್ಪೊರೇಟ್ ತೆರಿಗೆಯನ್ನು 18% ರಿಂದ 15% ಕ್ಕೆ ಇಳಿಸಲಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ನಿಂದಲೇ ಡಿಜಿಟಲ್ ಕರೆನ್ಸಿ (Digital Currency) ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.

ಹೂಡಿಕೆಗೆ 7.55 ಲಕ್ಷ ಕೋಟಿ

ಬಂಡವಾಳ ಹೂಡಿಕೆಯು ದೊಡ್ಡ ಕೈಗಾರಿಕೆಗಳು ಮತ್ತು ಎಂಎಸ್‌ಎಂಇಗಳೆರಡಕ್ಕೂ ಉದ್ಯೋಗವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮಹಾಮಾರಿಯ ಪರಿಣಾಮಗಳಿಂದ ಹೊರಬರಲು ಇದು ಅವಶ್ಯಕ. ಖಾಸಗಿ ಹೂಡಿಕೆದಾರರ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು. ಇದಕ್ಕಾಗಿ ಕೇಂದ್ರ ಬಜೆಟ್‌ನಲ್ಲಿ 5.54 ಲಕ್ಷ ಕೋಟಿ ರೂ.ಗಳಿಂದ 7.55 ಲಕ್ಷ ಕೋಟಿ ರೂ. ಹೂಡಿಕೆ ಹೆಚ್ಚಿಸಲಾಗುವುದು.

ಇದನ್ನೂ ಓದಿ:  Union Budget 2022: ಮೇಕ್​ ಇನ್​ ಇಂಡಿಯಾ ಮೂಲಕ 60 ಲಕ್ಷ ಉದ್ಯೋಗ ಸೃಷ್ಟಿ ಸರ್ಕಾರದ ಮುಂದಿನ ಗುರಿ!

ಒನ್ಕ್ಲಾಸ್​, ಒನ್ಚಾನಲ್​!

ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ  ಒನ್ ಕ್ಲಾಸ್‌, ಒನ್ ಟಿವಿ ಚಾನೆಲ್ ಯೋಜನೆ ಜಾರಿಗೆ ಕೇಂದ್ರ ನಿರ್ಧರಿಸಿದೆ. 200 ಟಿವಿ ಚಾನೆಲ್‌ಗಳ ಮೂಲಕ ಶೈಕ್ಷಣಿಕ ಜಾರಿ ನಿರ್ಧಾರ ಮಾಡಲಾಗಿದೆ. ಪ್ರಧಾನಿ ಇ-ವಿದ್ಯಾ ಯೋಜನೆ ಅಡಿಯಲ್ಲಿ 200 ಚಾನೆಲ್​ಸ್ ಜಾರಿಯಾಗಲಿದೆ. ವಿಶ್ವದರ್ಜೆಯ ಡಿಜಿಟಲ್ ಯೂನಿವರ್ಸಿಟಿ ಸ್ಥಾಪನೆ ಕೂಡ ಮಾಡಲಿದೆ. ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ನೆರವು ನೀಡಲಿದೆ. ಕೊರೋನಾದಿಂದ ಈಗಾಗಲೇ ಮಕ್ಕಳ ಎಜುಕೇಷನ್​ ಬಗ್ಗೆ ಪೋಷಕರು ಚಿಂತೆ ಮಾಡಿಕೊಂಡಿದ್ದಾರೆ. ಸಿಟಿ ಮಂದಿ ಮಕ್ಕಳಿಗೆ ಎಜುಕೇಷನ್​ ಬಗ್ಗೆ ಗೊಂದಲವಿಲ್ಲದಿದ್ದರೂ, ಗ್ರಾಮಿಣ ಪ್ರರ್ದೇಶದ ಪೋಷಕರಿಗೆ ಆತಂಕ ಹೆಚ್ಚಿಸಿದೆ.

ಈ ಬಾರಿಯ ಬಜೆಟ್ ಪ್ರಮುಖ ಅಂಶಗಳು

- 1486 ಅನುಪಯುಕ್ತ ಕಾನೂನುಗಳನ್ನು ರದ್ದುಗೊಳಿಸಿದೆ.

- ಮುಂದಿನ ಮೂರು ವರ್ಷಗಳಲ್ಲಿ ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯುವುದು ಗುರಿಯಾಗಿದೆ.

- MSP ನೇರವಾಗಿ ರೈತರ ಖಾತೆಗೆ ಹೋಗುತ್ತದೆ.

- ಗಂಗಾನದಿಯ 5 ಕಿ.ಮೀ ವ್ಯಾಪ್ತಿಯೊಳಗೆ ಸಾವಯವ ಕೃಷಿಗೆ ಉತ್ತೇಜನ ನೀಡಲಾಗುವುದು.

- ಮುಂದಿನ ಮೂರು ವರ್ಷಗಳಲ್ಲಿ 400 ಹೊಸ ತಲೆಮಾರಿನ ವಂದೇ ಭಾರತ್ ರೈಲುಗಳನ್ನು ಓಡಿಸಲಾಗುವುದು.

- ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 80 ಲಕ್ಷ ಮನೆಗಳನ್ನು ನಿರ್ಮಿಸಲಾಗುವುದು.

-ಆಭರಣಗಳ ಮೇಲೆ ಸುಂಕ ಇಳಿಕೆ.

- ಸಣ್ಣ ಉದ್ದಿಮೆಗಳಿಗೆ ಒಂದು ವರ್ಷದವರೆಗೆ 1 ವರ್ಷ ಸುಂಕ ಇಳಿಕೆಯ ವಿನಾಯ್ತಿ.

- ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳು, ರತ್ನಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ.5 ಕ್ಕೆ ಇಳಿಸಲಾಗಿದೆ.
Published by:Mahmadrafik K
First published: