• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Union Budget 2022: ಒನ್ ಕ್ಲಾಸ್, ಒನ್ ಟಿವಿ ಚಾನಲ್.. 200 ಟಿವಿ ಚಾನೆಲ್‌ಗಳ ಮೂಲಕ ಶೈಕ್ಷಣಿಕ ಜಾರಿ ನಿರ್ಧಾರ!

Union Budget 2022: ಒನ್ ಕ್ಲಾಸ್, ಒನ್ ಟಿವಿ ಚಾನಲ್.. 200 ಟಿವಿ ಚಾನೆಲ್‌ಗಳ ಮೂಲಕ ಶೈಕ್ಷಣಿಕ ಜಾರಿ ನಿರ್ಧಾರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೊರೋನಾ ಕಾರಣದಿಂದ ಶಾಲೆಗಳು ಬಂದ್ ಆಗಿವೆ. ಹೀಗಾಗಿ 1ರಿಂದ 12ನೇ ತರಗತಿ ಮಕ್ಕಳಿಗೆ ಚಾನಲ್ ಮಾಡಲಾಗುವುದು  ಒನ್ ಕ್ಲಾಸ್, ಒನ್ ಟಿವಿ ಚಾನಲ್ ಮಾಡಲಾಗುವುದು ಅಂತ ಸಚಿವೆ ತಿಳಿಸಿದ್ದಾರೆ

 • Share this:

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಲೋಕಸಭೆಯಲ್ಲಿ ಬಜೆಟ್ ಮಂಡಿಸುತ್ತಿದ್ದಾರೆ. ನಿರ್ಮಲಾ ಸೀತಾರಾಮನ್‌ 2019, 2020, 2021ರಲ್ಲಿ ಬಜೆಟ್ ಮಂಡಿಸಿದ್ದರು. ಇಂದು 4ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ಇದು ನರೇಂದ್ರ ಮೋದಿ (Narendra Modi) ನೇತೃತ್ವ ಸರ್ಕಾರದ 10ನೇ ಬಜೆಟ್. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು  ಪೇಪರ್ ಲೆಸ್ ಬಜೆಟ್ (Paperless Budget) ಮಂಡಿಸುತ್ತಿದ್ದಾರೆ. ಸುಮಾರು 2 ಗಂಟೆ ಬಜೆಟ್ ಮಂಡನೆ ಮಾಡಲಿದ್ದಾರೆ ಎಂದು ಹೇಳಲಾಗುತ್ತುದೆ. ಬಜೆಟ್​ ಮಂಡನೆ ಶುರುವಾಗುತ್ತಿದ್ದಂತೆ ಎಲ್ಲರ ಕುತೂಹಲ ಹೆಚ್ಚಿಸಿದೆ. ಕೊರೋನಾ (Corona) ಕಾರಣದಿಂದ ಮಕ್ಕಳು ಶಾಲೆಗೆ ಹೋಗಿರಲಿಲ್ಲ. ಹೀಗಾಗಿ ಶಿಕ್ಷಣ ಇಲಾಖೆಗೆ ಬೂಸ್ಟ್​ ನೀಡುವ ನಿಟ್ಟಿನಲ್ಲಿ, ನಿರ್ಮಲಾ ಸೀತಾರಾಮನ್​ ಒನ್ ಕ್ಲಾಸ್, ಒನ್ ಟಿವಿ ಚಾನಲ್ (One Class, One Tv Channel) ಮಾಡಲಾಗುವುದು ಅಂತ ತಿಳಿಸಿದ್ದಾರೆ. ಕೊರೋನಾ ಕಾರಣದಿಂದ ಶಾಲೆಗಳು ಬಂದ್ ಆಗಿವೆ. ಹೀಗಾಗಿ 1ರಿಂದ 12ನೇ ತರಗತಿ ಮಕ್ಕಳಿಗೆ ಚಾನಲ್ ಮಾಡಲಾಗುವುದು  ಒನ್ ಕ್ಲಾಸ್, ಒನ್ ಟಿವಿ ಚಾನಲ್ ಮಾಡಲಾಗುವುದು ಅಂತ ಸಚಿವೆ ತಿಳಿಸಿದ್ದಾರೆ.


ಒನ್​ ಕ್ಲಾಸ್​, ಒನ್​ ಚಾನಲ್​!


ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ  ಒನ್ ಕ್ಲಾಸ್‌, ಒನ್ ಟಿವಿ ಚಾನೆಲ್ ಯೋಜನೆ ಜಾರಿಗೆ ಕೇಂದ್ರ ನಿರ್ಧರಿಸಿದೆ. 200 ಟಿವಿ ಚಾನೆಲ್‌ಗಳ ಮೂಲಕ ಶೈಕ್ಷಣಿಕ ಜಾರಿ ನಿರ್ಧಾರ ಮಾಡಲಾಗಿದೆ. ಪ್ರಧಾನಿ ಇ-ವಿದ್ಯಾ ಯೋಜನೆ ಅಡಿಯಲ್ಲಿ 200 ಚಾನೆಲ್​ಸ್ ಜಾರಿಯಾಗಲಿದೆ. ವಿಶ್ವದರ್ಜೆಯ ಡಿಜಿಟಲ್ ಯೂನಿವರ್ಸಿಟಿ ಸ್ಥಾಪನೆ ಕೂಡ ಮಾಡಲಿದೆ. ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ನೆರವು ನೀಡಲಿದೆ. ಕೊರೋನಾದಿಂದ ಈಗಾಗಲೇ ಮಕ್ಕಳ ಎಜುಕೇಷನ್​ ಬಗ್ಗೆ ಪೋಷಕರು ಚಿಂತೆ ಮಾಡಿಕೊಂಡಿದ್ದಾರೆ. ಸಿಟಿ ಮಂದಿ ಮಕ್ಕಳಿಗೆ ಎಜುಕೇಷನ್​ ಬಗ್ಗೆ ಗೊಂದಲವಿಲ್ಲದಿದ್ದರೂ, ಗ್ರಾಮಿಣ ಪ್ರರ್ದೇಶದ ಪೋಷಕರಿಗೆ ಆತಂಕ ಹೆಚ್ಚಿಸಿದೆ.


ಇದನ್ನು ಓದಿ : ಮೇಕ್​ ಇನ್​ ಇಂಡಿಯಾ ಮೂಲಕ 60 ಲಕ್ಷ ಉದ್ಯೋಗ ಸೃಷ್ಟಿ ಸರ್ಕಾರದ ಮುಂದಿನ ಗುರಿ!


200 ಟಿವಿ ಚಾನೆಲ್‌ಗಳ ಮೂಲಕ ಶೈಕ್ಷಣಿಕ ಜಾರಿ ನಿರ್ಧಾರ!


ಡಿಜಿಟಲ್ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುತ್ತದೆ. ವಿಶ್ವ ದರ್ಜೆಯ ಶಿಕ್ಷಣಕ್ಕೆ ಮಾನ್ಯತೆ ಒದಗಿಸಿಕೊಡಲಾಗುತ್ತದೆ. ಇದುವರೆಗೆ ಕಡಿಮೆ ಚಾನಲ್​​ಗಳಲ್ಲಿ ಪ್ರಸಾರವಾಗುತ್ತಿದ್ದಂತ ಒನ್ ಕ್ಲಾಸ್, ಒನ್ ಟಿವಿ ಚಾನಲ್ ಸಾಮರ್ಥ್ಯವನ್ನು ಹೆಚ್ಚಳ ಮಾಡಲಾಗಿದೆ. ಈ ಚಾನಲ್​ಗಳನ್ನು 200ಕ್ಕೆ ಹೆಚ್ಚಿಸುತ್ತಿರೋದಾಗಿ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು. ಈ ಬಗ್ಗೆ ಇಂದು ಸಂಸತ್ ನಲ್ಲಿ ಕೇಂದ್ರ ಬಜೆಟ್ ಮಂಡಿಸುತ್ತಾ ಮಾತನಾಡಿದ ಅವರು, ಹಳ್ಳಿ ಶಾಲೆಗಳ ಮಕ್ಕಳ ವಿದ್ಯಾಭ್ಯಾಸದ ದೃಷ್ಠಿಯಿಂದ ಒನ್ ಕ್ಲಾಸ್, ಒನ್ ಟಿವಿ ಚಾನಲ್ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.


ಇದನ್ನು ಓದಿ: 400 ವಂದೇ ಭಾರತ್ ರೈಲುಗಳ ಘೋಷಣೆ

top videos


  ಇಂಟರ್​ನೆಟ್​ ಸಮಸ್ಯೆಯಿಂದ ಆನ್​ಲೈನ್​ ಕ್ಲಾಸ್​ ಅಟೆಂಡ್​ ಮಾಡಲು ಸಾಧ್ಯವಾಗದ ಮಕ್ಕಳಿಗಾಗಿ ಈ ಒನ್​ ಟಿವಿ, ಒನ್​ ಚಾನೆಲ್​ ಯೋಜನೆ ಆರಂಭವಾಗಿತ್ತು. ಇಂಟರ್​ನೆಟ್​ ಸಮಸ್ಯೆ ಇದ್ದ ಮಕ್ಕಳು ಟಿವಿಯಲ್ಲಿ ಈ ಚಾನೆಲ್​ ನೋಡಿ ಕಲಿಯಬಹುದು. ಸಿಟಿ, ನಗರಗಳಲ್ಲಿ ಇಂಟರ್​ನೆಟ್ ಸಮಸ್ಯೆ ಇಲ್ಲದ್ದಿದ್ದರೂ, ಗ್ರಾಮಿಣ ಭಾಗಗಳಲ್ಲಿ ಈ ಸಮಸ್ಯೆ ಹೆಚ್ಚಿದೆ. ಅದರಲ್ಲೂ ಕೊರೋನಾ ಸಮಯದಲ್ಲಿ ಅದೆಷ್ಟೋ ಬಡ ಜನರು ಆನ್​ಲೈನ್​ಗಾಗಿ ಫೋನ್​ ಖರೀದಿಸಲಾಗದೇ ಸಂಕಷ್ಟಕ್ಕೆ ಈಡಾಗಿದ್ದರು. ಇಂಥ ಮಕ್ಕಳಿಗೆ ಚಾನೆಲ್​ ಮೂಲಕ ಶಿಕ್ಷಣ ನೀಡುವುದಕ್ಕೆ ಸರ್ಕಾರ ಮುಂದಾಗಿತ್ತು. ಇದೀಗ ಆ ಚಾನೆಲ್​ಗಳ ಸಂಖ್ಯೆಯನ್ನು 200ಕ್ಕೆ ಹೆಚ್ಚಿಸಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಹೆಚ್ಚಿನ ಸಹಾಯವಾಗಲಿದೆ.

  First published: