HOME » NEWS » National-international » UNION BUDGET 2021 MIDDLE CLASS MEMES FLOOD AT TWITTER WITH NIRMALA SITHARAMAN ANNOUNCES UNION BUDGET 2021 LG

Union Budget 2021: ಕೇಂದ್ರ ಬಜೆಟ್​​ನಲ್ಲಿ ಮಧ್ಯಮ ವರ್ಗದ ಜನರಿಗೆ ನಿರಾಸೆ; ಟ್ವಿಟರ್​​ನಲ್ಲಿ ಹರಿದಾಡಿದ ಮೀಮ್ಸ್​ಗಳು

ಕೊರೋನಾದಂತಹ ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ನಡುವೆ ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡಿದ್ದರೆ ಮಧ್ಯಮ ವರ್ಗದ ಜನರಿಗೆ ಸ್ವಲ್ಪ ರಿಲೀಫ್ ಸಿಕ್ಕಿದಂತೆ ಆಗುತ್ತಿತ್ತು. ಆದರೆ ಕೇಂದ್ರ ಬಜೆಟ್ ಹಾಗೆ ಮಾಡದೆ ಜನರಿಗೆ ನಿರಾಸೆ ಉಂಟು ಮಾಡಿದೆ.

news18-kannada
Updated:February 1, 2021, 4:16 PM IST
Union Budget 2021: ಕೇಂದ್ರ ಬಜೆಟ್​​ನಲ್ಲಿ ಮಧ್ಯಮ ವರ್ಗದ ಜನರಿಗೆ ನಿರಾಸೆ; ಟ್ವಿಟರ್​​ನಲ್ಲಿ ಹರಿದಾಡಿದ ಮೀಮ್ಸ್​ಗಳು
ಮೀಮ್ಸ್​
  • Share this:
ನವದೆಹಲಿ(ಫೆ.01): ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021ನೇ ವರ್ಷದ ಮೊದಲ ಕೇಂದ್ರ ಬಜೆಟ್​ ಮಂಡನೆ ಮಾಡಿದ್ದಾರೆ. ಕೊರೋನಾ ಸಂಕಷ್ಟದ ನಡುವೆ ಬಹುನಿರೀಕ್ಷಿತ ಕೇಂದ್ರ ಬಜೆಟ್​ ಇಂದು ಮಂಡನೆಯಾಗಿದೆ. ಕೇಂದ್ರ ಬಜೆಟ್​​​​ನಿಂದ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದ ಮಧ್ಯಮ ವರ್ಗದ ಜನರಿಗೆ ಭಾರೀ ನಿರಾಸೆಯಾಗಿದೆ. ಕೆಲವು ವಸ್ತುಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲವು ವಸ್ತುಗಳ ಬೆಲೆ ಇಳಿಕೆಯಾಗಿದೆ. ಮಧ್ಯಮ ವರ್ಗದ ಜನರೇ ಯಾವಾಗಲೂ ಬಲಿಪಶುಗಳಾಗುತ್ತಾರೆ ಎಂಬಂತೆ ಬಿಂಬಿಸುವ ಮೀಮ್ಸ್​​ಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. 2021 ನೇ ವರ್ಷದ ಮೊದಲ ಕೇಂದ್ರ ಬಜೆಟ್​ ಮಂಡನೆಯಾಗುತ್ತಿದ್ದಂತೆಯೇ ಮಧ್ಯಮ ವರ್ಗದ ಜನರಿಗೆ ಯಾವುದೇ ಲಾಭ ಸಿಕ್ಕಿಲ್ಲ ಎಂದು ತಿಳಿಯಲಾಗಿದೆ.

ಇಂದು ಮಂಡನೆಯಾದ ಕೇಂದ್ರ ಬಜೆಟ್​ನಿಂದ ಮಧ್ಯಮ ವರ್ಗದ ಜನರು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಮಧ್ಯಮ ವರ್ಗದ ಜನರಿಗೆ ಸ್ವಲ್ಪಮಟ್ಟಿಗೆ ರಿಲೀಫ್ ಸಿಗಲಿದೆ ಎನ್ನಲಾಗಿತ್ತು. ಆದರೆ ಭಾರೀ ನಿರಾಸೆ ಉಂಟಾಗಿದೆ. ಆದಾಯ ತೆರಿಗೆ ವಿನಾಯಿತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹೀಗಾಗಿ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಮಧ್ಯಮ ವರ್ಗದ ಜನರಿಗೆ ಕೇಂದ್ರ ಬಜೆಟ್ ಕಹಿ ನೀಡಿದೆ.

ಕೊರೋನಾದಂತಹ ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ನಡುವೆ ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡಿದ್ದರೆ ಮಧ್ಯಮ ವರ್ಗದ ಜನರಿಗೆ ಸ್ವಲ್ಪ ರಿಲೀಫ್ ಸಿಕ್ಕಿದಂತೆ ಆಗುತ್ತಿತ್ತು. ಆದರೆ ಕೇಂದ್ರ ಬಜೆಟ್ ಹಾಗೆ ಮಾಡದೆ ಜನರಿಗೆ ನಿರಾಸೆ ಉಂಟು ಮಾಡಿದೆ.

ಕೌನ್ಸೆಲಿಂಗ್ ಮೂಲಕ ನಡೆಯಲಿದೆ ಪದವಿ, ಡಿಪ್ಲೋಮಾ, ಎಂಜಿನಿಯರಿಂಗ್‌ ಕಾಲೇಜು ಉಪನ್ಯಾಸಕರ ವರ್ಗಾವಣೆ

ಮೀಮ್​ ಮೇಕರ್ಸ್​​ಗಳು ಟ್ವಿಟರ್​ನಲ್ಲಿ 2021ರ ಕೇಂದ್ರ ಬಜೆಟ್​​ನಿಂದ ಮಧ್ಯಮ ವರ್ಗದ ಜನರ ನಿರೀಕ್ಷೆಗಳೇನು ಎಂಬ ಬಗ್ಗೆ ಮೀಮ್ಸ್​ ಮಾಡಿದ್ದಾರೆ.

ಕೊರೋನಾ ಸಂದಿಗ್ಧತೆಯ ನಡುವೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇಂದು 9ನೇ ಬಜೆಟ್​ ಮಂಡನೆ ಮಾಡಿದೆ. ಈ ಬಾರಿಯ ಕೇಂದ್ರ ಬಜೆಟ್​​ನಲ್ಲಿ ಉದ್ಯೋಗ ಸೃಷ್ಟಿ ಮತ್ತು ಗ್ರಾಮೀಣಾಭಿವೃದ್ದಿ ಬಗ್ಗೆ ಹೆಚ್ಚಿನ ನಿರೀಕ್ಷೆ ಇಡಲಾಗಿತ್ತು.
Published by: Latha CG
First published: February 1, 2021, 4:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories