HOME » NEWS » National-international » UNION BUDGET 2021 HIGHLIGHTS HEALTH AND INFRA GETS GOOD BOOST SNVS

Union Budget 2021 – ಕೇಂದ್ರ ಬಜೆಟ್​ನ ಮುಖ್ಯಾಂಶಗಳು; ಯಾವ್ಯಾವುದಕ್ಕೆ ದೊಡ್ಡ ಪುಷ್ಟಿ ಸಿಕ್ಕಿದೆ?

ರಸ್ತೆ ಸೌಕರ್ಯ, ಆರೋಗ್ಯ, ಪರ್ಸನಲ್ ಟ್ಯಾಕ್ಸ್, ರೈಲ್ವೇಸ್, ಬ್ಯಾಂಕ್, ಡಿಸ್ ಇನ್​ವೆಸ್ಟ್​​ಮೆಂಟ್ ಇತ್ಯಾದಿ ವಲಯಗಳಿಗೆ ಈ ಬಜೆಟ್​ನಲ್ಲಿ ಏನೆಲ್ಲಾ ವಿನಿಯೋಗ ಆಗಲಿದೆ ಎಂಬ ವಿವರ ಇಲ್ಲಿದೆ.

news18
Updated:February 1, 2021, 2:00 PM IST
Union Budget 2021 – ಕೇಂದ್ರ ಬಜೆಟ್​ನ ಮುಖ್ಯಾಂಶಗಳು; ಯಾವ್ಯಾವುದಕ್ಕೆ ದೊಡ್ಡ ಪುಷ್ಟಿ ಸಿಕ್ಕಿದೆ?
ನಿರ್ಮಲಾ ಸೀತಾರಾಮನ್
  • News18
  • Last Updated: February 1, 2021, 2:00 PM IST
  • Share this:
ನವದೆಹಲಿ(ಫೆ. 01): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮೂರನೇ ಬಜೆಟ್ ಕೋವಿಡ್ ಸಂಕಷ್ಟದಲ್ಲಿ ಆಗಿರುವ ಅಸಾಮಾನ್ಯ ಬಜೆಟ್ ಆಗಿದೆ. ಬಹಳ ನಿರೀಕ್ಷೆಗಳನ್ನ ಹೊಂದಿದ್ದ್ ಈ ಬಜೆಟ್​ನಲ್ಲಿ ಹಲವು ಕ್ಷೇತ್ರಗಳಲ್ಲಿ ಭರ್ಜರಿ ಪುಷ್ಟಿ ಸಿಕ್ಕಿದೆ. ರಸ್ತೆ ಸೌಕರ್ಯ, ಆರೋಗ್ಯ ಇತ್ಯಾದಿ ವಲಯಗಳಿಗೆ ಶಕ್ತಿ ತುಂಬಲಾಗಿದೆ.

ವೈಯಕ್ತಿಕ ತೆರಿಗೆ:

75 ವರ್ಷ ಮೇಲ್ಪಟ್ಟ ವಯಸ್ಸಿನ ಹಾಗೂ ಮನೆ ಬಾಡಿಗೆ ಮತ್ತು ಪಿಂಚಣಿಯ ಆದಾಯ ಮಾತ್ರ ಹೊಂದಿರುವ ಹಿರಿಯ ನಾಗರಿಕರಿಗೆ ಐಟಿ ರಿಟರ್ನ್ ಸಲ್ಲಿಕೆಯಿಂದ ವಿನಾಯಿತಿ ನೀಡಲಾಗಿದೆ. ಇದು ವಯೋವೃದ್ಧರಿಗೆ ನಿರಾಳ ತರುವ ಬೆಳವಣಿಗೆಯಾಗಿದೆ. ಹಾಗೆಯೇ, ಸಣ್ಣ ತೆರಿಗೆ ಪಾವತಿದಾರರ ವ್ಯಾಜ್ಯ ಪರಿಹಾರಕ್ಕಾಗಿ ಫೇಸ್​ಲೆಸ್ ವ್ಯವಸ್ಥೆ ಸ್ಥಾಪನೆ ಮಾಡುವುದಾಗಿ ಸಚಿವರು ಘೋಷಿಸಿದ್ದಾರೆ.

ಐಟಿ ರಿಟರ್ನ್ ವ್ಯವಸ್ಥೆಯನ್ನ ಇನ್ನಷ್ಟು ಸರಳಗೊಳಿಸಲಾಗಿದೆ. ಸ್ಯಾಲರಿ ಇನ್ಕಮ್, ತೆರಿಗೆ ಪಾವತಿ ಮತ್ತು ಟಿಡಿಎಸ್ ಅಂಶಗಳನ್ನ ಐಟಿಆರ್ ಫಾರ್ಮ್​ಗಳಲ್ಲಿ ಮೊದಲೇ ಭರ್ತಿ ಮಾಡಲಾಗುವುದು.

ಆರೋಗ್ಯ ಕ್ಷೇತ್ರ:

ಆರೋಗ್ಯ ಕ್ಷೇತ್ರಕ್ಕೆ ಬರೋಬ್ಬರಿ 2,23,246 ಕೋಟಿ ರೂ ಕೊಡಲಾಗಿದೆ. ಕಳೆದ ಬಜೆಟ್​ಗೆ ಹೋಲಿಸಿದರೆ ಶೇ. 137ರಷ್ಟು ಹೆಚ್ಚಳವಾಗಿದೆ.

ಪಿಎಂ ಆತ್ಮನಿರ್ಭರ್ ಸ್ವಸ್ಥ್ ಭಾರತ್ ಯೋಜನೆಯ ಘೋಷಣೆ ಆಗಿದೆ. ಆರು ವರ್ಷದವರೆಗೆ ಈ ಯೋಜನೆಗೆ 64,180 ಕೋಟಿ ರೂ ವಿನಿಯೋಗವಾಗಲಿದೆ. 15 ತುರ್ತು ಆರೋಗ್ಯ ಕೇಂದ್ರಗಳಿಗೆ ಸಹಾಯಕವಾಗಲಿದೆ. ರಾಷ್ಟ್ರೀಯ ರೋಗ ನಿಯಂತ್ರಣ ಕೇಮದ್ರ ಮತ್ತಿತರ ವಿಚಾರಗಳಿಗೆ ಪುಷ್ಟಿ ಸಿಗಲಿದೆ. ರಾಷ್ಟ್ರೀಯ ಪೌಷ್ಟಿಕ ಯೋಜನೆಯ ವ್ಯವಸ್ಥೆ ಬಲಗೊಳ್ಳಲಿದೆ.ರಸ್ತೆ ಸೌಕರ್ಯ:

ಹೊಸ ಹೆದ್ದಾರಿಗಳ ಘೋಷಣೆ ಆಗಿದೆ. ತಮಿಳುನಾಡಿನಲ್ಲಿ 3,500 ಕಿಮೀ ಕಾರಿಡಾರ್, ಕೇರಳದಲ್ಲಿ 1,100 ಕಿಮೀ ಕಾರಿಡಾರ್ ಯೋಜನೆಗೆ ಅನುಮೋದನೆ ಸಿಕ್ಕಿದೆ. ಇದಕ್ಕೆ 65 ಸಾವಿರ ಕೋಟಿ ರೂ ಬಿಡುಗಡೆಯಾಗಲಿದೆ. ಪಶ್ಚಿಮ ಬಂಗಾಳದಲ್ಲಿ 675 ಕಿಮೀ ಕಾರಿಡಾರ್​ಗೆ 95 ಸಾವಿರ ಕೋಟಿ ರೂ, ಅಸ್ಸಾಮ್​ನಲ್ಲಿ 1,300 ಕೋಟಿ ರೂ ಹಣವನ್ನು ಮುಂದಿನ ಮೂರು ವರ್ಷಗಳಲ್ಲಿ ಒದಗಿಸಲಾಗುತ್ತದೆ. ಒಟ್ಟಾರೆ, ರಸ್ತೆ ಸೌಕರ್ಯ ಯೋಜನೆಗಳಿಗೆ ಈ ಬಜೆಟ್​ನಲ್ಲಿ ಭರ್ಜರಿ ಪುಷ್ಟಿ ಸಿಕ್ಕಿದೆ.

ಬ್ಯಾಂಕ್:

ಸ್ಟಾರ್ಟಪ್​ಗಳ ಪೈಕಿ ಶೇ. 1 ಕಂಪನಿಗಳಿಗೆ ಪೇಯ್ಡ್ ಅಪ್ ಕ್ಯಾಪಿಟಲ್ ಮೇಲಿನ ನಿರ್ಬಂಧ ಇರುವುದಿಲ್ಲ.  ಐಡಿಬಿಐ ಸೇರಿದಂತೆ ಮೂರು ಬ್ಯಾಂಕುಗಳ ಬಂಡವಾಳ ಹಿಂತೆಗೆತ (Disinvestment) ಆಗಲಿದೆ. ಈಗಾಗಲೇ ಘೋಷಣೆ ಆಗಿರುವ ಏರ್ ಇಂಡಿಯಾ, ಬಿಪಿಸಿಎಲ್ ಮೊದಲಾದ ಸಂಸ್ಥೆಗಳ ಬಂಡವಾಳ ಹಿಂತೆಗೆತ ಪ್ರಕ್ರಿಯೆ 2022ರಷ್ಟರಲ್ಲಿ ಪೂರ್ಣಗೊಳ್ಳಲಿದೆ.

ರೈಲ್ವೇಸ್:

ರೈಲ್ವೆ ಕ್ಷೇತ್ರಕ್ಕೆ 1,10,055 ಕೋಟಿ ರೂ ವಿನಿಯೋಗ ಆಗಿದೆ. ಪಶ್ಚಿಮ ಬಂಗಾಳದಲ್ಲಿ ರೈಲ್ವೆ ಯೋಜನೆಗಳಿಗೆ 25,000 ಕೋಟಿ, ಚೆನ್ನೈ ಮೆಟ್ರೋಗೆ 63,000 ಕೋಟಿ ರೂ ನೀಡಲಾಗಿದೆ. ಬೆಂಗಳೂರಿನಲ್ಲಿ ನಮ್ಮ ಮೆಟ್ರೋಗೆ ಹಣ ಬಿಡುಗಡೆ ಮಾಡಲಾಗಿದೆ.

ಕೋವಿಡ್-19 ಲಸಿಕೆ:

ಕೋವಿಡ್ ಲಸಿಕೆಗಳಿಗೆ 35 ಸಾವಿರ ಕೋಟಿ ರೂ ಮೀಸಲಿರಿಸಲಾಗಿದೆ. ಈಗ ಅನುಮೋದನೆ ಪಡೆದಿರುವ ಕೋವಿಶೀಲ್ಡ್ ಮ್ತು ವೋವ್ಯಾಕ್ಸಿನ್ ಜೊತೆಗೆ ಶೀಘ್ರದಲ್ಲೇ ಇನ್ನೆರಡು ಲಸಿಕೆಗಳು ಹೊರಬರಲಿವೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಕೃಷಿ:

ಎಪಿಎಂಸಿಯ ಸೌಕರ್ಯಗಳನ್ನ ಬಲಪಡಿಸಲು ಕೃಷಿ ಸೌಕರ್ಯ ನಿಧಿಗಳನ್ನ ಘೋಷಣೆ ಮಾಡಲಾಗಿದೆ. ರೈತರಿಗೆ ನೀಡುವ ಎಂಎಸ್​ಪಿಯಲ್ಲಿ ಗಣನೀಯ ಹೆಚ್ಚಳವಾಗಿದೆ. ಗೋದಿ ಖರೀದಿಗೆ ರೈತರಿಗೆ 2019-20ರಲ್ಲಿ 62 ಸಾವಿರ ಕೋಟಿ ನೀಡಲಾಗಿತ್ತು. 2020-21ರಲ್ಲಿ ಇದರ ಮೊತ್ತ 75 ಸಾವಿರ ಕೋಟಿ ರೂ ಆಗಿದೆ. 2013-14ರಲ್ಲಿ ಭತ್ತ ಖರೀದಿಗೆ 53,928 ಕೋಟಿ ರೂ ವೆಚ್ಚ ಮಾಡಲಾಗಿತ್ತು. 2020-21ರಲ್ಲಿ ಇದು 1,72,752 ಕೋಟಿ ರೂಗೆ ಹೆಚ್ಚಳವಾಯಿತು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಎಫ್​​ಡಿಐ:

ವಿದೇಶೀ ನೇರ ಬಂಡವಾಳ ಶೇ. 74ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.

ಸ್ವಚ್ಛ ಭಾರತ್ ಮತ್ತು ಸ್ವಸ್ಥ್ ಭಾರತ್:

ನಗರ ಸ್ವಚ್ಛ ಭಾರತ್ ಮಿಷನ್ ಯೋಜನೆಗೆ ಐದು ವರ್ಷಗಳಿಗೆ 1,41,678 ಕೋಟಿ ರೂ ವಿನಿಯೋಗ ಮಾಡಲು ನಿರ್ಧರಿಸಲಾಗಿದೆ.

ಉಜ್ವಲ್ ಯೋಜನೆ:

ಕೇಂದ್ರದ ಉಜ್ವಲ್ ಎಲ್​ಪಿಜಿ ಯೋಜನೆಯ ವ್ಯಾಪ್ತಿಗೆ ಇನ್ನೂ 1 ಕೋಟಿ ಮಂದಿಯನ್ನ ತರಲಾಗಿದೆ. ಒಟ್ಟು 8 ಕೋಟಿ ಮಂದಿಗೆ ಈ ಸ್ಕೀಮ್ ಇದೆ. ಮುಂದಿನ ಮೂರು ವರ್ಷದಲ್ಲಿ ಇನ್ನೂ 100 ಜಿಲ್ಲೆಗಳನ್ನ ಸೇರಿಸಲಾಗುವುದು.

ಸ್ವಚ್ಛ ಗಾಳಿ:

ಹತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ 42 ನಗರ ಕೇಂದ್ರಗಳಲ್ಲಿ ಸ್ವಚ್ಛ ಗಾಳಿಗಾಗಿ 2,217 ಕೋಟಿ ರೂ ಘೋಷಣೆ ಮಾಡಲಾಗಿದೆ. ಹಳೆಯ ವಾಹನಗಳನ್ನ ನಿರ್ಮೂಲನೆ ಮಾಡಲಾಗುತ್ತದೆ.

ಜಲ ಜೀವನ್ ಮಿಷನ್:

ಎಲ್ಲಾ ನಗರ ಸಂಸ್ಥೆಗಳಲ್ಲಿ ಜನಜೀವನ್ ಮಿಷನ್ ಘೋಷಣೆ ಮಾಡಲಾಗಿದೆ. ಮುಂದಿನ ಐದು ವರ್ಷದಲ್ಲಿ ಜನಜಿವನ್ ಯೋಜನೆಗೆ 2.87 ಲಕ್ಷ ಕೋಟಿ ವಿನಿಯೋಗವಾಗಲಿದೆ.

ಸೆನ್ಸಸ್:

ಮುಂಬರುವ ಸೆನ್ಸಸ್​ಗೆ 3,768 ಕೋಟಿ ರೂ ಒದಗಿಸಲಾಗಿದೆ.
Published by: Vijayasarthy SN
First published: February 1, 2021, 1:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories