Union Budget 2021: ವಿಮಾ ಕಂಪನಿಗಳ ಮೇಲಿನ ಎಫ್​ಡಿಐ ಮಿತಿ ಹೆಚ್ಚಿಸಿದ ಕೇಂದ್ರ ಸರ್ಕಾರ

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

ಅತ್ಯಂತ ಸುರಕ್ಷಿತ ಮತ್ತು ಭವಿಷ್ಯದ ನಿಧಿಯಾಗಿ ಸಾರ್ವಜನಿಕರು ವಿಮಾ ಕಂಪನಿಗಳ ಮೇಲೆ ಹಣ ಹೂಡಿಕೆ ಮಾಡುತ್ತಿದ್ದಾರೆ. ಇದೀಗ ಎಫ್​ಡಿಐ ಮಿತಿ ಹೆಚ್ಚಳ ಮಾಡಿರುವುದರಿಂದ ವಿದೇಶಿ ಕಂಪನಿಗಳು ಲಗ್ಗೆ ಹಿಡಲಿದ್ದು ಎಲ್ಐಸಿಗೆ ತೀವ್ರ ಪೈಪೋಟಿ ಕೊಡಲಿವೆ ಎಂದೇ ಹೇಳಲಾಗುತ್ತಿದೆ.

 • Share this:

  ನವದೆಹಲಿ; ವಿಮಾ ಕಂಪನಿಗಳ ಮೇಲಿನ ವಿದೇಶಿ ನೇರ ಬಂಡವಾಳ (ಎಫ್​ಡಿಐ) ಮಿತಿಯನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಿದೆ. 2021-22ರ ಸಾಲಿನ ಬಜೆಟ್​ನಲ್ಲಿ ವಿಮಾ ಕಂಪನಿಗಳ ಮೇಲಿನ ಎಫ್​ಡಿಐ ಮಿತಿಯನ್ನು ಶೇ.49ರಿಂದ ಶೇ. 74 ಕ್ಕೆ ಹೆಚ್ಚಳ ಮಾಡಲಾಗಿದೆ. ವಿಮೆ ಕಾಯ್ದೆ 1938ರ ಪ್ರಕಾರ ಎಫ್​ಡಿಐ ಮಿತಿಯನ್ನು ಶೇ. 74 ಕ್ಕೆ ಹೆಚ್ಚಳ ಮಾಡಿರುವುದು ಮಾತ್ರವಲ್ಲದೆ ದೇಶದಲ್ಲಿ ವಿದೇಶಿ ಕಂಪನಿಗಳು ಕೂಡ ವಿಮೆ ಕಂಪನಿಗಳ ಮಾಲೀಕತ್ವ ಹೊಂದಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿಕೊಟ್ಟಿದೆ.  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಬಜೆಟ್ ಮಂಡಿಸುತ್ತಿದ್ದಾರೆ. 

  ಪ್ರಸಕ್ತ ಹಣಕಾಸು ವರ್ಷದಲ್ಲಿ ಬಂಡವಾಳದ ವೆಚ್ಚವನ್ನು 4.39 ಕೋಟಿ ರೂ. ವೆಚ್ಚದಲ್ಲಿ 5.54 ಲಕ್ಷ ಕೋಟಿಗೆ ಹೆಚ್ಚಳ ಮಾಡುವ ಗುರಿ ಹೊಂದಲಾಗಿದೆ. ವಿಮಾ ಕಂಪನಿಗಳ ಮೇಲೆ ವಿದೇಶಿ ಬಂಡವಾಳ ಹೂಡಿಕೆ ಪ್ರಮಾಣವನ್ನು ಶೇ. 100ರಷ್ಟು  ಹೆಚ್ಚಳ ಮಾಡುವ ಪ್ರಸ್ತಾವನೆಯಿತ್ತು. ಆದರೆ ಇದೀಗ ಶೇ. 74ಕ್ಕೆ ಹೆಚ್ಚಳ ಮಾಡಲಾಗಿದೆ.

  ಇದನ್ನು ಓದಿ: Union Budget 2021: ಚುನಾವಣೆ ಸಮೀಪದಲ್ಲಿರುವ ಕೇರಳ, ಪಶ್ಚಿಮ ಬಂಗಾಳಕ್ಕೆ ಬಜೆಟ್​ನಲ್ಲಿ ಭಾರೀ ಅನುದಾನ

  ಅತ್ಯಂತ ಸುರಕ್ಷಿತ ಮತ್ತು ಭವಿಷ್ಯದ ನಿಧಿಯಾಗಿ ಸಾರ್ವಜನಿಕರು ವಿಮಾ ಕಂಪನಿಗಳ ಮೇಲೆ ಹಣ ಹೂಡಿಕೆ ಮಾಡುತ್ತಿದ್ದಾರೆ. ಇದೀಗ ಎಫ್​ಡಿಐ ಮಿತಿ ಹೆಚ್ಚಳ ಮಾಡಿರುವುದರಿಂದ ವಿದೇಶಿ ಕಂಪನಿಗಳು ಲಗ್ಗೆ ಹಿಡಲಿದ್ದು ಎಲ್ಐಸಿಗೆ ತೀವ್ರ ಪೈಪೋಟಿ ಕೊಡಲಿವೆ ಎಂದೇ ಹೇಳಲಾಗುತ್ತಿದೆ.

  Published by:HR Ramesh
  First published: