Union Budget 2021: ಜನಸಾಮಾನ್ಯರಿಗೆ ಕೇಂದ್ರದ ಪೆಟ್ಟು, ಇಂಧನ ಬೆಲೆಯಲ್ಲಿ ಭಾರೀ ಏರಿಕೆ: ಪೆಟ್ರೋಲ್​-2.50, ಡೀಸೆಲ್​- 4 ರೂ ಏರಿಕೆ!

ಕೇಂದ್ರ ಸರ್ಕಾರ ಪೆಟ್ರೋಲ್​ ಮೇಲೆ 2.50 ರೂ ಹಾಗೂ ಡೀಸೆಲ್​ ಮೇಲೆ ಬರೋಬ್ಬರಿ 4 ರೂಪಾಯಿಯನ್ನು ಏರಿಸಿದೆ. ಈ ಮೂಲಕ ಮಧ್ಯಮ ವರ್ಗದ ಜನರ ಉಳಿತಾಯಕ್ಕೆ ಭಾರೀ ಪೆಟ್ಟು ನೀಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವ ದೆಹಲಿ (ಫೆಬ್ರವರಿ 01); ಕೇಂದ್ರ ಸರ್ಕಾರ ಬಜೆಟ್​ ಮಂಡಿಸಿದ ಬೆನ್ನಿಗೆ ತೆರಿಗೆ ಸಂಗ್ರಹದ ಉದ್ದೇಶದಿಂದಾಗಿ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್​ ಬೆಲೆಯಲ್ಲಿ ಭಾರೀ ಏರಿಕೆ ಮಾಡಿದೆ. ಪೆಟ್ರೋಲ್​ ಮೇಲೆ 2.50 ರೂ ಹಾಗೂ ಡೀಸೆಲ್​ ಮೇಲೆ ಬರೋಬ್ಬರಿ 4 ರೂಪಾಯಿಯನ್ನು ಏರಿಸಿದೆ. ಈ ದರಗಳು ಇಂದು ಮಧ್ಯರಾತ್ರಿಯಿಂದ ಜಾರಿಯಾಗಲಿದೆ. ಈ ಮೂಲಕ ಮಧ್ಯಮ ವರ್ಗದ ಜನರ ಉಳಿತಾಯಕ್ಕೆ ಸರ್ಕಾರ ಭಾರೀ ಪೆಟ್ಟು ನೀಡಿದೆ. ಕಳೆದ ಕೆಲ ವರ್ಷಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿನಿತ್ಯ ಏರಿಕೆಯಾಗುತ್ತಲೇ ಇದೆ. ಆದರೆ, ಪೈಸೆ ಲೆಕ್ಕದಲ್ಲಿ ಏರಿಕೆಯಾಗುತ್ತಿದ್ದ ಕಾರಣ ಜನ ಸಾಮಾನ್ಯರು ಅಸಮಾಧಾನವಿದ್ದರೂ ತೋರಿಸಿಕೊಂಡಿರಲಿಲ್ಲ. ಆದರೆ, ಈ ಬಜೆಟ್​ನಲ್ಲಿ ಏಕಾಏಕಿ ರೂಪಾಯಿ ಲೆಕ್ಕದಲ್ಲಿ ತೈಲ ಬೆಲೆಯನ್ನು ಏರಿಕೆ ಮಾಡಲಾಗಿದೆ. ಈ ಮೂಲಕ ದೇಶದಾದ್ಯಂತ ತೈಲದ ಬೆಲೆ 1 ಲೀಟರ್​ಗೆ 92 ರೂ ಗಿಂತ ಅಧಿಕವಾಗಿದೆ. ಇನ್ನೂ ದೆಹಲಿ ಮುಂಬೈನಲ್ಲಿ ಈ ಬೆಲೆ ಮತ್ತಷ್ಟು ಅಧಿಕವಾಗಲಿದೆ. ಆರ್ಥಿಕ ತಜ್ಞರು ಇದು ಮಧ್ಯಮ ವರ್ಗಕ್ಕೆ ಕೇಂದ್ರ ಸರ್ಕಾರ ನೀಡಿದ ಮರ್ಮಾಘಾತ ಎಂದು ಅಭಿಪ್ರಾಯಪಟ್ಟಿದ್ದಾರೆ.

  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತಮ್ಮ ಎರಡನೇ ಪೂರ್ಣಾವಧಿ ಕೇಂದ್ರ ಬಜೆಟ್​ ಮಂಡಿಸಿದ್ದಾರೆ. ಈ ಬಜೆಟ್​ನಲ್ಲಿ ಕೃಷಿ ವಲಯಕ್ಕೆ 2 ಲಕ್ಷ ಕೋಟಿ ಹಣವನ್ನು ಮೀಸಲಿಡಲಾಗಿದೆ. ಹೀಗಾಗಿ ಕೃಷಿ ವಲಯದ ಖರ್ಚಿಗೆ ಹಣವನ್ನು ಕ್ರೋಢೀಕರಣ ಮಾಡುವ ಕಾರಣಕ್ಕೆ "ಕೃಷಿ ಸೆಸ್​"  ಹೆಸರಿನಲ್ಲಿ ಕೇಂದ್ರ ಸರ್ಕಾರ ಇದೀಗ ತೈಲ ಬೆಲೆಯನ್ನು ಏರಿಕೆ ಮಾಡಲು ಮುಂದಾಗಿದೆ.

  ಕೇಂದ್ರ ಸರ್ಕಾರ ತೈಲ ಬೆಲೆಯನ್ನು ನಿರ್ಧರಿಸುವ ಹಕ್ಕನ್ನು ಈಗಾಗಲೇ ಆಯಾ ಖಾಸಗಿ ಕಂಪೆನಿಗೆ ನೀಡಿದೆ. ಹೀಗಾಗಿ ಈ ಕಂಪೆನಿಗಳು ಪ್ರತಿನಿತ್ಯ ತೈಲ ದರ ಏರಿಸುತ್ತಲೇ ಇದೆ. ಕೊರೋನಾ ಲಾಕ್​ಡೌನ್ ಸಂದರ್ಭದಲ್ಲಿ ಗಲ್ಫ್​ ರಾಷ್ಟ್ರದಲ್ಲಿ ತೈಲಗಳ ಬೆಲೆ ಶೇ.70 ರಷ್ಟು ಕುಸಿದಿತ್ತು. ಆದರೆ, ಈ ಸಂದರ್ಭದಲ್ಲೂ ಸಹ ಈ ಕಂಪೆನಿಗಳು ಭಾರತದಲ್ಲಿ 12 ರೂ ಗಿಂತ ಅಧಿಕ ಬೆಲೆ ಏರಿಕೆ ಮಾಡಿದ್ದವು. ಈ ಮೂಲಕ ತೈಲ ಬೆಲೆ ಇಳಿಕೆಯ ಲಾಭವನ್ನು ಜನರಿಗೆ ನೀಡದೆ ಮತ್ತಷ್ಟು ಹೊರ ನೀಡಲಾಗಿತ್ತು.

  ಇದನ್ನೂ ಓದಿ: Union Budget 2021; ಸರ್ಕಾರಿ ಶಿಕ್ಷಣ ಸಂಸ್ಥೆಗಳ ಆರ್ಥಿಕ ಪುನಶ್ಚೇತನಕ್ಕೆ ಕ್ರಮ; ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ!

  ಈ ನಡುವೆ ಕೇಂದ್ರ ಸರ್ಕಾರ ಇದೀಗ ಮತ್ತೆ ತೈಲದ ಮೇಲಿನ ಸೆಸ್​ ಏರಿಕೆ ಮಾಡುವ ಮೂಲಕ ಮಧ್ಯಮ ವರ್ಗದ ಜರಿಗೆ ಮತ್ತಷ್ಟು ಹೊರೆ ನೀಡಿದೆ. ಈ ಮೂಲಕ ದಿನ ನಿತ್ಯದ ಬೆಲೆಯೂ ಏರಿಕೆಯಾಗಲಿದ್ದು, ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕಲಿದೆ ಎನ್ನಲಾಗುತ್ತಿದೆ.

  ಕೊರೋನಾ ಬೆನ್ನಿಗೆ ಸರ್ಕಾರ ಮಂಡಿಸುತ್ತಿರು ಮೊದಲ ಬಜೆಟ್​ನಲ್ಲಿ ಮಧ್ಯಮ ವರ್ಗದ ಜನರಿಗೆ ಬರಪೂರ ಪ್ಯಾಕೇಜ್​ ನೀಡಲಾಗುವುದು, ತೈಲ ಬೆಲೆಯನ್ನು ಇಳಿಸುವತ್ತ ಸರ್ಕಾರ ಗಮನವಹಿಸಲಿದೆ ಎನ್ನಲಾಗಿತ್ತು. ಆದರೆ, ಈ ಎಲ್ಲಾ ನಿರೀಕ್ಷೆಗಳು ಇದೀಗ ನಿರಾಸೆಯಾಗಿದೆ.
  Published by:MAshok Kumar
  First published: