HOME » NEWS » National-international » UNION BUDGET 2021 APP ON OUR ANDROID AND IOS MOBILES SNVS

Union Budget App - ಕೇಂದ್ರದಿಂದ ಬಜೆಟ್ ಆ್ಯಪ್ ಬಿಡುಗಡೆ; ಮೊಬೈಲ್​ನಲ್ಲೇ ಮುಂಗಡಪತ್ರದ ವಿವರ

Union Budget 2021 - ಈ ಬಾರಿಯ ಕೇಂದ್ರ ಬಜೆಟ್ ಅನ್ನು ಮೊಬೈಲ್ ಆ್ಯಪ್ ಮೂಲಕ ವೀಕ್ಷಿಸುವ ಅವಕಾಶ ಸಿಕ್ಕಿದೆ. ಫೆ. 1ರಂದು ಹಣಕಾಸು ಸಚಿವರು ಬಜೆಟ್ ಭಾಷಣ ಮಾಡಿದ ಬಳಿಕ ಬಜೆಟ್ ಸಂಬಂಧಿತ ಎಲ್ಲಾ ದಾಖಲೆಗಳು ಆ್ಯಪ್​ನಲ್ಲಿ ಓದಲು ಸಿಗಲಿವೆ.

news18
Updated:January 31, 2021, 7:31 PM IST
Union Budget App - ಕೇಂದ್ರದಿಂದ ಬಜೆಟ್ ಆ್ಯಪ್ ಬಿಡುಗಡೆ; ಮೊಬೈಲ್​ನಲ್ಲೇ ಮುಂಗಡಪತ್ರದ ವಿವರ
ಕೇಂದ್ರ ಬಜೆಟ್ ವೆಬ್ ಸೈಟ್
  • News18
  • Last Updated: January 31, 2021, 7:31 PM IST
  • Share this:
ನವದೆಹಲಿ(ಜ. 31): ಕೊರೋನಾ ಸಂಕಷ್ಟದಿಂದ ಜರ್ಝರಿತಗೊಂಡಿರುವ ದೇಶ ನಾಳೆಯ ಬಜೆಟ್ ಅನ್ನು ಹಲವು ನಿರೀಕ್ಷೆಗಳೊಂದಿಗೆ ಎದುರುನೋಡುತ್ತಿದೆ. ಅಪಾರ ನಿರೀಕ್ಷೆಗಳನ್ನ ಹೊತ್ತ ಈ ಬಜೆಟ್ ಹಲವು ರೀತಿಯಲ್ಲಿ ವಿಶೇಷತೆಗಳನ್ನ ಒಳಗೊಂಡಿರುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೆಲ ದಿನಗಳ ಹಿಂದೆಯೇ ಸುಳಿವು ನೀಡಿದ್ಧಾರೆ. ಅಂಥ ವಿಶೇಷತೆಯಲ್ಲಿ ಯೂನಿಯಲ್ ಬಜೆಟ್​ಗಾಗಿಯೇ ರೂಪಿಸಲಾದ ಮೊಬೈಲ್ ಅಪ್ಲಿಕೇಶನ್ ಕೂಡ ಒಂದು. ಆಂಡ್ರಾಯ್ಡ್ ಮತ್ತು iOS ಅವತರಣಿಕೆಯ ಆ್ಯಪ್​ಗಳು ಬಿಡುಗಡೆ ಆಗಿವೆ. ನಾಳೆ, ಅಂದರೆ ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಬಳಿಕ ಬಜೆಟ್​ನ ಎಲ್ಲಾ ದಾಖಲೆಗಳು ಆ್ಯಪ್​ನಲ್ಲಿ ಸಿಗಲಿವೆ. ಆ್ಯಪ್ ಅನ್ನು ಗೂಗಲ್ ಪ್ಲೇಸ್ಟೋರ್ ಮತ್ತು ಆ್ಯಪಲ್ ಆ್ಯಪ್ ಸ್ಟೋರ್​ನಲ್ಲಿ ಉಚಿತವಾಗಿ ಡೌನ್​ಲೋಡ್ ಮಾಡಿಕೊಳ್ಳಬಹುದಾಗಿದೆ. ಆಂಡ್ರಾಯ್ಡ್ v5 ಮತ್ತು iOS v10 ಮೇಲ್ಪಟ್ಟ ಆವೃತ್ತಿಯ ಮೊಬೈಲ್​ಗಳಲ್ಲಿ ಈ ಆ್ಯಪ್ ಸರಿಯಾಗಿ ಕಾರ್ಯನಿರ್ವಹಿಸುತ್ತದೆ.

ಕೇಂದ್ರ ಬಜೆಟ್​ಗೆ ಈಗಾಗಲೇ ಪ್ರತ್ಯೇಕ ವೆಬ್​ಸೈಟ್ ಇದೆ. ಇದರಲ್ಲಿ ವಿತ್ತ ಸಚಿವರ ಭಾಷಣದಿಂದ ಹಿಡಿದು ಎಲ್ಲಾ ದಾಖಲೆಗಳೂ ಅಪ್​ಲೋಡ್ ಆಗುತ್ತವೆ. ಹಿಂದಿನ ಬಜೆಟ್​ಗಳ ವಿವರಗಳೂ ಇದರಲ್ಲಿ ಇರುತ್ತದೆ. ಮೊಬೈಲ್ ಆ್ಯಪ್ ಕೂಡ ಇದೇ ಜಾಲತಾಣದ ಮುಂದುವರಿದ ಭಾಗವಾಗಿದೆ.

ಈ ಮೊಬೈಲ್ ಆ್ಯಪ್​ನೊಂದಿಗೆ ಈ ಬಾರಿಯ ಬಜೆಟ್ ಕಾಗದರಹಿತವಾಗಿದೆ. ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಕಾಗದರಹಿತವಾಗಿ ಬಜೆಟ್ ಮಂಡನೆಯಾಗುತ್ತಿದೆ. ಸರ್ಕಾರಿ ಸ್ವಾಮ್ಯದ ನ್ಯಾಷನಲ್ ಇನ್​ಫಾರ್ಮಾಟಿಕ್ಸ್ ಸೆಂಟರ್ (NIC) ಸಂಸ್ಥೆ ಈ ಆ್ಯಪ್ ಅಭಿವೃದ್ಧಿಪಡಿಸಿದೆ. ಪ್ಲೇಸ್ಟೋರ್​ನಲ್ಲಿ “Union Budget 2021” ಎಂದು ಸರ್ಚ್ ಮಾಡಿದರೆ ಈ ಆ್ಯಪ್ ಕಾಣಬಹದಾಗಿದೆ. ಇದೇ ಹೆಸರಿನ ಆ್ಯಪ್ ಕೂಡ ಪ್ಲೇಸ್ಟೋರ್​ನಲ್ಲಿ ಕಾಣಿಸಬಹುದು. ಆದರೆ, NIC ಎಂದು ಡೆವಲಪರ್ ಹೆಸರು ಇರುವ ಆ್ಯಪ್ ಅನ್ನ ಆಯ್ದು ಡೌನ್ ಲೋಡ್ ಮಾಡಿಕೊಳ್ಳಿ.

ಇದನ್ನೂ ಓದಿ: ಗೋಲ್ಡ್ ಸ್ಮಗ್ಲಿಂಗ್​ಗೆ ಕಡಿವಾಣ ಹಾಕಲು ಕಸ್ಟಮ್ಸ್ ಡ್ಯೂಟಿ ಇಳಿಸಲು ಸರ್ಕಾರ ಚಿಂತನೆ

ಹಾಗೊಂದು ವೇಳೆ ಗೊಂದಲ ಆಯಿತೆಂದರೆ ಯೂನಿಯನ್ ಬಜೆಟ್​ನ ವೆಬ್​ಸೈಟ್​ಗೆ ಹೋದರೆ ಅಲ್ಲಿ ನಿಮಗೆ ಮೊಬೈಲ್ ಆ್ಯಪ್​ನ ಲಿಂಕ್ ಸಿಗುತ್ತದೆ. ಅದನ್ನ ಕ್ಲಿಕ್ ಮಾಡಿದರೆ ನೇರವಾಗಿ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳುವ ಅವಕಾಶ ಇರುತ್ತದೆ. ಈ ಆ್ಯಪ್ ಇಂಗ್ಲೀಷ್ ಮತ್ತು ಹಿಂದಿ ಎರಡು ಭಾಷೆಯಲ್ಲಿ ಇರುತ್ತದೆ. ವಾರ್ಷಿಕ ಹಣಕಾಸು ಪ್ರಕಟಣೆ (Annual Financial Statement), ಫೈನಾನ್ಷಿಯಲ್ ಬಿಲ್, ರಿಸಿಪ್ಟ್ ಸೇರಿದಂತೆ ಬಜೆಟ್ ಸಂಬಂಧಿತ 14 ದಾಖಲೆಗಳು ಯೂನಿಯನ್ ಬಜೆಟ್ ಆ್ಯಪ್​ನಲ್ಲಿ ಇರುತ್ತವೆ.
Published by: Vijayasarthy SN
First published: January 31, 2021, 7:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories