Union Budget - ಪರ್ಸನಲ್ ಟ್ಯಾಕ್ಸ್ ದರದಲ್ಲಿ ಭಾರೀ ಇಳಿಕೆ; ಇಲ್ಲಿದೆ ವಿವಿಧ ಸ್ಲ್ಯಾಬ್​ಗಳ ತೆರಿಗೆ ವಿವರ

10-12.5 ಲಕ್ಷ ಆದಾಯಗಳಿಗೆ ಈ ಮುಂಚೆ ವಿಧಿಸಲಾಗುತ್ತಿದ್ದ ಶೇ. 30ರಷ್ಟು ತೆರಿಗೆಯನ್ನು ಶೇ 20ಕ್ಕೆ ಇಳಿಕೆ ಮಾಡಲಾಗಿದೆ. 12.5-15 ಲಕ್ಷದವರೆಗಿನ ಆದಾಯಕ್ಕೆ ತೆರಿಗೆಯನ್ನು ಶೇ. 25ಕ್ಕೆ ಇಳಿಸಲಾಗಿದೆ. ಈ ಮೊದಲು 10-15 ಲಕ್ಷ ಆದಾಯಕ್ಕೆ ಶೇ. 30 ತೆರಿಗೆ ವಿಧಿಸಲಾಗುತ್ತಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • News18
 • Last Updated :
 • Share this:
  ನವದೆಹಲಿ(ಫೆ. 01): ವೈಯಕ್ತಿಕ ಆದಾಯ ತೆರಿಗೆಯಲ್ಲಿ ನಿರೀಕ್ಷೆಯಂತೆ ಕೇಂದ್ರ ಸರ್ಕಾರ ಇಳಿಕೆ ಮಾಡಿದೆ. ತೆರಿಗೆ ದರವನ್ನು ಸಾಕಷ್ಟು ಕಡಿಮೆ ಮಾಡಿದೆ. ಆದಾಯ ತೆರಿಗೆ ಸ್ಲ್ಯಾಬ್​ಗಳ ಸಂಖ್ಯೆಯನ್ನು ಹೆಚ್ಚಿಸಿ ವಿವಿಧ ಹಂತಗಳಿಗೆ ವಿವಿಧ ತೆರಿಗೆ ದರ ವಿಧಿಸಿದೆ. ಐದು ಲಕ್ಷದವರೆಗಿನ ಆದಾಯ ಇರುವವರಿಗೆ ತೆರಿಗೆ ವಿನಾಯಿತಿ ಮುಂದುವರಿಯಲಿದೆ. ಐದರಿಂದ ಏಳೂವರೆ ಲಕ್ಷದವರೆಗಿನ ಆದಾಯ ಪಡೆಯುತ್ತಿರುವವರಿಗೆ ವಿಧಿಸಲಾಗುತ್ತಿದ್ದ ಶೇ. 20ರಷ್ಟು ತೆರಿಗೆಯಲ್ಲಿ ಕಡಿತ ಮಾಡಿ ಶೇ. 10ಕ್ಕೆ ಇಳಿಕೆ ಮಾಡಲಾಗಿದೆ. 7.5ರಿಂದ 10 ಲಕ್ಷದವರೆಗಿನ ಆದಾಯ ಇರುವವರು ಶೇ. 15 ತೆರಿಗೆಯನ್ನಷ್ಟೇ ಪಾವತಿಸಬೇಕಾಗುತ್ತದೆ. ಈ ಮೊದಲು 5ರಿಂದ 10 ಲಕ್ಷದವರೆಗಿನ ಆದಾಯಕ್ಕೆ ಶೇ. 20ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು.

  ಹಾಗೆಯೇ, 10-12.5 ಲಕ್ಷ ಆದಾಯಗಳಿಗೆ ಈ ಮುಂಚೆ ವಿಧಿಸಲಾಗುತ್ತಿದ್ದ ಶೇ. 30ರಷ್ಟು ತೆರಿಗೆಯನ್ನು ಶೇ 20ಕ್ಕೆ ಇಳಿಕೆ ಮಾಡಲಾಗಿದೆ. 12.5-15 ಲಕ್ಷದವರೆಗಿನ ಆದಾಯಕ್ಕೆ ತೆರಿಗೆಯನ್ನು ಶೇ. 25ಕ್ಕೆ ಇಳಿಸಲಾಗಿದೆ. ಈ ಮೊದಲು 10-15 ಲಕ್ಷ ಆದಾಯಕ್ಕೆ ಶೇ. 30 ತೆರಿಗೆ ವಿಧಿಸಲಾಗುತ್ತಿತ್ತು.

  ಇನ್ನು, 15 ಲಕ್ಷ ರೂಗಿಂತ ಹೆಚ್ಚು ವಾರ್ಷಿಕ ಆದಾಯಕ್ಕೆ ಶೇ. 30 ತೆರಿಗೆ ಕಡಿತ ಮುಂದುವರಿಯಲಿದೆ.

  ಇದನ್ನೂ ಓದಿ: Budget 2020: ಮಹಿಳಾ ಅಭಿವೃದ್ಧಿಗೆ 28,600 ಕೋಟಿ ರೂ; ಮಕ್ಕಳ ಕಲ್ಯಾಣಕ್ಕೂ ಹೆಚ್ಚಿನ ಆದ್ಯತೆ

  ಹೊಸ ವೈಯಕ್ತಿಕ ತೆರಿಗೆ ವ್ಯವಸ್ಥೆ:

  5 ಲಕ್ಷದವರೆಗಿನ ಆದಾಯ: ತೆರಿಗೆ ಇಲ್ಲ

  5-7.5 ಲಕ್ಷದವರೆಗೆ: ಶೇ. 10 ತೆರಿಗೆ

  7.5-10 ಲಕ್ಷದವರೆಗೆ: ಶೇ.15 ತೆರಿಗೆ

  10-12.5 ಲಕ್ಷದವರೆಗೆ: ಶೇ. 20

  12.5-15 ಲಕ್ಷದವರಿಗೆ: ಶೇ. 25

  15 ಲಕ್ಷ ರೂ ಮೇಲ್ಪಟ್ಟವರಿಗೆ: ಶೇ.30 ತೆರಿಗೆ

  ಇದೇ ವೇಳೆ, ನಿರ್ಮಲಾ ಸೀತಾರಾಮನ್ ಅವರು ಕಾರ್ಪೊರೇಟ್ ವಲಯಕ್ಕೂ ತೆರಿಗೆ ಗಿಫ್ಟ್ ನೀಡಿದ್ದಾರೆ. ಹೊಸ ಕಂಪನಿಗಳಿಗೆ ವಿಧಿಸುವ ಕಾರ್ಪೊರೇಟ್ ತೆರಿಗೆಯನ್ನು ಶೇ. 15ಕ್ಕೆ ಇಳಿಕೆ ಮಾಡಲಾಗಿದೆ. ಈ ಕಾರ್ಪೊರೇಟ್ ತೆರಿಗೆ ಪ್ರಮಾಣವು ಜಗತ್ತಿನಲ್ಲೇ ಕಡಿಮೆ ಎನ್ನಲಾಗಿದೆ.

  ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

  First published: