HOME » NEWS » National-international » UNION BUDGET 2020 LIST OF ITEMS THAT GOT CHEAPER AND COSTLIER SNVS

Union Budget 2020: ಬಜೆಟ್ ನಂತರ ವಿವಿಧ ವಸ್ತುಗಳ ಬೆಲೆ ಏರಿಕೆ-ಇಳಿಕೆ ಪಟ್ಟಿ

ಪೀಠೋಪಕರಣ, ಸ್ಟೀಲ್, ಸಕ್ಕರೆ, ತಾಮ್ರ ಇತ್ಯಾದಿ ವಸ್ತುಗಳ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ. ಅಬಕಾರಿ ಸುಂಕದಿಂದ ನೀಡಲಾಗಿದ್ದ ಕೆಲ ವಿನಾಯಿತಿಗಳನ್ನ ಹಿಂಪಡೆದುಕೊಂಡ ಹಿನ್ನೆಲೆಯಲ್ಲಿ ಈ ವಸ್ತುಗಳು ತುಸು ದುಬಾರಿಯಾಗಲಿವೆ.

news18
Updated:February 10, 2020, 6:50 PM IST
Union Budget 2020: ಬಜೆಟ್ ನಂತರ ವಿವಿಧ ವಸ್ತುಗಳ ಬೆಲೆ ಏರಿಕೆ-ಇಳಿಕೆ ಪಟ್ಟಿ
ಕಲೆ: ಮಿರ್​ ಸುಹೇಲ್​
  • News18
  • Last Updated: February 10, 2020, 6:50 PM IST
  • Share this:
ನವದೆಹಲಿ(ಫೆ. 01): ಮೋದಿ ನೇತೃತ್ವದ ಎರಡನೇ ಎನ್​ಡಿಎ ಸರ್ಕಾರದ ಮೊದಲ ಬಜೆಟ್ ಮಂಡನೆಯಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಎರಡನೇ ಬಜೆಟ್​ನಲ್ಲಿ ವಿವಿಧ ತೆರಿಗೆಯಲ್ಲಿ ಏರಿಕೆ, ಇಳಿಕೆ ಮಾಡಿದ್ದಾರೆ. ಇಳಿಕೆಯಾಗಿರುವುದರಲ್ಲಿ ಆದಾಯ ತೆರಿಗೆ ಹಾಗೂ ಕಾರ್ಪೊರೇಟ್ ತೆರಿಗೆ ಸೇರಿವೆ. ಅಬಕಾರಿ ಸುಂಕದಲ್ಲೂ ಕೆಲ ಬದಲಾವಣೆ ಮಾಡಿದ್ದಾರೆ.

ವೈಯಕ್ತಿಕ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದ್ದು ಹೊಸ ಸ್ಲ್ಯಾಬ್​ಗಳನ್ನು ಮಾಡಲಾಗಿದೆ. ಪಟ್ಟಿಯ ಮೊದಲು ಮತ್ತು ಕೊನೆಯ ಸ್ಲ್ಯಾಬ್ ಬಿಟ್ಟು ಉಳಿದ ಕಡೆ ತೆರಿಗೆಯಲ್ಲಿ ಗಮನಾರ್ಹ ಇಳಿಕೆಯಾಗಿದೆ. ಐದರಿಂದ ಏಳೂವರೆ ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ಈ ಮೊದಲು ಇದ್ದ ಶೇ. 20 ತೆರಿಗೆಯನ್ನು ಶೇ. 10ಕ್ಕೆ ಇಳಿಸಲಾಗಿದೆ. 5-15 ಲಕ್ಷ ಆದಾಯದವರೆಗೆ ಇದ್ದ 2 ತೆರಿಗೆ ಸ್ಲ್ಯಾಬ್​ಗಳನ್ನ ನಾಲ್ಕಕ್ಕೆ ಹೆಚ್ಚಿಸಲಾಗಿದೆ.

ಇದನ್ನೂ ಓದಿ: Union Budget 2020 - ಬೆಂಗಳೂರಿಗೆ ಸಿಹಿ ಸುದ್ದಿ: ಸಬರ್ಬನ್ ರೈಲು ಯೋಜನೆಗೆ ಬಜೆಟ್​ನಲ್ಲಿ ಅನುದಾನ

ನೂತನ ತೆರಿಗೆ ದರದಿಂದ ಏರಿಕೆ ಮತ್ತು ಇಳಿಕೆಯಾಗುವ ಸಂಭಾವ್ಯ ವಸ್ತುಗಳ ಪಟ್ಟಿ ಇಲ್ಲಿದೆ:

ಇಳಿಕೆ:
ಪ್ಯೂರಿಫೈಡ್ ಟೆರೆಫ್ತಾಲಿಕ್ ಆ್ಯಸಿಡ್ (ಪಿಟಿಎ)

ಏರಿಕೆ:ಪೀಠೋಪಕರಣ
ಪಾದರಕ್ಷೆ
ವೇಗವರ್ಧಕ ಪರಿವರ್ತಕಗಳು (ಕೆಟಲಿಟಿಕ್ ಕನ್ವರ್ಟರ್ಸ್)
ವಾಣಿಜ್ಯ ವಾಹನಗಳ ಭಾಗ (ಎಲೆಕ್ಟ್ರಾನಿಕ್ ವಾಹನಗಳನ್ನ ಹೊರತುಪಡಿಸಿ)
ಅಡುಗೆ ಉಪಕರಣ
ಕ್ಲೇ ಐರನ್
ಉಕ್ಕು (ಸ್ಟೀಲ್)
ಕಾಪರ್ (ತಾಮ್ರ)
ಕಚ್ಛಾ ಸಕ್ಕರೆ
ಪಶು ಆಧಾರಿತ ಉತ್ಪನ್ನಗಳು
ಕೆನೆರಹಿತ ಹಾಲು
ಕೆಲ ಮದ್ಯ ಪಾನೀಯಗಳು
ಸೋಯಾ ಫೈಬರ್
ಸೋಯಾ ಪ್ರೋಟೀನ್

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

Youtube Video
First published: February 1, 2020, 3:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories