HOME » NEWS » National-international » UNION BUDGET 2020 INFUSED RS 3 5 CRORE CAPITAL INTO PSU BANKS SAYS FINANCE MINISTER LG

Union Budget 2020: ಸಾರ್ವಜನಿಕ ಬ್ಯಾಂಕ್​ಗಳಿಗೆ 3.50 ಲಕ್ಷ ಕೋಟಿ ಅನುದಾನ; ಎಲ್​ಐಸಿ ಷೇರು ಮಾರಾಟಕ್ಕೆ ನಿರ್ಧಾರ

ಪಿಎಂಸಿ ಮತ್ತು ಇತರೆ ಬ್ಯಾಂಕುಗಳ ಹಗರಣಗಳ ಮಧ್ಯೆಯೇ ಠೇವಣಿ ವಿಮೆಯ ಮೊತ್ತವನ್ನು ಹೆಚ್ಚಳ ಮಾಡಲಾಗುತ್ತದೆ ಎಂಬುದಾಗಿ ನಿರ್ಮಲಾ ತಿಳಿಸಿದರು. ಡೆಪಾಸಿಟ್​ ಇನ್ಷೂರೆನ್ಸ್​​(ಠೇವಣಿ ವಿಮೆ) ದರವನ್ನು 1 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡಲಾಗುತ್ತದೆ. ಬ್ಯಾಂಕ್​ನಲ್ಲಿ ಠೇವಣಿ ಇಟ್ಟರೆ ಭಯಬೇಡ. ವೈಯಕ್ತಿಕ ಹೂಡಿಕೆಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತದೆ, ಎಂದು ಹೇಳಿದರು.

Latha CG | news18-kannada
Updated:February 1, 2020, 1:51 PM IST
Union Budget 2020: ಸಾರ್ವಜನಿಕ ಬ್ಯಾಂಕ್​ಗಳಿಗೆ 3.50 ಲಕ್ಷ ಕೋಟಿ ಅನುದಾನ; ಎಲ್​ಐಸಿ ಷೇರು ಮಾರಾಟಕ್ಕೆ ನಿರ್ಧಾರ
ಪ್ರಾತಿನಿಧಿಕ ಚಿತ್ರ
  • Share this:
ನವದೆಹಲಿ(ಫೆ.01): ಈ ಬಾರಿಯ ಕೇಂದ್ರ ಬಜೆಟ್​ನಲ್ಲಿ ಆರ್ಥಿಕ ವಲಯದ ಪ್ರಗತಿ ಕಡೆ ಹೆಚ್ಚಿನ ಗಮನ ಹರಿಸಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಸಾರ್ವಜನಿಕ ವಲಯದ ಬ್ಯಾಂಕ್​​ಗಳಿಗೆ 3.5 ಲಕ್ಷ ಕೋಟಿ ಅನುದಾನ ಘೋಷಿಸಿದ್ದಾರೆ. 

ನಿರ್ಮಲಾ ಸೀತಾರಾಮನ್   ಸಂಸತ್​ನಲ್ಲಿ ಇಂದು ತಮ್ಮ ಎರಡನೇ ವಾರ್ಷಿಕ ಬಜೆಟ್ ಮಂಡಿಸಿ, ಬಜೆಟ್ ​ಮೇಲಿನ ಭಾಷಣದ ವೇಳೆ, ಸಾರ್ವಜನಿಕ ವಲಯ ಬ್ಯಾಂಕುಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದಾಗಿ ತಿಳಿಸಿದರು. "ಸಾರ್ವಜನಿಕ ವಲಯದ ಬ್ಯಾಂಕ್​ಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ವಾಣಿಜ್ಯ ಬ್ಯಾಂಕ್​ಗಳಲ್ಲಿ ಠೇವಣಿದಾರರ ಹಣ ಸುರಕ್ಷಿತವಾಗಿರುತ್ತದೆ ಯಾರೂ ಸಹ ಈ ಕುರಿತು ಆತಂಕಪಡುವ ಅಗತ್ಯವಿಲ್ಲ," ಎಂದು ವಿಶ್ವಾಸ ವ್ಯಕ್ತಪಡಿಸಿದರು.

Union Budget 2020: ಎಸ್​ಸಿ-ಎಸ್​ಟಿ ಸಮಾಜದ ಕಲ್ಯಾಣಕ್ಕಾಗಿ 1.38 ಲಕ್ಷ ಕೋಟಿ ಅನುದಾನ; ನಿರ್ಮಲಾ ಸೀತಾರಾಮನ್

ಪಿಎಂಸಿ ಮತ್ತು ಇತರೆ ಬ್ಯಾಂಕುಗಳ ಹಗರಣಗಳ ಮಧ್ಯೆಯೇ ಠೇವಣಿ ವಿಮೆಯ ಮೊತ್ತವನ್ನು ಹೆಚ್ಚಳ ಮಾಡಲಾಗುತ್ತದೆ ಎಂಬುದಾಗಿ ನಿರ್ಮಲಾ ತಿಳಿಸಿದರು. "ಡೆಪಾಸಿಟ್​ ಇನ್ಷೂರೆನ್ಸ್​​(ಠೇವಣಿ ವಿಮೆ) ದರವನ್ನು 1 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡಲಾಗುತ್ತದೆ. ಬ್ಯಾಂಕ್​ನಲ್ಲಿ ಠೇವಣಿ ಇಟ್ಟರೆ ಭಯಬೇಡ. ವೈಯಕ್ತಿಕ ಹೂಡಿಕೆಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತದೆ," ಎಂದು ಹೇಳಿದರು.

ಇದೇ ವೇಳೆ, ಐಡಿಬಿಐ (IDBI) ಬ್ಯಾಂಕ್​ನ್ನು ಸಂಪೂರ್ಣ ಖಾಸಗೀಕರಣ ಮಾಡುವುದಾಗಿ ತಿಳಿಸಿದ ಅವರು, ಇದರ ಜೊತೆಗೆ ಸಹಕಾರಿ ಬ್ಯಾಂಕ್​ಗಳ​ ಸುಧಾರಣೆಗೆ ಕ್ರಮ ಕೈಗೊಳ್ಳುವುದಾಗಿಯೂ ಆಶ್ವಾಸನೆ ನೀಡಿದ್ದಾರೆ.

Union Budget - ಪರ್ಸನಲ್ ಟ್ಯಾಕ್ಸ್ ದರದಲ್ಲಿ ಭಾರೀ ಇಳಿಕೆ; ಇಲ್ಲಿದೆ ವಿವಿಧ ಸ್ಲ್ಯಾಬ್​ಗಳ ತೆರಿಗೆ ವಿವರ

ಭಾರತದ ಅತಿದೊಡ್ಡ ಸಾಂಸ್ಥಿಕ ಹೂಡಿಕೆದಾರ ಸಂಸ್ಥೆಯಾಗಿರುವ ಎಲ್​ಐಸಿ ಷೇರುಗಳ ಮಾರಾಟ ಮಾಡುವುದಾಗಿ ನಿರ್ಮಲಾ ಸೀತಾರಾಮನ್​ ತಿಳಿಸಿದರು. ಸರ್ಕಾರದ ಎಲ್​​ಐಸಿ ಅಲ್ಪ ಷೇರುಗಳನ್ನು ಸರ್ಕಾರ ಮಾರಾಟ ಮಾಡಲು ಮುಂದಾಗಿದ್ದು ಸಾರ್ವಜನಿಕರೂ ಸಹ ಈ ಷೇರುಗಳನ್ನು ಖರೀದಿ ಮಾಡಬಹುದು ಎಂದು ತಿಳಿಸಿದ್ದಾರೆ.

 
First published: February 1, 2020, 1:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories