HOME » NEWS » National-international » UNION BUDGET 2020 HIGHLIGHTS FINANCE MINISTER PRESENTS 16 POINT PLAN TO REVIVE THE AGRICULTURE SECTOR SNVS

Budget 2020: ಕೃಷಿ ಮತ್ತು ರೈತರ ಸಂಕಷ್ಟ ನೀಗಿಸಲು ಬಜೆಟ್​ನಲ್ಲಿ 16 ಅಂಶಗಳ ಯೋಜನೆ

ಕೃಷಿ ವಲಯದ ಆದಾಯ ದ್ವಿಗುಣಗೊಳಿಸುವ ಗುರಿ ಹೊಂದಿರುವ ಕೇಂದ್ರ ಸರ್ಕಾರ ಆ ಕ್ಷೇತ್ರಕ್ಕೆ ಚೇತರಿಕೆ ನೀಡಲು ಹರಸಾಹಸ ನಡೆಸುತ್ತಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಜೆಟ್​ನಲ್ಲಿ 16 ಅಂಶಗಳ ಕಾರ್ಯಕ್ರಮ ರೂಪಿಸಿದ್ದಾರೆ.

news18
Updated:February 10, 2020, 7:06 PM IST
Budget 2020: ಕೃಷಿ ಮತ್ತು ರೈತರ ಸಂಕಷ್ಟ ನೀಗಿಸಲು ಬಜೆಟ್​ನಲ್ಲಿ 16 ಅಂಶಗಳ ಯೋಜನೆ
ಕೃಷಿ
  • News18
  • Last Updated: February 10, 2020, 7:06 PM IST
  • Share this:
ನವದೆಹಲಿ(ಫೆ. 01): ಕೇಂದ್ರದ ಆರ್ಥಿಕ ಅಭಿವೃದ್ಧಿ ಗುರಿಗೆ ಪ್ರಮುಖ ಹಿನ್ನಡೆ ತಂದಿರುವ ಕ್ಷೇತ್ರಗಳಲ್ಲಿ ಕೃಷಿಯೂ ಪ್ರಮುಖವಾದುದು. ಕೃಷಿ ಕ್ಷೇತ್ರದ ಆದಾಯವನ್ನು ದ್ವಿಗುಣಗೊಳಿಸುವ ಗುರಿ ಹೊಂದಿರುವ ಕೇಂದ್ರ ಸರ್ಕಾರ ಈ ಬಜೆಟ್​ನಲ್ಲಿ ಕೃಷಿ ಕ್ಷೇತ್ರಕ್ಕೆ ಪುಷ್ಟಿ ನೀಡಲು ಕೆಲ ಪ್ರಮುಖ ಕ್ರಮಗಳನ್ನು ಘೋಷಿಸಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 16 ಅಂಶಗಳ ಯೋಜನೆ ಪ್ರಕಟಿಸಿದ್ಧಾರೆ.

16 ಅಂಶಗಳ ಕಾರ್ಯಕ್ರಮ:

1) ಮಾದರಿ ಕೃಷಿ ಕಾನೂನುಗಳನ್ನು ಅಳವಡಿಸಲು ರಾಜ್ಯಗಳಿಗೆ ಉತ್ತೇಜನ

2) ಅತೀವ ಜಲಕ್ಷಾಮ ಇರುವ 100 ಜಿಲ್ಲೆಗಳ ಸಂಕಷ್ಟ ನೀಗಿಸಲು ಸಮಗ್ರ ಕ್ರಮ

3) ಸೀಮೆ ಎಣ್ಣೆಯ ಮೇಲಿನ ಅವಲಂಬನೆ ಕಡಿಮೆ ಮಾಡಿ ಸೌರ ವಿದ್ಯುತ್ ಬಳಕೆಗೆ ಉತ್ತೇಜಿಸಲು ಪ್ರಧಾನಿ ಕುಸುಮ್ ಯೋಜನೆ

4) ಸಮತೋಲಿತವಾಗಿ ರಸಗೊಬ್ಬರ ಬಳಕೆಗೆ ಉತ್ತೇಜನ

5) ಕೃಷಿ ಮಳಿಗೆ, ಕೋಲ್ಡ್ ಸ್ಟೋರೇಜ್ ಇತ್ಯಾದಿ ಸಂಗ್ರಹಗಾರಗಳನ್ನು ಮ್ಯಾಪಿಂಗ್ ಮಾಡಲು ಅಥವಾ ಪರಸ್ಪರ ಕೊಂಡಿ ಏರ್ಪಡಿಸಲು ನಬಾರ್ಡ್ ಕ್ರಮ ಕೈಗೊಳ್ಳಲಿದೆ.6) ಗ್ರಾಮ ಸಂಗ್ರಹ ಯೋಜನೆ – ಇದರಿಂದ ರೈತರು ತಮ್ಮ ಉತ್ಪನ್ನಗಳನ್ನು ಕಡಿಮೆ ವೆಚ್ಚದಲ್ಲಿ ಸಂಗ್ರಹಿಸಿಡಲು ಅನುಕೂಲವಾಗುತ್ತದೆ. ಗ್ರಾಮದ ಮಹಿಳೆಯರಿಗೆ ಇದರ ಜವಾಬ್ದಾರಿ ನೀಡಲಾಗುತ್ತದೆ.

7) ನಾಗರಿಕ ವಿಮಾನ ಯಾನ ಸಚಿವಾಲಯದಿಂದ ಕೃಷಿ ಉಡಾನ್ ಯೋಜನೆ ಪ್ರಾರಂಭ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಕೃಷಿ ವಿಮಾನ ಯೋಜನೆಯ ಅಳವಡಿಕೆ ಇರುತ್ತದೆ.

8) ತೋಟಗಾರಿಕೆ ವಲಯದಲ್ಲಿ ಆಗುತ್ತಿರುವ ಉತ್ಪಾದನೆಯು ಆಹಾರ ಧಾನ್ಯಗಳ ಉತ್ಪನ್ನ ಪ್ರಮಾಣವನ್ನು ಮೀರಿಸಿದೆ. ಒಂದು ಜಿಲ್ಲೆ ಒಂದು ಉತ್ಪನ್ನ ಎಂಬ ರೀತಿಯಲ್ಲಿ ಇದನ್ನು ಮಾರ್ಪಡಿಸಲಾಗುತ್ತದೆ.

9) ಕೃಷಿ ಸಂಗ್ರಹಗಾರಗಳ ಸ್ವೀಕೃತಿಗಳನ್ನು ಇತರ ಇ-ಸೇವೆಗಳೊಂದಿಗೆ ಜೋಡಿಸಲಾಗುವುದು

10) ಕೃಷಿ ಕ್ಷೇತ್ರಕ್ಕೆ 2021ರವರೆಗೆ 15 ಲಕ್ಷ ಕೋಟಿ ಹಣ ಮೀಸಲಿಡಲಾಗುತ್ತದೆ.

11) ಕುರಿ ಮತ್ತು ಮೇಕೆಗಳನ್ನು ಬಾಧಿಸುವ ಕಾಲುಬಾಯಿ ರೋಗವನ್ನು 2025ರಲ್ಲಿ ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲು ಕ್ರಮ

12) 2025ರಷ್ಟರಲ್ಲಿ ಹಾಲಿನ ಉತ್ಪನ್ನವನ್ನು 53.5 ದಶಲಕ್ಷ ಮೆಟ್ರಿಕ್ ಟನ್​ನಿಂದ 103 ಮೆಟ್ರಿಲ್ ದಶಲಕ್ಷ ಟನ್​ಗಳಿಗೆ ಹೆಚ್ಚಿಸುವ ಗುರಿ

13) ಮೀನುಗಾರಿಕೆ ವಲಯದಲ್ಲಿ ಯುವ ಸಮುದಾಯವನ್ನು ಭಾಗಿಯಾಗಿಸಲು ಕ್ರಮ. ಗ್ರಾಮೀಣ ಯುವಕರು ಸಾಗರ್ ಮಿತ್ರರಾಗಿ ಕಾರ್ಯ ನಿರ್ವಹಿಸುವ ಆಶಯ ಇದೆ. ಮೀನು ರೈತ ಸಂಘದ ಸ್ಥಾಪನೆಗೆ ಕ್ರಮ.

14) ದೀನದಯಾಳ್ ಅಂತ್ಯೋದಯ ಯೋಜನೆಯನ್ನು ಬಲಗೊಳಿಸಲಾಗುವುದು

15) ಕೃಷಿಗೆ 2.83 ಲಕ್ಷ ಕೋಟಿ ವಿನಿಯೋಗ

16) ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಭಿವೃದ್ಧಿಗೆ 1.23 ಲಕ್ಷ ಕೋಟಿ ರೂ ವಿನಿಯೋಗ

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

Youtube Video
First published: February 1, 2020, 12:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories