Union Budget 2019| ರೈತರು, ಕಾರ್ಮಿಕರು ಸೇರಿದಂತೆ ಎಲ್ಲ ವರ್ಗಕ್ಕೂ ಅನುಕೂಲಕರ ಬಜೆಟ್​ ಇದು; ಪ್ರಧಾನಿ ಮೋದಿ ಬಣ್ಣನೆ

Union Budget 2019| 5 ಲಕ್ಷ ವಾರ್ಷಿಕ ಆದಾಯ ಹೊಂದಿರುವರಿಗೆ ತೆರಿಗೆ ವಿನಾಯತಿ ನೀಡಲಾಗಿದೆ ಈ ಮೂಲಕ ದೇಶದ ಅತಿದೊಡ್ಡ ವರ್ಗ ತನ್ನ ಕನಸನ್ನು ನನಸಾಗಿಸಿಕೊಂಡಿದೆ, ಹಲವು ವರ್ಷಗಳ ಬೇಡಿಕೆಯನ್ನು ನಾವು ಈಡೇರಿಸಿದ್ದೇವೆ.

Seema.R | news18
Updated:February 1, 2019, 4:18 PM IST
Union Budget 2019| ರೈತರು, ಕಾರ್ಮಿಕರು ಸೇರಿದಂತೆ ಎಲ್ಲ ವರ್ಗಕ್ಕೂ ಅನುಕೂಲಕರ ಬಜೆಟ್​ ಇದು; ಪ್ರಧಾನಿ ಮೋದಿ ಬಣ್ಣನೆ
ನರೇಂದ್ರ ಮೋದಿ
Seema.R | news18
Updated: February 1, 2019, 4:18 PM IST
ದೆಹಲಿ (ಜ.01):  ತಮ್ಮ ಸರ್ಕಾರದ ಕೊನೆಯ ಬಜೆಟ್​ ಮಂಡನೆ  ಬಳಿಕ ಮಾಧ್ಯಮದಲ್ಲಿ ಮುಂದೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇದು ಎಲ್ಲ ವರ್ಗಕ್ಕೂ ಅನುಕೂಲಕರವಾದ ಬಜೆಟ್​ ಆಗಿದ್ದು ನವ ಭಾರತದ ನಿರ್ಮಾಣದ ಆಯವ್ಯಯ ಇದಾಗಿದೆ ಎಂದು ಬಣ್ಣಿಸಿದರು.

ಈ ಬಜೆಟ್​ ನಿಂದಾಗಿ 12 ಕೋಟಿ ರೈತರು ಲಾಭಾ ಪಡೆಯಲಿದ್ದಾರೆ ಇದರ ಜೊತೆ ಮಧ್ಯಮ ವರ್ಗದ ಮೂರು ಕೋಟಿ  ಕುಟುಂಬ ಹಾಗೂ 30-40 ಕೋಟಿ ಕಾರ್ಮಿಕರು ಲಾಭಾ ಪಡೆಯಲಿದ್ದಾರೆ. ಬಜೆಟ್​ ಮೂಲಕ ಎಲ್ಲಾ ವರ್ಗದವರನ್ನು ಕಾಳಜಿ ಮಾಡಲಾಗಿದೆ. ಈ ಮೂಲಕ ದೇಶವನ್ನು ಬಲಪಡಿಸಲಾಗುತ್ತಿದೆ ಎಂದರು.

5 ಲಕ್ಷ ವಾರ್ಷಿಕ ಆದಾಯ ಹೊಂದಿರುವರಿಗೆ ತೆರಿಗೆ ವಿನಾಯತಿ ನೀಡಲಾಗಿದೆ ಈ ಮೂಲಕ ದೇಶದ ಅತಿದೊಡ್ಡ ವರ್ಗ ತನ್ನ ಕನಸನ್ನು ನನಸಾಗಿಸಿಕೊಂಡಿದೆ, ಹಲವು ವರ್ಷಗಳ ಬೇಡಿಕೆಯನ್ನು ನಾವು ಈಡೇರಿಸಿದ್ದೇವೆ.

ಆಯುಷ್ಮಾನ್​ ಭಾರತದ ಮೂಲಕ 50 ಕೋಟಿ ಜನರು ಲಾಭಾ ಪಡೆಯಲಿದ್ದಾರೆ. ಈ ಮುಂಚೆ ರೈತರು ಪ್ರಧಾನಮಂತ್ರಿ ಕಿಸಾನ್​ ಯೋಜನೆ ಲಾಭಾ ಪಡೆಯುವಲ್ಲಿ ವಿಫಲರಾಗಿದ್ದರು. ಆದರೆ, ಈಗ 12 ಕೋಟಿ ರೈತರು ಈ ಯೋಜನೆ ಮೂಲಕ ಅತಿ ದೊಡ್ಡ ಯೋಜನೆಯಲ್ಲಿ ಒಂದಾದ ಇದರ ಮೂಲಕ ಲಾಭಾ ಪಡೆಯಲಿದ್ದಾರೆ. ಈ ಬಜೆಟ್​ ಸರ್ಕಾರ ಜನಪರವಾಗಿದೆ ಎಂಬುದನ್ನು ಈ ಮೂಲಕ ಸಾಬೀತು ಮಾಡಿದೆ.

ಇದನ್ನು ಓದಿ: Union Budget 2019| ನೋಟು ಅಮಾನ್ಯೀಕರಣದ ಬಳಿಕ ತೆರಿಗೆದಾರರ ಸಂಖ್ಯೆಯಲ್ಲಿ ಹೆಚ್ಚಳ

ಮೀನುಗಾರಿಗೆಯಲ್ಲಿ ತೊಡಗಿರುವವರಿಗೆ ಪ್ರತ್ಯೇಕ ಮೀನುಗಾರಿಕೆ ವಿಭಾಗ ಸಹಾಯವಾಗಲಿದೆ. ವಿವಿಧ ಇಲಾಖೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಉದ್ಯೋಗ ಪಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಈ ಹಿಂದಿನ ಸರ್ಕಾರಗಳು ನಮ್ಮ ಕಾರ್ಮಿಕ ವರ್ಗದ ಬಗ್ಗೆ ಕಾಳಜಿ ಹೊಂದಿಲ್ಲ. ಆದರೆ ಜನ್​ ಧನ್​​ ಯೋಜನೆ, ಆಯುಷ್ಮಾನ್​ ಭಾರತ್​ ಯೋಜನೆಗಳ ಮೂಲಕ ಬಡವರು ಕೂಡ ಘನತೆಯಿಂದ ಜೀವಿಸಬಹುದಾಗಿದೆ

ಪ್ರಧಾನ ಮಂತ್ರಿ ಕಿಸಾನ್​ ನಿಧಿ ಯೋಜನೆ ರೈತರ ಕಲ್ಯಾಣದಲ್ಲಿ ಚಾರಿತ್ರಿಕವಾಗಿದ್ದು, 12 ಕೋಟಿಗೂ ಹೆಚ್ಚು ರೈತರಿಗೆ ಇದರಿಂದ ಲಾಭ ಪಡೆಯಕಲಿದ್ದಾರೆ. ಲೋಕಸಭೆ ಬಳಿಕ ಭಾರತ ಏಳಿಗೆ ಏನಾಗಲಿದೆ ಎಂಬುದರ ಟ್ರೈಲರ್​ ಈ ಬಜೆಟ್​ ಆಗಿದೆ ಎಂದರು.

First published:February 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...