LIVE NOW

Union Budget 2019 LIVE: ಗೋಯಲ್​ ಬಜೆಟ್​ ಮಂಡನೆ ಅಂತ್ಯ; ಫೆ.4ರಂದು ಸಂಸತ್ತಿನಲ್ಲಿ ಚರ್ಚೆ

Live Union Budget 2019 Updates | ನಮ್ಮ ತಾಣದಲ್ಲಿ ನೀಡಲಾಗಿರುವ ಕಾಲಮ್​ ಶೀರ್ಷಿಕೆಗಳ ಮೇಲೆ ಕ್ಲಿಕ್​ ಮಾಡುವ ಮೂಲಕ ನೀವು ವಸ್ತುಗಳ ದರಗಳ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದು. ಕೆಳಗೆ ನೀಡಲಾಗಿರುವ ಸರ್ಚ್​ ಆಯ್ಕೆಯನ್ನು ಬಳಸಿ ಯಾವುದೇ ವಸ್ತುಗಳ ಮಾಹಿತಿಗಳನ್ನು ಹುಡುಕಬಹುದು.

Kannada.news18.com | February 1, 2019, 1:39 PM IST
facebook Twitter google Linkedin
Last Updated February 1, 2019
auto-refresh

Highlights

ಬೆಂಗಳೂರು: ಹಣಕಾಸು ಸಚಿವ ಅರುಣ್ ಜೇಟ್ಲಿ ಅನುಪಸ್ಥಿತಿಯಲ್ಲಿ 2019ರ ಕೇಂದ್ರ ಮಧ್ಯಂತರ ಬಜೆಟ್​ ಅನ್ನು ಹಣಕಾಸು ರಾಜ್ಯ ಖಾತೆ ಸಚಿವ ಪಿಯೂಷ್​ ಗೋಯಲ್​ ಮಂಡಿಸಿದ್ದಾರೆ. ಚುನಾವಣಾ ಪೂರ್ವ ಬಜೆಟ್​ ಆಗಿರುವ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತದಾರರ ಓಲೈಕೆಗೆ ಮಣೆ ಹಾಕಿದೆ. ಐದು ಲಕ್ಷ ರೂ ವರೆಗೂ ಸಂಬಳ ಪಡೆಯುವ ಉದ್ಯೋಗಿಗಳಿಗೆ ತೆರಿಗೆ ವಿನಾಯಿತಿ, 5 ಎಕರೆಗಿಂತ ಕಡಿಮೆ ಭೂಮಿ ಇರುವ ರೈತರಿಗೆ ರೂ. 6,000 ವಾರ್ಷಿಕ ಮಾಶಾಸನ, ಅಂಗನವಾಡಿ ಕಾರ್ಯಕರ್ತೆಯರಿಗೆ ಶೇಕಡ 50 ಸಂಬಳ ಹೆಚ್ಚಳ, ಪೂರ್ಣಾವಧಿ ಬಜೆಟ್​ ವೇಳೆಗೆ ಹಣಕಾಸಿನ ಕೊರತೆಯ ಪ್ರಮಾಣ 3.4ಕ್ಕೆ ಇಳಿಕೆ, ಹೀಗೇ ಹಲವು ವಿಚಾರಗಳನ್ನು ಬಜೆಟ್​ ಒಳಗೊಂಡಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾರು ಸರ್ಕಾರ ರಚಿಸುತ್ತಾರೆ ಎಂಬುದರ ಮೇಲೆ ಈ ಮಧ್ಯಂತರ ಬಜೆಟ್​ನ ಭವಿಷ್ಯ ನಿಂತಿದೆ.
1:20 pm (IST)
Load More