Union Budget 2019 | ಗೋಯಲ್ ಬಜೆಟ್​ನಲ್ಲಿ ಕೇಂದ್ರ ಸರ್ಕಾರದ ಸಾಧನೆ ಬಣ್ಣನೆ; ಆಯವ್ಯಯದ ಪ್ರಮುಖಾಂಶಗಳು

ದೇಶದ ಆರ್ಥಿಕತೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಆರ್ಥಿಕತೆಯಲ್ಲಿ 11ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ನಾವು ಏರಿಕೆ ಕಂಡಿದ್ದೇವೆ. ಕಳೆದ ಸರ್ಕಾರಗಳಿಗಿಂತ ನಮ್ಮ ಸರ್ಕಾರದ ಅವಧಿಯಲ್ಲಿ ಆರ್ಥಿಕತೆ ವೇಗವಾಗಿ ಭಿವೃದ್ಧಿ ಹೊಂದುತ್ತಿದೆ ಎಂದು ತಮ್ಮ ಸರ್ಕಾರದ ಸಾಧನೆಯನ್ನು ಬಣ್ಣಿಸಿಕೊಂಡರು.

Seema.R | news18
Updated:February 1, 2019, 3:56 PM IST
Union Budget 2019 | ಗೋಯಲ್ ಬಜೆಟ್​ನಲ್ಲಿ ಕೇಂದ್ರ ಸರ್ಕಾರದ ಸಾಧನೆ ಬಣ್ಣನೆ; ಆಯವ್ಯಯದ ಪ್ರಮುಖಾಂಶಗಳು
ಕೇಂದ್ರ ಬಜೆಟ್​ 2019
Seema.R | news18
Updated: February 1, 2019, 3:56 PM IST
ನವದೆಹಲಿ: ಅರುಣ್​ ಜೇಟ್ಲಿ ಅವರ ಅನುಪಸ್ಥಿತಿಯಲ್ಲಿ ಮೊದಲ ಬಾರಿ ಬಜೆಟ್​ ಮಂಡಿಸಿದ ಸಚಿವ ಪಿಯೂಷ್​ ಗೋಯಲ್​ ತಮ್ಮ ಬಜೆಟ್​ ಭಾಷಣದಲ್ಲಿ ಮೋದಿ ಸರ್ಕಾರಕ್ಕೆ ಬಹುಬರಾಕ್​ ಹಾಡಿದರು.

ಹಣದುಬ್ಬರ ನಿಯಂತ್ರಿಸಿದ್ದೇವೆ. ದೇಶದ ಆರ್ಥಿಕತೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಆರ್ಥಿಕತೆಯಲ್ಲಿ 11ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ನಾವು ಏರಿಕೆ ಕಂಡಿದ್ದೇವೆ. ಕಳೆದ ಸರ್ಕಾರಗಳಿಗಿಂತ ನಮ್ಮ ಸರ್ಕಾರದ ಅವಧಿಯಲ್ಲಿ ಆರ್ಥಿಕತೆ ವೇಗವಾಗಿ ಭಿವೃದ್ಧಿ ಹೊಂದುತ್ತಿದೆ ಎಂದು ತಮ್ಮ ಸರ್ಕಾರದ ಸಾಧನೆಯನ್ನು ಬಣ್ಣಿಸಿಕೊಂಡರು.

ಬಜೆಟ್​ನ ಪ್ರಮುಖ ಅಂಶಗಳು


 • 2020ರ ವೇಳೆ ನವಭಾರತ ನಿರ್ಮಾಣ

 • ಗರಿಷ್ಠ 2 ಹೆಕ್ಟೇರ್ ಜಮೀನು ಹೊಂದಿರುವ ಸಣ್ಣ ರೈತರಿಗೆ ವರ್ಷಕ್ಕೆ 6 ಸಾವಿರ ರೂ ಹಣ.

 • Loading...

 • 2018ರ ಸೆಪ್ಟೆಂಬರ್​ನಿಂದ ಯೋಜನೆ ಜಾರಿ. ವರ್ಷಕ್ಕೆ 3 ಕಂತುಗಳಲ್ಲಿ ಹಣ ಬಿಡುಗಡೆ.

 • ಇದೇ ತಿಂಗಳೇ ಮೊದಲ ಕಂತಿನ 2 ಸಾವಿರ ರೂ ಹಣ ಬಿಡುಗಡೆಯಾಗುವ ಸಾಧ್ಯತೆ.

 • ರಕ್ಷಣಾ ಇಲಾಖೆಗೆ 3 ಲಕ್ಷ ರೂ

 • ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ 60 ಸಾವಿರ ಕೋಟಿ

 • ಸರ್ವರಿಗೂ ಆಹಾರ ಒದಗಿಸಲು 1.7 ಲಕ್ಷ ಕೋಟಿ ರೂ

 • ಎರಡು ವರ್ಷಗಳಲ್ಲಿ ವಿದ್ಯುನ್ಮಾನ(electronically) ಮೂಲಕ ತೆರಿಗೆ ನಿರ್ಧಾರಣ (Tax Assessment) ಮಾಡಲಾಗುವುದು

 • ಕೇವಲ 24 ಗಂಟೆಯಲ್ಲಿ ಐಟಿ ರಿಟರ್ಸ್ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು

 • ಜಿಎಸ್​ಟಿಯ ಶೇ. 14ಕ್ಕಿಂತ ಹೆಚ್ಚು ಆದಾಯವನ್ನು ರಾಜ್ಯಗಳಿಗೆ ವಿತರಿಸಲಾಗುವುದು

 • ಹಸು ಸಂರಕ್ಷಣೆಗೆ 750 ಕೋಟಿ ರೂ.

 • ಪಶುಸಂಗೋಪನೆ ಮಾಡುವ ರೈತರಿಗೆ ಸಾಲದ ಮೇಲಿನ ಬಡ್ಡಿಯಲ್ಲಿ ಶೇ. 2ರಷ್ಟು ವಿನಾಯಿತಿ.

 • ನೈಸರ್ಗಿಕ ವಿಕೋಪಕ್ಕೆ ತುತ್ತಾದ ರೈತರ ಸಾಲದ ಮೇಲಿನ ಬಡ್ಡಿಯಲ್ಲಿ ಶೇ. 2ರಷ್ಟು ವಿನಾಯಿತಿ. ಸರಿಯಾಗಿ ಸಾಲ ಮರುಪಾವತಿ ಮಾಡುವ ರೈತರಿಗೆ ಶೇ. 3ರಷ್ಟು ಬಡ್ಡಿ ವಿನಾಯಿತಿ.

 • ಗ್ರಾಚುಟಿಗೆ (Gratuity) ತೆರಿಗೆ ವಿನಾಯಿತಿ ಸಿಗಲು ಇರಬೇಕಾದ ಕನಿಷ್ಠ ಮೊತ್ತವನ್ನು 10 ಲಕ್ಷದಿಂದ 20 ಲಕ್ಷಕ್ಕೆ ಏರಿಸಲಾಗಿದೆ.

 • ತಿಂಗಳಿಗೆ 21 ಸಾವಿರ ಸಂಬಳ ಪಡೆಯುವ ಕಾರ್ಮಿಕರಿಗೆ ಬೋನಸ್
  ಗರ್ಭಿಣಿಯವರಿಗೆ 26 ವಾರ ಪ್ರಸವ ರಜೆ.

 • ಮುಂದಿನ 5 ವರ್ಷದಲ್ಲಿ ಒಂದು ಲಕ್ಷ ಡಿಜಿಟಲ್ ಗ್ರಾಮಗಳ ಗರಿ

 • ಭಯೋತ್ಪಾದನೆ, ಜಾತೀವಾದ ನಿಯಂತ್ರಣ

 • ಜಿಡಿಪಿಯಲ್ಲಿ ಜಗತ್ತಿನ ಗಮನ ಸೆಳೆದಿದ್ದೇವೆ

 • ಹಣದುಬ್ಬರ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ

 • ಕಳೆದ 5 ವರ್ಷಗಳಲ್ಲಿ ಮೂಲಭೂತ ಸೌಕರ್ಯಕ್ಕೆ ಆದ್ಯತೆಗೆ ಒತ್ತು

 • ಕಳೆದ 5 ವರ್ಷಗಳಲ್ಲಿ ಜಾಗತಿಕವಾಗಿ ಭಾರತ ಪ್ರಕಾಶಿಸುತ್ತಿದೆ

 • ಜಿಎಸ್‌ಟಿ ಹಾಗೂ ಇತರ ತೆರಿಗೆ ಮೂಲಕ ಆದಾಯ

 • ವಿದೇಶಿ ನೇರ ಹೂಡಿಕೆ(ಎಫ್‌ಡಿಎ) ಪ್ರಮಾಣ ಹೆಚ್ಚಳ

 • ರೇರಾ ಕಾಯ್ದೆ ಮೂಲಕ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ

 • ಕಲ್ಲಿದ್ದಲು, ತರಂಗಾಂತರ ಸರಿಯಾದ ಬಳಕೆ

 • ಎಸ್‌ಸಿ-ಎಸ್ಟಿ ಮೀಸಲಾತಿ ಅಭಿವೃದ್ಧಿ

 • ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಾಣ

 • ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಯೋಜನೆ ಅಡಿ ರಸ್ತೆ ನಿರ್ಮಾಣ

 • ಗ್ರಾಮೀಣ ಭಾಗದ ಜನರಿಗೆ ಉಚಿತ ವಿದ್ಯುತ್ ಸಂಪರ್ಕ

 • ವಿದ್ಯುತ್ ಉಳಿತಾಯಕ್ಕಾಗಿ ಎಲ್‌ಇಡಿ ಬಲ್ಬ್

 • ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ

 • ಭ್ರಷ್ಟಾಚಾರ ವಿರುದ್ಧ ಪಾರದರ್ಶಕ ಕ್ರಮ

 • ಹರಿಯಾಣದಲ್ಲಿ 22ನೇ ಏಮ್ಸ್ ಆಸ್ಪತ್ರೆ ನಿರ್ಮಾಣ

 • 50 ಕೋಟಿ ಜನರಿಗೆ ಆಯುಷ್ಮಾನ್ ಭಾರತ್ ಯೋಜನೆ ಮೂಲಕ ಚಿಕಿತ್ಸೆ

 • ಉದ್ಯೋಗದ ವ್ಯಾಖ್ಯಾನ ಹಾಗೂ ಸ್ವ ಉದ್ಯೋಗದ ವ್ಯಾಖ್ಯಾನ ಈಗ ಬದಲಾಗಿದೆ

 • ಉದ್ಯೋಗ ಕೇಳುಗರು ಈಗ ಉದ್ಯೋಗ ನೀಡುವವರಾಗಿದ್ದಾರೆ

 • ವಿಶ್ವದ ಕಿರಿಯರ ದೇಶಗಳಲ್ಲಿ ಭಾರತವೂ ಒಂದಾಗಿದೆ

 • ಪ್ರಧಾನಮಂತ್ರಿ ಕೌಶಲ್​ ವಿಕಾಸ ಯೋಜನೆ ಅಡಿ 1 ಕೋಟಿ ಯುವಕರಿಗೆ ತರಬೇತಿ

 • ಮುದ್ರಾ ಯೋಜನೆ ಅಡಿ ಶೇ 70ರಷ್ಟು ಜನರಿಗೆ ಲಾಭ

 • ಸೈನಿಕರು ನಮ್ಮ ದೇಶದ ಹೆಮ್ಮೆ. ಅವರಿಗಾಗಿ 3 ಲಕ್ಷ ಕೋಟಿ ಹೆಚ್ಚುವರಿ ಹಣ ಮೀಸಲು

 • ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ 19 ಸಾವಿರ ಕೋಟಿ ಮೀಸಲು

 • ವೈಯಕ್ತಿಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ

 • ವಾರ್ಷಿಕ ತಲಾ ಆದಾಯ ಹೊಂದಿರುವವರಿಗೆ  2.5 ಲಕ್ಷದಿಂದ 3 ಲಕ್ಷ ತೆರಿಗೆ ವಿನಾಯಿತಿ

 • ಆದಾಯ ತೆರಿಗೆ ಮರು ಸಂದಾಯ ಕುರಿತು 24 ಗಂಟೆಗಳಲ್ಲಿ ಕಾರ್ಯಗತ

 • ಮಧ್ಯಮವರ್ಗದ ವೇತನದಾರರಿಗೆ 5 ಲಕ್ಷದವರೆಗೆ ತೆರಿಗೆ ಇಲ್ಲ

First published:February 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...