Union Budget 2019: ಕೇಂದ್ರ ಬಜೆಟ್​​ ಮೇಲೆ ಜನರ ನಿರೀಕ್ಷೆ ಬೆಟ್ಟದಷ್ಟು; ಸಿಗುವುದೆಷ್ಟು?

Budget 2019 India: ನಿರ್ಮಲಾ ಸೀತರಾಮ್​​ ಮಂಡಿಸಲಿರುವ ಬಜೆಟ್‌ನಲ್ಲಿ ತೆರಿಗೆ ಸುಧಾರಣೆ ಮತ್ತು ತೆರಿಗೆ ದರ ಕಡಿತದ ಕುರಿತು ಘೋಷಿಸಲಿದ್ದಾರೆ. ಜತೆಗೆ ಮೆಡಿಕಲ್ ಇನ್ಸೂರೆನ್ಸ್‌ನಲ್ಲೂ ದರ ಕಡಿತ ಮಾಡುವ ನಿರೀಕ್ಷೆಯಿದೆ.

Ganesh Nachikethu
Updated:June 10, 2019, 5:35 PM IST
Union Budget 2019: ಕೇಂದ್ರ ಬಜೆಟ್​​ ಮೇಲೆ ಜನರ ನಿರೀಕ್ಷೆ ಬೆಟ್ಟದಷ್ಟು; ಸಿಗುವುದೆಷ್ಟು?
ನಿರ್ಮಲಾ ಸೀತಾರಾಮನ್​
 • Share this:
ಕೇಂದ್ರದಲ್ಲಿ ಎರಡನೇ ಅವಧಿಗೆ ಅಧಿಕಾರಕ್ಕೇರಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​​ಡಿಎ ಸರ್ಕಾರ 2019-20ರ ಸಾಲಿನ ಬಜೆಟ್‌ ಮಂಡನೆಗೆ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವದ ಬಜೆಟ್​​ ಕೆಲಸಗಳು ಬಿರುಸಾಗಿ ಸಾಗುತ್ತಿವೆ. ಜುಲೈ 5ರಂದು ಖುದ್ದು ನಿರ್ಮಲಾ ಸೀತಾರಾಮನ್‌ ಅವರೇ ಬಜೆಟ್‌ ಮಂಡಿಸಲಿದ್ದು, ಎಂದಿನಂತೆಯೇ ಈ ಬಾರಿ ಬಜೆಟ್​ ಮೇಲೆ ಜನರ ನಿರೀಕ್ಷೆ ತುಸು ಹೆಚ್ಚಿದೆ.

​​ಕಳೆದ ಲೋಕಸಭಾ ಚುನಾವಣೆಗೆ ಮೂರು ತಿಂಗಳು ಬಾಕಿ ಇರುವಂತೆಯೇ ಫೆ.1ರಂದು ಮಧ್ಯಂತರ ಬಜೆಟ್‌ ಅನ್ನು ಹಂಗಾಮಿ ಹಣಕಾಸು ಸಚಿವ ಪಿಯೂಶ್‌ ಗೋಯಲ್‌ ಮಂಡಿಸಿದ್ದರು. ಸದ್ಯ ಎರಡನೇ ಅವಧಿಗೆ ಎನ್‌ಡಿಎ ಸರಕಾರ ಅಧಿಕಾರ ಹಿಡಿದಿದೆ. ಹಾಗಾಗಿಯೇ ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸಲಾಗುತ್ತಿದೆ. ಅಲ್ಲದೇ ಹೊಸ ತೆರಿಗೆ ಪ್ರಸ್ತಾಪ, ನೂತನ ಯೋಜನೆಗಳ ಘೋಷಿಸಲಾಗುತ್ತದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್​​ ತಿಳಿಸಿದ್ದಾರೆ.

ಈ ಸಲದ ಬಜೆಟ್‌ನಲ್ಲಿ ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು ಈಗಿನ 2.5 ಲಕ್ಷ ರೂ.ಗಳಿಂದ ಏರಿಸುವ ಸಾಧ್ಯತೆ ಇದೆ. 2014ರಲ್ಲಿ ಕೊನೆಯ ಬಾರಿಗೆ ಮಿತಿ ವಿಸ್ತರಿಸಲಾಗಿತ್ತು. ಹೀಗಾಗಿ ಈ ಸಲ ನಿರೀಕ್ಷೆ ಹೆಚ್ಚಿದೆ. ಬಜೆಟ್‌ನಲ್ಲಿ ರೈತರಿಗೆ ಅನುಕೂಲವಾಗುವಂತೆ ಕನಿಷ್ಠ ಆದಾಯ ಯೋಜನೆ, ಎಂಎಸ್‌ಪಿ ಹೆಚ್ಚಳ ಘೋಷಣೆಯಾಗುವ ಸಾಧ್ಯತೆ ಇದೆ.

ರೈತರ ಸಮಸ್ಯೆಗಳು ಮತ್ತು ತೆರಿಗೆ ದರ ಇಳಿಕೆ, ಇತರ ತೆರಿಗೆ ಪ್ರಯೋಜನಗಳ ಬಗ್ಗೆ ಕೂಡ ಜನರು ನಿರೀಕ್ಷೆ ಹೊಂದಿದ್ದು, ಸಚಿವ ಪೀಯೂಷ್ ಗೋಯಲ್ ಚೊಚ್ಚಲ ಬಜೆಟ್ ಭಾಷಣದಲ್ಲಿ ಪ್ರಸಕ್ತ ವರ್ಷದ ಮಾತ್ರವಲ್ಲದೆ, ಮುಂಬರುವ ಯೋಜನೆಗಳನ್ನು ಕೂಡ ಬಜೆಟ್‌ನಲ್ಲಿ ಘೋಷಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಇದನ್ನೂ ಓದಿ: Union Budget 2019 | ಕೇಂದ್ರ ಬಜೆಟ್ ಮಂಡನೆ ವೇಳೆ ಘೋಷಿಸಬಹುದಾದ ಯೋಜನೆಗಳು ಯಾವುವು?

ನಿರ್ಮಲಾ ಸೀತರಾಮ್​​ ಮಂಡಿಸಲಿರುವ ಬಜೆಟ್‌ನಲ್ಲಿ ತೆರಿಗೆ ಸುಧಾರಣೆ ಮತ್ತು ತೆರಿಗೆ ದರ ಕಡಿತದ ಕುರಿತು ಘೋಷಿಸಲಿದ್ದಾರೆ. ಜತೆಗೆ ಮೆಡಿಕಲ್ ಇನ್ಸೂರೆನ್ಸ್‌ನಲ್ಲೂ ದರ ಕಡಿತ ಮಾಡುವ ನಿರೀಕ್ಷೆಯಿದೆ.

Nirmala Sitharaman
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್
ಹಾಗೆಯೇ ರೈತರ ಮತ್ತು ಕೃಷಿ ವಲಯದ ಸಮಸ್ಯೆಗಳು, ಮಧ್ಯಮ ವರ್ಗಕ್ಕೆ ತೆರಿಗೆ ಸುಧಾರಣಾ ಕ್ರಮ ಈ ಬಾರಿಯ ಬಜೆಟ್‌ನ ಪ್ರಮುಖ ಅಂಶವಾಗಲಿದೆ. ಚುನಾವಣೆ ನಂತರ ಜನರಿಟ್ಟ ನಿರೀಕ್ಷೆಯನ್ನು ಹುಸಿಗೊಳಿಸದಂತೇ ಬಜೆಟ್ ಮಂಡಿಸಲಿದೆ. ಅಲ್ಲದೆ ಆರ್ಥಿಕತೆಯ ಸುಧಾರಣೆಗೆ ತಕ್ಷಣದ ಕ್ರಮಗಳ ಕುರಿತು ಬಜೆಟ್‌ನಲ್ಲಿ ಪ್ರಾಧಾನ್ಯತೆ ನೀಡಲಾಗುತ್ತದೆ ಎಂದು ಸುಳಿವು ನೀಡಲಾಗಿದೆ.

ಕೃಷಿಗೆ ಏನು ಸಿಗಬಹುದು?

Union Budget 2019

 • ಬಜೆಟ್‍ನಲ್ಲಿ ಕೃಷಿ ವಲಯಕ್ಕೆ ಬಂಪರ್ ಕೊಡುಗೆ ಸಾಧ್ಯತೆ

 • ಕೃಷಿ ಉಪಕರಣ, ರಸಗೊಬ್ಬರ ಖರೀದಿಗೆ ರೈತರ ಖಾತೆಗೆ ವಾರ್ಷಿಕ 10 ಸಾವಿರ ರೂ. ಜಮೆ ಸಾಧ್ಯತೆ

 • ಸಕಾಲಕ್ಕೆ ಕೃಷಿ ಸಾಲ ಮರು ಪಾವತಿಸುವ ರೈತರಿಗೆ ಗಿಫ್ಟ್ ನಿರೀಕ್ಷೆ

 • ಪೂರ್ಣ ಬಡ್ಡಿ ಮನ್ನಾ ಸಾಧ್ಯತೆ

 • ತೆಲಂಗಾಣ ಮಾದರಿಯಲ್ಲಿ ರೈತರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ?

 • ಕೃಷಿ ವಿಮೆ ಪ್ರೀಮಿಯಂ ಪೂರ್ಣವಾಗಿ ಸರ್ಕಾರದಿಂದಲೇ ಪಾವತಿ

 • ಸಾಮಾನ್ಯ ಕನಿಷ್ಠ ಬೆಂಬಲ ಬೆಲೆ ಘೋಷಣೆ ಸಾಧ್ಯತೆ

 • ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಗೆ ಹೆಚ್ಚಿನ ಅನುದಾನ

 • ನರೇಗಾದ ಮೂಲಕ ಗ್ರಾಮೀಣ ಭಾಗದ ನೌಕರರ ಕೂಲಿ ಹೆಚ್ಚಿಸಬಹುದು


ಇದನ್ನೂ ಓದಿ: Union Budget 2019: ಮೋದಿ ಸರ್ಕಾರದ ಬಜೆಟ್: ಜನರ ನಿರೀಕ್ಷೆ ಏನಿದೆ?

ತೆರಿಗೆ ಪಾವತಿದಾರರಿಗೆ ಏನು ಸಿಗಬಹುದು?

 • ಆದಾಯ ತೆರಿಗೆ ಮಿತಿ 2.5 ಲಕ್ಷದಿಂದ ಏರಿಕೆ

 • ಆದಾಯ ತೆರಿಗೆ ಸಲ್ಲಿಕೆ ನಿಯಮಗಳನ್ನು ಕೊಂಚ ಸಡಿಸಬಹುದು

 • ಟಿಡಿಎಸ್ ಸಲ್ಲಿಕೆ ದಿನವೇ ಮರು ಪಾವತಿಗೆ ನಿಯಮ ಜಾರಿಗೊಳಿಸಬಹುದು

 • ಶೇ.30ರಷ್ಟಿರುವ ಕಾರ್ಪೋರೇಟ್ ತೆರಿಗೆಯನ್ನು ಶೇ.25ಕ್ಕೆ ಇಳಿಕೆ ಮಾಡಬಹುದು


ಶ್ರೀಸಾಮಾನ್ಯರಿಗೆ ಏನು ಸಿಗಬಹುದು?

 • ಮೆಡಿಕಲ್ ವಿಮೆ ಕಡಿಮೆ ಮಾಡುವ ನಿರೀಕ್ಷೆ

 • ಪ್ರತಿ ವ್ಯಕ್ತಿಗೂ 5 ಲಕ್ಷದ ವರೆಗಿನ ಏಕರೂಪದ ವಿಮೆ ಭಾಗ್ಯ ಕಲ್ಪಿಸಬಹುದು

 • ಸಣ್ಣ ಉದ್ದಿಮೆದಾರರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸಾಧ್ಯತೆ (ಉದ್ದಿಮೆದಾರರಿಗೆ ವಿಮೆಯೂ ಘೋಷಣೆ ಮಾಡಬಹುದು)

 • ಬಡವರಿಗೆ ಕನಿಷ್ಠ ವರಮಾನ ಯೋಜನೆ ಪ್ರಕಟಣೆ ಸಾಧ್ಯತೆ

 • ಜಿಎಸ್‍ಟಿ ವ್ಯಾಪ್ತಿಯಿಂದ ಮತ್ತಷ್ಟು ವಸ್ತುಗಳನ್ನು ಕೈ ಬಿಡುವ ಸಾಧ್ಯತೆ

 • ಐಟಿ ಕಾನೂನುಗಳಿಗೆ ಬದಲಾವಣೆ ತಂದು ಉದ್ಯೋಗ ಸೃಷ್ಟಿಸಬಹುದು


-------------
First published: June 10, 2019, 5:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading