Budget 2019; ಕೃಷಿ, ತೆರಿಗೆ ಹಾಗೂ ಉದ್ಯೋಗ ಕ್ಷೇತ್ರಗಳ ತುರ್ತು ಅಭಿವೃದ್ಧಿ ಸರ್ಕಾರದ ಮೊದಲ ಆದ್ಯತೆ?

ಈ ಭಾರಿಯ ಆಯವ್ಯಯ ಕೇಂದ್ರ ಸರ್ಕಾರದ ವಾರ್ಷಿಕ ಬಜೆಟ್ ಎಂಬ ಪರಧಿಯನ್ನೂ ಧಾಟಿ ಗಮನ ಸೆಳೆಯುತ್ತಿದೆ. ಅನೇಕ ವಿಭಾಗಗಳಲ್ಲಿ ಮಹತ್ವದ ಬದಲಾವಣೆಯಾಗಬೇಕು, ಜನಸ್ನೇಹಿ ಬಜೆಟ್ ಆಗಬೇಕು ಎಂಬ ಕೂಗು ಜನರ ನಡುವಿನಿಂದ ಕೇಳಿ ಬರುತ್ತಿದೆ. ಅದರಲ್ಲೂ ಮುಖ್ಯವಾಗಿ ಕೃಷಿ, ತೆರಿಗೆ ಮಿತಿ ಹಾಗೂ ಉದ್ಯೋಗ ಸೃಷ್ಟಿ ವಿಭಾಗಗಳಲ್ಲಿ ಸರ್ಕಾರ ತ ತುರ್ತು ಬದಲಾವಣೆಗಳನ್ನು ಮಾಡಲೇಬೇಕಾದ ಅವಶ್ಯಕತೆ ಇದೆ.

MAshok Kumar | news18
Updated:July 5, 2019, 4:34 PM IST
Budget 2019; ಕೃಷಿ, ತೆರಿಗೆ ಹಾಗೂ ಉದ್ಯೋಗ ಕ್ಷೇತ್ರಗಳ ತುರ್ತು ಅಭಿವೃದ್ಧಿ ಸರ್ಕಾರದ ಮೊದಲ ಆದ್ಯತೆ?
ನಿರ್ಮಲಾ ಸೀತಾರಾಮನ್
  • News18
  • Last Updated: July 5, 2019, 4:34 PM IST
  • Share this:
ನವ ದೆಹಲಿ (ಜುಲೈ.05); ಸಾಮಾನ್ಯ ಜನರಲ್ಲಿ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಬಜೆಟ್-2019 ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೆಲವೇ ಕ್ಷಣಗಳಲ್ಲಿ ಲೋಕಸಭೆಯಲ್ಲಿ ಮಂಡಿಸಲಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಅಂದಿನ ರೈಲ್ವೆ ಸಚಿವ ಪಿಯೂಷ್ ಗೋಯಲ್ ಮಧ್ಯಂತರ ಬಜೆಟ್ ಮಂಡಿಸಿದ್ದರು. ಈ ಬಜೆಟ್​ನಲ್ಲಿ ತೆರಿಗೆ ಹಾಗೂ ಕೃಷಿ ವಿಭಾಗಗಳಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು. ಆದರೆ, ಇವು ವಾಸ್ತವವಾಗಿ ಶೇ.100 ರಷ್ಟು ಕಾರ್ಯರೂಪಕ್ಕೆ ತರಲು ಸಾಧ್ಯವಾಗಿರಲಿಲ್ಲ.

ಈ ನಡುವೆ ಹೊಸ ಸರ್ಕಾರ ರಚನೆಯಾದ ನಂತರ ಪೂರ್ಣಾವಧಿ ಬಜೆಟ್ ಮಂಡಿಸುವುದು ಅನಿವಾರ್ಯ ಹೀಗಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ತನ್ನ ಎರಡನೇ ಅವಧಿಯ ಮೊದಲ ಬಜೆಟ್​ಗೆ ಸಿದ್ಧತೆ ನಡೆಸಿದೆ.

ದೇಶದ ಮೊದಲ ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಇಂದು ತಮ್ಮ ಚೊಚ್ಚಲ ಬಜೆಟ್ ಮಂಡಿಸಲಿದ್ದಾರೆ. ಆದರೆ, ಈ ಸಿದ್ಧತೆ ನಡುವೆ ಆರ್ಥಿಕ ಹಿಂಜರಿತ, ತೆರಿಗೆ ಕಳ್ಳತನ, ನಿರುದ್ಯೋಗ, ರೈತರ ಆತ್ಮಹತ್ಯೆ, ಬರ, ಮಳೆ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳನ್ನೂ ಕೇಂದ್ರ ಸರ್ಕಾರ ಈ ಬಜೆಟ್​ನಲ್ಲಿ ಎದುರಿಸಬೇಕಿದೆ.

ಇದನ್ನೂ ಓದಿ : Union Budget 2019 – ಬಜೆಟ್ ಹೆಸರು ಮತ್ತು ಸೂಟ್​ಕೇಸ್ ಹಿಂದಿವೆ ಕೆಲ ಕುತೂಹಲಕಾರಿ ವಿಚಾರಗಳು

ಈ ಭಾರಿಯ ಆಯವ್ಯಯ ಕೇಂದ್ರ ಸರ್ಕಾರದ ವಾರ್ಷಿಕ ಬಜೆಟ್ ಎಂಬ ಪರಧಿಯನ್ನೂ ದಾಟಿ ಗಮನ ಸೆಳೆಯುತ್ತಿದೆ. ಅನೇಕ ವಿಭಾಗಗಳಲ್ಲಿ ಮಹತ್ವದ ಬದಲಾವಣೆಯಾಗಬೇಕು, ಜನಸ್ನೇಹಿ ಬಜೆಟ್ ಆಗಬೇಕು ಎಂಬ ಕೂಗು ಜನರ ನಡುವಿನಿಂದ ಕೇಳಿ ಬರುತ್ತಿದೆ. ಅದರಲ್ಲೂ ಮುಖ್ಯವಾಗಿ ಕೃಷಿ, ತೆರಿಗೆ ಮಿತಿ ಹಾಗೂ ಉದ್ಯೋಗ ಸೃಷ್ಟಿ ವಿಭಾಗಗಳಲ್ಲಿ ಸರ್ಕಾರ ತುರ್ತು ಬದಲಾವಣೆಗಳನ್ನು ಮಾಡಲೇಬೇಕಾದ ಅವಶ್ಯಕತೆ ಇದೆ.

ಕೃಷಿ ಯೋಜನೆಗಳಿಗಾಗಿ ಕಾದು ಕುಳಿತಿದೆ ರೈತ ಸಮೂಹಕೃಷಿ, ತೆರಿಗೆ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಪ್ರಸ್ತುತ ದೊಡ್ಡ ಮಟ್ಟದ ಬದಲಾವಣೆ ಹಾಗೂ ಅಭಿವೃದ್ಧಿ ಸಾಧಿಸಲೇಬೇಕಾದ ತುರ್ತು ಪರಿಸ್ಥಿತಿ ಅಥವಾ ಸಂದಿಗ್ಧತೆ ಇದೀಗ ಕೇಂದ್ರ ಸರ್ಕಾರದ ಮುಂದಿದೆ.

ಕಳೆದ ಎರಡು ವರ್ಷಗಳಲ್ಲಿ ಇಡೀ ದೇಶದ ಎಲ್ಲಾ ರಾಜ್ಯಗಳ ರೈತ ಸಮೂಹ ಕೇಂದ್ರ ಸರ್ಕಾರದ ವಿರುದ್ಧ ಬಂಡೆದದ್ದು ಸುಳ್ಳಲ್ಲ. ಮಹಾರಾಷ್ಟ್ರದ ವಿದರ್ಭದಿಂದ ಸಾವಿರಾರು ಸಂಖ್ಯೆಯ ಜನ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮುಂಬೈಗೆ ಕಾಲ್ನಡಿಗೆಯಲ್ಲಿ ಆಗಮಿಸಿ ಇಡೀ ರಾಷ್ಟ್ರದ ಗಮನ ಸೆಳೆದದ್ದು, ಹಾಗೂ ತದನಂತರದ ಬೆಳೆವಣಿಗೆಯಲ್ಲಿ ದೇಶದ ಎಲ್ಲಾ ರಾಜ್ಯಗಳಿಂದ ರೈತರು ದೆಹಲಿಗೆ ತೆರಳಿ ಜಂತರ್​ ಮಂತರ್​ನಲ್ಲಿ ಅರೆಬೆತ್ತಲೆ ಹಾಗೂ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ ರೈತರ ಪಳೆಯುಳಿಕೆಗಳನ್ನು ಹಿಡಿದು ಪ್ರತಿಭಟಿಸಿದ್ದನ್ನು ಭಾಗಶಃ ಯಾರೂ ಈವರೆಗೆ ಮರೆತಿರಲು ಸಾಧ್ಯವಿಲ್ಲ.

ಇದನ್ನೂ ಓದಿ : Union Budget 2019: ಮೊದಲ ಬಜೆಟ್ ಮಂಡಿಸಲಿರುವ ಸಚಿವೆ ನಿರ್ಮಲಾ ಸೀತಾರಾಮನ್; ಮುಂದಿದೆ ಸಾಲು ಸಾಲು ಸವಾಲುಗಳು!

ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ, ರಾಷ್ಟ್ರವ್ಯಾಪಿ ಏಕರೂಪ ಬೆಳೆ ವಿಮೆ, ಸೂಕ್ತ ಬೆಂಬಲ ಬೆಲೆ ಹಾಗೂ ಕೃಷಿ ಸ್ನೇಹಿ ಯೋಜನೆ ಸೇರಿದಂತೆ ರೈತ ಸಮೂಹ ಕೇಂದ್ರದ ಎದುರು ವಿವಿಧ ಬೇಡಿಕೆಗಳನ್ನು ಮುಂದಿಟ್ಟಿತ್ತು. ಆದರೆ, ರೈತರ ಹೋರಾಟದ ಬಗ್ಗೆ ಕೇಂದ್ರ ಅಷ್ಟಾಗಿ ಗಮನ ಹರಸಿರಲಿಲ್ಲ ಎಂಬುದೇ ಸತ್ಯ. ಅದರೂ, ಇದೀಗ ಮತ್ತೆ ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ರೈತರು ಹಾಗೂ ಕೃಷಿ ಕ್ಷೇತ್ರಗಳ ಬಗ್ಗೆ ಪ್ರಸ್ತುತ ಹೆಚ್ಚು ಗಮನವಹಿಸಲೇಬೇಕಿದೆ.

ನಿರುದ್ಯೋಗ ಸಮಸ್ಯೆಗೆ ಪರಿಹಾರ ಸಿಗುತ್ತಾ?

ಕಳೆದ 40 ವರ್ಷಗಳಲ್ಲಿ ಭಾರತ ಹಿಂದೆಂದೂ ಕಾಣದಂತಹ ಭಾರೀ ಪ್ರಮಾಣದ ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಹೇಳಲಾಗುತ್ತಿದೆ. ಪದವೀಧರ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ತಕ್ಕ ಉದ್ಯೋಗ ಲಭಿಸುತ್ತಿಲ್ಲ. ಅಲ್ಲದೆ ನೋಟ್ ಬ್ಯಾನ್ ನಂತಹ ಮಹತ್ವದ ನಿರ್ಧಾರದ ಬಳಿಕ ದೇಶದಲ್ಲಿ ದೊಡ್ಡ ಮಟ್ಟದ ನಿರುದ್ಯೋಗ ಸೃಷ್ಟಿಯಾಗಿದೆ. 50 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಕಸಿದುಕೊಳ್ಳಲಾಗಿದೆ ಎಂದು ಸಮೀಕ್ಷೆಗಳು ಹೇಳುತ್ತವೆ.

ನಿರುದ್ಯೋಗದ ಕುರಿತು ಕಳೆದ ವರ್ಷ ಹೇಳಿಕೆ ನೀಡಿದ್ದ ಪ್ರಧಾನಿ ಮೋದಿ ಪಕೋಡ ಮಾರುವುದು ಸಹ ಒಂದು ಉದ್ಯೋಗವೇ ಎಂದು ಹೇಳಿ ಭಾರೀ ಮುಜುಗರಕ್ಕೆ ಒಳಗಾಗಿದ್ದರು. ಕಳೆದ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಮೋದಿ ಪ್ರಚಾರ ನಡೆಸುತ್ತಿದ್ದ ಸ್ಥಳದಲ್ಲಿ ಪದವೀಧರ ವಿದ್ಯಾರ್ಥಿಗಳು ಪಕೋಡ ಮಾರಿ ಪ್ರತಿಭಟಿಸುವ ಮೂಲಕ ಪ್ರಧಾನಿ ವಿರುದ್ಧ ತಮ್ಮ ಅಸಹನೆಯನ್ನು ಹೊರ ಹಾಕಿದ್ದರು. ಹೀಗಾಗಿ ನಿರುದ್ಯೋಗ ಎಂಬುದು ಕೇಂದ್ರ ಸರ್ಕಾರದ ಮುಂದಿರುವ ದೊಡ್ಡ ಸಮಸ್ಯೆಯಾಗಿದೆ.

ಇದನ್ನೂ ಓದಿ : Union Budget 2019: ಇಂದು ನಿರ್ಮಲಾ ಸೀತಾರಾಮನ್​ ಚೊಚ್ಚಲ ಬಜೆಟ್​ ಮಂಡನೆ; ಮೋದಿ ಸರ್ಕಾರದ ಮೇಲೆ ಭಾರೀ ನಿರೀಕ್ಷೆ

ಈಗಾಗಲೇ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಖಾಸಗಿ ಕ್ಷೇತ್ರದಲ್ಲಿ ಅಧಿಕ ಉದ್ಯೋಗ ಸೃಷ್ಟಿಮಾಡುವ ಗುರಿ ಹೊಂದಿದ್ದಾರೆ. ಅಲ್ಲದೆ ಉದ್ಯೋಗ ಸೃಷ್ಟಿಗಾಗಿ ಹಾಗೂ ವಿದ್ಯಾರ್ಥಿಗಳ ಸ್ವಾವಲಂಭನೆಗಾಗಿ ಮಧ್ಯಮ, ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳಿಗೆ ಹೆಚ್ಚು ಒತ್ತು ನೀಡುವ ಸೂಚನೆ ನೀಡಿದ್ದಾರೆ. ಹೀಗಾಗಿ ಈ ದೃಷ್ಟಿಕೋನದಿಂದಲೂ ಈ ಭಾರಿಯ ಬಜೆಟ್ ಭಾರೀ ನಿರೀಕ್ಷೆಗಳನ್ನು ಕುತೂಹಲವನ್ನು ಮೂಡಿಸಿದೆ.

ಕಡಿಮೆಯಾಗುತ್ತಾ ಮಧ್ಯಮ ವರ್ಗದ ಜನರ ತೆರಿಗೆ ಹೊರೆ?

ಕೇಂದ್ರ ಸರ್ಕಾರ ನೋಟ್​ ಬ್ಯಾನ್ ಸಂದರ್ಭದಲ್ಲಿ ಮಧ್ಯಮ ವರ್ಗದ ಆದಾಯ ತೆರಿಗೆಯನ್ನು 2.5 ಲಕ್ಷಕ್ಕೆ ಸೀಮಿತಗೊಳಿಸಿತ್ತು. ಇದಕ್ಕೆ ಮೇಲ್ಪಟ್ಟ ಆದಾಯಕ್ಕೆ ತೆರಿಗೆ ಸಲ್ಲಿಸುವ ಅನಿವಾರ್ಯತೆ ಜನರಿಗೆ ಇತ್ತು. ಕಳೆದ ಬಜೆಟ್​ನಲ್ಲಿ ಈ ಮಿತಿಯನ್ನು 5 ಲಕ್ಷಕ್ಕೆ ಏರಿಕೆ ಮಾಡಲಾಗಿತ್ತು. ಆದರೆ, ಈ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವ ಬೇಡಿಕೆ ಮಧ್ಯಮ ವರ್ಗದ ಜನರಿಂದ ಕೇಳಿಬರುತ್ತಿದೆ.

ಆದಾಯ ತೆರಿಗೆ ಮಿತಿಯನ್ನು ಏರಿಕೆ ಮಾಡಿದಲ್ಲಿ ಮಧ್ಯಮ ವರ್ಗದ ಜನರಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ. ಅವರ ಮೇಲಿನ ತೆರಿಗೆ ಹೊರೆ ಕಡಿಮೆಯಾಗಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಇಂದಿನ ಬಜೆಟ್​ನಲ್ಲಿ ಮಧ್ಯಮ ವರ್ಗಕ್ಕೆ ಸಿಗುವ ಅನುಕೂಲವೇನು? ಆದಾಯ ಮಿತಿ ಎಷ್ಟಕ್ಕೆ ಸೀಮಿತ? ಎಂಬ ಪ್ರಶ್ನೆಯೂ ಭಾರೀ ಕುತೂಹಲ ಮೂಡಿಸಿದೆ.

First published: July 5, 2019, 10:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading