ಹೋರಾಟ ನಿಲ್ಲಿಸಿ ಮಾತುಕತೆಗೆ ಬನ್ನಿ; ದೆಹಲಿಗೆ ಲಗ್ಗೆ ಇಟ್ಟಿರುವ ರೈತರಿಗೆ ಕರೆ ನೀಡಿದ ಕೃಷಿ ಸಚಿವ ತೋಮರ್

ಕೆಲ ಗಡಿಭಾಗದಲ್ಲಿ ಪೊಲೀಸರು ಮತ್ತು ರೈತರ ಮಧ್ಯೆ ಸಂಘರ್ಷ ನಡೆದಿದ್ದು, ರೈತರನ್ನ ಚದುರಿಸಲು ಪೊಲೀಸರು ಲಾಠಿಚಾರ್ಜ್ ಮತ್ತು ಆಶ್ರುವಾಯು ಅಸ್ತ್ರ ಪ್ರಯೋಗಿಸಿದ್ದಾರೆ. ಜೀವ ಹೋದರೂ ಪರವಾಗಿಲ್ಲ, ದೆಹಲಿ ಪ್ರವೇಶಿಸುತ್ತೇವೆ ಎಂದು ರೈತರು ಪಣ ತೊಟ್ಟಿದ್ದ ರೈತರಿಗೆ ಕೊನೆಗೂ ದೆಹಲಿ ತಲುಪಲು ಅನುಮತಿ ನೀಡಲಾಗಿದೆ.

ದೆಹಲಿ ಚಲೋ ಚಳುವಳಿಯಲ್ಲಿ ರೈತರು.

ದೆಹಲಿ ಚಲೋ ಚಳುವಳಿಯಲ್ಲಿ ರೈತರು.

 • Share this:
  ನವ ದೆಹಲಿ (ನವೆಂಬರ್​ 27); ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಮಸೂದೆಗೆ ವಿರೋಧ ವ್ಯಕ್ತಪಡಿಸಿರುವ ದೇಶದ ರೈತರು ಗುರುವಾರದಿಂದ ದೆಹಲಿ ಚಲೋ ಚಳುವಳಿಗೆ ಕರೆ ನೀಡಿದ್ದಾರೆ. ಇದರ ಅಂಗವಾಗಿ ಪಂಜಾಬ್, ಹರಿಯಾಣ, ಉತ್ತರಪ್ರದೇಶದಿಂದ ಅಪಾರ ಪ್ರಮಾಣದ ರೈತರು ಇದೀಗ ದೆಹಲಿಗೆ ಮುತ್ತಿಗೆ ಇಡುತ್ತಿದ್ದು, ರಾಷ್ಟ್ರ ರಾಜ್ಯಧಾನಿಯಲ್ಲಿ ಪರಿಸ್ಥಿತಿ ಕೈಮಿರುವ ಎಲ್ಲಾ ಸೂಚನೆಗಳೂ ಕಂಡು ಬರುತ್ತಿದೆ. ಈ ನಡುವೆ ರೈತರ ಹೋರಾಟವೂ ಉಗ್ರ ಸ್ವರೂಪ ಪಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ರೈತರ ಬಳಿ ಮನವಿ ಮಾಡಿಕೊಂಡಿರುವ ಕೇಂದ್ರದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್​, "ರೈತರು ದಯವಿಟ್ಟು ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸಬೇಕು. ಸರ್ಕಾರ ಮಾತುಕತೆಗೆ ಸಿದ್ಧವಾಗಿದೆ " ಎಂದು ಮನವಿ ಮಾಡಿಕೊಂಡಿದ್ದಾರೆ.

  ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನ ವಿರೋಧಿಸಿ ಪಂಜಾಬ್ ರೈತರ ಹೋರಾಟ ಮುಂದುವರಿದಿದೆ. ಹಲವು ಅಡೆತಡೆಗಳ ಮಧ್ಯೆಯೂ ಪಂಜಾಬ್ ರೈತರು ದಿಲ್ಲಿ ಚಲೋ ರ‍್ಯಾಲಿ ಮುಂದುವರಿಸಿದ್ದಾರೆ. ಹರ್ಯಾಣದ ರೈತರೂ ಕೂಡ ತಮ್ಮ ನೆರೆ ರಾಜ್ಯದವರ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಇಂದು ಎರಡೂ ರಾಜ್ಯಗಳಿಂದ ಸಾವಿರಾರು ರೈತರು ವಿವಿಧ ಗಡಿಭಾಗಗಳ ಮೂಲಕ ದೆಹಲಿಗೆ ನುಗ್ಗಲು ಯತ್ನಿಸಿದ್ದರು. ದೆಹಲಿಯ ಎಲ್ಲಾ ಗಡಿಭಾಗದಲ್ಲಿ ಪೊಲೀಸರು ಭದ್ರತೆ ನಿಯೋಜಿಸಿದ್ದು, ರೈತರ ಮುನ್ನಡೆಯನ್ನು ತಡೆಯಲು ಹರಸಾಹಸ ನಡೆಸಿದರೂ ಅದು ಫಲ ನೀಡಲಿಲ್ಲ.

  ಕೆಲ ಗಡಿಭಾಗದಲ್ಲಿ ಪೊಲೀಸರು ಮತ್ತು ರೈತರ ಮಧ್ಯೆ ಸಂಘರ್ಷ ನಡೆದಿದ್ದು, ರೈತರನ್ನ ಚದುರಿಸಲು ಪೊಲೀಸರು ಲಾಠಿಚಾರ್ಜ್ ಮತ್ತು ಆಶ್ರುವಾಯು ಅಸ್ತ್ರ ಪ್ರಯೋಗಿಸಿದ್ದಾರೆ. ಜೀವ ಹೋದರೂ ಪರವಾಗಿಲ್ಲ, ದೆಹಲಿ ಪ್ರವೇಶಿಸುತ್ತೇವೆ ಎಂದು ರೈತರು ಪಣ ತೊಟ್ಟಿದ್ದ ರೈತರಿಗೆ ಕೊನೆಗೂ ದೆಹಲಿ ತಲುಪಲು ಅನುಮತಿ ನೀಡಲಾಗಿದೆ. ಹೀಗಾಗಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರೈತರ ಬಳಿ ಚಳುವಳಿಯನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.

  ಇದನ್ನೂ ಓದಿ : ದೆಹಲಿ ಚಲೋ; ಗಡಿಯಲ್ಲಿಯೇ ರೈತರನ್ನು ತಡೆದು ಅಶ್ರುವಾಯು ಪ್ರಯೋಗ, ಬ್ಯಾರಿಕೇಡ್ ಮುರಿದು ರೈತರ ಆಕ್ರೋಶ

  ಈ ಕುರಿತು ಮಾತನಾಡಿರುವ ಸಚಿವ ನರೇಂದ್ರ ಸಿಂಗ್ ತೋಮರ್​, "ರೈತರೊಂದಿಗೆ ಸಮಸ್ಯೆಗಳನ್ನು ಚರ್ಚಿಸಲು ಸರ್ಕಾರ ಯಾವಾಗಲೂ ಸಿದ್ಧವಾಗಿದೆ. ಡಿಸೆಂಬರ್ 3 ರಂದು ಮತ್ತೊಂದು ಸುತ್ತಿನ ಮಾತುಕತೆಗೆ ನಾವು ರೈತರ ಸಂಘಟನೆಗಳನ್ನು ಆಹ್ವಾನಿಸಿದ್ದೇವೆ. COVID-19 ಮತ್ತು ಚಳಿಗಾಲದ ದೃಷ್ಟಿಯಿಂದ ಆಂದೋಲನವನ್ನು ಬಿಡುವಂತೆ ನಾನು ಅವರಿಗೆ ಮನವಿ ಮಾಡುತ್ತೇನೆ" ಎಂದು ಎಎನ್​ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

  ಯಾಕೆ ರೈತರ ಆಕ್ರೋಶ?

  ಪಂಜಾಬ್ ಮತ್ತು ಹರಿಯಾಣ ಭಾಗದಲ್ಲಿ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್​​ಪಿ) ಯೋಜನೆ ಅತಿ ಹೆಚ್ಚು ಚಾಲ್ತಿಯಲ್ಲಿದೆ. ಈ ಎಂಎಸ್​ಪಿಯೇ ಇಲ್ಲಿನ ರೈತರ ಜೀವನಾಧಾರ ಎಂಬಂತಾಗಿದೆ. ಕೇಂದ್ರ ರೂಪಿಸಿರುವ ನೂತನ ಕೃಷಿ ಕಾಯ್ದೆಯಲ್ಲಿ ಎಂಎಸ್​ಪಿಯನ್ನು ಉಳಿಸಿಕೊಳ್ಳುವ ಪ್ರಸ್ತಾಪ ಇಲ್ಲ. ಇದು ಎಂಎಸ್​​ಪಿಯನ್ನು ರದ್ದುಗೊಳಿಸಿ ರೈತರನ್ನು ಕಾರ್ಪೊರೇಟ್ ಹಿಡಿತಕ್ಕೆ ಸಿಲುಕಿಸುವ ಸಂಚು ಎಂಬುದು ರೈತರ ಆತಂಕ ಮತ್ತು ಆಕ್ರೋಶ. ಈ ಹಿನ್ನೆಲೆಯಲ್ಲಿ ಉಳಿದೆಲ್ಲಾ ಭಾಗಗಳಿಗಿಂತ ಪಂಜಾಬ್ ಭಾಗದಲ್ಲಿ ರೈತರಿಂದ ಪ್ರತಿಭಟನೆಯ ತೀವ್ರತೆ ಹೆಚ್ಚೇ ಇದೆ.
  Published by:MAshok Kumar
  First published: