ಸುಶಿಕ್ಷಿತೆ ವೈದ್ಯೆ ಸಹೋದರಿಗೆ ಬದಲು ಪೊಲೀಸರಿಗೆ ಕರೆ ಮಾಡಬೇಕಿತ್ತು; ತೆಲಂಗಾಣ ಸಚಿವರ ಹೇಳಿಕೆಗೆ ಆಕ್ರೋಶ

ಪಶುವೈದ್ಯೆ ಸುಶಿಕ್ಷಿತೆಯಾಗಿದ್ದಳು.  ದುರದೃಷ್ಟವಶಾತ್​ ಅವರು ತಮ್ಮ ಸಹೋದರಿಗೆ ಕರೆ ಮಾಡುವ ಬದಲು ಪೊಲೀಸರ ಸಹಾಯವಾಣಿ 100ಕ್ಕೆ ಕರೆ ಮಾಡಿದ್ದರೆ, ಅವರ ಜೀವ ಉಳಿಯುತ್ತಿತ್ತು ಎಂಬ ಸಚಿವರ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದೆ.

Seema.R | news18-kannada
Updated:November 29, 2019, 6:34 PM IST
ಸುಶಿಕ್ಷಿತೆ ವೈದ್ಯೆ ಸಹೋದರಿಗೆ ಬದಲು ಪೊಲೀಸರಿಗೆ ಕರೆ ಮಾಡಬೇಕಿತ್ತು; ತೆಲಂಗಾಣ ಸಚಿವರ ಹೇಳಿಕೆಗೆ ಆಕ್ರೋಶ
ಚಿತ್ರ: ಮೀರ್​ ಸುಹೈಲ್​
  • Share this:
ಹೈದ್ರಾಬಾದ್​(ನ.29): ದೇಶವನ್ನೇ ಬೆಚ್ಚಿಬೀಳಿಸಿದ ತೆಲಂಗಾಣದ ಪಶುವೈದ್ಯೆ ಮೇಲೆ ನಡೆದ ಅತ್ಯಾಚಾರ ಕೊಲೆ ಆರೋಪದ ಕುರಿತು ಇಲ್ಲಿನ ಸಚಿವರು ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದ್ದು, ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೈದ್ಯೆ ಸ್ಕೂಟಿ ಪಂಕ್ಚರ್​ ಆದ ಬಳಿಕ ತನ್ನ ಸಹೋದರಿಗೆ ಕಡೆಯದಾಗಿ ಕರೆ ಮಾಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವಸಚಿವ ಮೊಹಮದ್​ ಮೊಹಮೂದ್​ ಆಲಿ, ಘಟನೆಗೆ ಖಂಡನೆ ವ್ಯಕ್ತಪಡಿಸಿದ್ದು, ತಮ್ಮ ಸಹೋದರಿಗೆ ಕರೆ ಮಾಡುವ ಬದಲು ಅವರು ಪೊಲೀಸರಿಗೆ ಅಥವಾ ಅಪರಾಧದಳದ ಕಂಟ್ರೋಲ್​ ರೂಮ್​ಗೆ ಕರೆ ಮಾಡಬೇಕಿತ್ತು ಎಂದಿದ್ದಾರೆ.

ಪಶುವೈದ್ಯೆ ಸುಶಿಕ್ಷಿತೆಯಾಗಿದ್ದಳು.  ದುರದೃಷ್ಟವಶಾತ್​ ಅವರು ತಮ್ಮ ಸಹೋದರಿಗೆ ಕರೆ ಮಾಡುವ ಬದಲು ಪೊಲೀಸರ ಸಹಾಯವಾಣಿ 100ಕ್ಕೆ ಕರೆ ಮಾಡಿದ್ದರೆ, ಅವರ ಜೀವ ಉಳಿಯುತ್ತಿತ್ತು ಎಂಬ ಸಚಿವರ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದೆ.

ಬಳಿಕ ತಮ್ಮ ಹೇಳಿಕೆ ಸರಿಪಡಿಸಿಕೊಂಡ ಅವರು, ಸಂತ್ರಸ್ತೆ ತಮ್ಮ ಮಗಳಿದ್ದಂತೆ. ಈ ಘಟನೆ ಕೆಳಿ ತಮಗೆ ತುಂಬಾ ಶಾಕ್​ ಆಯಿತು. ಆಕೆ ಪೊಲೀಸರಿಗೆ ಕರೆ ಮಾಡಿದ್ದರೆ, ಪೊಲೀಸರು ಎಚ್ಚೆತ್ತು ಆಕೆಯ ಜೀವ ಉಳಿಸುತ್ತಿದ್ದರು. ಈ ಉದ್ದೇಶದಿಂದ ಹೇಳಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ನಾನು ಅವರ ಪೋಷಕರನ್ನು ಭೇಟಿಯಾದಾಗ, ಮಗಳು ಕಳೆದುಕೊಂಡಷ್ಟೆ ದುಃಖ ನನಗೆ ಆಗಿ ಕಣ್ಣೀರು ಬಂತು ಎಂದರು.

ಇದನ್ನು ಓದಿ: ಸ್ಕೂಟಿ ಪಂಕ್ಚರ್ ತಂದ ಆಪತ್ತು; ವೈದ್ಯೆಯನ್ನು ಅತ್ಯಾಚಾರ ಮಾಡಿ ರಸ್ತೆ ಬದಿ ಸುಟ್ಟ ಕಾಮುಕರು

ತೆಲಂಗಾಣದ ಹಿರಿಯ ಸಚಿವರಾದ ಕೆಟಿ ರಾಮರಾವ್​ ಮಾತನಾಡಿ, ಪ್ರಕರಣವನ್ನು ಫಾಸ್ಟ್​ಟ್ರ್ಯಾಕ್​ ಕೋರ್ಟ್​ನಲ್ಲಿ ಇತ್ಯರ್ಥ ಪಡಿಸಿ, ಆರೋಪಿಗಳಿಗೆ ಮರಣದಂಡನೆ ಶಿಕ್ಷೆವಿಧಿಸಲು ಸರ್ಕಾರ ಪ್ರಯತ್ನಿಸುತ್ತದೆ  ಎಂದರು
First published:November 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ