• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಲಾಕ್​ಡೌನ್​ನಲ್ಲಿ ಖರ್ಚಿಲ್ಲದೇ ಇಬ್ಬರು ಅಪ್ರಾಪ್ತ ಮಕ್ಕಳ ಮದುವೆ ಮಾಡಲು ಹೋಗಿ ಸಿಕ್ಕಿಬಿದ್ದ ಕೂಲಿಕಾರ್ಮಿಕ

ಲಾಕ್​ಡೌನ್​ನಲ್ಲಿ ಖರ್ಚಿಲ್ಲದೇ ಇಬ್ಬರು ಅಪ್ರಾಪ್ತ ಮಕ್ಕಳ ಮದುವೆ ಮಾಡಲು ಹೋಗಿ ಸಿಕ್ಕಿಬಿದ್ದ ಕೂಲಿಕಾರ್ಮಿಕ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೂಲಿ ಕಾರ್ಮಿಕ ತನ್ನ ಇಬ್ಬರು ಮಕ್ಕಳಿಗೆ ಇಬ್ಬರು ವರರನ್ನೂ ಹುಡುಕಿದ್ದ. ಎರಡೂ ಕುಟುಂಬಸ್ಥರು ವರದಕ್ಷಿಣೆ ಕೇಳಿರಲಿಲ್ಲ. ಜೊತೆಗೆ ಸರಳವಾಗಿ ಮದುವೆ ಮಾಡಿಕೊಡಿ ಎಂದು ಕೇಳಿದ್ದರು. ಎರಡೂ ಕುಟುಂಬಸ್ಥರು ಸಹ ಭೇಟಿಯಾಗಿ ಮಾತನಾಡಿ ಕೆಲವು ವಾರಗಳ ನಂತರ ಮದುವೆ ಮಾಡಲು ನಿಶ್ಚಯಿಸಿದ್ದರು.

  • Share this:

ಉತ್ತರ ಪ್ರದೇಶ(ಜು.19): ಕೊರೋನಾ ಲಾಕ್​ಡೌನ್​ನಿಂದಾಗಿ ಎಲ್ಲಾ ವರ್ಗ ಜನರ ಜೀವನ ಶೈಲಿ ಬದಲಾಗಿದೆ. ಅದರಲ್ಲೂ ಬಡ ಮತ್ತು ಮಧ್ಯಮ ವರ್ಗದ ಜನರು ಕೆಲಸ ಕಳೆದುಕೊಂಡು ತಲೆಮೇಲೆ ಕೈ ಹೊತ್ತು ಕುಳಿತಿದ್ದಾರೆ. ಬದುಕು ಸಾಗಿಸಲು ತುಂಬಾ ಕಷ್ಟಪಡುತ್ತಿದ್ದಾರೆ.


ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಗ್ರಾಮವೊಂದರಲ್ಲಿ 42 ವರ್ಷದ ದಿನಗೂಲಿ ಕಾರ್ಮಿಕನೊಬ್ಬ ಈ ಲಾಕ್​ಡೌನ್​ ವೇಳೆ ತನ್ನ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳಿಗೆ ಮದುವೆ ಮಾಡಲು ಮುಂದಾಗಿದ್ದಾನೆ. ಲಾಕ್​ಡೌನ್​ನಿಂದ ಜೀವನ ಸಾಗಿಸಲು ಕಷ್ಟಪಡುತ್ತಿರುವಾಗ, ಇನ್ನು ಮಕ್ಕಳ ಮದುವೆಯನ್ನು ಅದ್ದೂರಿಯಾಗಿ ಮಾಡಲು ತನ್ನಿಂದ ಸಾಧ್ಯವಿಲ್ಲ ಎಂದು ತಿಳಿದು ಈ ನಿರ್ಧಾರ ಮಾಡಿದ್ದಾನೆ. ಆದರೆ ಸರಿಯಾದ ಸಮಯಕ್ಕೆ ಮಕ್ಕಳ ಸಹಾಯವಾಣಿ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಬಾಲ್ಯವಿವಾಹ ತಡೆದಿದ್ದಾರೆ.


ಅಧಿಕಾರಿಗಳ ಪ್ರಕಾರ ಈ ಘಟನೆ ಜೂನ್ 29ರಂದೇ ನಡೆದಿದೆ. ಮಾರಕ ಕೊರೋನಾ ಸೋಂಕಿನ ಹರಡುವಿಕೆ ಹೆಚ್ಚಾದಂತೆ ಲಾಕ್​ಡೌನ್​ ಜಾರಿಗೊಳಿಸಲಾಗಿತ್ತು. ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದ ದಿನಗೂಲಿ ಕಾರ್ಮಿಕ ಲಾಕ್​ಡೌನ್​ನಿಂದಾಗಿ ಕೆಲಸವನ್ನೂ ಕಳೆದುಕೊಂಡಿದ್ದ. ಹೀಗಾಗಿ ತನ್ನ ಹೆಂಡತಿ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನೊಳಗೊಂಡ ಸಂಸಾರವನ್ನು ನಡೆಸುವುದು ಆತನಿಗೆ ಕಷ್ಟವಾಗಿತ್ತು. ಇದರ ಜೊತೆಗೆ ಆತನಿಗೆ ಕುಡಿಯುವ ಚಟವೂ ಸಹ ಇದ್ದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿತ್ತು. ಹೀಗಾಗಿ ಲಾಕ್​ಡೌನ್​ ನಿರ್ಬಂಧಗಳ ನಡುವೆಯೇ ತನ್ನಿಬ್ಬರು ಹೆಣ್ಣುಮಕ್ಕಳ ಮದುವೆ ಮಾಡಿ ಮುಗಿಸಲು ನಿರ್ಧರಿಸಿದ್ದ. ಲಾಕ್​ಡೌನ್​ ಮುಗಿದ ಮೇಲೆ ಅದ್ದೂರಿಯಾಗಿ ಮದುವೆ ಮಾಡಬೇಕಾಗುತ್ತದೆ. ಆರ್ಥಿಕವಾಗಿ ಅಷ್ಟು ಶಕ್ತನಿಲ್ಲ ಎಂದು ಆತನ ಯೋಚಿಸಿದ್ದ.


ಲಾಕ್​ಡೌನ್​ ಇದ್ದರೂ ತನಗಿಷ್ಟದ ಬಟರ್ ಚಿಕನ್ ತಿನ್ನಲು ಬರೋಬ್ಬರಿ 32 ಕಿ.ಮೀ ನಡೆದ ವ್ಯಕ್ತಿ; ಬಳಿಕ ಆಗಿದ್ದೇನು ಗೊತ್ತೇ?


ಹೀಗಾಗಿ ಆ ಕೂಲಿ ಕಾರ್ಮಿಕ ತನ್ನ ಇಬ್ಬರು ಮಕ್ಕಳಿಗೆ ಇಬ್ಬರು ವರರನ್ನೂ ಹುಡುಕಿದ್ದ. ಎರಡೂ ಕುಟುಂಬಸ್ಥರು ವರದಕ್ಷಿಣೆ ಕೇಳಿರಲಿಲ್ಲ. ಜೊತೆಗೆ ಸರಳವಾಗಿ ಮದುವೆ ಮಾಡಿಕೊಡಿ ಎಂದು ಕೇಳಿದ್ದರು. ಎರಡೂ ಕುಟುಂಬಸ್ಥರು ಸಹ ಭೇಟಿಯಾಗಿ ಮಾತನಾಡಿ ಕೆಲವು ವಾರಗಳ ನಂತರ ಮದುವೆ ಮಾಡಲು ನಿಶ್ಚಯಿಸಿದ್ದರು. ಈ ವಿಷಯ ತಿಳಿದ ನೆರೆಹೊರೆಯವರು ಜೂನ್ 29ರಂದು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಕೂಲಿ ಕಾರ್ಮಿಕನ ಹೆಣ್ಣುಮಕ್ಕಳು 6 ಮತ್ತು 9ನೇ ತರಗತಿ ಓದುತ್ತಿದ್ದರು.


ಮಕ್ಕಳ ಸಹಾಯವಾಣಿ ಅಧಿಕಾರಿಗಳ ತಂಡವು ಗ್ರಾಮಕ್ಕೆ ಆಗಮಿಸಿ ಅಪ್ರಾಪ್ತ ಹೆಣ್ಣುಮಕ್ಕಳ ಮದುವೆ ಆಗಿದೆಯಾ ಎಂಬುದನ್ನು ಖಚಿತಪಡಿಸಿಕೊಂಡರು. ನಮಗೆ ಓದಲು ಇಷ್ಟವಿದ್ದರೂ ಸಹ ನಮ್ಮ ತಂದೆ ಮದುವೆ ಮಾಡಲು ನಿರ್ಧರಿಸಿದ್ದರು ಎಂದು ಆ ಇಬ್ಬರು ಹೆಣ್ಣು ಮಕ್ಕಳು ಅಧಿಕಾರಿಗಳ ಬಳಿ ಹೇಳಿದರು.


ನಾವು ಅಸಹಾಯಕರಾಗಿದ್ದೇವೆ. ಈ ಲಾಕ್​ಡೌನ್​ ವೇಳೆ ನನ್ನ ಗಂಡನ ಆದಾಯ ತುಂಬಾ ಕಡಿಮೆಯಿದ್ದು, ಸಾಲದ ಸುಳಿಗೆ ಸಿಲುಕಿದ್ದೇವೆ ಎಂದು ಕೂಲಿ ಕಾರ್ಮಿಕನ ಹೆಂಡತಿ ತಮ್ಮ ದುಃಖ ಹೇಳಿಕೊಂಡರು.


ಬಳಿಕ ಮಕ್ಕಳ ಸಹಾಯವಾಣಿ ಅಧಿಕಾರಿಗಳು ಆ ಕುಟುಂಬಸ್ಥರಿಗೆ ಕೌನ್ಸೆಲಿಂಗ್ ಮಾಡಿದರು. ಬಾಲ್ಯ ವಿವಾಹ ಮಾಡಲು ಕೂಲಿಕಾರ್ಮಿಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

First published: