ದುರಂತ ಪ್ರೇಮಕತೆ; ಪ್ರೇಯಸಿಗೆ ವಿಭಿನ್ನವಾಗಿ ಪ್ರಪೋಸ್​ ಮಾಡಲು ಹೋದವ ವಾಪಾಸ್​ ಬರಲೇ ಇಲ್ಲ!

ಕೆನೆಶಾ ಬಳಿ ಪ್ರೇಮ ನಿವೇದನೆ ಮಾಡಲು ತಂಜೇನಿಯಾಗೆ ಪ್ರವಾಸ ಕರೆದುಕೊಂಡು ಹೋದ ಸ್ಟೀವನ್ ಅಂಡರ್‌ವಾಟರ್‌ನಲ್ಲಿ ಪ್ರಪೋಸ್ ಮಾಡಲು ನಿರ್ಧರಿಸಿದ್ದ. ಆದರೆ, ಪ್ರಪೋಸ್ ಮಾಡಿದ ನಂತರ ಆತ ಮೇಲೆ ಬರಲೇ ಇಲ್ಲ...

Sushma Chakre | news18-kannada
Updated:September 22, 2019, 6:37 PM IST
ದುರಂತ ಪ್ರೇಮಕತೆ; ಪ್ರೇಯಸಿಗೆ ವಿಭಿನ್ನವಾಗಿ ಪ್ರಪೋಸ್​ ಮಾಡಲು ಹೋದವ ವಾಪಾಸ್​ ಬರಲೇ ಇಲ್ಲ!
ಸ್ಟೀವನ್- ಕೆನೆಶಾ
  • Share this:
ತನ್ನ ಪ್ರಿಯತಮೆಯ ಮನವೊಲಿಸಿ ಆಕೆಯ ಪ್ರೀತಿಯನ್ನು ಗೆಲ್ಲಲು ಅನೇಕ ಪ್ರೇಮಿಗಳು ನಾನಾ ಸಾಹಸಗಳನ್ನು ಮಾಡುತ್ತಾರೆ. ಹುಡುಗಿಯನ್ನು ಇಂಪ್ರೆಸ್​ ಮಾಡಲು ರಕ್ತದಲ್ಲಿ ಪತ್ರ ಬರೆಯುವುದು, ದುಬಾರಿ ಉಡುಗೊರೆಗಳನ್ನು ನೀಡುವುದು, ಹಿಂದೆ ಬಿದ್ದು ಕಾಡುವುದು ಹೀಗೆ ಏನೇನೋ ಪ್ರಯತ್ನ ಮಾಡುತ್ತಾರೆ. ಆದರೆ, ಪ್ರೀತಿಸಿದ ಹುಡುಗಿಯನ್ನು ಇಂಪ್ರೆಸ್​ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡವರನ್ನು ಎಲ್ಲಾದರೂ ನೋಡಿದ್ದೀರಾ? ಅಂಥದ್ದೊಂದು ಕತೆ ಇಲ್ಲಿದೆ...

ಆತನಿಗೆ ತನ್ನ ಪ್ರೀತಿಯ ಹುಡುಗಿಗೆ ಹೇಗಾದರೂ ವಿಭಿನ್ನವಾಗಿ ಪ್ರಪೋಸ್ ಮಾಡಬೇಕೆಂಬ ಬಯಕೆ. ಅದಕ್ಕಾಗಿ ಅನೇಕ ಜನರ ಸಲಹೆ ಕೇಳಿದ ಆತ ಇಂಟರ್​ನೆಟ್​ನಲ್ಲೂ ಸಾಕಷ್ಟು ಹುಡುಕಾಡಿದ್ದ. ಕೊನೆಗೂ ಒಂದು ಐಡಿಯಾ ಆತನಿಗೆ ಇಷ್ಟವಾಯಿತು. ತನ್ನ ಗರ್ಲ್​ಫ್ರೆಂಡ್​ಗೆ ಸರ್​ಪ್ರೈಸ್​ ನೀಡಬೇಕೆಂದು ಆಕೆಯನ್ನು ತಂಜೇನಿಯಾದ ಸಮುದ್ರದ ಬಳಿ ಕರೆದುಕೊಂಡು ಹೋಗಿದ್ದ.

ಆಫ್ರಿಕಾದ ಸ್ಟೀವನ್ ವೇಬರ್ ಮತ್ತು ಕೆನೆಶಾ ಆಂಟೋಯಿನ್ ಎಂಬ ಜೋಡಿಯ ದುರಂತ ಕತೆಯಿದು. ಕೆನೆಶಾ ಬಳಿ ಪ್ರೇಮ ನಿವೇದನೆ ಮಾಡಲು ತಂಜೇನಿಯಾಗೆ ಪ್ರವಾಸ ಕರೆದುಕೊಂಡು ಹೋದ ಸ್ಟೀವನ್ ಅಂಡರ್‌ವಾಟರ್‌ನಲ್ಲಿ ಪ್ರಪೋಸ್ ಮಾಡಲು ನಿರ್ಧರಿಸುತ್ತಾನೆ. ಕೆನೆಶಾಗೆ ಸರ್​ಪ್ರೈಸ್​ ನೀಡಲು ಸಮುದ್ರದ ಆಳಕ್ಕೆ ಜಿಗಿದ ಸ್ಟೀವನ್ ಸಬ್‍ಮರ್ಜ್ಡ್ ಕ್ಯಾಬಿನ್ ಮೂಲಕ ತನ್ನ ಗೆಳತಿಗೆ ತಾನು ಬರೆದು ಲ್ಯಾಮಿನೇಷನ್​ ಮಾಡಿಸಿದ್ದ ಪತ್ರವನ್ನು ತೋರಿಸಿದನು. ಆ ದೃಶ್ಯವನ್ನು ಕೆನೆಶಾ ವಿಡಿಯೋ ಮಾಡಿಕೊಳ್ಳುತ್ತಿದ್ದಳು.

Kerala Lottery: ಲಾಟರಿ ಮಹಾತ್ಮೆ; ರಾತ್ರೋರಾತ್ರಿ ಕೋಟ್ಯಧಿಪತಿಗಳಾದ ಕೇರಳದ ಸೇಲ್ಸ್​ಮನ್​ಗಳು!

ಕೆನೆಶಾಗೆ ನೀರಿನೊಳಗಿಂದ ಪ್ರಪೋಸ್ ಮಾಡಿದ ಸ್ಟೀವನ್, 'ನಾನು ನಿನ್ನನ್ನು ಪ್ರತಿದಿನ ಹೆಚ್ಚೆಚ್ಚು ಪ್ರೀತಿಸುತ್ತೇನೆ. ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ. ನನ್ನನ್ನು ಮದುವೆಯಾಗಲು ನಿನಗೆ ಇಷ್ಟವಿದೆಯಾ? ನನ್ನ ಹೆಂಡತಿಯಾಗಿ ಜೀವನದ ಜೊತೆಗಿರಲು ನಿನಗೆ ಒಪ್ಪಿಗೆಯಾ?' ಎಂದು ಬರೆದಿದ್ದ. ಅದನ್ನು ನೋಡಿ ಫುಲ್ ಥ್ರಿಲ್ ಆದ ಕೆನೆಶಾ ಆತನ ಎದುರಲ್ಲಿ ನಿಂತು ಪ್ರಪೋಸಲ್​ ಒಪ್ಪಿಕೊಂಡು ಐ ಲವ್​ ಯೂ ಹೇಳಲು ಕಾಯುತ್ತಿದ್ದಳು. ಆದರೆ, ಆ ಕ್ಷಣ ಬರಲೇ ಇಲ್ಲ!

ಕೆನೆಶಾಗಾಗಿ ಸ್ಟೀವನ್ ಬರೆದ ಪತ್ರ


ಸಮುದ್ರದಾಳಕ್ಕೆ ಜಿಗಿದಿದ್ದ ಸ್ಟೀವನ್​ಗೆ ಮೇಲೆ ಬರಲು ಸಾಧ್ಯವಾಗಲೇ ಇಲ್ಲ. ಈ ಬಗ್ಗೆ ಆ ವಿಡಿಯೋ ಹಾಕಿ ಫೇಸ್​ಬುಕ್​ನಲ್ಲಿ ಬರೆದುಕೊಂಡಿರುವ ಕೆನೆಶಾ, 'ನೀನು ಆ ಆಳದಿಂದ ಹೊರಗೆ ಬರಲು ಸಾಧ್ಯವೇ ಆಗಲಿಲ್ಲ. ಹೀಗಾಗಿ, ನಿನಗೆ ನನ್ನ ಉತ್ತರ ಕೇಳಲೇ ಇಲ್ಲ. ನಾನೀಗಲೂ ಲಕ್ಷ ಬಾರಿ ಕೂಗಿ ಹೇಳುತ್ತಿದ್ದೇನೆ... ಯೆಸ್​ ಯೆಸ್​ ಯೆಸ್​.. ನಿನ್ನ ಮದುವೆಯಾಗಲು ನನಗೆ ಇಷ್ಟವಿದೆ. ನಾನೂ ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ನಿನ್ನ ಕೊನೆಯ ಕ್ಷಣಗಳಲ್ಲಿ ನಾನು ನಿನ್ನೊಂದಿಗಿದ್ದೆ ಎಂಬ ಸಮಾಧಾನವೊಂದೇ ನನ್ನ ಕೊನೆಯವರೆಗೂ ನೆನಪಿನಲ್ಲಿ ಉಳಿಯುತ್ತದೆ' ಎಂದು ತಮ್ಮ ಜೀವನದಲ್ಲಾದ ಕಹಿ ಘಟನೆಯನ್ನು ಕೆನೆಶಾ ಹಂಚಿಕೊಂಡಿದ್ದಾರೆ.
ಅಂಡರ್​ವಾಟರ್​ನಲ್ಲಿ ಕೆನೆಶಾಗೆ ಉಂಗುರವನ್ನು ತೋರಿಸಿ ಪ್ರಪೋಸ್ ಮಾಡುತ್ತಿರುವ ಸ್ಟೀವನ್


ತಂಜೇನಿಯಾದಲ್ಲಿ ಅಮೆರಿಕದ ವ್ಯಕ್ತಿ ಸಾವನ್ನಪ್ಪಿರುವ ಬಗ್ಗೆ ಅಲ್ಲಿನ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಈ ಅನಿರೀಕ್ಷಿತ ದುರ್ಘಟನೆಗೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ. ಆತನ ಗೆಳತಿ ಕೆನೆಶಾಗೆ ಈ ಆಘಾತವನ್ನು ಅರಗಿಸಿಕೊಳ್ಳುವ ಮನಸ್ಥಿತಿ ಬರಲಿ ಎಂದು ಅಧಿಕಾರಿಗಳು ಪ್ರಾರ್ಥಿಸಿದ್ದಾರೆ.

 
First published: September 22, 2019, 6:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading