Unique Health Card : ಆಧಾರ್​ನಂತೆ ಇನ್ಮುಂದೆ ದೇಶದ ಪ್ರತಿಯೊಬ್ಬರಿಗೂ ಸಿಗಲಿದೆ ಹೆಲ್ತ್​ ಕಾರ್ಡ್​; ಏನಿದರ ವಿಶೇಷತೆ?

ಈ ಕಾರ್ಡ್​ ಮೂಲಕ ರೋಗಿಗಳು ಆಯುಷ್ಮಾನ್ ಭಾರತ್ ಯೋಜನೆಯಂತಹ ಸರ್ಕಾರಿ ಯೋಜನೆಗಳಿಂದ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗಲಿದೆ. 

File photo

File photo

  • Share this:
    ನವದೆಹಲಿ (ಸೆ. 13):  ದೇಶದ ಪ್ರತಿಯೊಬ್ಬರಿಗೂ ವಿಶಿಷ್ಟ ಗುರುತಿನ ಸಂಖ್ಯೆ ಹೊಂದಿರುವ ಆಧಾರ್​ ಕಾರ್ಡ್​ನಂತೆ ಇನ್ಮುಂದೆ ವಿಶೇಷ ಆರೋಗ್ಯ ಕಾರ್ಡ್​ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಡಿಜಿಟಲ್ ಹೆಲ್ತ್​ ಮಿಷನ್​ ಅಡಿಯಲ್ಲಿ ಕೇಂದ್ರ ಸರ್ಕಾರ ಈ ವಿಶಿಷ್ಠ ಆರೋಗ್ಯ ಕಾರ್ಡ್​ ಅನ್ನು ದೇಶದ ಪ್ರತಿಯೊಬ್ಬ ಪ್ರಜೆಗೂ ನೀಡಲು ಮಂದಾಗಿದೆ. ಆಧಾರ್​ನಂತೆ ಸಂಪೂರ್ಣವಾಗಿ ಡಿಜಿಟಲ್​ ಕಾರ್ಡ್​ ಇದಾಗಿದೆ. ಅಲ್ಲದೇ ಇದಕ್ಕೂ ಕೂಡ ಆಧಾರ್​ನಂತೆ ನಿರ್ಧಿಷ್ಟ ಸಂಖ್ಯೆಯನ್ನು ನೀಡಲಾಗುತ್ತದೆ. ಈ ಕಾರ್ಡ್​ನಲ್ಲಿ ನಿಮ್ಮ ಆರೋಗ್ಯದ ಕುರಿತ ಸಂಪೂರ್ಣ ಮಾಹಿತಿ ಇರಲಿದ್ದು, ಈ ಕಾರ್ಡ್ ಮೂಲಕ ವೈದ್ಯರು ನಿಮ್ಮ ಆರೋಗ್ಯದ ದಾಖಲೆಯನ್ನು ತಕ್ಷಣಕ್ಕೆ ತಿಳಿಯಲು ಸಹಾಯ ವಾಗಲಿದೆ.

    ಏನಿದರ ವಿಶೇಷತೆ
    ಈ ವಿಶಿಷ್ಟ ಕಾರ್ಡ್ ನಲ್ಲಿ ವ್ಯಕ್ತಿಯೊಬ್ಬರ ವೈದ್ಯಕೀಯ ಇತಿಹಾಸದ ಸಂಪೂರ್ಣ ವಿವರ ಒಳಗೊಂಡಿರಲಿದೆ. ಜೊತೆಗೆ ವ್ಯಕ್ತಿಯಿ ಯಾವ ಯಾವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರು ಎಂಬ ಸಂಪೂರ್ಣ ಮಾಹಿತಿ ಸಂಗ್ರಹಿಸುತ್ತದೆ.

    ವ್ಯಕ್ತಿಯ ಸಂಪೂರ್ಣ ಆರೋಗ್ಯದ ಮಾಹಿತಿ ಈ ಕಾರ್ಡಿನಲ್ಲಿ

    ಈ ಮೂಲಕ ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ವಿಶಿಷ್ಠ ಆರೋಗ್ಯ ಕಾರ್ಡ್‌ನಲ್ಲಿ ದಾಖಲಿಸಲಾಗುತ್ತದೆ. ಇದರಿಂದ ತಮ್ಮ ಹಳೆಯ ಚಿಕಿತ್ಸೆಯ ಮಾಹಿತಿಯ ಕಡತಗಳನ್ನು ರೋಗಿ ಎಲ್ಲೆಡೆ ತೆಗೆದುಕೊಂಡು ಹೋಗಬೇಕಿಲ್ಲ. ರೋಗಿಯ ಈ ಆರೋಗ್ಯ ಗುರುತಿನ ಚೀಟಿಯನ್ನು ನೋಡಿದರೆ, ವೈದ್ಯರು ಆರೋಗ್ಯ ಪರಿಸ್ಥಿತಿಯನ್ನು ತಿಳಿದುಕೊಳ್ಳ ಬಹುದು. ಜೊತೆಗೆ ಹೆಚ್ಚಿನ ಚಿಕಿತ್ಸೆಯನ್ನು ಮುಂದುವರಿಸಲು ಸಾಧ್ಯವಾಗುತ್ತದೆ

    ಈ ಕಾರ್ಡ್​ ಮೂಲಕ ರೋಗಿಗಳು ಆಯುಷ್ಮಾನ್ ಭಾರತ್ ಯೋಜನೆಯಂತಹ ಸರ್ಕಾರಿ ಯೋಜನೆಗಳಿಂದ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗಲಿದೆ. 

    ಇದನ್ನು ಓದಿ: ಪದವಿ ಆದ್ರೂ ಪರವಾಗಿಲ್ಲ, IT Sectorನಲ್ಲಿ ಕೆಲಸ ಪಡೆಯಬೇಕು ಅಂದ್ರೆ ಈ ಐದು Skill ಕಲಿಯಿರಿ ಸಾಕು

    ವೈದ್ಯರಿಗೂ ಸಹಾಯಕ

    ಸರ್ಕಾರವು ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಡೇಟಾಬೇಸ್ ಅನ್ನು ಈ ಕಾರ್ಡ್​ ಮೂಲಕ ಸಿದ್ಧಪಡಿಸುತ್ತದೆ. ಎಲ್ಲಾ ವಿವರಗಳನ್ನು ಆ ವ್ಯಕ್ತಿಯ ವೈದ್ಯಕೀಯ ದಾಖಲೆಯಲ್ಲಿ ಇರಿಸಲಾಗುವುದು. ಈ ಐಡಿ ಯ ಸಹಾಯದಿಂದ, ಒಬ್ಬ ವ್ಯಕ್ತಿಯ ಸಂಪೂರ್ಣ ವೈದ್ಯಕೀಯ ದಾಖಲೆಯನ್ನು ನೋಡಬಹುದು. ಇದರಿಂದ ವೈದ್ಯರಿಗೂ ಕೂಡ ನೆರವಾಗಲಿದೆ. ವ್ಯಕ್ತಿಯ ಹಿಂದಿನ ಆರೋಗ್ಯ ಸ್ಥಿತಿ, ಆತನ ವೈದ್ಯಕೀಯ ಚಿಕಿತ್ಸೆ ಬಗ್ಗೆ ಸುಲಭವಾಗಿ ಎಲ್ಲಾ ಮಾಹಿತಿ ಸಿಗಲಿದೆ. ಈ ಸೌಲಭ್ಯದ ಮೂಲಕ ಸರ್ಕಾರವು ಜನರಿಗೆ ಹೆಚ್ಚು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದೆ.

    ಆಧಾರ್​, ಮೊಬೈಲ್​ ಸಂಖ್ಯೆ ಕಡ್ಡಾಯ

    ವ್ಯಕ್ತಿಯ ಈ ಆರೋಗ್ಯದ ಕಾರ್ಡ್​ ಐಡಿಯನ್ನು ಆತನ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ಬಳಸಿ ರಚಿಸಲಾಗುವುದು. ಆರೋಗ್ಯ ಕಾರ್ಡ್‌ಗಳನ್ನು ರಚಿಸಲು ಈ ಎರಡು ದಾಖಲೆಗಳನ್ನು ಪ್ರಮುಖವಾಗಿದೆ. ಇದಕ್ಕಾಗಿ, ಸರ್ಕಾರವು ಆರೋಗ್ಯ ಪ್ರಾಧಿಕಾರವನ್ನು ರಚಿಸಲಿದ್ದು, ಈ ಮೂಲಕ ವ್ಯಕ್ತಿಯ ಎಲ್ಲಾ ದಾಖಲೆಯನ್ನು ಸಂಗ್ರಹಿಸುತ್ತದೆ
    ಸಾರ್ವಜನಿಕ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರ, ಆರೋಗ್ಯ ಮತ್ತು ಕ್ಷೇಮ ಕೇಂದ್ರ ಅಥವಾ ಆರೋಗ್ಯ ಪೂರೈಕೆದಾರರು ರಾಷ್ಟ್ರೀಯ ಆರೋಗ್ಯ ಮೂಲಸೌಕರ್ಯ ನೋಂದಾವಣೆಗೆ ಸಂಪರ್ಕಿಸಬಹುದು.

    ನಿಮ್ಮ ದಾಖಲೆಗಳನ್ನು https://healthid.ndhm.gov.in/ನಲ್ಲಿ ನೋಂದಾಯಿಸುವ ಮೂಲಕ, ನಿಮ್ಮ ಆರೋಗ್ಯ ID ಯನ್ನು ಸಹ ನೀವು ರಚಿಸಬಹುದು
    Published by:Seema R
    First published: