ಮುಂಬೈ ದಾಳಿಯ ರುವಾರಿ ಹಫೀಜ್​ ಸಯೀದ್​ನನ್ನು 'ಉಗ್ರ'ನೆಂದು ಘೋಷಿಸಿದ ಪಾಕ್!: ಒತ್ತಡಕ್ಕೆ ಮಣಿಯಿತೇ ವೈರಿ ರಾಷ್ಟ್ರ?


Updated:February 13, 2018, 12:21 PM IST
ಮುಂಬೈ ದಾಳಿಯ ರುವಾರಿ ಹಫೀಜ್​ ಸಯೀದ್​ನನ್ನು 'ಉಗ್ರ'ನೆಂದು ಘೋಷಿಸಿದ ಪಾಕ್!: ಒತ್ತಡಕ್ಕೆ ಮಣಿಯಿತೇ ವೈರಿ ರಾಷ್ಟ್ರ?

Updated: February 13, 2018, 12:21 PM IST
-ನ್ಯೂಸ್ 18 ಕನ್ನಡ

ಅಫ್ಘಾನಿಸ್ತಾನ್(ಫೆ.13): ಅಮೆರಿಕಾ ಸೇರಿದಂತೆ ಹಲವಾರು ದೇಶಗಳ ಒತ್ತಡಕ್ಕೆ ಮಣಿದ ಪಾಕ್ ಕೊನೆಗೂ 26/11 ಮಾಸ್ಟರ್ ಮೈಂಡ್ ಹಫೀಜ್ ಸಯೀದ್​ನನ್ನು ಉಗ್ರನೆಂದು ಘೋಷಿಸಿದೆ. ಮಂಗಳವಾರದಂದು ಪಾಕಿಸ್ತಾನದ ರಾಷ್ಟ್ರಪತಿ ಮಮ್​ನೂನ್ ಹುಸೈನ್ 'ಭಯೋತ್ಪಾದನಾ ನಿಗ್ರಹ ಕಾಯ್ದೆ'ಗೆ ಸಂಬಂಧಿಸಿದ ದಾಖಲೆಗಳಿಗೆ ಸಹಿ ಹಾಕಿದ್ದಾರೆ. ಇದರ ಅನ್ವಯ ಪಾಕ್ ಸರ್ಕಾರ ಇದೀಗ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ನಿಷೇಧಿಸಿರುವ ಎಲ್ಲಾ ಭಯೋತ್ಪಾದಕ ಸಂಘಟನೆ ಹಾಗೂ ಅವುಗಳಿಗೆ ಸಂಬಂಧಿಸಿದ ವ್ಯಕ್ತಿ ಹಾಗೂ ದಾಖಲೆಗಳಿಗೆ ಕಡಿವಾಣ ಹಾಕಬೇಕಿದೆ.

ಲಷ್ಕರ್-ಏ-ತೊಯ್ಬಾ, ಜಮಾತ್- ಉದ್- ದಾವಾ ಹಾಗೂ ಹರ್ಕತ್- ಉಲ್-ಮುಜಾಹಿದ್ದೀನ್ ಸಂಘಟನೆಗಳ ಹೆಸರು ಈಗಾಗಲೇ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ನಿಷೇಧ ಹೇರಿದ ಉಗ್ರ ಸಂಘಟನೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ವಿಶ್ವ ಸಂಸ್ಥೆ ಬಿಡುಗಡೆಗೊಳಿಸಿರುವ ಈ ಪಟ್ಟಿಯಲ್ಲಿ ಒಟ್ಟು 27 ಉಗ್ರ ಸಂಘಟನೆಗಳಿವೆ. ಈವರೆಗೂ ಪಾಕ್ ಉಗ್ರ ಸಂಘಟನೆಗಳ ವಿರುದ್ಧ ತನ್ನಿಚ್ಛೆಯಂತೆ ಕ್ರಮ ಕೈಗೊಂಡಿತ್ತು, ಆದರೆ ಅದೆಲ್ಲಾ ಕೇವಲ ತೋರಿಕೆಯದ್ದಾಗಿತ್ತು ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರ.

ಪಾಕಿಸ್ತಾನದ ಪತ್ರಿಕೆ 'ದ ಟ್ರಿಬ್ಯೂನ್​'ನ ವರದಿಯೊಂದರಲ್ಲಿ ಭಯೋತ್ಪಾದನೆಯ ವಿರುದ್ಧ ಕಾನೂನಿನಲ್ಲಿ ಮಹತ್ವದ ಬದಲಾವಣೆಯಾಗಲಿರುವ ಮಾಹಿತಿ ಲಭಿಸಿದೆ. ಅಧಿಕಾರಿಗಳಿಗೆ ಈಗಾಗಲೇ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ನಿಷೇಧಿಸಿರುವ ಉಗ್ರ ಸಂಘಟನೆಗಳು, ಅವುಗಳಿಗೆ ಸಂಬಂಧಿಸಿದ ವ್ಯಕ್ತಿಗಳ ವಿರುದ್ಧ ಸೂಕ್ತ ತನಿಖೆ ನಡೆಸಲು ಹಾಗೂ ಸಂಘಟನೆಯ ಕಚೇರಿಗಳು ಮತ್ತು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಮಾಡುವ ಅಧಿಕಾರ ನೀಡಲಾಗಿದೆ ಎಂದು ಸುದ್ದಿ ಪ್ರಸಾರ ಮಾಡಿದೆ.


ಜಮಾತ್ ಉದ್ ದಾವಾ ಪ್ರಧಾನ ಕಚೇರಿ ಹೊರಗಿನ ಬ್ಯಾರಿಕೇಡ್​ಗಳ ತೆರವು

ಪಾಕಿಸ್ತಾನದ ಸುಪ್ರೀಂ ಕೋರ್ಟ್​ ನೀಡಿರುವ ಆದೇಶದನ್ವಯ ಪಂಜಾಬ್ ಪೊಲೀಸರು ಭಯೋತ್ಪಾದಕ ಹಫೀಜ್ ಸಯೀದ್​ ನೇತೃತ್ವದ 'ಜಮಾತ್-ಉದ್-ದಾವಾ' ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಸಮಘಟನೆಯ ಪ್ರಧಾನ ಕಚೇರಿಯ ಹೊರಗೆ ಒಂದು ದಶಕದ ಹಿಂದಿನಿಂದಲೂ ಭದ್ರತೆಗೆಂದು ಇರಿಸಲಾಗಿದ್ದ ಬ್ಯಅರಿಕೇಡ್​ಗಳನ್ನು ತೆರವುಗೊಳಿಸಲಾಗಿದೆ.

ಇನ್ನು ಪಾಕ್ ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಸಾಕಿಬ್ ನಿಸಾರ್ ಲಾಹೋರ್​ನಲ್ಲಿ ಭದ್ರತೆಯ ಹೆಸರಿನಲ್ಲಿ ಮುಚ್ಚಲಅಗಿರುವ ರಸ್ತೆಗಳನ್ನು ತೆರವುಗೊಳಿಸಲೂ ಪಂಜಾಬ್ ಪೊಲೀಸರಿಗೆ ಆದೇಶಿಸಿದ್ದಾರೆ.
Loading...

ಯಾವೆಲ್ಲಾ ಸಂಘಟನೆಗಳಿಗೆ ಮಾರಕವಾಗಲಿದೆ?

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ನಿಷೇಧಿಸಿರುವ ಉಗ್ರ ಸಂಘಟನೆಗಳ ಪಟ್ಟಿಯಲ್ಲಿ ಅಲ್-ಕೈದಾ, ತಹ್ರೀಕ್-ಎ-ತಾಲಿಬಾನ್-ಪಾಕಿಸ್ತಾನ್, ಲಷ್ಕರ್-ಎ-ಜಾಂಗ್ವಿ, ಜಮಾತ್-ಉದ್-ದಾವಾ, ಫಲಾಹ್-ಎ-ಇನ್ಸಾನಿಯತ್-ಫೌಂಡೇಶನ್, ಲಷ್ಕರ್-ಎ-ತೊಯ್ಬಾ ಸೇರಿದಂತೆ ಇನ್ನಿತರ ಸಂಘಟನೆಗಳಿವೆ. ಪಾಕ್ ಜಾರಿಗೊಳಿಸಲಿರುವ ನೂತನ ಕಾನೂನಿನ ಬಳಿಕ ಈ ಸಂಘಟನೆಗಳ ಹಣ ವಹಿವಾಟಿನ ಮೇಲೆ ಪ್ರಭಾವ ಬೀಳಲಿದೆ.
First published:February 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ