ತಿಹಾರ್​​ ಜೈಲಿನಲ್ಲಿದ್ದ ಪಿ. ಚಿದಂಬರಂ ಮತ್ತೆ ಅನಾರೋಗ್ಯ: ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲು

ಇತ್ತೀಚೆಗೆ ಕಾಂಗ್ರೆಸ್​​ ಹಿರಿಯ ನಾಯಕ ಪಿ. ಚಿದಂಬರಂಗೆ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್​ ಷರತ್ತುಬದ್ಧ ಜಾಮೀನು ನೀಡಿತ್ತು. ಒಂದು ಲಕ್ಷ ಬಾಂಡ್​​ ಜತೆಗೆ ಪಾಸ್​​ಪೋರ್ಟ್​​ ಕೋರ್ಟ್​ಗೆ ಸಲ್ಲಿಸಬೇಕೆಂದು ಆದೇಶಿಸಿ ನ್ಯಾಯಲಯ ಜಾಮೀನು ಮಂಜೂರು ಮಾಡಿತ್ತು.

news18-kannada
Updated:October 28, 2019, 7:26 PM IST
ತಿಹಾರ್​​ ಜೈಲಿನಲ್ಲಿದ್ದ ಪಿ. ಚಿದಂಬರಂ ಮತ್ತೆ ಅನಾರೋಗ್ಯ: ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲು
ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ
  • Share this:
ನವದೆಹಲಿ(ಅ.28): ಬಹುಕೋಟಿ ಐಎನ್‌ಎಕ್ಸ್ ಮೀಡಿಯಾ ಹಗರಣ ಸಂಬಂಧ ತಿಹಾರ್​​ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಮತ್ತೆ ಅನಾರೋಗ್ಯಕ್ಕೀಡಾಗಿದ್ದಾರೆ. ಇಂದು ಪಿ. ಚಿದಂಬರಂ ಆರೋಗ್ಯದಲ್ಲಿ ದಿಢೀರ್​​ ಏರುಪೇರಾಗಿದ್ದು, ಚಿಕಿತ್ಸೆಗಾಗಿ ಏಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಿಹಾರ್ ಜೈಲಿನಲ್ಲಿರುವ ಆರೋಪಿಗಳಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಸಾಮಾನ್ಯವಾಗಿ ದೀನ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗುತ್ತದೆ. ಚಿದಂಬರಂ ಪ್ರಕರಣದಲ್ಲಿ ಮಾತ್ರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ ಏಮ್ಸ್​ ಆಸ್ಪತ್ರೆಗೆ ದಾಖಲಿಸಬೇಕೆಂದು ಸುಪ್ರೀಂಕೋರ್ಟ್​ ಸೂಚಿಸಿದೆ.

ಇತ್ತೀಚೆಗೆ ಕಾಂಗ್ರೆಸ್​​ ಹಿರಿಯ ನಾಯಕ ಪಿ. ಚಿದಂಬರಂಗೆ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್​ ಷರತ್ತುಬದ್ಧ ಜಾಮೀನು ನೀಡಿತ್ತು. ಒಂದು ಲಕ್ಷ ಬಾಂಡ್​​ ಜತೆಗೆ ಪಾಸ್​​ಪೋರ್ಟ್​​ ಕೋರ್ಟ್​ಗೆ ಸಲ್ಲಿಸಬೇಕೆಂದು ಆದೇಶಿಸಿ ನ್ಯಾಯಲಯ ಜಾಮೀನು ಮಂಜೂರು ಮಾಡಿತ್ತು. ಆದರೀಗ, ಇನ್ನೊಂದು ಪ್ರಕರಣದಲ್ಲಿಯೂ ಪಿ. ಚಿದಂಬರಂ ಪ್ರಮುಖ ಆರೋಪಿಯಾದ ಕಾರಣ, ತಿಹಾರ್​​ ಜೈಲಿನಲ್ಲೇ ಮುಂದುವರಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇದನ್ನೂ ಓದಿ: ಮಾಧ್ಯಮ ಮತ್ತು ಸಾಮಾಜಿಕ ಹೋರಾಟಗಾರರ ಮೇಲೆ ಇಮ್ರಾನ್​​ ಖಾನ್​​ ಸರ್ಕಾರ ದಬ್ಬಾಳಿಕೆ; ಸಾರ್ವಜನಿಕರ ಆಕ್ರೋಶ

2007ರಲ್ಲಿ ಚಿದಂಬರಮ್ ಅವರು ಹಣಕಾಸು ಸಚಿವರಾಗಿದ್ದಾಗ ಐಎನ್​ಎಕ್ಸ್ ಮೀಡಿಯಾ ಸಂಸ್ಥೆಗೆ 305 ಕೋಟಿ ವಿದೇಶೀ ದೇಣಿಗೆ ಸಿಗಲು ಸಾಧ್ಯವಾಗುವಂತೆ ಎಫ್​ಐಪಿಬಿಯಿಂದ ಅಕ್ರಮವಾಗಿ ಅನುಮತಿ ಕೊಡಿಸಿದ್ದರೆಂಬ ಆರೋಪ ಇದೆ. ಜೈಲಿನಲ್ಲಿದ್ದ ಇಂದ್ರಾಣಿ ಮುಖರ್ಜಿ ನೀಡಿದ ಮಾಹಿತಿ ಇದೇ ಆಗಿತ್ತು. ಈಕೆಯ ಈ ಹೇಳಿಕೆ ಆಧಾರದ ಮೇಲೆ 2017 ಮೇ 15ರಂದು ಸಿಬಿಐ ಎಫ್​ಐಆರ್ ದಾಖಲು ಮಾಡಿತ್ತು.
------------
First published: October 28, 2019, 6:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading